ಅಯ್ಯೋ ಉಪ್ಪಿಟ್ಟಾ!: ಚಂದ್ರಮತಿ ಸೋಂದಾ ಸರಣಿ
ಎಲ್ಲ ಬಗೆಯ ಉಪ್ಪಿಟ್ಟುಗಳಲ್ಲಿ ಅವರೆಕಾಳಿನ ಉಪ್ಪಿಟ್ಟಿನ ಗಮ್ಮತ್ತೆ ಬೇರೆ. ಯಾರಾದರೂ ಮನೆಗೆ ಬಂದಾಗ ಉಪ್ಪಿಟ್ಟು ಕೊಡಲಾ? ಅಂತ ಕೇಳಿದರೆ `ಈಗ ತಿಂಡಿಯೇನು ಬ್ಯಾಡ’ ಅಂತಾರೆ. `ಅವರೆಕಾಳು ಉಪ್ಪಿಟ್ಟು ಮಾಡಿದ್ದೆ. ಅದ್ಕೆ ಕೇಳ್ದೆ’ ಅಂತ ಹೇಳಿನೋಡಿ. `ಅವರೆಕಾಳು ಉಪ್ಪಿಟ್ಟಾ, ಸ್ವಲ್ಪ ಕೊಡಿ’ ಅಂದೇ ಅಂತಾರೆ. ಅವರ ಮಾತು ನಂಬಿ ತುಸು ಕೊಟ್ಟರೆ `ಬಹಳ ಚೆನ್ನಾಗಿದೆ…
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಇಪ್ಪತ್ನಾಲ್ಕನೆಯ ಕಂತು
ಪೂರ್ಣೇಶ್ ಮತ್ತಾವರ ಹೊಸ ಸರಣಿ “ನವೋದಯವೆಂಬ ನೌಕೆಯಲ್ಲಿ…” ಶುರು..
ಪಾಪ! ‘ಹನಿಮೂನ್’ ಪದವನ್ನು ತಾನು ನೋಡಿದ್ದ ರವಿಚಂದ್ರನ್ ಸಿನಿಮಾಗಳ “ಹನಿಮೂನ್ ಗೆ ಹೋಗಿ ಬರೋಣ…” ಎಂಬಂತಹ ಡೈಲಾಗ್ಗಳಲ್ಲಿ ಮಾತ್ರ ಕೇಳಿದ್ದ, ಅಮಾಯಕರಲ್ಲಿ ಅಮಾಯಕನಂತಿದ್ದ ರುದ್ರಸ್ವಾಮಿ, ‘ಹನಿಮೂನ್’ ಎಂದರೆ ಅಮೆರಿಕ, ಇಂಗ್ಲೆಂಡ್ ನಂತಹ ಯಾವುದೋ ಸುಂದರ ದೇಶವೋ ಇಲ್ಲ ಲಂಡನ್, ಪ್ಯಾರಿಸ್ ನಂತಹ ಸುಂದರ ನಗರವೋ ಇರಬೇಕೆಂದು ಆ ಕ್ಷಣದವರೆಗೂ ಪರಿಭಾವಿಸಿದ್ದ!
ನವೋದಯ ಶಾಲಾ ದಿನಗಳ ನೆನಪುಗಳ ಕುರಿತು ಪೂರ್ಣೇಶ್ ಮತ್ತಾವರ ಬರೆಯುವ ಹೊಸ ಸರಣಿ “ನವೋದಯವೆಂಬ ನೌಕೆಯಲ್ಲಿ…” ಇಂದಿನಿಂದ ಹದಿನೈದು ದಿನಗಳಿಗೊಮ್ಮೆ ನಿಮ್ಮ ಕೆಂಡಸಂಪಿಗೆಯಲ್ಲಿ
ಕೂರಾಪುರಾಣ ೫: ಸೂಜಿಗಳು ಮತ್ತು ಸಂಕಷ್ಟಗಳು
ಲೀಶ್ ಹಾಕಿ ಸೂಜಿ ಚುಚ್ಚುವುದಿಲ್ಲ ಎಂದು ಅವನಿಗೆ ತಿಳಿಯುವ ಹಾಗೆ ನಯವಾಗಿ ವರ್ತಿಸುತ್ತ ನಿಧಾನವಾಗಿ ಲೀಶ್ ಅಭ್ಯಾಸ ಮಾಡಿಸಲು ಸುಮಾರು ಮೂರು ತಿಂಗಳುಗಳೇ ಹಿಡಿಯಿತು. ನಾಯಿಗಳ ಮನಸ್ಸಿನಲ್ಲಿ ಯಾವುದರ ಬಗ್ಗೆಯಾದರು ಭಯ ಕೂತು ಬಿಟ್ಟರೆ ಅವುಗಳಿಗೆ ಆ ವಿಷಯದ ಬಗ್ಗೆ ಅದೆಷ್ಟು ಭಯವಿರುತ್ತದೆ ಎಂದು ಗೊತ್ತಾಗಿದ್ದು ಆಗಲೇ. ಚಿಕ್ಕವರಿದ್ದಾಗ ನಾಯಿಯ ಬಾಲಕ್ಕೆ ಹುಡುಗರು ಪಟಾಕಿ ಕಟ್ಟಿ ಅದು ಸಿಡಿದಾಗ ಕುಂಯ್ಯ ಕುಂಯ್ಯ ಎಂದು ಓಡಿ ಹೋದದ್ದು, ಅದನ್ನು ನೋಡಿ ನಾವು ನಕ್ಕಿದ್ದನ್ನೆಲ್ಲ ನೆನೆದು ಅದೆಷ್ಟು ಪ್ರಾಣಿಗಳು ನಮ್ಮಿಂದ ಹಿಂಸೆ ಪಟ್ಟಿವೆಯೋ ಎನ್ನಿಸುತ್ತದೆ.
ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಸರಣಿ
ಅಡ್ಡ ಹೆಸರಿನ ಅವಾಂತರಗಳು: ಅನುಸೂಯ ಯತೀಶ್ ಸರಣಿ
ನನ್ನ ಮನದಿಂಗಿತವನ್ನು ಅರಿತ ಅವರು ಅಲ್ರೀ ಈ ಮಕ್ಕಳು ನಮಗೆಲ್ಲ ಎಷ್ಟು ಚಂದ ಚಂದ ಅಡ್ಡ ಹೆಸರುಗಳನ್ನು ಇಟ್ಟು ಕರೆಯುತ್ತಾರೆ. ನಮ್ಮ ಬೆನ್ನ ಹಿಂದೆ ಕರಿತಾರೆ. ಅವರು ಇಷ್ಟು ದಿನ ಅವರಿಗೆ ಮಾತ್ರ ಗೊತ್ತಿತ್ತು. ಈಗ ನಮಗೂ ತಿಳಿಯಿತು. ಇನ್ನು ಎಷ್ಟು ಜನ ಗೊತ್ತಿದ್ಯೋ ಏನೋ ಗೊತ್ತಿಲ್ಲ.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ ನಿಮ್ಮ ಓದಿಗೆ
ಪಶ್ಚಿಮ ಪೂರ್ವಗಳ ಅಪೂರ್ವ ಸಂಗಮ ಟರ್ಕಿ: ಡಾ. ವಿಶ್ವನಾಥ ಎನ್ ನೇರಳಕಟ್ಟೆ ಸರಣಿ
ಸಂವಿಧಾನದ ಪ್ರಕಾರ ಟರ್ಕಿ ಜಾತ್ಯತೀತ ರಾಷ್ಟ್ರವಾಗಿದ್ದರೂ, ಅನುದಿನದ ಬದುಕಿನಲ್ಲಿ ಅದು ಪಾಲನೆಯಾಗುತ್ತಿಲ್ಲ. ಶಾಲೆಗಳಲ್ಲಿ ಧಾರ್ಮಿಕ ವಿಚಾರಗಳನ್ನು ಬೋಧಿಸಲಾಗುತ್ತಿದೆ. ಧರ್ಮವನ್ನು ಮಕ್ಕಳಿಗೆ ಕಲಿಸುವುದಕ್ಕಾಗಿಯೇ ಪಠ್ಯಕ್ರಮವನ್ನು ರೂಪಿಸಲಾಗಿದೆ. ಟರ್ಕಿಯಲ್ಲಿರುವ ಹೆಚ್ಚಿನ ಜನರು ಮುಸ್ಲಿಂ ಧರ್ಮಕ್ಕೆ ನಿಷ್ಠರಾಗಿದ್ದು, ಇಸ್ಲಾಂ ಜಗತ್ತು ಸ್ಥಾಪನೆಯಾಗಬೇಕೆಂಬ ಆಶಯವನ್ನು ಇಟ್ಟುಕೊಂಡಿದ್ದಾರೆ.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ “ಟರ್ಕಿ” ಕುರಿತ ಬರಹ ನಿಮ್ಮ ಓದಿಗೆ
ಸುಮಾವೀಣಾ ಹೊಸ ಸರಣಿ “ಮಾತು-ಕ್ಯಾತೆ” ಆರಂಭ
ಮಕ್ಕಳಲ್ಲಿ ಜ್ಞಾನದ ಮಟ್ಟ ಹೆಚ್ಚಿದ್ದರೂ ಅದನ್ನು ಅಭಿವ್ಯಕ್ತಗೊಳಿಸಲು ಸಾಧ್ಯವಾಗುವುದಿಲ್ಲ. ಕಾರಣ ಶಬ್ದಗಳ ಕೊರತೆ. ಮನಸ್ಸಿನಲ್ಲಿ ಭಾವನೆಗಳಿರುತ್ತವೆ….! ಇನ್ನೇನೋ ವಿಶೇಷವಾಗಿರುವುದನ್ನು ಹೇಳಬೇಕು…! ನಾನೂ ಮಾತನಾಡಬೇಕು….! ಎಂದಾಗ ಆ ಭಾವನೆಗಳಿಗೆ ಆತ ಶಬ್ದರೂಪವನ್ನು ಕೊಡಲು ಸಾಧ್ಯವಾಗುವುದಿಲ್ಲ.
ಪದ ಪ್ರಯೋಗಗಳ ಕುರಿತು ಸುಮಾವೀಣಾ ಬರೆಯುವ ಹೊಸ ಸರಣಿ “ಮಾತು-ಕ್ಯಾತೆ” ಇಂದಿನಿಂದ ಹದಿನೈದು ದಿನಗಳಿಗೊಮ್ಮೆ
ನವಿರಾದ ಹಾಸ್ಯದೊಳಗಿನ ಗಂಭೀರ ಕಾವ್ಯ…: ಎಸ್. ಜಯಶ್ರೀನಿವಾಸ ರಾವ್ ಸರಣಿ
ಅವರ ಕವನಗಳಲ್ಲಿ ಬೈಬಲ್ ಹಾಗೂ ಗ್ರೀಕ್ ಪುರಾಣಗಳ ಉಲ್ಲೇಖಗಳೂ ಇವೆ. ಈ ಪುರಾಣಗಳ ಪ್ರಯೋಗದಿಂದ ಹೆರ್ಬೆರ್ತರು ಸಮಕಾಲೀನ ಅನುಭವಗಳ ತೀಕ್ಷ್ಣ ಝಳಪನ್ನು ಸ್ವಲ್ಪ ಮಟ್ಟಿಗೆ ಮೃದುಗೊಳಿಸುತ್ತಾರೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಪೋಲಂಡ್ ದೇಶದ ಖ್ಯಾತ ಕವಿ ಜ಼್ಬಿಗ್ನಿಎಫ಼್ ಹೆರ್ಬೆರ್ತ್-ರವರ (Zbigniew Herbert, 1924 – 1998) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ
ಛಲದ ಮುಂದೆ ನ್ಯೂನತೆಗಳು ನಿಲ್ಲೋಲ್ಲ: ಕಾರ್ತಿಕ್ ಕೃಷ್ಣ ಸರಣಿ
ನನಗೆ ಎಲ್ಲಕ್ಕಿಂತ ಇಷ್ಟವಾದದ್ದು ಲೈಲ್ಸ್ನ ಖತರ್ನಾಕ್ ಎಂಟ್ರಿ. ಅವನು ಟ್ರ್ಯಾಕ್ಗೆ ಬರುವ ಕಾನ್ಫಿಡೆನ್ಸನ್ನು ನೀವೊಮ್ಮೆ ನೋಡಬೇಕು. ಆ ಕಾಂಫಿಡೆನ್ಸಿನಿಂದಲೇ ಅವನು ಅರ್ಧ ಪಂದ್ಯವನ್ನು ಗೆಲ್ಲುತ್ತಾನೆ ಎಂದು ನನಗನ್ನಿಸುತ್ತದೆ. ಹೆಸರು ಕೂಗಿದೊಡನೆ ವೇಗವಾಗಿ ಓಡಿ ಬಂದು, ಕುದುರೆಯಂತೆ ನೆಗೆದು ಇಡೀ ಪ್ರಪಂಚದ ಗಮನವನ್ನು ತನ್ನತ್ತ ಸೆಳೆಯುವ ಅವನ ಆತ್ಮವಿಶ್ವಾಸ ಎಂತವರನ್ನೂ ಹುಬ್ಬೇರಿಸುವಂತೆ ಮಾಡುತ್ತದೆ. ನೂತನ ಒಲಿಂಪಿಕ್ ಚಾಂಪಿಯನ್ ನೋಅ ಲೈಲ್ಸ್ ನಮ್ಮ ಆತ್ಮವಿಶ್ವಾಸವನ್ನೂ ಒಂದಷ್ಟು ಹೆಚ್ಚಿಸಲಿ ಅಲ್ಲವೇ?
ಕಾರ್ತಿಕ್ ಕೃಷ್ಣ ಬರೆಯುವ “ಒಲಂಪಿಕ್ಸ್ ಅಂಗಣ” ಸರಣಿ
ಮಧ್ಯಮ ವರ್ಗ ಮತ್ತು ಬೆಲೆಬಾಳುವ ಕಾಗದದ ಚೂರುಗಳು: ರಾಮ್ ಪ್ರಕಾಶ್ ರೈ ಕೆ. ಸರಣಿ
‘ಪ್ರತಿಯೊಬ್ಬ ಮನುಷ್ಯನಲ್ಲಿಯೂ ಒಬ್ಬ ಕಳ್ಳನಿದ್ದಾನೆ’ ಎಂಬ ವಾಕ್ಯ, ‘ಪ್ರತಿಯೊಬ್ಬ ಮನುಷ್ಯನಲ್ಲಿಯೂ ಒಂದು ಮಗುವಿದೆ’ ಎಂದು ಕೋಟಿಯ ಕೈಗಳಲ್ಲಿ ಬದಲಾಗುವುದೇ ಆತನ ವ್ಯಕ್ತಿತ್ವದ ಹೆಚ್ಚುಗಾರಿಕೆಯ ಸಂಕೇತ. ಚಿತ್ರದ ತುಂಬೆಲ್ಲಾ ರೂಪಕಗಳ ಬಳಕೆ ಹೇರಳವಾಗಿದೆ. ಕೋಟಿಯೆಂಬ ಹೆಸರು ಅದರಲ್ಲೊಂದು. ಇಲ್ಲಿ ಎಲ್ಲರೂ ಸಾಗುತ್ತಲೇ ಇರುತ್ತಾರೆ. ಥೇಟು ಪಟ್ಟಣದ ಯಾಂತ್ರಿಕ ಬದುಕಿನಂತೆ. ಆದರೆ ಆ ಪಯಣಕ್ಕೊಂದು ವೇಗ ನಿಯಂತ್ರಕ ಎದುರಾದಾಗ, ಹೇಗೆ ಉತ್ತರಿಸುತ್ತೇವೆ ಎನ್ನುವುದರ ಮೇಲೆ ಬದುಕು ನಿರ್ಧರಿತವಾಗುತ್ತದೆ ಎಂಬುದನ್ನು ನಿರೂಪಿಸಲಾಗಿದೆ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿ










