Advertisement

Tag: ಕೆಂಡಸಂಪಿಗೆ

ಎಷ್ಟು ಬೆರಗು ಈ ಪ್ರಕೃತಿಯಲಿ…: ಆಶಾ ಜಗದೀಶ್ ಅಂಕಣ

ನಾವೆಲ್ಲಾ ನೀರಿನಲ್ಲಿ ನುಣುಪಾದ ಕಲುಗಳನ್ನು ಎಸೆಯುತ್ತಾ ಆಡುತ್ತೇವೆ. ಚಪ್ಪಟೆಯಾದ ನುಣುಪುಗಲ್ಲುಗಳನ್ನು ಒಂದರ ಮೇಲೆ ಒಂದರಂತೆ ಜೋಡಿಸಿ, ಅದಕ್ಕೇನೋ ಶಕ್ತಿ ಬಂತೆಂದು ಭಾವಿಸಿ, ‘ನಾವು ಆದಷ್ಟು ಬೇಗ ತಲೆ ಮೇಲೊಂದು ಸೂರು ಮಾಡಿಕೊಳ್ಳುವಂತಾಗಲಿ ಶಕ್ತಿಯೇ’ ಎಂದು ಬೇಡಿ, “ಮತ್ತೊಮ್ಮೆ ಬರುವವರೆಗೂ ಹೀಗೆ ಇರಲಿ” ಎಂದು ಕೇಳಿಕೊಂಡು ಪ್ರಾರ್ಥನೆಯನ್ನು ಕೊನೆಗೊಳ್ಳಿಸಿಕೊಳ್ಳುತ್ತೇವೆ.
ಆಶಾ ಜಗದೀಶ್ ಬರೆಯುವ “ಆಶಾ ಲಹರಿ” ಅಂಕಣದ ಬರಹ ನಿಮ್ಮ ಓದಿಗೆ

Read More

ವಸಂತಕುಮಾರ್‌ ಕಲ್ಯಾಣಿ ಬರೆದ ಈ ಭಾನುವಾರದ ಕತೆ

ನಾವೂ ನಮ್ಮ ಮಕ್ಕಳೂ, ಕೆಲಸಕ್ಕೂ, ಶಾಲೆಗೂ ಸೈಕಲ್ನಲ್ಲೋ ನಡೆದುಕೊಂಡೋ ಹೋಗಬೇಕು. ನೀವು ಹಾಕಿದ ಊಟ ತಿಂದು ಕೊಬ್ಬಿದ ನಾಯಿಗಳು ನಮ್ಮ ಮೇಲೆ ಹಾರಿ ಬೀಳ್ತವೆ. ಮೊನ್ನೆ ಮೊನ್ನೆ ಒಂದು ಸಣ್ಣ ಹುಡುಗನಿಗೆ ಸಿಕ್ಕಾಪಟ್ಟೆ ಕಚ್ಚಿ ನಾವು ಅವನನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು. ಇನ್ನು ಮೇಲೆ ನೀವು ಇಲ್ಲಿ ತಂದು ಹಾಕಬೇಡಿ ಎಂದರಂತೆ….
ವಸಂತಕುಮಾರ್‌ ಕಲ್ಯಾಣಿ ಬರೆದ ಈ ಭಾನುವಾರದ ಕತೆ “ನಾಯಿ ನೆರಳು” ನಿಮ್ಮ ಓದಿಗೆ

Read More

ಮಾನಸಿಕ ಹಿಂಸೆಯೂ ಕ್ರೌರ್ಯವೇ: ಗಿರೀಶ್‌ ಕಾಸರವಳ್ಳಿ ಕೃತಿಯ ಆಯ್ದ ಭಾಗ

ಕಾರಂತರದ್ದು ಸದಾ ಕ್ರಿಯಾಶೀಲವಾಗಿರುವ ಮನಸ್ಸು. ಅವರಿಗೇ ‘ತಾನು ಖಾಲಿಯಾದೆ’ ಅಂತನ್ನಿಸಬೇಕಾದರೆ ಆ ಭೂಪಾಲ್ ಘಟನೆ ಎಂತಹ ಆಘಾತ ತಂದಿರಬೇಕು. ಅವರ ಮನಸ್ಸು ಮುದುಡುವಂತೆ ಮಾಡಿ, ತಮ್ಮಿಂದ ಇನ್ನು ಸೃಜನಾತ್ಮಕವಾಗಿ ಏನನ್ನೂ ಮಾಡಲು ಸಾಧ್ಯವಿಲ್ಲ ಅನ್ನಿಸುವಂತೆ ಮಾಡಿದರಲ್ಲಾ, ಅದುವೇ ಕ್ರೌರ್ಯ. ಭೂಪಾಲ್‌ನ ಆ ಘಟನೆ ನಿಜವಾಗಿಯೂ ನಡೆದದ್ದೋ ಅಲ್ಲವೋ ನನಗೆ ತಿಳಿಯದು. ಅಲ್ಲಿನ ರಾಜಕೀಯ ರಂಗಮಂಡಲದ ಮುಖ್ಯಸ್ಥರಾಗಿದ್ದ ಕಾರಂತರನ್ನು ಬಲಿಪಶು ಮಾಡಿದರು ಎಂದು ಅವರ ಕೆಲವು ಸ್ನೇಹಿತರು ಹೇಳಿದ್ದನ್ನು ನಾನು ಕೇಳಿದ್ದೇನೆ.
ಖ್ಯಾತ ಸಿನಿಮಾ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರ ಚಲನಚಿತ್ರಗಳ ಸಂಕಥನ “ಬಿಂಬ ಬಿಂಬನ” ದಿಂದ “ಕ್ರೌರ್ಯ” ಚಿತ್ರದ ಕುರಿತ ಮಾತುಕತೆ ನಿಮ್ಮ ಓದಿಗೆ

Read More

ನಮ್ಮನೆಯ ಅಷ್ಟೈಶ್ವರ್ಯ: ಚಂದ್ರಮತಿ ಸೋಂದಾ ಸರಣಿ

ಹೊಸ ಬಡಾವಣೆಗೆ ವಾಸಕ್ಕೆ ಬಂದವರಿಗೆ ಯಾವ್ಯಾವ ಬಗೆಯಲ್ಲಿ ಇಲಿ ಕಾಟಕೊಡುತ್ತದೆ ಅನ್ನೋ ವೈವಿಧ್ಯಗಳ ಪರಿಚಯ ಮಾಮೂಲು. ನಮ್ಮೂರುಗಳಲ್ಲಾದರೆ ಒಂದು ಬೆಕ್ಕು ಸಾಕಿದರೆ ಆಯಿತು. ಇಲಿಕಾಟ ತಪ್ಪಿತು ಅಂತನೇ ಅರ್ಥ. ಆದರೆ ನಗರದಲ್ಲಿ ಬೆಕ್ಕು ಸಾಕೋದು ಅಂದರೆ ಸಂನ್ಯಾಸಿ ಸಂಸಾರದಂತೆ.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿ

Read More

ಅಮೃತವಾಹಿನಿಯೊಂದು ಹರಿಯುತಿದೆ: ಸುಧಾ ಆಡುಕಳ ಅಂಕಣ

ಅಮ್ಮನ ಮಾತು ಕೇಳಿ ಭಾವುಕಳಾದ ಅವಳು, “ಕಷ್ಟ ಬಂದಾಗಲೇ ನಮ್ಮೋರು, ತಮ್ಮೋರು ಯಾರಂತ ಗೊತ್ತಾಗೂದು ಅಮ್ಮಾ. ತನ್ನ ದಣಿ ಮಾತು ಅಂದ್ರೆ ಶಾಸ್ನ ಅಂತ ಹೇಳ್ತಾನೇ ಇವ್ರು ಜೈಲಿಗೋದ್ರು. ದಣಿ ಈಗ ಗುರುತೇ ಇಲ್ಲದೋರ ಹಾಗೆ ಕಾರಲ್ಲಿ ಬರ‍್ರ ಹೋಯ್ತರೆ. ಬದುಕೇ ಮುಗದೋಯ್ತು ಅಂದ್ಕಂಡು ಹೊಳೆದಾಟಿ ಬಂದೆ.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಏಳನೆಯ ಕಂತು ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ