ಅಬ್ದುಲ್ ರಶೀದ್ ಬರೆದ ಈ ಭಾನುವಾರದ ಕತೆ “ಅಮವಾಸ್ಯೆಯ ಇರುಳ ಅಸಂಖ್ಯ ನಕ್ಷತ್ರಗಳು”
ಅವರು ಹೇಳಿದ ದ್ವೀಪವಾಸಿ ಮುತ್ತುಕೋಯಾನ ಕಥೆಯನ್ನು ಕೇಳಿದರೆ ಏಕಕಾಲದಲ್ಲಿ ನಗುವೂ ವಿಷಾದವೂ ಖೇದವೂ ನಗುವೂ, ವಿಷಾದವೂ, ಖೇದವೂ, ವೈರಾಗ್ಯವೂ ಉಂಟಾಗುವ ಹಾಗೆ ಇತ್ತು. ಮುಕ್ತಿಯಾರರು ಹೇಳಿದ ಹಾಗೆ ಮುತ್ತುಕೋಯಾರಿಗೆ ಸುಮಾರು ಎಂಬತ್ತರ ಆಸುಪಾಸು ವಯಸ್ಸು ಇರಬಹುದು. ಅವರು ಕಳೆದ ಮೂವತ್ತು ವರ್ಷಗಳಿಂದ ಮಾನಸಿಕ ಅಸ್ವಸ್ಥರಂತೆ ನಟಿಸುತ್ತಾ ಮೀನು ಹಿಡಿದುಕೊಂಡು ಈ ಪುಟ್ಟ ದ್ವೀಪದಲ್ಲಿ ಬದುಕುತ್ತಿದ್ದರು. ಹಾಗೆ ನಟಿಸಿರದೆ ಇದ್ದರೆ ಇವರು ಜೈಲು ಪಾಲಾಗಬೇಕಿತ್ತು.
ಅಬ್ದುಲ್ ರಶೀದ್ ಬರೆದ ಈ ಭಾನುವಾರದ ಕತೆ “ಅಮವಾಸ್ಯೆಯ ಇರುಳ ಅಸಂಖ್ಯ ನಕ್ಷತ್ರಗಳು” ನಿಮ್ಮ ಓದಿಗೆ
ಶಿವಕುಮಾರ ಚನ್ನಪ್ಪನವರ್ ಬರೆದ ಈ ಭಾನುವಾರದ ಕತೆ “ಗುಡ್ವಿಲ್”
ನಿನ್ನೆ ಜಗಳವಾದ ಮೇಲೂ ರಾಘವ ಹೇಳಿದಂತೆ ಕೇಳಬೇಕಿತ್ತು. ನೀನು ಸುಮ್ಮನಿದ್ದಿದ್ದರೆ ಮುಗಿಯುತ್ತಿತ್ತು. ಎಂಬವನ ಮಾತು ಸರಿಯಾಗಿತ್ತು. ಮಾತಿನ ಬರದಲ್ಲಾದ ತಪ್ಪಿಗೆ ಇವತ್ತು ಮ್ಯಾನೇಜ್ಮೆಂಟ್ನಲ್ಲಿ ತಾನು ಅಪರಾಧಿಯ ಸ್ಥಾನದಲ್ಲಿದ್ದೇನೆ. ಅವಳು ನನ್ನ ಭಾಷೆಯ ಬಗ್ಗೆ ಹಾಗೆ ಮಾತಾಡಿದ್ದು ತನಗೆ ಹಿಡಿಸಲಿಲ್ಲ, ಅಲ್ಲದೇ ಅದು ಸರ್ಕಾರದ ಪ್ರಾಜೆಕ್ಟ್ ಮತ್ತು ಈ ಪ್ರಾಜೆಕ್ಟಿನ ಎಲ್ಲ ಕಡತಗಳನ್ನು ಸರ್ಕಾರ ಕನ್ನಡದಲ್ಲೇ ಮಂಡಿಸುವುದು. ಇಂಥ ಸ್ಟೇಟ್ ಕನ್ನಡ ಪ್ರಾಜೆಕ್ಟ್ನಲ್ಲಿ ಇದ್ದುಕೊಂಡೇ ಹೀಗೇ ಮಾತಾಡುವವರು ಇನ್ನೂ ಎಂ.ಎನ್.ಸಿ. ಕಂಪನಿಯಲ್ಲಿದ್ದರೆ ಕನ್ನಡವನ್ನು ಸಾಯಿಸಿಯೇ ಬಿಡುತ್ತಾರೆ, ಭಾಷೆ ವಿಚಾರದಲ್ಲಿ ನಾನು ಮಾಡಿದ್ದೆ ಸರಿ ಎನಿಸಿತವಗೆ.
ಶಿವಕುಮಾರ ಚನ್ನಪ್ಪನವರ್ ಬರೆದ ಈ ಭಾನುವಾರದ ಕತೆ “ಗುಡ್ವಿಲ್”
ಕೊಡಗು ಜಿಲ್ಲಾ ಹದಿನೇಳನೆಯ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಅಬ್ದುಲ್ ರಶೀದ್ ಭಾಷಣ
ಇವತ್ತು ಇಲ್ಲಿ ಈ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಈ ಬಿರುಬಿಸಿಲ ಹೊತ್ತು ಅವರು ಯಾರೂ ಇಲ್ಲಿ ಇಲ್ಲ. ಆದರೆ ಅವರ ಹಾಗಿರುವ ಹಲವು ಹಾಡುಗಾರರೂ ಇಲ್ಲೇ ಅಕ್ಕಪಕ್ಕ ತೋಟದಲ್ಲಿ ಕೆಲಸ ಮಾಡುತ್ತಿರಬಹುದು. ಅಥವಾ ಅವರ ಜಾಗವನ್ನು ಅಸ್ಸಾಮಿನಿಂದ ಬಂಗಾಳದಿಂದ ಬಂದ ಕೆಲಸಗಾರರು ವಹಿಸಿಕೊಂಡಿರಬಹುದು. ಅವರಲ್ಲೂ ಇಂತಹ ಕಥೆಗಾರರಿರಬಹುದು. ಸುಮಾರು ಐವತ್ತು ವರ್ಷಗಳ ಹಿಂದೆ ಅಸ್ಸಾಮಿನಿಂದ ಜೇನುಪೆಟ್ಟಿಗೆಗಳನ್ನು ಇಡಲು ದಾಸ್ ಎಂಬ ಯುವಕ ಬಂದಿದ್ದ. ಅವನೂ ಆಗ ಬಾಲಕನಾಗಿದ್ದ ನನಗೆ ಕಥೆಗಳನ್ನು ಹೇಳುತ್ತಿದ್ದ. ಈಗ ಬಹುಶಃ ಆತ ಎಲ್ಲಿರಬಹುದೋ ಗೊತ್ತಿಲ್ಲ. ಆದರೆ ಆತ ನನ್ನ ಕಥಾ ಪಾತ್ರವಾದ.
ಕೊಡಗು ಜಿಲ್ಲೆಯ ಸುಂಟಿಕೊಪ್ಪದಲ್ಲಿ ನಡೆದ “ಕೊಡಗು ಜಿಲ್ಲಾ ಹದಿನೇಳನೆಯ ಕನ್ನಡ ಸಾಹಿತ್ಯ ಸಮ್ಮೇಳನ”ನ ಅಧ್ಯಕ್ಷರಾದ ಅಬ್ದುಲ್ ರಶೀದ್ ಭಾಷಣ ನಿಮ್ಮ ಓದಿಗೆ
ವಾಸುಕಿ ಸಿ.ಜಿ ಬರೆದ ಈ ಭಾನುವಾರದ ಕತೆ “ಮುಗಿಲ ಒಗಟು ಮತ್ತು ಮಣ್ಣಿನ ಮಲ್ಲಯುದ್ಧ”
ನವತೀರದಲ್ಲಿ, ಒಂದು ಸಂಜೆ ಮೀರಾ ದಿಬ್ಬದ ಮೇಲೆ ನಿಂತು, ಲೈಟ್ಹೌಸ್ ಇದ್ದ ಜಾಗವನ್ನೇ ನೋಡುತ್ತಿದ್ದಳು. ನಮಗೆ ಪ್ರಿಯವಾದವರನ್ನು ಕಳೆದುಕೊಂಡಾಗ ನಾವು ಲೆಕ್ಕ ಹಾಕುತ್ತೇವಲ್ಲಾ – ಅವರು ನಮಗೆ ಏನು ಕೊಟ್ಟರು, ಏನನ್ನು ಅರ್ಧಕ್ಕೇ ಬಿಟ್ಟುಹೋದರು, ಅವರನ್ನು ನೋಡಿಯೇ ನಾವು ಏನೇನು ಕಲಿತೆವು ಎಂದು – ಹಾಗೆ ಅವಳೂ ಲೆಕ್ಕ ಹಾಕುತ್ತಿದ್ದಳು. ತನ್ನ ಅಣ್ಣನ ಕೆಲಸದ ರೀತಿ, ಆತನ ಏಕಾಗ್ರತೆ, ಸಮಸ್ಯೆ ಕಂಡರೆ ಬಿಡದೆ ಅಂಟಿಕೊಳ್ಳುವ ಅವನ ಛಲ – ಎಲ್ಲವನ್ನೂ ನೆನಪಿಸಿಕೊಂಡಳು.
ವಾಸುಕಿ ಸಿ.ಜಿ ಬರೆದ ಈ ಭಾನುವಾರದ ಕತೆ “ಮುಗಿಲ ಒಗಟು ಮತ್ತು ಮಣ್ಣಿನ ಮಲ್ಲಯುದ್ಧ”
ಆರ್. ಪವನ್ ಕುಮಾರ್ ಬರೆದ ಈ ಭಾನುವಾರದ ಕತೆ “ಗುರುತು”
ಸರೋಜಮ್ಮ ಇದನ್ನು ಸರಿ ತಪ್ಪು ಎಂದು ತರ್ಕ ಮಾಡಲು ಹೋಗಲಿಲ್ಲ. ಅವಳೊಳಗೆ ಹೆಣ್ಣಿನ ಅಂತರಂಗದ ತುಮುಲಗಳ ಬಗ್ಗೆ ಗೌರವವಿದ್ದು, ಅದಕ್ಕೆ ಗಂಡು ಸೂಕ್ತವಾಗಿ ಪ್ರತಿಕ್ರಿಯಿಸದೆ ಹೋದರೆ ಇಂಥವೆಲ್ಲಾ ಘಟಿಸಿ ಹೋಗುತ್ತವೆ ಎಂದುಕೊಂಡಿದ್ದಳು. ತನ್ನ ಮಗ ಇದರಲ್ಲಿ ಸಂಪೂರ್ಣ ಸೋತವನೆಂದು ಅರಿವಾಗಿತ್ತು. ಇನ್ನೂ ಮಗನೂ ಅಷ್ಟೇ ತನ್ನ ಚಟಗಳಿಗೆ ಇದನ್ನೆ ಮತ್ತೊಂದು ನೆಪ ಮಾಡಿಕೊಂಡವನು ಮನೆ ಮರೆತು ತನಗೆ ಅನುಕೂಲವಾದ ಕಡೆ ತಿರುಗುತ್ತ ಎಂದಾದರೊಮ್ಮೆ ಮನೆಗೆ ಬರುತ್ತಿದ್ದ.
ಆರ್. ಪವನ್ ಕುಮಾರ್ ಬರೆದ ಕತೆ “ಗುರುತು” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ
ಗುರುರಾಜ್ ಕೆ. ಕುಲಕರ್ಣಿ ಬರೆದ ಈ ಭಾನುವಾರದ ಕತೆ “ಕಾಕಮಂಡಲ ಮಧ್ಯದೊಳಗೆ…”
“ಧರ್ಮರಾಜನೇ, ಕರಣಿಕರೇ, ಕ್ಷಮಿಸಿ. ನಿಮ್ಮ ದೂತರಾದ ನಮಗೆ ನಿಮ್ಮ ನಿಯಮವೇ ವೇದವಾಕ್ಯ. ಆದರೆ ಕಾಕಮಂಕ ಮಾಡಿದ್ದು ಕೇವಲ ಹಸಿವಿನ ಅಚಾತುರ್ಯವಲ್ಲ, ಅದರ ಹಿಂದೆ ಒಂದು ಭಾವನಾತ್ಮಕ ಸತ್ಯವಿದೆ. ಸತ್ಯಪ್ಪ ಮಾಸ್ತರರು ಬದುಕಿದ್ದಾಗ ಕೇವಲ ಮನುಷ್ಯರಿಗೆ ಮಾತ್ರವಲ್ಲ, ನಮ್ಮಂತ ಪಶು-ಪಕ್ಷಿಗಳಿಗೂ ಅಕ್ಕರೆ ತೋರಿಸಿದವರು. ಅವರು ಪಾಠ ಮಾಡುವಾಗ ಮರದ ಮೇಲೆ ಕುಳಿತು ಪಾಠ ಕೇಳುತ್ತಿದ್ದವರಲ್ಲಿ ಈ ಮಂಕನೂ ಒಬ್ಬ.”
ಗುರುರಾಜ್ ಕೆ. ಕುಲಕರ್ಣಿ ಬರೆದ ಕತೆ “ಕಾಕಮಂಡಲ ಮಧ್ಯದೊಳಗೆ…” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ
ಸಿಡ್ನಿ ಶ್ರೀನಿವಾಸ್ ಬರೆದ ಈ ಭಾನುವಾರದ ಕತೆ “ಎರವಲು ಗೆಳತಿ”
ಸಾಮಾನ್ಯವಾಗಿ ಇಂತಹ ದಿನಗಳಂದು ವಿದ್ಯಾರ್ಥಿಗಳು ತಮ್ಮ ಗೆಳತಿಯರೊಡನೆ ರಾತ್ರಿ ಸಂಚಾರ ಮಾಡುವುದು ಪದ್ಧತಿ. ಬೀದಿಗಳಲ್ಲಿ ತಿರುಗಿ ಯಾವುದಾದರೂ ಪಾರ್ಕಿನಲ್ಲಿ ಎಲ್ಲರೂ ಕುಳಿತು ಮೋಜುಮಾಡುವ ಪರಿಪಾಠ. ಕೆಲವರು ಕದ್ದು ಪಾನೀಯಗಳನ್ನು ತಂದು ಎಲ್ಲರೂ ಕುಡಿದು ಸಂತೋಷ ಪಡುತ್ತಾರೆ. ಸಿನೆಮಾ ನೋಡುತ್ತಾರೆ. ಹಿಂದೆ ಸುರೇಶ್ ಕೂಡ ಇಂತಹ ಹುಡುಗರನ್ನು ಕೂಡಿದ್ದುಂಟು. ಆದರೆ ಇಂದು ಅವನಿಗೆ ಏನೂ ಬೇಕಾಗಿರಲಿಲ್ಲ.
ಸಿಡ್ನಿ ಶ್ರೀನಿವಾಸ್ ಬರೆದ ಈ ಕತೆ “ಎರವಲು ಗೆಳತಿ” ನಿಮ್ಮ ಈ ಭಾನುವಾರದ ಓದಿಗೆ
ಕೋಡಿಹಳ್ಳಿ ಮುರಳಿಮೋಹನ್ ಅನುವಾದಿಸಿದ ಎನುಗಂಟಿ ವೇಣುಗೋಪಾಲ್ ತೆಲುಗು ಕತೆ
“ಬಹಳ ದೂರ ಬಂದ ಮೇಲೆ ನೀವು ಎದುರಾದಿರಿ” ಎಂದು ಹೇಳುವುದು ಮುಗಿದ ಮೇಲೆ ಉಳಿದ ಅರ್ಧ ಗ್ಲಾಸ್ ಮದ್ಯವನ್ನು ಖಾಲಿ ಮಾಡಿದ ರಂಜಿತ್. “ಇಗೋ ಪುರಾವೆ… ನನ್ನ ಕೈ ಮೇಲಿನ ಗಾಯ” ಎನ್ನುತ್ತಾ ಬಲಗೈಯನ್ನು ಸ್ವಲ್ಪ ಮೇಲಕ್ಕೆ ಎತ್ತಿ ತೋರಿಸಿದ ರಂಜಿತ್. “ಹೌದು, ಆಗ ನೀವು ಬಲಗೈಯಿಂದ ಲಿಫ್ಟ್ ಕೇಳಿದಾಗ ಬೀದಿ ದೀಪದ ಬೆಳಕಿನಲ್ಲಿ ಗಮನಿಸಿದೆ. ಆ ಗಾಯ ನೋಡಿಯೇ ಲಿಫ್ಟ್ ಕೊಟ್ಟೆ” ಎಂದ ವಾಸುದೇವ ರಾವ್. ರಂಜಿತ್ ಒಮ್ಮೆಲೇ ದಂಗಾದನು. “ಆತಂಕ ಪಡಬೇಡಿ.
ಕೋಡಿಹಳ್ಳಿ ಮುರಳಿಮೋಹನ್ ಅನುವಾದಿಸಿದ ತೆಲುಗಿನ ಕತೆಗಾರ ಎನುಗಂಟಿ ವೇಣುಗೋಪಾಲ್ ಅವರ ಕತೆ “ಚೋರಿ”
ಪ್ರವೀಣ್ ಕುಮಾರ್ ಜಿ. ಬರೆದ ಈ ಭಾನುವಾರದ ಕತೆ “ಈಡು ಜೋಡು”
ಇತ್ತ ಬಾಮೈದನು ತನ್ನ ಬಲಗೈಯಲ್ಲಿ ಉಂಗುರ ಹಿಡಿದು, ಎಡಗೈಯಲ್ಲಿ ಮಂಜನ ಕೈ ಹಿಡಿದು ತೊಡಿಸಲು ಮುಂದಾದಾಗ ಮೊದಲಿಗೆ ಮಂಜನ ಕೈ ಮೇಲೇಳಲಿಲ್ಲ. ಅಕ್ಕನ ಅಳುವಿನಲ್ಲಿ ತಾನೂ ಕಣ್ತುಂಬಿಕೊಂಡಿದ್ದ ಬಾಮೈದ ಉಂಗುರವನ್ನು ಮತ್ತೆ ಬೆರಳ ಹತ್ತಿರ ಹೊಯ್ದಾಗ ಮಂಜನ ಕೈ ಇನ್ನಶ್ಟು ಹಟ ಮಾಡಿತು. ಬಾಮೈದ ಮಂಜನನ್ನು ನೋಡಿದ, ಮಂಜನ ಮಾರಿ ನೆಲ ನೋಡುತ್ತಾ, ಬೇಡ ಬೇಡ ಎಂಬಂತೆ ಅತ್ತಿತ್ತ ಒದರಾಡುತ್ತಿತ್ತು. ಬಾಮೈದ ಮಾವನವರನ್ನು ನೋಡಿದ, ಸುತ್ತಿನವರು ಇನ್ನೂ ಬೆರಳು ಏರದ ಉಂಗುರವನ್ನೇ ನೋಡುತ್ತಿದ್ದರು.
ಪ್ರವೀಣ್ ಕುಮಾರ್ ಜಿ. ಬರೆದ ಕತೆ “ಈಡು ಜೋಡು” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ










