Advertisement

Category: ಪುಸ್ತಕ ಸಂಪಿಗೆ

ಭಿನ್ನ ನೋಟದ ಪ್ರವಾಸ ಕಥನ: ಡಾ. ಪ್ರೇಮಲತ ಕೃತಿಗೆ ಎಸ್‌. ದಿವಾಕರ್‌ ಬರೆದ ಮುನ್ನುಡಿ

ನಮ್ಮ ಲೇಖಕರಲ್ಲಿ ವಿ.ಕೃ. ಗೋಕಾಕರು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಓದಿ ಫಸ್ಟ್ ರ್ಯಾಂಕ್ ಗಳಿಸಿದರಷ್ಟೆ. ಯು.ಆರ್. ಅನಂತಮೂರ್ತಿಯವರೂ ಕವಿ ರಾಮಚಂದ್ರ ಶರ್ಮರೂ ಕೆಲವು ವರ್ಷ ಇಂಗ್ಲೆಂಡಿನಲ್ಲಿ ವಿದ್ಯಾಭ್ಯಾಸ ಮಾಡಿದ್ದುಂಟು. ತರುಣ ಲೇಖಕರಲ್ಲಿ ಮುಖ್ಯವಾಗಿ ವಿವೇಕ ಶಾನಭಾಗರು ಉದ್ಯೋಗನಿಮಿತ್ತ ನಾಲ್ಕಾರು ವರ್ಷ ಲಂಡನ್ನಿನಲ್ಲಿದ್ದರು. ಇವರು ಯಾರೂ ಅಪ್ಪಿತಪ್ಪಿ ಕೂಡ ಯುನೈಟೆಡ್ ಕಿಂಗ್ಡಮ್ಮನ್ನು ಭಾರತದೊಡನೆ ತುಲನೆ ಮಾಡಲಿಲ್ಲವೆನ್ನುವುದು ಗಮನಾರ್ಹ. ಆದರೂ ಹಾಗೆ ತುಲನೆ ಮಾಡಿ ಬರೆಯುವುದರಿಂದ ಕೆಲವರು ಓದುಗರಾದರೂ ನಮ್ಮ ದೇಶದ ಹೀನಾಯ ಸ್ಥಿತಿಯ ಬಗ್ಗೆ ಸೂಕ್ಷ್ಮವಾಗಿ ಯೋಚಿಸಬಹುದು. ಅವರಲ್ಲಿ ಇದಕ್ಕೇನು ಪರಿಹಾರವಿದ್ದೀತು ಎಂಬೊಂದು ಜಿಜ್ಞಾಸೆಯೇ ಉಂಟಾಗಬಹುದು. ಒಟ್ಟಿನಲ್ಲಿ ಅದೊಂದು ಒಳ್ಳೆಯ ಆಶಯವೇ.
ಡಾ. ಪ್ರೇಮಲತ ಬಿ. ಬರೆದ “ವಿದೇಶ ಪ್ರಯಾಣ… ಕೈತುಂಬ ಕಾಂಚಾಣ” ಕೃತಿಗೆ ಎಸ್‌. ದಿವಾಕರ್‌ ಬರೆದ ಮುನ್ನುಡಿ

Read More

ಜೀವಂತಿಕೆ ಒಸರುವ ಕವಿತೆಗಳು: ಸ್ಮಿತಾ ಅಮೃತರಾಜ್ ಬರಹ

ನಾವು ಬದುಕುವ ರೀತಿ ನೀತಿ‌ ನಮ್ಮ ಪ್ರತಿಷ್ಟೆ ಪರಾಕಾಷ್ಟೆಗಳು ಅದೆಷ್ಟಿದ್ದರೂ ನಾವೆಲ್ಲರೂ ಮನುಷ್ಯರು. ಆಳದಲ್ಲಿ ನಾವೆಲ್ಲರೂ ಅನುಭವಿಸುವ ಭಾವಗಳು ಒಂದೇ. ನಾನಾ ಸ್ತರಗಳಲ್ಲಿ‌ ಪ್ರಕಟಗೊಳ್ಳುವ ನಮ್ಮ ನೋವು ನಲಿವು ಗೆಲುವು ಸೋಲು ಅಪಮಾನ ಎಲ್ಲವೂ ಇಲ್ಲಿ ಕವಿತೆಯಾಗಿ ನಿಸೂರಾಗುತ್ತವೆ. ನಾಗರೇಖಾ ತನ್ನದೇ ರೀತಿಯಲ್ಲಿ ಕವಿತೆ ಕಟ್ಟುವ ಕೌಶಲ್ಯವನ್ನು‌‌ ಸಿದ್ಧಿಸಿಕೊಂಡಿದ್ದಾರೆ. ತಾನು ಬದುಕಿದ, ತಾನು ಕಾಣುವ ಸುತ್ತ ಮುತ್ತಲಿನ ಸಹಜ ಸಂಗತಿಗಳನ್ನು ಕವಿತೆಯ ಮೂಲಕ‌ ತರುತ್ತಾ ಅದನ್ನು ಮತ್ಯಾವುದೋ‌ ಸಂದರ್ಭಕ್ಕೆ, ಸಂಗತಿಗಳಿಗೆ ಕೊಂಡಿ ಕೂಡಿಸುತ್ತಾರೆ. ಒಂದು ವಸ್ತುವನ್ನು ತೆರೆದಿಡುತ್ತಾ ಮತ್ಯಾವುದೋ ಹೊಳಹನ್ನು ಕಾಣಿಸುವುದು ನಾಗರೇಖರ ಕವಿತೆ ವೈಶಿಷ್ಟ್ಯತೆ.
ನಾಗರೇಖಾ ಗಾಂವಕರ ಕವನ ಸಂಕಲನ “ಪಾದಕ್ಕೊಂದು ಕಣ್ಣು” ಕುರಿತು ಸ್ಮಿತಾ ಅಮೃತರಾಜ್‌ ಬರಹ

Read More

“ಬಿಗಿ ಹಿಡಿದ ಮುಷ್ಟಿಯಲಿ ನವಿರು ಪ್ರೇಮದ ಘಮಲು”: ಎಂ. ತರುಣ್‌ ಕೃತಿಗೆ ಮೋದೂರು ತೇಜ ಮುನ್ನುಡಿ

ನಿಜವಾದ ಕವಿಗೆ ಒಳಗಣ್ಣು ತೆರೆದಿದ್ದಾಗ ಮಾತ್ರ ತನ್ನ ಸುತ್ತಲಿನ ವಸ್ತುಗಳಾಗಲಿ, ವ್ಯಕ್ತಿಗಳಾಗಲಿ ವಿಶೇಷವಾಗಿ ಕಾಣಿಸುತ್ತಾರೆ. ಅಂತಹ ಕಾಣುವ ಕಾಣ್ಕೆ ಈ ಯುವ ಕವಿ ದಕ್ಕಿಸಿಕೊಂಡಿದ್ದಾರೆ. ಆದರೆ ಅವಸರದ ಬೆನ್ನೇರಿ ಕುಳಿತಿರುವ ನಮಗೆ ಯಾವುದನ್ನೂ ಸಾವಧಾನವಾಗಿ ನೋಡುವ, ಕಾಣುವ ತಾಳ್ಮೆ, ತುಡಿತ ಇಲ್ಲದಂತಾಗಿದೆ. ಮೊಬೈಲ್‌ ಎಂಬ ಮಾಯಾಲೋಕ ಅಂಗೈಗೆ ಬಂದ ಮೇಲೆ ಎಲ್ಲವನ್ನೂ ಮೈಮರೆಯುವಂತೆ ಮಾಡುತ್ತಿರುವಾಗ, ಅದರಲ್ಲೂ ತಾನು ಬರೆದಿದ್ದೆಲ್ಲವೂ ಪ್ರಕಟಿಸಲು ಸಾಮಾಜಿಕ ಜಾಲತಾಣಗಳ ವೇದಿಕೆಗಳಿರುವಾಗ ಕಾಯುವ ಗುಣ ಯಾರಿಗೂ ಇಲ್ಲಂತಾಗಿದೆ. ಹಾಗಂತ ಎಲ್ಲರೂ ಸಂತೆಗೆ ಮೂರು ಮೊಳ ಕಂಬಳಿ ನೇಯುವಂತೆ ಕಾವ್ಯ ರಚನೆಯಲ್ಲಿ ತೊಡಗಿದ್ದಾರೆಂದು ಹೇಳಿದರೆ ತಪ್ಪಾಗುತ್ತದೆ.
ಎಂ. ತರುಣ್‌ ಕವನ ಸಂಕಲನ “ಬಿಗಿ ಹಿಡಿದ ಮುಷ್ಟಿಯಲಿ”ಕ್ಕೆ ಮೋದೂರು ತೇಜ ಬರೆದ ಮುನ್ನುಡಿ

Read More

ನೀರ ಮೇಲಣ ಗುಳ್ಳೆ-ಡಾಟರ್ ಆಫ್ ಪರ್ಷಿಯ: ದೇವಿಕಾ ನಾಗೇಶ್ ಬರಹ

ಈಕೆ ತನ್ನ ನೆಲದ ಸ್ಥಿತಿವಂತರು ಇಲ್ಲದವರ ಜೀವನ ಮಟ್ಟ ಸುಧಾರಣೆಗೆ ಕೈಜೋಡಿಸಿದರೆ ಸಾಮಾಜಿಕ, ರಾಜಕೀಯ, ಆಡಳಿತಾತ್ಮಕ ಬದಲಾವಣೆಗಳನ್ನು ತರಲು ಸಾಧ್ಯವಿದೆ… ಎನ್ನುವ ನಂಬಿಕೆ ಇದ್ದವರಾಗಿದ್ದಳು. ಈ ಹಿನ್ನೆಲೆಯಲ್ಲಿ ಅದ್ಭುತ ಯೋಜನೆಗಳನ್ನು ಹಾಕಿಕೊಂಡಿದ್ದಳು.. ಆಗ ಸ್ಪಂದಿಸಿದ ಹಲವರು ಈ ಸಾಧ್ಯತೆಯ ಪರಿಧಿಗಳನ್ನು ವಿಸ್ತರಿಸಿಕೊಂಡು ಆ ದೆಸೆಯಲ್ಲಿ ಸಕ್ರಿಯವಾದರು… ಇವಳ ಯೋಜನೆಗೆ ಕೈಜೋಡಿಸಿದರು.
ಸಟ್ಟರೆಹ್ ಫಾರ್ಮನ್ ಫರ್ಮ ಆತ್ಮಕಥೆ “ಡಾಟರ್ ಆಫ್ ಪರ್ಷಿಯಾ” ಕುರಿತು ದೇವಿಕಾ ನಾಗೇಶ್‌ ಬರಹ

Read More

ಕರ್ಮನಿಷ್ಟೆಯಲ್ಲಿ ಜಯಕಂಡವನ ಕಥನ: ನಾರಾಯಣ ಯಾಜಿ ಬರಹ

ಮೊದಲು ಪ್ರಥಮ ಪುರುಷದಲ್ಲಿ ಪ್ರಾರಂಭಮಾಡಿದ ಹೆಗಡೆಯವರು ಇದ್ದಕ್ಕಿದ್ದಂತೆ ಅದನ್ನು ತೃತೀಯ ಪುರುಷದಲ್ಲಿ ಬರೆಯಲು ಪ್ರಾರಂಭಿಸುವುದು ಕುತೂಹಲಕಾರಿ. ಶೀರ್ಷಿಕೆಯಲ್ಲಿ ಹೇಳಿರುವಂತೆ ಇದು ಜಯರಾಮ ಹೆಗಡೆಯ ಜೀವನಕಥನ ಎನ್ನುವಾಗ ತನ್ನನ್ನು ತಾನು ಹೊರಗಡೆ ನಿಂತು ‘ಜಯರಾಮ’ ಎನ್ನುವ ಮೂಲಕ ಕಥನವನ್ನು ಹೇಳುವಾಗ ಮನಸ್ಸಿನ ಅನೇಕ ವಿಷಯಗಳನ್ನು ತೆರೆದಿಡಬಹುದು ಎನ್ನುವುದು ಅವರ ಅನಿಸಿಕೆಯಾಗಿರಬಹುದು. ಅದೂ ಅಲ್ಲದೇ ಲೇಖನನ್ನೂ ಸಹ ವಿಮರ್ಶೆಗೊಳಿಸಲು ಈ ರೀತಿಯ ಬರಹದಿಂದ ಸಾಧ್ಯ.
ಜಯರಾಮ ಹೆಗಡೆ ಜೀವನ ಕಥನ ‘ಬೀದಿಯ ಬದುಕು’ ಕೃತಿಯ ಕುರಿತು ನಾರಾಯಣ ಯಾಜಿ ಬರಹ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ