Advertisement

Month: May 2024

ಸುಪ್ರೀತ್ ಕೆ.ಎನ್. ಅವರ ‘ಉತ್ತರ’ ಕಾದಂಬರಿಯ ಪುಟಗಳು

ಈ ಬಾರಿಯ ಸಾಕ್ಷಾತ್ಕಾರ ಕಾರ್ಯಕ್ರಮಕ್ಕೆ ಈಗಾಗಲೇ ಅಭ್ಯರ್ಥಿಗಳು ಬಂದಾಗಿದೆ, ಹೊಸದಾಗಿ ಇನ್ಯಾರು ಬರುವುದಿದೆ ಎಂದು ಯೋಚಿಸಿದಾಗ, ಗುರುದೇವರು ಇನ್ನಿಬ್ಬರು ಬರುತ್ತಾರೆ ಎಂದು ಹೇಳಿದ್ದು ನೆನಪಾಯಿತು. ಜಯಕ್ಕನ ಸಮಾಧಿಯಿಂದ ಗುರುದೇವರ ನಿವಾಸಕ್ಕೆ ಮಾತಾಜೀಯವರು ಹೋಗಿ ತಮ್ಮ ಮನಸ್ಸಿನಲ್ಲಿದದ್ದನ್ನು ಹೇಳುವ ಮೊದಲೇ, ‘ದಕ್ಷಿಣ ಕಡೆಯಿಂದ ಒಬ್ಬ ಬರ್ತಾನೆ. ಅವನಿಗೆ ಸಾಧನೆಗಳನ್ನ ಮಾಡಿಸಿ, ಮೌನ ಕಾರ್ಯಕ್ರಮಕ್ಕೆ ತಯಾರು ಮಾಡಬೇಕು. ಅವನ ಬಗ್ಗೆ ನೀವು ವಿಶೇಷವಾಗಿ ಗಮನವಿಡಿ’ ಎಂದು ಹೇಳಿದರು.
ಸುಪ್ರೀತ್ ಕೆ.ಎನ್. ಅವರ ಹೊಸ ಕಾದಂಬರಿ ‘ಉತ್ತರ’ ಬಿಡುಗಡೆಗೆ ಸಿದ್ಧಗೊಳ್ಳುತ್ತಿದ್ದು ಅದರ ಒಂದು ಅಧ್ಯಾಯ ನಿಮ್ಮ ಓದಿಗೆ

Read More

ಕಡೆಪಾನ್ ಬಸ್ಯಾನ ಲೀಲಾವಳಿ

ಅವನು ಹೇಳುತ್ತಿರುವುದು ಬರಿ ಕಥೆಯೇ. ಸುಳ್ಳು ಕಥೆ. ಅವನ ಕಲ್ಪನೆಯಲ್ಲಿ ಅರಳುವ ಕಥೆ ಎನ್ನುವುದಕ್ಕೆ ಪುರಾವೆ ಎಂಬಂತೆ ನನ್ನ ಬಳಿ ಹಲವಾರು ನಿದರ್ಶನಗಳಿವೆ. ಅವನು ತನ್ನೆಲ್ಲಾ ದಿನಚರಿಯಲ್ಲಿ ನಟ ಯಶ್ ಅನ್ನು ಅನುಕರಿಸುತ್ತಿದ್ದ. ಕೆ. ಜಿ. ಎಫ್. ಸಿನಿಮಾದ ಅವನ ಗೆಟಪನ್ನು ಅನುಕರಿಸುವುದು. ಪುರುಷ ಪ್ರಾಧಾನ್ಯದ ಮುಖ್ಯವಾಹಿನಿಯ ಮಾಸ್ ಸಿನಿಮಾಗಳಲ್ಲಿ ಹೀರೋಗಳು ಹೊಡೆಯುವ ಅಸೂಕ್ಷ್ಮ ಡೈಲಾಗುಗಳನ್ನು ಅವನು ವಾಟ್ಸಪ್ಪ್ ರೀಲಾಗಿ ಇಡುತ್ತಿದ್ದ. ಅವನು ಕನಸುತ್ತಿದ್ದ ಭವಿಷ್ಯದ ಬಸವರಾಜನ ಪೂರ್ವ ಬಿಂಬದ ಪರಿಕರಗಳನ್ನು ಪುಷ್ಟೀಕರಿಸುವಂತೆ ಅವು ಇರುತ್ತಿದ್ದವು.
ದಾದಾಪೀರ್‌ ಜೈಮನ್ ಬರೆಯುವ ‘ಜಂಕ್ಷನ್‌ ಪಾಯಿಂಟ್‌’ ಅಂಕಣ

Read More

ತನಗನಿಸಿದ ಹಾಗೆ ಬದುಕಿದ ಸ್ನೇಹಿತ ಅವನು..

ಬಂಡಾಯ ಸಾಹಿತಿ, ನೇರ ನಡೆ ನುಡಿಯ ನಿಷ್ಠುರಿ ಎಂದು ಗುರುತಿಸಿಕೊಂಡಿದ್ದ ಚಂದ್ರಶೇಖರ ಪಾಟೀಲರು ಸೋಮವಾರ ಬೆಳಿಗ್ಗೆ ತೀರಿಕೊಂಡರು. ಹಾವೇರಿಯಲ್ಲಿ ಹುಟ್ಟಿದ್ದರೂ ಧಾರವಾಡವೇ ಅವರ ಕಾರ್ಯಕ್ಷೇತ್ರವಾಗಿತ್ತು. ಸಾಹಿತ್ಯ, ಹೋರಾಟ, ಬಂಡಾಯ, ನಾಟಕ ಎಂಬುದಾಗಿ ಬಹುಮುಖೀ ವ್ಯಕ್ತಿತ್ವ ಅವರದಾಗಿತ್ತು. ಧಾರವಾಡದಲ್ಲಿ ಚಂದ್ರಶೇಖರ ಪಾಟೀಲರು, ಗಿರಡ್ಡಿ ಗೋವಿಂದ ರಾಜು ಮತ್ತು ಸಿದ್ಧಲಿಂಗಪಟ್ಟಣ ಶೆಟ್ಟಿಯವರದ್ದು ನಿಡುಗಾಲದ ಸ್ನೇಹ. ಮೂವರೂ ಸಾಹಿತ್ಯ ಕ್ಷೇತ್ರದ ಅನೇಕ ಚಟುವಟಿಕೆಗಳಲ್ಲಿ ಜೊತೆಯಾಗಿ ಇದ್ದವರು. ತಮ್ಮ ಆಪ್ತ ಸ್ನೇಹಿತನ ಅಗಲಿಕೆಯ…

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಛಾಯಾ ಭಟ್‌ ಕತೆ

ಮದುವೆಯಾಗಿ ಬಂದಮೇಲೆ ಮಾಕುಚಿಕ್ಕಿಯ ಮಾತು ಸೊಟ್ಟಗಾಗಲು ಬಹಳ ದಿನ ಹಿಡಿಸಲಿಲ್ಲ, ಕರಿಮಣಿ ಕಟ್ಟಿಕೊಂಡವರೆಲ್ಲ ಉರಿದು ಬೀಳುವುದು ಸಂಪ್ರದಾಯವಿರಬೇಕು ಅಂತ ಆಶ್ಚರ್ಯ ಪರಮುಗೆ. ತನ್ನ ಹಡೆದಬ್ಬೆಯ ಪ್ರೀತಿಯಲ್ಲಿಯೂ ಹೆಚ್ಚೇನೂ ಓಲಾಡಿದವನಲ್ಲ ಪರಮು. ಅಬ್ಬೆ ವರ್ಷಕ್ಕೊಮ್ಮೆ ಹೊಟ್ಟೆ ಡುಬ್ಬ ಮಾಡಿಕೊಂಡು ಹೆರಿಗೆ ನೋವು ಬಂದೊಡನೆ ಕೊಂಕಣಿ ಅಜ್ಜಿಗೆ ಬರ ಹೇಳುವುದು, ಒಂದಲ್ಲ ಒಂದು ಕಾರಣಕ್ಕೆ ಮಗು ಹುಟ್ಟುತ್ತಲೇ ಕೈಲಾಸ ವಾಸಿಯಾಗುವುದು ಇದ್ದಿದ್ದೇ. ಮಗುವಿಲ್ಲದ ಬಾಳಂತನದಲ್ಲಿ ಅಳುವ ಅಬ್ಬೆ, ಕಂಡವರ ಶಿಶುಗಳಿಗೆಲ್ಲ ಹಾಲೂಡಿಸಿ ಎದೆ ಭಾರ ಕಳೆದ ಮೇಲೆ ಮತ್ತೆ ಮೊದಲಿನಂತೆ…

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ