ಚೈತ್ರಾ ಶಿವಯೋಗಿಮಠ ಬರೆಯುವ ಹೊಸ ಸರಣಿ “ಲೋಕ ಸ್ತ್ರೀ-ಕಾವ್ಯ ಲಹರಿ” ಇಂದಿನಿಂದ
ಕವಿಯಾಗಿ ಅವಳ ಯಶಸ್ಸಿನ ಭಾಗವು ಅವಳ ಸಹಾನುಭೂತಿ, ಅನುಭವದ ಮಿತಿಗಳನ್ನು ಎಂದಿಗೂ ತಗ್ಗಿಸದಿದ್ದರೂ, ಅವಳ ಸ್ವಭಾವದ ಈ ಎರಡು ತೋರಿಕೆಯಲ್ಲಿ ವಿರೋಧಾತ್ಮಕ ಬದಿಗಳನ್ನು ಒಂದುಗೂಡಿಸುವಲ್ಲಿ ಯಶಸ್ವಿಯಾಯಿತು.
ಚೈತ್ರಾ ಶಿವಯೋಗಿಮಠ ಬರೆಯುವ ವಿಶ್ವ ಮಹಿಳಾ ಕಾವ್ಯದ ಕುರಿತ ಸರಣಿ “ಲೋಕ ಸ್ತ್ರೀ-ಕಾವ್ಯ ಲಹರಿ” ಇಂದಿನಿಂದ ಹದಿನೈದು ದಿನಗಳಿಗೊಮ್ಮೆ, ನಿಮ್ಮ ಕೆಂಡಸಂಪಿಗೆಯಲ್ಲಿ
ಕಡ್ಡಿ ಎಂದರೆ ಬಳಪ, ಹೆಸರು ಎಂದರೆ ಸಾಂಬಾರ್!: ಸುಮಾವೀಣಾ ಸರಣಿ
ನಮ್ಮ ಮನೆ ಹತ್ತಿರವೆ ಇದ್ದ ಹುಸೇನ್ ಮತ್ತು ಷರೀಫ್ ಎಂಬಿಬ್ಬರು ಹಾಲು ತರುವ ಕೆಲಸ ವಹಿಸಿಕೊಂಡರು. ಆಗ ಅರ್ಧ ಲೀಟರ್ ಹಾಲಿಗೆ ಎರಡು ರೂಪಾಯಿ ಇಪ್ಪತ್ತೈದು ಪೈಸೆ ಅಷ್ಟೆ. “ಎರಡು ಕಾಲು! ಎರಡು ಕಾಲು!” ಎನ್ನುತ್ತಾ ಬರುತ್ತಿದ್ದರು. ಅವರು ಬರುವ ವೇಳೆಗೆ ಚಿಲ್ಲರೆ ಹೊಂದಿಸಿ ಇಡಬೇಕಿತ್ತು. ತಿಂಗಳಿಗೊಮ್ಮೆ ಅವರಿಗೆ ಹಾಲು ತಂದಿದ್ದಕ್ಕೆ ಇಷ್ಟು ಹಣ ಎಂದು ಕೊಡಬೇಕಿತ್ತು. ತಿಂಗಳಲ್ಲಿ ಕನಿಷ್ಟ ನಾಲ್ಕು ಬಾರಿಯಾದರೂ ಹಾಲು ಹಾಕದೆ ಖಾಲಿ ಕಾಫಿ ಕುಡಿಸುತ್ತಿದ್ದರು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಹದಿನಾಲ್ಕನೆಯ ಕಂತು ನಿಮ್ಮ ಓದಿಗೆ
ದೀಪಾವಳಿ ಹಬ್ಬದ ಆ ದಿನದ ನೆನಪು: ಮಾರುತಿ ಗೋಪಿಕುಂಟೆ ಸರಣಿ
ಅಂತೂ ಈಡಿಗೆ ಬೆಂಕಿ ತಾಕಿಸಿ ಅದು ಉರಿಯುವುದರೊಳಗೆ ನನ್ನನ್ನು ಅಲ್ಲಿಂದ ಮನೆಗೆ ಕಳಿಸಿದ್ದರು. ಅದಾದ ಮೇಲೆ ಎಂದೂ ನಾನು ಬಾನ ಹೊತ್ತಿದ್ದು ನೆನಪಿಲ್ಲ. ನನಗೆ ದೇವರನ್ನು ಹೊತ್ಕೋಬೇಕು ಅಂತ ಆಸೆ ಇತ್ತು. ಆದರೆ ನಾವು ದೇವರನ್ನು ತಲೆಮೇಲೆ ಹೊರಬಾರ್ದು ಅನ್ನುತ್ತಿದ್ದರು. ಅದಕ್ಕೆ ಅನೇಕ ನಿಯಮಗಳಿರುತ್ತವೆ ಅನ್ನುತ್ತಿದ್ದರು. ನಾವ್ಯಾಕೆ ಹೊತ್ಕೋಬಾರ್ದು ಎಂಬ ಪ್ರಶ್ನೆ ನನ್ನನ್ನು ಕಾಡುತ್ತಲೆ ಇತ್ತು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಇಪ್ಪತ್ತೊಂದನೆಯ ಕಂತು
ಜೈಲಿಗೆ ಹೋಗಲು ಸಕಲ ತಯಾರಿ!: ಕೆ. ಸತ್ಯನಾರಾಯಣ ಸರಣಿ
ಇಂತಹ ಕೋರಿಕೆ ಇದುವರೆಗೆ ನಮಗೆ ಬಂದಿಲ್ಲ, ಎಲ್ಲೂ ಕೇಳಿಲ್ಲ, ಕಂಡಿಲ್ಲ ಎಂದು ವಾದಿಸಿದರು. ಕೊನೆಗೆ ನನ್ನ ವಯಸ್ಸು, ಹಿರಿತನ, ಕಳಕಳಿಪೂರ್ಣ ಮನವಿಗೆ ಕ್ಷೀಣವಾಗೆಂಬಂತೆ ಸ್ಪಂದಿಸುತ್ತಾ, ಸರಿ, ಎರಡು ನಿಮಿಷ ನೋಡಲು ಬಿಡ್ತೀವಿ, ಕೇಸ್ ವಿಷಯ ಮಾತನಾಡಕೂಡದು, ನೀವು ಅವರನ್ನು ಭೇಟಿ ಮಾಡುವಾಗ ನಾವು ಕೂಡ ಒಬ್ಬರು ಜೊತೆಗೇ ಇರ್ತೀವಿ ಎಂದರು.
ಕೆ. ಸತ್ಯನಾರಾಯಣ ಬರೆಯುವ “ಜೈಲು ಕತೆಗಳು” ಸರಣಿಯ ಎರಡನೇ ಬರಹ ನಿಮ್ಮ ಓದಿಗೆ
ಭಾಷೆಯ ಭಾವಯಾನ: ಡಾ. ಚಂದ್ರಮತಿ ಸೋಂದಾ ಸರಣಿ
ನಮಗೆ ಅಗತ್ಯವಿಲ್ಲದ ಪದಗಳ ಬಳಕೆಯ ವಿಷಯದಲ್ಲಿ ಸರಿ. ಆದರೆ ದಿನನಿತ್ಯದ ವ್ಯವಹಾರದಲ್ಲಿ ಬಳಸುವ, ನಾವು ಉಪಯೋಗಿಸುವ ವಸ್ತುಗಳ ವಿಷಯವೇ ಬೇರೆ. ಅನೇಕ ಪದಗಳನ್ನು ಕನ್ನಡದಲ್ಲಿ ಹೇಳಲು ಕಷ್ಟಪಡುತ್ತೇವೆ. ಯಾಕೆಂದರೆ ನಮಗೆ ಅವೆಲ್ಲ ಮರೆತೇ ಹೋಗುತ್ತಿವೆ. ಇಂಗ್ಲಿಷ್ ಪದಗಳು ಆ ಸ್ಥಾನವನ್ನು ಆಕ್ರಮಿಸಿವೆ.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಹತ್ತನೆಯ ಕಂತಿನಲ್ಲಿ ದಿನನಿತ್ಯ ಕನ್ನಡ ಭಾಷೆಯ ಬಳಸುವಿಕೆಯ ಕುರಿತ ಬರಹ ನಿಮ್ಮ ಓದಿಗೆ
ಸಾರೀರೀ… ಗುರು!: ಗುರುಪ್ರಸಾದ ಕುರ್ತಕೋಟಿ ಸರಣಿ
ಮೊದಲೇ ಕೆಲಸದಲ್ಲಿ ಆಸಕ್ತಿ ಕಳೆದುಕೊಂಡಿದ್ದ ನನಗೆ ಈ ಫ್ರಾನ್ಸ್ನ ಗುಂಗು ಎಷ್ಟು ಹಿಡಿಯಿತೆಂದರೆ ಕೆಲಸಕ್ಕೆ ಹೋಗುವುದೇ ಬೇಡ ಅನ್ನುವಷ್ಟು! ಆದರೂ ಕೈಯಲ್ಲಿ ಇದ್ದ ಕೆಲಸಗಳನ್ನು ನಿರ್ವಹಿಸುವುದರಲ್ಲಿ ಯಾವುದೇ ಚ್ಯುತಿ ಬರದಂತೆ ನಿಗಾ ವಹಿಸಿದ್ದೆ. ವಿದೇಶಕ್ಕೆ ಹೋದರೆ ಹಲವು ತಿಂಗಳು ಬರಲು ಆಗದಲ್ಲ ಅಂತ ಕೆಲವು ಸಂಬಂಧಿಕರ ಮನೆಗೂ ಹೋಗಿ ಬಂದೆವು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿ
ಬಸವನಗೌಡ ಹೆಬ್ಬಳಗೆರೆ ಬರೆಯುವ ಹೊಸ ಸರಣಿ ‘ಬದುಕು ಕುಲುಮೆ’ ಇಂದಿನಿಂದ
‘ನಾನಿರೋದೇ ಹೀಗೇನೇ… ನಾನೇನೂ ಇದರಿಂದ ಕಲಿಯೋದಿಲ್ಲವೆಂದು ನಾವು ಅಹಮಿಕೆ ತೋರಿದೆವೋ, ಅಲ್ಲಿಗೆ ಮುಗೀತು ನಮ್ಮ ಬದುಕು! ಅದು ಕಬ್ಬಿಣದ ಕಡಲೆಯಂತಾಗುತ್ತದೆ. ಶಾಲೆಯಲ್ಲಿ ಮಕ್ಕಳಿಗೆ ಪರೀಕ್ಷೆಯನ್ನು ಪಾಠ ಮಾಡಿ ಪರೀಕ್ಷೆ ಮಾಡ್ತಾರೆ! ಆದರೆ ಬದುಕು ಉಲ್ಟಾ. ಅದು ಪರೀಕ್ಷೆ ಮಾಡಿ ಪಾಠ ಕಲಿಸುತ್ತಾ ಹೋಗುತ್ತದೆ!
ಬಸವನಗೌಡ ಹೆಬ್ಬಳಗೆರೆ ಬರೆಯುವ ಹೊಸ ಸರಣಿ ‘ಬದುಕು ಕುಲುಮೆʼ ಇಂದಿನಿಂದ
“ಹಿಂದಿನಷ್ಟು ಭಾರವಾಗಿಲ್ಲ ನನ್ನ ಆತ್ಮ”: ಎಸ್. ಜಯಶ್ರೀನಿವಾಸ ರಾವ್ ಸರಣಿ
ಅವರ ಕಾವ್ಯ ಭಾಷೆಯು ವಿವಿಧ ಭಾಷಾ ಸಾಧನಗಳೊಂದಿಗೆ ಸಂಯಮದ, ಆದರೆ ಸೂಕ್ಷ್ಮಚಿತ್ರಕಾರ್ಯದ ವಿನೋದತೆಯನ್ನು (filigree game) ತೋರಿಸುತ್ತದೆ: ಭಾಷಾಪದಗಳ ವಿಭಿನ್ನ ಪದರಗಳು, ನವಪದಗಳು, ಹಳೆಯ ಪದಗಳು ಮತ್ತು ಸ್ಥಳೀಯ ಹೆಸರುಗಳ ಬಳಕೆ ಕಾವ್ಯದ ಸಾಲುಗಳಲ್ಲಿ ಅಪ್ರಜ್ಞಾಪೂರ್ವಕವಾಗಿ ಪ್ರದರ್ಶಿಸಲಾಗುತ್ತದೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಲ್ಯಾಟ್ವಿಯಾ ದೇಶದ ಕವಿ ಮಾರಿಸ್ ಸಲೇಯ್ಸ್ರ(Māris Salējs) ಕಾವ್ಯದ ಕುರಿತ ಬರಹ
ಬೆಂಗಳೂರಿನ “ಸ್ಮಶಾನ”ದ ಕತೆಗಳು: ಎಚ್. ಗೋಪಾಲಕೃಷ್ಣ ಸರಣಿ
ಆಗಿನ್ನೂ ಶವ ವಾಹನ ಇರಲಿಲ್ಲ. ಬದಲಿಗೆ ಟ್ರಾಕ್ಟರ್, ಎತ್ತಿನ ಗಾಡಿ ಅಥವಾ ಜಟಕಾ ಗಾಡಿಯನ್ನು ಕೆಲವರು ಉಪಯೋಗಿಸಿದರೆ ಮತ್ತೆ ಸುಮಾರು ಜನ ಹೆಣ ಹೊತ್ತು ಹೋಗುವರು. ನಮ್ಮ ಕಾಲೋನಿಯ ಕೆಲವು ಕಾರ್ಮಿಕರು ಅವರದ್ದೇ ಒಂದು ಗುಂಪು ಮಾಡಿಕೊಂಡು ಯಾವುದಾದರೂ ಸಾವಿನ ಸುದ್ದಿ ಬಂದಕೂಡಲೇ ಶವ ಸಾಗಿಸಲು ಹೆಗಲು ಕೊಡಲು ಸಿದ್ಧರಿರುತ್ತಿದ್ದರು. ಚಟ್ಟ ಕಟ್ಟುವ ಸ್ಪೆಷಲಿಸ್ಟ್ಗಳೂ ಸಹ ಇದ್ದರು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ









