Advertisement

Category: ಸಾಹಿತ್ಯ

ಪ್ರವೀಣ್ ಕುಮಾರ್ ಜಿ. ಬರೆದ ಈ ಭಾನುವಾರದ ಕತೆ “ಈಡು ಜೋಡು”

ಇತ್ತ ಬಾಮೈದನು ತನ್ನ ಬಲಗೈಯಲ್ಲಿ ಉಂಗುರ ಹಿಡಿದು, ಎಡಗೈಯಲ್ಲಿ ಮಂಜನ ಕೈ ಹಿಡಿದು ತೊಡಿಸಲು ಮುಂದಾದಾಗ ಮೊದಲಿಗೆ ಮಂಜನ ಕೈ ಮೇಲೇಳಲಿಲ್ಲ. ಅಕ್ಕನ ಅಳುವಿನಲ್ಲಿ ತಾನೂ ಕಣ್ತುಂಬಿಕೊಂಡಿದ್ದ ಬಾಮೈದ ಉಂಗುರವನ್ನು ಮತ್ತೆ ಬೆರಳ ಹತ್ತಿರ ಹೊಯ್ದಾಗ ಮಂಜನ ಕೈ ಇನ್ನಶ್ಟು ಹಟ ಮಾಡಿತು. ಬಾಮೈದ ಮಂಜನನ್ನು ನೋಡಿದ, ಮಂಜನ ಮಾರಿ ನೆಲ ನೋಡುತ್ತಾ, ಬೇಡ ಬೇಡ ಎಂಬಂತೆ ಅತ್ತಿತ್ತ ಒದರಾಡುತ್ತಿತ್ತು. ಬಾಮೈದ ಮಾವನವರನ್ನು ನೋಡಿದ, ಸುತ್ತಿನವರು ಇನ್ನೂ ಬೆರಳು ಏರದ ಉಂಗುರವನ್ನೇ ನೋಡುತ್ತಿದ್ದರು. ಬಾಮೈದ ಗಟ್ಟಿಯಾಗಿ ಕೈ ಹಿಡಿದು ತೊಡಿಸಲು ನೋಡಿದಾಗ ಮಂಜ ಇನ್ನೂ ಜೋರಾಗಿ ತಲೆಯನ್ನು ಒದರಿ, ಕೈ ಹಿಂದಕ್ಕೆ ತೆಗೆದುಬಿಟ್ಟ.
ಪ್ರವೀಣ್ ಕುಮಾರ್ ಜಿ. ಬರೆದ ಕತೆ “ಈಡು ಜೋಡು” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ನಾಗರೇಖಾ ಗಾಂವಕರ ಬರೆದ ಈ ಭಾನುವಾರದ ಕತೆ “ಸೋಡಿನಾಟ”

ನೌಕರಿ ಸೇರಿದ ಹೊಸದರಲ್ಲಿ ಅಪ್ಪನ ಉಮೇದಿಗೆ ಕಡಿಮೆ ಇರಲಿಲ್ಲ. ಸಾಯುವವರೆಗೂ ಮನೆಯ ಜವಾಬ್ದಾರಿ ನಿಭಾಯಿಸುತ್ತಾ ಬದುಕಿದ ಜೀವ ತನ್ನಪ್ಪ. ಸಾಯುವ ಹಿಂದಿನ ದಿನವೂ “ಅಪ್ಪಾ!! ಸುಸ್ತಾಗಿದೆ ನಿಂಗೆ. ಮನಿಕಾ” ಎಂದು ಹಾಸಿಗೆ ಜಾಡಿಸಿ ತಲೆದಿಂಬು ಸರಿ ಮಾಡಿಕೊಟ್ಟರೆ “ಮಾಬ್ಲೂ ಮಲಗುಲಾ ಮನೇ!! ಆ ಹಾಳೆ ಕಟ್ಟು ತಕಂಡ ಬಾ!!” ಎಂದು ತಮ್ಮ ಲೆಕ್ಕದ ಪುಸ್ತಕ ತರಿಸಿಕೊಂಡು ಆ ವರ್ಷದ ಖರ್ಚು ವೆಚ್ಚ ಬರೆದುದನ್ನು ಮತ್ತೊಮ್ಮೆ ಚೆಕ್ ಮಾಡಿದ್ದರು. “ಮಾಬ್ಲು ಗಿಡವಕ್ಕೆ ಈ ಸಲ ಗೊಬ್ಬರ ಹಾಕಬೇಕಾಗತ. ಯಾರಿಗರೂ ಹೇಳ.
ನಾಗರೇಖಾ ಗಾಂವಕರ ಬರೆದ ಕತೆ “ಸೋಡಿನಾಟ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಎಸ್. ನಾಗಶ್ರೀ ಅಜಯ್ ಬರೆದ ಈ ಭಾನುವಾರದ ಕತೆ “ಭಿನ್ನ”

ಹೀಗೆ ಅಚಾನಕ್ಕಾಗಿ ಕೆಲಸ ಬಿಡುವ ನಿರ್ಧಾರ ತಿಳಿಸಿ ಹಿಂತಿರುಗಿ ನೋಡದೆ ಬೀಸುನಡಿಗೆಯಲ್ಲಿ ಎದ್ದು ಬರಬೇಕೆನ್ನುವ ತೀರ್ಮಾನ ಹಿಂದಿನ ರಾತ್ರಿ ಮೊಳಕೆಯೊಡೆದು ಬೆಳೆದು ಬೆಳೆದು ಬೃಹದಾಕಾರವಾಗಿ ಇವತ್ತು ಹರಿಣಿಯ ಮುಂದೆ ಕುಳಿತಾಗ ಹೇಳಲೇಬೇಕಾದ ಒತ್ತಡ ಸೃಷ್ಟಿಸಿತ್ತು. ಎಂದಿನಂತೆ ಮೀಟಿಂಗ್ ರೂಮಲ್ಲಿ ಸಿಗದೆ ತನ್ನ ಕ್ಯಾಬಿನ್ನಿಗೆ ಕರೆಸಿ ಕೂರಿಸಿದಾಗಲೇ ಹರಿಣಿ ತನ್ನ ಅಧಿಕಾರ ಪ್ರದರ್ಶನ ಮಾಡಿಯೇ ತೀರುವ ಸೂಚನೆ ಸಿಕ್ಕಿತ್ತು.
ಎಸ್. ನಾಗಶ್ರೀ ಅಜಯ್ ಹೊಸ ಕಥಾ ಸಂಕಲನ “ಕಡೆ ಹಾಯ್ವ ದೋಣಿ”ಯ ಒಂದು ಕತೆ “ಭಿನ್ನ”

Read More

ಕಾರ್ತಿಕ್ ಕೃಷ್ಣ ಬರೆದ ಈ ಭಾನುವಾರದ ಕತೆ “ಶಿವಪುರದ ಅನಿಲ ದುರಂತ”

ಸಿದ್ದಪ್ಪ ಮಾಸ್ತರರ ಮನೆಯ ದೃಶ್ಯ ಮಾತ್ರ ಸಂಪೂರ್ಣ ಬೇರೆಯಾಗಿತ್ತು.ಅಲ್ಲಿ ಯಾವುದೇ ಗಡಿಬಿಡಿಯಿರಲಿಲ್ಲ, ಹೊಗೆಯಿರಲಿಲ್ಲ, ಕೆಮ್ಮಿನ ಸದ್ದಿರಲಿಲ್ಲ. ಮಾಸ್ತರು ಬೆಳಿಗ್ಗೆ ಐದು ಗಂಟೆಗೆ ಎದ್ದು ತಣ್ಣೀರಿನ ಸ್ನಾನ ಮುಗಿಸಿ, ಶುಭ್ರವಾದ ಬಟ್ಟೆ ಧರಿಸಿ ಅಡುಗೆಮನೆಗೆ ಬರುತ್ತಿದ್ದರು. ಹಳೆಯ ಸ್ಟವ್‌ನ ನಾಬ್ ಅನ್ನು ಮೃದುವಾಗಿ ತಿರುಗಿಸುತ್ತಿದ್ದರು. ‘ಚಿಕ್’ ಎಂಬ ಸದ್ದಿನೊಂದಿಗೆ, ಅಲ್ಲಿ ನೀಲಿ ಜ್ವಾಲೆ ಮೃದುವಾಗಿ, ತಾಳಬದ್ಧವಾಗಿ ಉರಿಯಲು ಶುರುವಾಗುತ್ತಿತ್ತು. ಅವರ ಪತ್ನಿ ಶಾಂತಮ್ಮ, ಆ ನೀಲಿ ಜ್ವಾಲೆಯ ಮೇಲೆ ಹಬೆಯಾಡುವ ಮೃದುವಾದ ಇಡ್ಲಿ ಮತ್ತು ಪರಿಮಳ ಬೀರುವ ಸಾಂಬಾರ್ ಮಾಡುತ್ತಿದ್ದರು.
ಕಾರ್ತಿಕ್ ಕೃಷ್ಣ ಬರೆದ ಈ ಭಾನುವಾರದ ಕತೆ “ಶಿವಪುರದ ಅನಿಲ ದುರಂತ” ನಿಮ್ಮ ಓದಿಗೆ

Read More

ಡಾ. ಪ್ರೇಮಲತ ಬಿ. ಈ ಭಾನುವಾರದ ಕತೆ “ನೆತ್ತಿಯ ಕಣ್ಣು”

ನೆತ್ತಿಯ ಮೇಲಿನ ಕಣ್ಣ ಸ್ವಾಮೀಜಿ ಈಗ ಸಮಾಧಾನದಲ್ಲಿದ್ದು ಬೆವರುವುದನ್ನು ನಿಲ್ಲಿಸಿದ್ದರು. ಉಂಗುರಗಳನ್ನು ಹಾಕಿದ್ದ ಹಿತ್ತಾಳೆ ಚೊಂಬಿನ ನೀರನ್ನು ಇಬ್ಬರಿಗೂ ತೀರ್ಥದಂತೆ ಕೊಟ್ಟು ತಾವೂ ಬಲಗೈ ಗೆ ಬಗ್ಗಿಸಿಕೊಂಡರು. ಸ್ವಾಮೀಜಿ ಏನು ಮಾಡುತ್ತಾರೋ ಅದನ್ನೇ ಮಾಡಲು ತಯಾರಾದ ದಂಪತಿಗಳು ಅವರನ್ನೇ ನೋಡುತ್ತಿದ್ದರು. ಸ್ವಾಮೀಜಿ ನೀರಿದ್ದ ಕೈಯನ್ನು ಎರಡೂ ಕಣ್ಣುಗಳಿಗೆ ಒತ್ತಿಕೊಂಡು ಗಟಕ್ಕೆಂದು ಆ ನೀರನ್ನು ಕುಡಿದರು. ನಂತರ ಅಂಗೈಯನ್ನು ಮುಂಡಾಸಿನ ಬಳಿ ತಗೊಂಡುಹೋದರು.
ಡಾ. ಪ್ರೇಮಲತ ಬಿ. ಈ ಭಾನುವಾರದ ಕತೆ “ನೆತ್ತಿಯ ಕಣ್ಣು” ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ