ಸೀಟಿ ಬಾಬು ಮತ್ತು ಇತರ ಪರಿಚಿತರು: ವಿನೋದಕುಮಾರ್ ಕುಲಕರ್ಣಿ ಬರಹ
ನಾವು ಚಿಕ್ಕವರಿದ್ದಾಗ ನಮ್ಮನ್ನು ಮಗ್ಗಿ ಬರುತ್ತವೊ ಇಲ್ಲವೋ ಎಂದು ಪರೀಕ್ಷಿಸಲು ಕೇಳುತ್ತಿದ್ದ ಹಾಗೆ ‘ಎರಡ ಒಂಬತ್ಳೆ’, ‘ನಾಲ್ಕ್ ಐದ್ಳೆ’, ‘ಹನ್ನೆರಡ ಎರಡ್ಲೆ’ ಎಷ್ಟು ಎಂದು ಕೇಳುತ್ತಿದ್ದ ಹಾಗೆ ಕೇಳಬೇಕಿತ್ತು. ಹಾಗೆ ನಾವು ಕೇಳಿದ್ದೆ ಕಂಪ್ಯೂಟರಿನ ಸಂಗ್ರಹ ಮಾಹಿತಿ ನೀಡುವ ಉತ್ತರದಂತೆ ಪಟಾಪಟ್ ಎಂದು ಉತ್ತರಿಸಿ ಬಿಡುತ್ತಿದ್ದ. ಅಲ್ಲದೆ ಕೇಳುವ ಪ್ರಶ್ನೆಯು ಒಬ್ಬರ ಬಾಯಿಂದಲೇ ಬರುತ್ತಿದ್ದುದಾಗಿರಲಿಲ್ಲ.
ವಿನೋದಕುಮಾರ್ ಕುಲಕರ್ಣಿ ಬರಹ ನಿಮ್ಮ ಓದಿಗೆ
ಉಕದ ಹಾಗಿದ್ದ ನಾನು, ದಕದ ಹಾಗಿದ್ದ ಅವನು: ನಾಗಶ್ರೀ ಶ್ರೀರಕ್ಷ ಬರಹ
ಇರುಳ ಬೆಳಕಲ್ಲಿ ನಾವು ಅದೆಷ್ಟೋ ಗುಟ್ಟಿನ ಕತೆಗಳನ್ನು ಹೇಳಿಕೊಳ್ಳುತ್ತಿದ್ದೆವು. ಬೆಳಕೆಂದರೆ ಅದು ಒಂದಷ್ಟು ನಕ್ಷತ್ರಗಳನ್ನು ಕಟ್ಟಿಕೊಂಡು ಚಂದ್ರನು ರಾಜನಂತೆ ಬೆಳಗುತ್ತಿದ್ದ, ಇರುಳೆಂದರೆ ಅವನನ್ನೂ ಮೀರಿ ತೂರುವ ಹಾಗೆ ಇರುವ ಮಯಮಯ ಮುಗ್ದ ಇರುಳು. ನಾವೆಂದರೆ ಅಲ್ಲಿ ಗಂಡು ಹೆಣ್ಣು ಇದಾವುದೂ ಆಗಿರಲಿಲ್ಲ.
ಬರಹಗಾರ್ತಿ ನಾಗಶ್ರೀ ಶ್ರೀರಕ್ಷ ತೀರಿಕೊಂಡು ಇಂದಿಗೆ ಐದು ವರ್ಷಗಳು ಕಳೆದವು. ಕೆಂಡಸಂಪಿಗೆಯ ಸಹಾಯಕ ಸಂಪಾದಕಿಯೂ ಆಗಿದ್ದ ಅವರ ನೆನಪಿನಲ್ಲಿ ಅವರದ್ದೊಂದು ಬರಹ ನಿಮ್ಮ ಓದಿಗೆ
ಆಡುವವನ ಕೈ ಚಳಕದಲಿ ಎಲ್ಲ ಅಡಗಿದೆ…: ವಿಶ್ವನಾಥ ಎನ್ ನೇರಳಕಟ್ಟೆ ಬರಹ
ಆರ್ಟ್ಸ್ ಗೇಮ್‌ಗಳು ಗೇಮಿಂಗ್ ಪ್ರಕಾರಗಳಲ್ಲಿ ವಿಶಿಷ್ಟವಾದವು. ಆಟದ ವಿಶಿಷ್ಟತೆ ಇಲ್ಲಿ ಮುಖ್ಯವಾಗುವುದಿಲ್ಲ. ಕಲೆಯೇ ಪ್ರಮುಖ. ನೋಡುವುದಕ್ಕೆ ಆಕರ್ಷಕವಾಗಿರುವ, ಬಹಳ ಕ್ರಿಯೇಟಿವ್ ಆಗಿರುವ ಗೇಮ್‌ಗಳಿವು. ವಿಡಿಯೋ ಗೇಮ್ಸ್ ಮೂಲಕ ನಮ್ಮ ಆಸಕ್ತಿಯ ಕೆಲವು ವಿಷಯಗಳನ್ನು ಕಲಿತುಕೊಳ್ಳುವುದಕ್ಕೆ ಸಾಧ್ಯವಿದೆ. ಇವುಗಳು ಶೈಕ್ಷಣಿಕ ಗೇಮ್‌ಗಳು. ಭಾಷೆ, ಗಣಿತ, ಟೈಪಿಂಗ್ ಕುರಿತಾದ ಸರಳ ಗೇಮ್‌ಗಳು ಇದಕ್ಕೆ ಉದಾಹರಣೆಗಳು. ವ್ಯಾಯಾಮದಂತಹ ಚಟುವಟಿಕೆ ಮಾಡಲು ಅವಕಾಶ ಮಾಡಿಕೊಡುವ ಗೇಮ್‌ಗಳನ್ನು ಎಕ್ಸರ್ ಗೇಮ್ ಎನ್ನಲಾಗುತ್ತದೆ.
ವಿಶ್ವನಾಥ ಎನ್ ನೇರಳಕಟ್ಟೆ ಬರಹ
ಗೋಧಿ ಹುಗ್ಗಿ ಗಂಗಯ್ಯ: ಮಂಜಯ್ಯ ದೇವರಮನಿ ಲಲಿತ ಪ್ರಬಂಧ
ಅವರಿಗೆ ಯಾರಾದರೂ ಎದುರಾಡಿದರೆ ಅವರ ಮದುವೆ ಮಾಡುವ ಬದಲು ತಿಥಿ ಮಾಡಿಬಿಡುತ್ತಿದ್ದ. ಏನಾದರೂ ಒಂದು ನವ ಹೇಳಿ ಯಾವ ಹೆಣ್ಣು ಹತ್ತದಂತೆ ಮಾಡಿ… ಮದುವೆ ಬದಲಿಗೆ ತಿಥಿ ಮಾಡಿ ಬಿಡುತ್ತಿದ್ದ. ಹಾಗಾಗಿ ಗಂಗಯ್ಯನನ್ನು ಎದುರು ಹಾಕಿಕೊಳ್ಳಲು ಊರಲ್ಲಿ ಯಾರಾದರೂ ಹೆದರುತ್ತಿದ್ದರು. ಈವಯ್ಯನ ಸುದ್ದಿ ಬೇಡ ಎಂದು ಸುಮ್ಮನಾಗುತ್ತಿದ್ದರು. ಮದುವೆಯಾಗದ ಅದೆಷ್ಟೋ ಹೆಣ್ಣು ಗಂಡಗಳನ್ನು ಗಂಟು ಹಾಕಿ ಶಾದಿಭಾಗ್ಯ ಕರುಣಿಸಿದ ರೂವಾರಿ ನಮ್ಮ ಗಂಗಯ್ಯ.
ಮಂಜಯ್ಯ ದೇವರಮನಿ ಬರೆದ ಲಲಿತ ಪ್ರಬಂಧ ನಿಮ್ಮ ಓದಿಗೆ
ಪಟ್ಟಾಭಿ ಎಂಬ ಪಾಮರ: ಮೀನಾ ಮೈಸೂರು ಬರಹ
ಕೇವಲ ಕಾಲೇಜಿನಲ್ಲಿ ಪಾಠ ಮಾಡುತ್ತಾ ತನ್ನ ವಿದ್ಯಾರ್ಥಿಗಳೊಂದಿಗೆ ಸಾಹಿತ್ಯಿಕ ಚರ್ಚೆ ನಡೆಸುತ್ತಾ, ಅವರುಗಳ ಭವಿಷ್ಯ ರೂಪಿಸುವತ್ತ ಒತ್ತು ನೀಡುತ್ತಾ, ನೂರಾರು ವಿದ್ಯಾರ್ಥಿಗಳ ಪ್ರೀತಿಯ ಸರ್ ಆಗಿರುವುದರಲ್ಲೆ ತೃಪ್ತಿ ಕಂಡುಕೊಂಡಿದ್ದಾರೆ. ಅವರಿಗೊಂದು ರೀತಿಯ ದಿಟ್ಟ ಆತ್ಮವಿಶ್ವಾಸವಿದೆ. ಯಾವುದೇ ಕಾರಣಕ್ಕೂ ಯಾರಿಗೂ ತಲೆ ಬಾಗಿದವರಲ್ಲ. ಸಾಮಾಜಿಕ ಹೋರಾಟಗಾರ ಹಾಗೂ ನಿವೃತ್ತ ಪ್ರಾಧ್ಯಾಪಕರಾದ ಪಟ್ಟಾಭಿರಾಮ ಸೋಮಯಾಜಿ ನಿಧನರಾಗಿದ್ದು, ಅವರೊಂದಿಗಿನ ಒಡನಾಟದ ಕುರಿತು ಅವರ ಸ್ನೇಹಿತೆ ಮೀನಾ ಮೈಸೂರು ಬರೆದಿದ್ದ ಬರಹವೊಂದು ಇಲ್ಲಿದೆ
ಟೇಪ್ ರೆಕಾರ್ಡರ್ ವಿಥ್ ರೇಡಿಯೋ ಎಂಬ ಮಾಯಾಪೆಟ್ಟಿಗೆ: ಸುಧಾ ಆಡುಕಳ ಬರಹ
ಎಲ್ಲರ ಒಕ್ಕೊರಲ ಒತ್ತಾಯಕ್ಕೆ ಅಪ್ಪನೂ ಇಲ್ಲವೆನ್ನಲಾರದೇ ನಡುಅಂಗಳದಲ್ಲಿಯೇ ಚಾಪೆ ಹಾಸಿ, ಮದ್ದಲೆಯೊಂದಿಗೆ ಸಜ್ಜಾಗಿಯೇಬಿಟ್ಟರು. ಸುತ್ತ ಮುತ್ತಿದ ನೀರವ ಮೌನದ ನಡುವೆ ಅಪ್ಪ ಮದ್ದಲೆ ಬಡಿಯುತ್ತಾ, ದೊಡ್ಡ ದನಿಯಲ್ಲಿ “ವಿಘ್ನೇಶಾಯ ಸರಸ್ವತೈ ಪರ‍್ವತೈ ಗುರುವೇ ನಮಃ” ಎಂದು ಗಣಪತಿ ಪೂಜೆಯೊಂದಿಗೆ ಆರಂಭಿಸಿ, “ಸರಸಿಜಾಂಬಕಿಯರೇ ಕೇಳಿ” ಎಂಬ ಭೀಷ್ಮಪರ್ವದ ನಾಲ್ಕು ಹಾಡುಗಳನ್ನು ಹಾಡಿ ಇನ್ನು ಸಾಕು ಎಂಬಂತೆ ಕೈಸನ್ನೆ ಮಾಡಿದರು. ಇದನ್ನೇ ಕಾಯುತ್ತಿದ್ದ ಸಾಹೇಬರು ಟಕ್ ಎಂದು ರೆಕಾರ್ಡಿಂಗನ್ನು ಬಂದ್ ಮಾಡಿದರು.
ಸುಧಾ ಆಡುಕಳ ಬರಹ ನಿಮ್ಮ ಓದಿಗೆ
ಕಳೆದುಹೋದವರನ್ನು ಹೇಗೆ ಹುಡುಕಲಿ?: ಅಮಿತಾ ರವಿಕಿರಣ್ ಬರಹ
ಇದನ್ನೆಲ್ಲಾ ನಾನೀಗ ಬರೆಯುವಾಗಲೂ ಇದೆಲ್ಲ ಕನಸೇ ಅನಿಸುತ್ತದೆ, ಕಂಡು ಕೇಳರಿಯದ ಊರಿನಿಂದ ಬಂದು, ನನ್ನೂರಿನಿಂದ ಹೋಗುವಾಗ ಅಣ್ಣಂದಿರಾಗಿ ಹೋಗಿದ್ದರು. ಹೋಳಿಗೆ ಬಣ್ಣ ಕಳಿಸುತ್ತಿದ್ದೆ, ದಶರೆಗೆ ಬನ್ನಿ, ರಕ್ಷಾಬಂಧನಕ್ಕೆ ರಾಖಿ, ಸಂಕ್ರಾಂತಿಗೆ ಎಳ್ಳು, ಪತ್ರಗಳಲ್ಲಿ ಒಣಗಿದ ಹೂವು ಎಲೆಗಳು. ಅದೊಂದು ಬೇರೆಯದೇ ಲೋಕವಾಗಿತ್ತು. ಮೂವರಲ್ಲಿ ಜಾಸ್ತಿ ಪತ್ರ ಬರೆಯುತ್ತಿದ್ದುದು ದೆಹಲಿಯ ಅಶೋಕ್ ಕುಮಾರ್ ಮತ್ತು ಅಕ್ಬರ್ ಖಾನ್ ಅವರು. ಜೀತೇಂದ್ರ ಪ್ರಸಾದ್ ಅವರ ಪತ್ರ ಆಗೊಮ್ಮೆ ಈಗೊಮ್ಮೆ ಅಪರೂಪಕ್ಕೆ ಬರುತ್ತಿತ್ತು. ನಾನು, ತಂಗಿ ಪತ್ರ ಬರೆಯುತ್ತಿದ್ದೆವು.
ಅಮಿತಾ ರವಿಕಿರಣ್ ಬರಹ ನಿಮ್ಮ ಓದಿಗೆ
ಮಂಜುನಾಯಕ ಚಳ್ಳೂರ ಕಥಾಲೋಕ…
“ಧಾರವಾಡದಲ್ಲಿ ಪಿಯುಸಿಯಲ್ಲಿದ್ದಾಗ ‘ಗಾಳಿಪಟ’ ಎಂಬ ಕತೆ ಬರೆದಿದ್ದೆ. ಅದಕ್ಕೂ ಮುನ್ನ ‘ಗೋಧಾವರಿ’ ಎಂಬ ಕತೆಯನ್ನು ಬರೆದು ಸ್ನೇಹಿತರ ಮುಂದೆ ಇಟ್ಟಾಗ, ಹಾಸ್ಟೇಲಿನ ದೋಸ್ತರೆಲ್ಲ ಅದನ್ನು ಓದಿ “ಚೊಲೋ ಬರ್ದಿ” ಎಂದು ಬೆನ್ನುತಟ್ಟಿದ್ದರು. ತುಷಾರ ಕಥಾ ಸ್ಪರ್ಧೆಗೆಂದು ಬರೆದಿದ್ದ ಕತೆ ಅದು. ಕೈಬರಹದಲ್ಲಿದ್ದ ಆ ಕತೆಯ ಪ್ರತಿಯನ್ನು, ಮತ್ತೊಮ್ಮೆ ಓದಿ ಕೊಡುವುದಾಗಿ ನನ್ನಿಂದು ಇಸಿದುಕೊಂಡು ಹೋದ ದೋಸ್ತ ಇನ್ನೂ ವಾಪಸ್ ಕೊಟ್ಟಿಲ್ಲ. ಮಂಜುನಾಯಕ ಚಳ್ಳೂರರ “ಫೂ” ಕಥಾಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಸಿಕ್ಕಿದ್ದು ಇದೇ ಸಂದರ್ಭದಲ್ಲಿ ಅವರ ಕಥಾಲೋಕದ ಕುರಿತು ರೂಪಶ್ರೀ ಕಲ್ಲಿಗನೂರ್ ಬರಹ
ರೇಟಿಂಗ್ ಬೆನ್ನೇರಿದ ಬದುಕು…: ಪೂರ್ಣಿಮಾ ಹೆಗಡೆ ಬರಹ
ಮಗಳ ಹೇರ್ ಕಟ್ ಮಾಡಿಸಲು ಇದೇ ಏರಿಯಾದಲ್ಲಿರುವ ಬ್ಯುಟಿ ಸಲೂನ್‌ಗೆ ಹೋದಾಗ ನಡೆದ ಘಟನೆಯು ಇದಕ್ಕೆ ಸಂಬಂಧಿಸಿದ್ದೆ ಆಗಿತ್ತು. ಯಾವಾಗಲೂ ನಗುತ್ತಾ ಎಲ್ಲ ಕೆಲಸಗಳನ್ನು ತುಂಬಾ ಅಚ್ಚುಕಟ್ಟಾಗಿ ಮಾಡುತ್ತಿದ್ದ ಅಂಶುಲ್ ತನ್ನ ಕೆಲಸವನ್ನು ಕಡಿಮೆ ರೇಟಿಂಗ್ ಹಾಗೂ ಒಂದೆರಡು ನೆಗೆಟಿವ್ ರಿವ್ಯು ಬಂತೆಂದು ಕೆಲಸ ಕಳೆದುಕೊಂಡಿದ್ದಳಂತೆ. ನಮ್ಮ ಏರಿಯಾದಲ್ಲಿರುವ ನನ್ನ ಹತ್ತು ಹನ್ನೆರಡು ಸ್ನೇಹಿತೆಯರ ಗುಂಪಿಗೆ ಅವಳು ಹಾಗೂ ಅವಳ ಕೆಲಸ ಅಚ್ಚುಮೆಚ್ಚಾಗಿತ್ತು. ಅವಳು ಕಡಿಮೆ ರೇಟಿಂಗ್ ಕಾರಣಕ್ಕಾಗಿ ಕೆಲಸ ಕಳೆದುಕೊಂಡಿದ್ದು ನಮಗೆಲ್ಲಾ ನಂಬಲು ಸಾಧ್ಯವಾಗಿರಲಿಲ್ಲ.
ರೇಟಿಂಗ್ ಕೊಡುವಿಕೆಯ ಕುರಿತ ಪೂರ್ಣಿಮಾ ಹೆಗಡೆ ಬರಹ ನಿಮ್ಮ ಓದಿಗೆ









