ಬ್ರಹ್ಮದ್ವೇಷಿಗಳ ಮನೆಯಲ್ಲಿ ದೀಕ್ಷಿತರ ಫೋಟೋ: ಕೆ. ಸತ್ಯನಾರಾಯಣ ಕಥಾ ಸರಣಿ
ಸಂಸ್ಥಾನದಲ್ಲಿ ಚಿಗರಿಗೌಡರ ಮನೆತನ ನೂರಕ್ಕೆ ನೂರರಷ್ಟು, ಬ್ರಹ್ಮದ್ವೇಷಕ್ಕೂ ಪ್ರಸಿದ್ಧವಾಗಿತ್ತು. ಅರಮನೆಯಂತಹ ಬಂಗಲೆ ಕೋಟೆಯೊಳಗಿದ್ದು, ಕೋಟೆಯ ಆವರಣದಲ್ಲಿದ್ದ ದೇವಸ್ಥಾನಗಳಿಗೆ ಬ್ರಾಹ್ಮಣರನ್ನು ಮಾತ್ರ ಅರ್ಚಕರನ್ನಾಗಿ ಇಟ್ಟುಕೊಳ್ಳದೆ, ನಾಥ ಸಂಪ್ರದಾಯದ ಮಠಗಳಲ್ಲಿ ತರಬೇತಿ ಪಡೆದವರನ್ನು ಅರ್ಚಕರನ್ನಾಗಿ ನೇಮಿಸಿಕೊಳ್ಳುತ್ತಿದ್ದರು. ಹೋಮ-ಹವನಕ್ಕೆ ಪ್ರಯಾಗದಿಂದಲೇ ಕ್ಷತ್ರಿಯ ಮಠಗಳಿಗೆ ಸೇರಿದ ಋತ್ವಿಕರನ್ನು ಕರೆಸುತ್ತಿದ್ದರು. ನೂರಾರು ಬ್ರಾಹ್ಮಣ ವಿರೋಧಿ ಸಂಸ್ಥೆಗಳಿಗೆ, ಸಂಘಟನೆಗಳಿಗೆ ಅನುದಾನ ಕೊಡುತ್ತಿದ್ದರು. ಬ್ರಾಹ್ಮಣರಿಗೆ ಅವರ ಬಗ್ಗೆ ಅಸಹಾಯಕ ಸಿಟ್ಟು, ತಿರಸ್ಕಾರ ಎಲ್ಲವೂ ಇತ್ತು.
ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”
ಗಂಟೆಹಳ್ಳಿ ಗಿಡ, ಕಾಡಿನಲ್ಲಿ ಒಂದಿರುಳು ಮತ್ತು ತಿಮ್ಮಣ್ಣನ ಮಳಕ: ಎಸ್. ಗಂಗಾಧರಯ್ಯ ಅನುಭವ ಕಥನ
ಮೆಲ್ಲಗೆ ಮರ ಹತ್ತಿದೆವು. ನಿದ್ದೆ ಅನ್ನೋದು ಸುತರಾಂ ಹತ್ತಿರ ಸುಳಿಯುತ್ತಿಲ್ಲ. ಕಾಡಿನ ಸಣ್ಣಪುಟ್ಟ ಪ್ರಾಣಿ ಪಕ್ಷಿ ಕ್ರಿಮಿಕೀಟಗಳು ತಮ್ಮ ದಿನಚರಿ ಶುರುವಿಟ್ಟುಕಂಡಿದ್ದವು. ಅಬ್ಬಾ ಆ ಕತ್ತಲೆ. ಆ ಆತಂಕದ ಆ ಚಣಗಳು. ಈಗಲೂ ಮೈ ಜುಮ್ ಅನ್ನುತ್ತೆ. ಹಂಗೆ ಕೂತಿದ್ದ ನನಗೆ ಅದ್ಯಾವ ಮಾಯದಾಗೆ ನಿದ್ದೆ ಬಂದಿತ್ತೋ ಕಾಣೆ ಏನಾಗುತ್ತಿದೆ ಅಂತ ಗೊತ್ತಾಗೋದರೊಳಗೆ ಕೊಂಬೆಯನ್ನು ಅವುಚಿಕಂಡು ಕೂತಿದ್ದ ನಾನು ಏಕ್ದಂ ಕೆಳಕ್ಕೆ ಬಿದ್ದುಬಿಟ್ಟೆ. ಹಂಗೆ ಬಿದ್ದ ರಭಸಕ್ಕೆ ಚೀರಾಡುವುದರೊಳಗೆ ಕೆಳಗಿದ್ದ ಕೂಳೆಯೊಂದು ಎಡಗಾಲಿನ ಮಾಂಸಖಂಡಕ್ಕೆ ದೊಸಕ್ಕನೆ ಹೊಕ್ಕಂಡುಬಿಟ್ಟಿತ್ತು.
ಎಸ್. ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಇಪ್ಪತ್ತನೆಯ ಕಂತು
ಮಂತ್ರಗಳು… ಪ್ರಶಸ್ತಿಗಳು… ಮತ್ತು ನಾನು: ಎಚ್. ಗೋಪಾಲಕೃಷ್ಣ ಸರಣಿ
ಅದೆಷ್ಟೋ ವರ್ಷಗಳ ನಂತರ ತನ್ನ ವರದಿಯನ್ನು ಈ ಸಮಿತಿ ಅಂದಿನ ಅಧಿಕಾರಸ್ತ ಪ್ರಭುಗಳಿಗೆ ಸಲ್ಲಿಸಿತು. ಕೊನೆಗೂ FFC ವರದಿ ಸರ್ಕಾರಕ್ಕೆ ಸಲ್ಲಿಕೆಯಾದರೂ ಅದನ್ನು ಓದಲು ಟಿಪ್ಪಣಿ ಮಾಡಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಕಾರಣ ವರದಿ ಐದುನೂರಾ ಅರವತ್ತ ಮೂರು ಕೇಜಿ ಭಾರ ಇದ್ದು ಅದನ್ನು ಮೂರು ಟ್ರಕ್ನಲ್ಲಿ ಸಾಗಿಸಲಾಗಿತ್ತು. ಈ ಸಮಿತಿಗೆ ಖರ್ಚು ಮಾಡಲಾದ ಹಣ ಸರ್ಕಾರಕ್ಕೆ ಲೆಕ್ಕ ಇರಲಿಲ್ಲ ಮತ್ತು ಟೀಕಾಕಾರರು ಮಾತು ಆಡದಿರಲು ಸರ್ಕಾರ ಅದೇ ಸಮಿತಿಗೆ ವರದಿಯನ್ನು ಎರಡು ಪುಟದಲ್ಲಿ ಕೊಡುವಂತೆ ಆದೇಶಿಸಿತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೯೬ನೇ ಬರಹ ನಿಮ್ಮ ಓದಿಗೆ
ನವರಂಗ: ಡಾ. ಎಸ್.ವಿ. ನರಸಿಂಹನ್ ಸರಣಿ
ಮೂಲತಃ ಹಿಮಾಲಯದ ವಾಸಿಗಳಾದ ಈ ಹಕ್ಕಿಗಳು ಹಿಮಾಲಯದಲ್ಲೇ ಅಲ್ಲದೆ, ಉತ್ತರದಲ್ಲಿ ಪಾಕಿಸ್ತಾನದಿಂದ ಹಿಡಿದು ನೇಪಾಳ ಮತ್ತು ಈಶಾನ್ಯ ಭಾರತದಲ್ಲಿ ಸಿಕ್ಕಿಂವರೆಗೂ ವ್ಯಾಪಿಸಿವೆ. ಚಳಿಗಾಲದಲ್ಲಿ ದಕ್ಷಿಣ ಭಾರತ ಮತ್ತು ಶ್ರೀಲಂಕಾದವರೆಗೂ ವಲಸೆ ಹೋಗುತ್ತವೆ. ಅಲ್ಲದೆ, ನವರಂಗ ಹಕ್ಕಿಗಳು ಕೆಲವೊಮ್ಮೆ ಮಧ್ಯ ಭಾರತ ಮತ್ತು ಪಶ್ಚಿಮ ಘಟ್ಟಗಳಲ್ಲಿಯೂ ಸಂತಾನೋತ್ಪತ್ತಿ ನಡೆಸುತ್ತವೆ.
ಡಾ. ಎಸ್.ವಿ. ನರಸಿಂಹನ್ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ “ನವರಂಗ”ಯ ಕುರಿತ ಬರಹ ಇಲ್ಲಿದೆ
ಪ್ರಾಚೀನ ತಾಮ್ರ ಗಣಿಗಾರಿಕೆ: ಡಾ. ಎಂ. ವೆಂಕಟಸ್ವಾಮಿ ಸರಣಿ
ಪ್ರಾಚೀನ ತಾಮ್ರ ಗಣಿಗಾರಿಕೆ ಚಟುವಟಿಕೆಗಳು ರೊಲಾಡಿಹ್, ಬಡಿಯಾ, ಧಲ್ಭಮ್ ಮತ್ತು ದುವಾಯಪುರಂನ ಧೋಬನಿ ಬೆಟ್ಟಗಳು ಮತ್ತು ಖಾಸ್ವಾನ್ ಪ್ರದೇಶಗಳಲ್ಲಿ ಗಲುದಿಹ್ ಮತ್ತು ರಾಗದಿಹ್ ಹತ್ತಿರವೂ ನಡೆದಿರುವುದಾಗಿ ತಿಳಿದುಬಂದಿದೆ. ಚಂದ್ರಬಾರು, ರಾಜದೋಹಾ, ರಾಖಾ, ಸಿದ್ಧೇಶ್ವರ, ಸುರ್ದಾ, ಲೌಕೇಸ್ರಾ ಇತರ ಪ್ರಮುಖ ತಾಮ್ರದ ಗಣಿಗಾರಿಕೆ ತಾಣಗಳಾಗಿವೆ. ಕೆಲವು ಹಳೆ ಗಣಿಗಳು ಭಂಕುರಾ ಮತ್ತು ಬರಗುಂದ ಸಮೀಪದ ಸಿಂಘ್ಭೂಮ್ನ ಪೂರ್ವ ಗಡಿಯಲ್ಲಿ ದೊಡ್ಡ ಶ್ಯಾಫ್ಟ್ಗಳು ಮತ್ತು ಹೊಂಡಗಳಿರುವ ಗಣಿಗಾರಿಕೆ ಕುರುಹುಗಳು ಕಂಡುಬಂದಿವೆ.
ಡಾ. ಎಂ. ವೆಂಕಟಸ್ವಾಮಿ ಅನುವಾದಿತ “ಭಾರತದಲ್ಲಿ ಪ್ರಾಚೀನ ಗಣಿಗಾರಿಕೆ” ಸರಣಿಯಲ್ಲಿ ಐದನೆಯ ಅಧ್ಯಾಯ
ನಿಶ್ಚಿತಾರ್ಥದಲ್ಲಿ ಕೇಳಿದ ಪ್ರಶ್ನೆಗಳು: ಕೆ. ಸತ್ಯನಾರಾಯಣ ಕಥಾ ಸರಣಿ
“ನಿನಗೆ ನಿಜವಾಗಲೂ ಮದುವೆ, ಕುಟುಂಬ, ಗಂಡು, ಹೆಣ್ಣಿನ ಸಂಬಂಧದ ಪಾವಿತ್ರ್ಯ, ಇದರಲ್ಲೆಲ್ಲ ಇನ್ನೂ ನಂಬಿಕೆ ಉಳಿದಿದೆಯಾ? ನಂಬಿಕೆ ಇಲ್ಲದಿದ್ದರೂ, ಅಭ್ಯಾಸ ಬಲದಿಂದ, ಸನ್ನಿವೇಶದ ಒತ್ತಡಗಳಿಂದ ಇದನ್ನೆಲ್ಲ ಮಾಡಿದ್ದೀಯಾ?” ನನಗೆ ಪ್ರಶ್ನೆ, ಅದನ್ನು ಕೇಳಿದ ರೀತಿ, ಸಂದರ್ಭದಿಂದ ಶಾಕ್ ಆಯಿತು. ಇವೆಲ್ಲ ಸೆಮಿನಾರಿನಲ್ಲೋ, ಸಂಸ್ಕೃತಿ ಚಿಂತನೆಯ ಗೋಷ್ಠಿಯಲ್ಲೋ ಕೇಳುವ ಪ್ರಶ್ನೆಗಳು. ಪುಸ್ತಕದಲ್ಲಿ ಓದಿ-ಬರೆಯಬಹುದಾದ ಪ್ರಶ್ನೆಗಳು. ನೇರವಾಗಿ ನನಗೆ ಕೇಳುತ್ತಿದ್ದಾನೆ. ಅದೂ ಮಗನ ಮದುವೆಯ ನಿಶ್ಚಿತಾರ್ಥದ ದಿವಸ. ಎಲ್ಲ ಅತಿಥಿಗಳು ಊಟ ಮುಗಿಸಿ ಇನ್ನೂ ತಾಂಬೂಲ ಜಗಿಯುತ್ತಿರುವಾಗ.
ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”
ನಾನೇನು ಮಾಡಲಿ… ಯಾರಿಗೆ ಹೇಳಲಿ…: ಜುಲೇಖಾ ಬೇಗಂ ಜೀವನ ವೃತ್ತಾಂತ
ಏನು ಮಾಡಬೇಕೆಂದು ದಿಕ್ಕೇ ತೋಚದೆ, ದೇವರೆದುರು ನಿಂತೆ. ಕೈ ಮುಗಿದು, ಕುಸಿದು ಕೂತೆ. ಎಲ್ಲ ಕಳೆದ ಮೇಲೆ, ಈಗ ಬಂದು ಮತ್ತೆ ಕೂಡಬೇಕು ಎಂದರೆ ಬದುಕೆಂದರೆ ಇವರಿಗೆಲ್ಲ ಆಟವೇ? ಹೆಣ್ಣಿಗೂ ಅವಳದ್ದೇ ಆದ ಆಸೆಗಳಿರುತ್ತವೆ, ಅವಳ ಮನಸ್ಸು ಇದನ್ನು ಒಪ್ಪುತ್ತದೆಯೇ? ಯಾವ ಪ್ರಶ್ನೆ ಅವರ ಯೋಚನೆಯಲ್ಲೂ ಬರದು. ಜೋರಾಗಿ ಕೂಗಿ, ಅಳಬೇಕು ಎನಿಸಿತಾದರೂ ಮಾಡುವಂತಿಲ್ಲ.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಇಪ್ಪತ್ತೇಳನೆಯ ಕಂತು
ಅಜ್ಜನ ಕೆರೆಯ ಹಾಲುವಾಣದ ತೆಪ್ಪ ಮತ್ತು ಮಲ್ಲಾಘಟ್ಟ ಕೆರೆಯ ನಾಡದೋಣಿ: ಎಸ್.ಗಂಗಾಧರಯ್ಯ ಅನುಭವ ಕಥನ
ಅದೇನು ಅನಿಸಿತೋ ಏನೋ ಕೃಷ್ಣಮೂರ್ತಿ ನಮ್ಮ ಕಾಲುಗಳ ನಡುವೆ ಬಿದ್ದಿದ್ದ ಹುಟ್ಟುಗೋಲನ್ನು ಕೈಗೆತ್ತಿಕೊಂಡು ದೋಣಿಯ ಪಕ್ಕದ ನೀರಿನಲ್ಲಿ ಕೊಂಚ ಮುಳುಗಿಸಿ ಅದರಿಂದ ಮೆಲ್ಲಗೆ ನೀರನ್ನು ಹಿಂದೆ ಮುಂದೆ ತಳ್ಳಿದ. ಆಗ ದೋಣಿಯ ಮುಮ್ಮುಖ ಚಲನೆ ನಿಂತು ಅದು ಇದ್ದಲ್ಲಿಯೇ ಮೆಲ್ಲನೆ ಸುತ್ತ ಹತ್ತಿತು. ಇದನ್ನು ಕಂಡು ಜೀವ ಬಂದವನಂತೆ ಅವನು ಆ ಹುಟ್ಟಿನಿಂದ ವಿರುದ್ಧ ದಿಕ್ಕಿನಲ್ಲಿ ನೀರನ್ನು ತಳ್ಳಿದ. ದೋಣಿಯ ಗತಿ ಮತ್ತೆ ಬದಲಾಯ್ತು. ಮತ್ತೇನೋ ಹೊಳೆದವನಂತೆ ಹಂಗೆಯೇ ದೋಣಿಯ ಇಕ್ಕೆಲಗಳಲ್ಲೂ ಹುಟ್ಟು ಹಾಕತೊಡಗಿದ.
ಎಸ್. ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಹತ್ತೊಂಭತ್ತನೆಯ ಕಂತು
ಹಾಸ್ಟೆಲ್ ಕಿತಾಪತಿ ಹಾಗೂ ನೆಟ್ ವರ್ಕ್ ಮಾರ್ಕೆಟಿಂಗ್ ಮಾಯೆ!!: ಬಸವನಗೌಡ ಹೆಬ್ಬಳಗೆರೆ ಸರಣಿ
ಇವನ ಮಾತಿನ ಮೋಡಿಗೆ ಬೆರಗಾಗಿ ನಾನೂ ಸಹ ಇದನ್ನು ನೋಡಬೇಕೆಂದು ಅವನು ಕರೆದ ಮೀಟಿಂಗ್ ಗೆ ಹೋಗಿ ಅಲ್ಲಿ ನೋಡಿದರೆ ಶಾಕ್!! ಮೀಟಿಂಗ್ ಗೆ ಬಂದ ಅನೇಕರು ಅವನ ಆಟೋಗ್ರಾಫ್ ತೆಗೆದುಕೊಳ್ಳಲು ಮುಗಿಬಿದ್ದಿದ್ದರು!! ಯಾವ ಹೀರೋಗೂ ಕಮ್ಮಿ ಇರದ ರೀತಿ ಬ್ಲೇಜರ್ ಹಾಕಿಕೊಂಡು ಅವನು ವೇದಿಕೆ ಮೇಲೆ ಮಿಂಚುತ್ತಿದ್ದ!! “ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಎಂಬುದು ಹಳೇ ಮಾತು. ಆದರೆ ನಾವು ಕಾಲು ಇದ್ದಷ್ಟು ಹಾಸಿಗೆ ಹೊಲಿಸಿಕೊಳ್ಳಬೇಕು” ಎಂಬ ಡೈಲಾಗ್ ಹೊಡೆದು ನೆರೆದವರನ್ನು ಪ್ರೇರಣೆ ಮಾಡುತ್ತಿದ್ದ!!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ










