ಹೊಸ ಬದುಕಿಗೆ ಬಿದ್ದ ಬುನಾದಿ: ಜುಲೇಖಾ ಬೇಗಂ ಜೀವನ ವೃತ್ತಾಂತ
ಬಿಡುವಿದ್ದಾಗೆಲ್ಲ ಅವರ ಮನೆಗೆ ಹೋಗುವುದು ಸಾಮಾನ್ಯವಾಯಿತು. ಸುಮ್ಮನಿರುವ ಗೆಜ್ಜೆ ನನ್ನ ಮನಸ್ಸಲ್ಲೇನೊ ಸದ್ದು ಮಾಡಿದರಂತೆ. ‘ನಾನೂ ಗೆಜ್ಜೆ ಕಟ್ಬೇಕು. ಕಟ್ರಿ’ ಎಂದು ಅಲವತ್ತುಕೊಂಡೆ. ‘ಹಾಗೆಲ್ಲ ಕಟ್ಬಾರ್ದವ್ವಾ, ದೇವ್ರಿಗೆ ಪೂಜೆ ಮಾಡಿ ಕಟ್ಟೋದು ಗೊತ್ತೇನು?’ ಎಂದು ಸುಮ್ಮನಿರಿಸಲು ನೋಡಿದರು. ಬಿಡುವವಳಲ್ಲ ನಾನು, ‘ಹಾಂ, ನಾನೂ ಪೂಜೆ ಮಾಡ್ತೇನಿ. ಕಟ್ರಲಾ’ ಎನ್ನುತ್ತಿದ್ದೆ. ನನ್ನ ಚಾಲಾಕಿತನ ಕಂಡು ನಕ್ಕು, ತಲೆ ಬಡಿದುಕೊಂಡು, ‘ನಿಮ್ಮವ್ವ ಬಿಟ್ಟಾಳ ನಮ್ಮನ್ನ, ಕಸಬರಿಕಿ ತಗೊಂಡು ಓಡ್ಸ್ಕೋತಾ ಬರ್ತಾರ’ ಎಂದು ತಮಾಷೆ ಮಾಡಿಬಿಡುತ್ತಿದ್ದರು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಆರನೆಯ ಕಂತು

