Advertisement

Category: ಪುಸ್ತಕ ಸಂಪಿಗೆ

ಇಲ್ಲಿ ಬಳ್ಳಿ, ಹೂವು, ಮೋಡ ಕೂಡ ಮಾತನಾಡುತ್ತವೆ: ಡಾ. ವಿಜಯಾ ಬರಹ

‘ಹೊರದಾರಿ’ಯಲ್ಲಿ ಬರುವ ದತ್ತು ಮಗುವಿನ ಸಮಸ್ಯೆ ಅನೇಕ ಸತ್ಯ ಘಟನೆಗಳನ್ನು ನೆನಪಿಸಿತು. ಇಂಥ ಸಮಸ್ಯೆಗಳಿಂದಲೇ ಇರಬೇಕು. ಈಗ ನಿಯಮಗಳು ತುಂಬಾ ಬಿಗಿಯಾಗಿವೆ. ಸುಲಭವಿಲ್ಲ ಮಗುವೊಂದನ್ನು ಪಡೆಯುವುದು. ಅದೇನೇ ಇರಲಿ ವಾಚ್ಯವಾಗಿ ಹೇಳದಿದ್ದರೂ ಹೆಣ್ಣು ಮಗುವೊಂದು ಮಾತ್ರ ಇನ್ನೊಂದು ಕರುಳಿನ ಕೂಗನ್ನು ಗ್ರಹಿಸಬಲ್ಲದು ಎಂದು ತೋರಿದ್ದೀರಿ. ಎಲ್ಲಕ್ಕಿಂತ ಮಿಗಿಲಾಗಿ ನನಗೆ ನೀವು ಕೊಡುವ ವಿವರಗಳು ಆಪ್ತವಾದವು. ಗಿಡ ಮರ ಬಳ್ಳಿಗಳ ಜೊತೆ ಮಾತಾಡಿಬಿಡುತ್ತೀರಿ!
ಎ.ಎನ್. ಪ್ರಸನ್ನ ಕಥಾ ಸಂಕಲನ “ದಾಸವಾಳ” ಕುರಿತು ಡಾ. ವಿಜಯಾ ಬರಹ

Read More

ಒಳದನಿಗೆ ಕಿವಿಯಾಗುವ ಕವಿತೆಗಳು: ಆನಂದ ವಿ. ಪಾಟೀಲ ಬರಹ

“ಮಹಾಶೂನ್ಯದ ಮಹಾಶೂನ್ಯತ್ವ ಮಹಾಸಾಗರದಲಿ/ಪ್ರತಿಯೊಬ್ಬರೂ ಒಂಟಿ!’ ಎನ್ನುವ ಅಖೈರು ಸತ್ಯ ಇಷ್ಟು ಬೇಗನೆ ಕೈಗೆ ಬಂತೆ ಅಚ್ಚರಿಯನ್ನುಂಟು ಮಾಡುತ್ತದೆ. ಬಹಳಷ್ಟು ಸಲ ಇಲ್ಲಿನ ಕವಿತೆ ಆಂತರ್ಯಕ್ಕೆ ಲಗ್ಗೆ ಇಟ್ಟುದೇ ಆಗಿದೆ ಅನ್ನಿಸಿತು. ಹಾಗಿರುವಾಗ ಅದು ಗುಂಗಾಗಿ ಕಾಡುತ್ತಿದೆಯಾ ಎಂತಲೂ ಗುಮಾನಿಯಾಗಿ ಕಾಡುವಂತೆ ಇಲ್ಲಿನ ಸಾಲುಗಳು ಕಾಣುತ್ತವೆ.
ಸುಮಿತ್‌ ಮೇತ್ರಿ ಕವನ ಸಂಕಲನ “ಈ ಕಣ್ಣುಗಳಿಗೆ ಸದಾ ನೀರಡಿಕೆ” ಕುರಿತು ಆನಂದ ವಿ. ಪಾಟೀಲ ಬರಹ

Read More

ಹಿಂದಣ ಹೆಜ್ಜೆಯ ಅರಿವಿನ ಹಣತೆಯಲ್ಲಿ…: ತೇಜಸ್ವಿನಿ ಹೆಗಡೆ ಬರಹ

ಆಗಿಹೋದ ದುರಂತಗಳು, ದೌರ್ಜನ್ಯಗಳು ಒಂದು ಎಚ್ಚರಿಕೆಯ ಗಂಟೆಯಾಗಬೇಕು. ಮಾನವೀಯತೆಯ ಮಹತ್ವವನ್ನು, ವಿಶಾಲ ಮನೋಭಾವದ ಸೌಂದರ್ಯವನ್ನು, ಮಹತ್ವವನ್ನು, ಜೀವನಧರ್ಮವನ್ನು ವರ್ತಮಾನಕ್ಕೆ ಮಾತ್ರವಲ್ಲ ಭವಿಷ್ಯಕ್ಕೂ ಒಂದು ಪಾಠವನ್ನು ಕೊಡುವಂತಿರಬೇಕು. ಇತಿಹಾಸದ ಅಧ್ಯಯನವು ನಮ್ಮ ಅರಿವಿನ ಹೆಚ್ಚಳಿಕೆ ಮತ್ತು ಪಾಠಕ್ಕೆ ಮಾಪನವಾಗಬೇಕೇ ಹೊರತು ನಾವಿಲ್ಲದಿದ್ದ ಕಾಲಘಟ್ಟದಲ್ಲಿ ಯಾರೋ ದಾಖಲಿಸಿರುವ ವಿಷಯಗಳಿಂದ ಉದ್ರಿಕ್ತರಾಗಿ, ಭಾವೋದ್ವೇಗವನ್ನು ಹೊಂದಿ ಶೋಕ ಸಾಗರದಲ್ಲಿ ಮುಳುಗಿಯೋ, ದ್ವೇಷದ ಉರಿಯಲ್ಲಿ ಬೆಂದೋ ಅಂಧತ್ವವನ್ನು ಹೊಂದಿದರೆ ಮತ್ತೆ ಅದೇ ಇತಿಹಾಸ ಮರುಕಳಿಸುವ ಸಾಧ್ಯತೆಯೇ ಹೆಚ್ಚು!
ನವೀನ್‌ ಗಂಗೋತ್ರಿ ಕಥಾಸಂಕಲನ “ಕಥಾಗತ”ದ ಕುರಿತು ತೇಜಸ್ವಿನಿ ಹೆಗಡೆ ಬರಹ

Read More

ಅಳಿಸಲಾಗದ ನೋವುಗಳು: ಅಶೋಕ ಪವಾರರ ಆತ್ಮಕತೆಯ ಪುಟಗಳು

ಅಪ್ಪ, ಧೋಂಡಿ ಮಾಮಾ ಮತ್ತು ಲಮಾಣಿಗಳು ಪೋಲೀಸರ ಕಾಲಿಗೆ ಬಿದ್ದರು. ‘‘ಸರಕಾರ„„ ಧಣ್ಯಾರ, ನಾವು ಕಳ್ಳತನ ಮಾಡಿಲ್ಲರಿ. ಬೇಕಾದರ ಯಾವ ದ್ಯಾವರ ಮುಂದೂ ಕರ್ಕೊಂಡ ಹೋಗರಿ. ನಮ್ಗ ಏನೂ ಗೊತ್ತಿಲ್ಲರಿ.’’ ಸಾಯೇಬ ಸೊಂಟದ ಬೆಲ್ಟ ಬಿಚ್ಚಿದ. ಧೋಂಡು ಮಾಮಾನ ಮುಕಳಿಗೆ ಎರಡು ಜಡಿದ. ಲಮಾಣ್ಯಾರ ಮುಕುಳಿ ಮ್ಯಾಲೂ ಒದ್ದರು. ಅವರು ಜೋರ-ಜೋರಾಗಿ ಬೊಬ್ಬಿ ಹೊಡೀತ ಕಾಲಿಗೆ ಬಿದ್ದರು. ಮುಂದ ಅಪ್ಪನ ಬೆನ್ನಿಗೂ ಜೋರಾಗಿ ಗುದ್ದಿದರು. ಅಪ್ಪ ತಲಿಗೆ ಚಕ್ಕರ ಬಂದ ಬಿದ್ದ.
ಚಂದ್ರಕಾಂತ ಪೋಕಳೆ ಅನುವಾದಿಸಿದ ಮರಾಠಿ ಲೇಖಕ ಅಶೋಕ ಪವಾರರ ಆತ್ಮಕತೆ “ಬಿಡಾರ”

Read More

ನೋವ ತೋರದ ಗಾಯಗಳು: ಪ್ರೊ.ಕೃಷ್ಣಮೂರ್ತಿ ಬಿಳಿಗೆರೆ

ಕಂಟಲಗೆರೆ ಬಹುತೇಕ ಇದು ದುಡಿದು ದುಡಿದು ಬಡವಾಗಿಯೇ ಉಳಿದ ಕುಟುಂಬಗಳಿಂದ ತುಂಬಿದ ಊರಾಗಿದ್ದುದು ನನಗೆ ಗೊತ್ತು. ಇಂಥ ಒಂದು ಊರಿನ ಉರಿಯಿಂದ ಸಿಡಿದ ಬೀಜ ನೀನು. ಅಲ್ಲಿಂದ ಬಚಾವಾಗಿ ಪ್ರೈಮರಿ ಕೊಂಡವನ್ನು ಹಾದು, ಮಿಡ್ಲಿಸ್ಕೂಲ್ ಎಂಬ ಉನ್ನತ ಶಿಕ್ಷಣಕ್ಕೆ ತಿಪಟೂರಿಗೆ ಹೋದದ್ದು, ಊರಿನ ಪುರಾತನ ಬೇರುಗಳನ್ನು ಕಿತ್ತುಕೊಂಡು ಹಾಸ್ಟೆಲ್‌ನಲ್ಲಿ ನೆಲೆಗೊಂಡದ್ದು, ಚಿಕ್ಕಪ್ಪನ ಮತ್ತು ಕುಂದೂರು ತಿಮ್ಮಯ್ಯನವರ ಒತ್ತಾಸೆ ನಿನಗೆ ಸಿಕ್ಕಿದ್ದು ನಿನ್ನಂತ ದಲಿತ ಹುಡುಗರ ಜೀವನದಲ್ಲಿಯ ಬಹುದೊಡ್ಡ ತಿರುವು ಎಂದು ನನಗೆ ಅನಿಸುತ್ತದೆ.
ಗುರುಪ್ರಸಾದ್‌ ಕಂಟಲಗೆರೆ ಅವರ “ಟ್ರಂಕು ತಟ್ಟೆ” ಹಾಸ್ಟೆಲ್‌ ಅನುಭವ ಕಥನದ ಕುರಿತು ಪ್ರೊ.ಕೃಷ್ಣಮೂರ್ತಿ ಬಿಳಿಗೆರೆ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ