Advertisement

Tag: ಕೆ. ಸತ್ಯನಾರಾಯಣ

ಊರ ಹೆಸರು “ಸೀತಾಪುರ”: ಕೆ. ಸತ್ಯನಾರಾಯಣ ಕಥಾ ಸರಣಿ

ದ್ವೇಷಕ್ಕೋ, ಜಿದ್ದಿಗೋ, ಶೇಕದಾರ್‌ ನಮ್ಮ ಪುರಾತನ ಗ್ರಾಮವಾದ ಗೊಬ್ಬಳಿಪುರದ ಬಗ್ಗೆ ಅಪಪ್ರಚಾರ ಶುರುಮಾಡಿದ. ಪುರದ ಹೆಣ್ಣುಮಕ್ಕಳೆಲ್ಲ ಸೀತಾದೇವಿ ತರ, ತೀರಾ ಅಯೋಧ್ಯೆಗೇ ಮದುವೆ ಮಾಡಿಕೊಟ್ಟಿದ್ದರೂ ಹುಡುಗೀರ ಕೆಟ್ಟ ಜಾತಕದಿಂದಾಗಿ ಯಾವ ಮದುವೇನೂ ನಾಲ್ಕು ದಿನ ಕೂಡ ನಿಲ್ಲೋಲ್ಲ. ನಿಂತರೂ ರಾಮನಿಗೆ ಆದ ಹಾಗೆ ಇವರನ್ನು ಕೊಟ್ಟ ಮನೆಯಲ್ಲೂ ಏಳಿಗೆ ಕಂಡು ಬರೋಲ್ಲ. ಸಂಸಾರದೊಳಗೆ ಇದ್ದರೂ ಗೊಬ್ಬಳಿ ಮುಳ್ಳಿನ ತರಹ ಆಳವಾಗಿ ಊರಿ ಹಿಂಸೆ ಮಾಡ್ತಾರೆ. ಮುಳ್ಳು ತೆಗೆಯೋಕೂ ಕಷ್ಟ. ತೆಗೆದರೂ ಗಾಯ ಹಾಗೇ ಉಳಿದಿರುತ್ತೆ.
ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”

Read More

ವಾರಾನ್ನದ ಅರೆ ಆತ್ಮಚರಿತ್ರೆ: ಕೆ. ಸತ್ಯನಾರಾಯಣ ಕಥಾ ಸರಣಿ

ಅರ್ಧ ಮನೆಗಳಲ್ಲಿ ವರ್ಷಕ್ಕೆ ಒಂದು ದಿನವೂ ಉಪ್ಪಿನಕಾಯಿ ಹಾಕ್ತಾ ಇರಲಿಲ್ಲ. ಆಯ್ತು ತಿಂಡಿ-ತೀರ್ಥ ಸಿಗುತ್ತಲ್ಲ ಅಂತ ಅಂದುಕೊಂಡರೆ, ವಿಪರೀತ ಪಾತ್ರೆ, ಪಡಗ, ನೆಂಟರಿಷ್ಟರ ಊಟದ ಎಲೆಗಳು. ಇಂತಹ ದಿನಗಳಲ್ಲಿ ರಾತ್ರಿ ಕೂಡ ಊಟ ಮಾಡಿಕೊಂಡು ಹೋಗು ಎಂದರೂ ಭಯವೇ! ಊಟ ಸಿಗುತ್ತೆ ಅಂತ ಉಳಿದುಕೊಂಡರೆ, ಮತ್ತೆ ಪಾತ್ರೆ, ಪಗಡಿ, ಎಂಜಲು, ಗೋಮ. ಮಕ್ಕಳೇ ಧೈರ್ಯ ಮಾಡಿ ಊಟ ಏನೂ ಬೇಡ, ಮಧ್ಯಾಹ್ನ ತಿಂದದ್ದೇ ಇನ್ನೂ ಅರಗಿಲ್ಲ ಅಂತ ಅರ್ಧ ಸುಳ್ಳು ಹೇಳೋರು.
ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”  

Read More

ಕತೆಗಾರ ಕೆ. ಸತ್ಯನಾರಾಯಣ ಹೊಸ ಕಥಾ ಸರಣಿ “ರೂಪಕಗಳಿಗೆ ಕೊರತೆಯಿಲ್ಲ” ಇಂದಿನಿಂದ

ಮದುವೆ ಗೊತ್ತಾಗುವ ಮುನ್ನ ಶಿವರಾಂ ಒಂದು ಚಿತ್ರ ನಿರ್ಮಿಸಿದ್ದರು. ನೆಮ್ಮದಿ, ಸಂತೋಷ ತುಂಬಿದ ಒಂದು ಕಂಟ್ರಾಕ್ಟರ್‌ ಸಂಸಾರದ ಕತೆ ಅದು. ಸಂಸಾರದ ಯಜಮಾನ ಡ್ಯಾಂ ಸೈಟ್‌ನಲ್ಲಿ ಆದ ಅಪಘಾತದಿಂದಾಗಿ ಮಧ್ಯ ವಯಸ್ಸಿನಲ್ಲೇ ತೀರಿಕೊಂಡಾಗ, ನಾಯಕಿಯಾಗಿದ್ದ ಜಯಮ್ಮ ದುಃಖ ತೋರಿಸಿದ ರೀತಿ, ನಂತರ ಸಂಸಾರ ಕಟ್ಟಿದ ರೀತಿ, ಎಲ್ಲರನ್ನೂ ಮೂಕರನ್ನಾಗಿಸಿತ್ತು. ಜೀವನದಲ್ಲಿ ಇದ್ದರೆ ಇಂತಹ ಹೆಂಡತಿ ಇರಬೇಕು ಅಂತ ಬಯಸಿ, ಬೇಡಿ, ಪ್ರಚಾರ ನೀಡಿ, ಮದುವೆ ಮಾಡಿಕೊಂಡಿದ್ದರು.
ಕತೆಗಾರ ಕೆ. ಸತ್ಯನಾರಾಯಣ ಹೊಸ ಕಥಾ ಸರಣಿ “ರೂಪಕಗಳಿಗೆ ಕೊರತೆಯಿಲ್ಲ”, ಇಂದಿನಿಂದ, ಪ್ರತಿ ಶನಿವಾರಗಳಂದು ನಿಮ್ಮ ಕೆಂಡಸಂಪಿಗೆಯಲ್ಲಿ

Read More

`ಕನ್ನಡದಲ್ಲಿ ಬರೆಯುವ ಮರಾಠಿ ಲೇಖಕ’: ಎಸ್.ಎಲ್.‌ ಭೈರಪ್ಪ ಓದುಗರ ಸ್ಪಂದನ ಕೃತಿಯ ಬರಹ

ಒಬ್ಬ ಲೇಖಕನ ಬರೆಹದಲ್ಲಿ ಮುರಿಯುವ ದಾಂಪತ್ಯವನ್ನು ಮತ್ತೆ ಬೆಸೆಯುವ ಶಕ್ತಿ ಇರುವುದನ್ನು ಕಂಡು ನಾನು ವಿಸ್ಮಿತನಾದೆ. ಮೈಸೂರಿನಲ್ಲಿರುವ ನನ್ನ ಪತ್ರಕರ್ತ ಗೆಳೆಯ ಗಣೇಶ ಅಮೀನಗಡ ಅವರಿಗೆ ಫೋನ್ ಮಾಡಿ ವಿಷಯ ವಿವರಿಸಿದೆ. ಅವರು ಭೈರಪ್ಪನವರನ್ನು ಕಂಡು ವಿಷಯ ತಿಳಿಸುವುದಾಗಿ ಹೇಳಿದರು. ನಂತರ ಉದ್ಯಮಿ, ಅವರ ಮಗಳು ಮತ್ತು ತಾಯಿ ಮೈಸೂರಿಗೆ ಹೋಗಿ ಭೈರಪ್ಪನವರನ್ನು ಭೇಟಿಯಾದರು. ಐದಾರು ತಿಂಗಳುಗಳ ನಂತರ ಉದ್ಯಮಿ ಯಾವುದೋ ಒಂದು ಕಾರ್ಯಕ್ರಮದಲ್ಲಿ ನನಗೆ ಭೇಟಿಯಾದರು. ಮಗಳ ಸಮಸ್ಯೆ ಸಂಪೂರ್ಣವಾಗಿ ಬಗೆಹರಿದಿದೆಯೆಂದು ಅವರು ಹೇಳಿದರು. ಭೈರಪ್ಪನವರ ಮಾಂತ್ರಿಕ ಬರೆಹದ ಶಕ್ತಿಯ ಬಗ್ಗೆ ನನಗೆ ನಿಜವಾಗಿಯೂ ಅಚ್ಚರಿಯಾಯಿತು.
ಕೆ. ಸತ್ಯನಾರಾಯಣ ಸಂಪಾದಿತ “ಎಸ್.ಎಲ್.‌ ಭೈರಪ್ಪ ಓದು-ಓದುಗರು” ಕೃತಿಯ ಡಾ. ಸರಜೂ ಕಾಟ್ಕರ್ ಬರಹ ನಿಮ್ಮ ಓದಿಗೆ

Read More

‘ಕಾಲಾಯಾತಸ್ಮೈ ನಮಃ’: ಕೆ ಸತ್ಯನಾರಾಯಣ ಕಾದಂಬರಿಯ ಕುರಿತು ಸಿ ಬಿ ಶೈಲಾ ಜಯಕುಮಾರ್ ಬರಹ

ಮಕ್ಕಳಿಗೆ ಯಾವ ಹಂತದಲ್ಲಿ ತಾಯಿ ತಂದೆಯರು ಬೇಕೆನಿಸುವುದಿಲ್ಲ ಅಥವಾ ಸಾಕೆನಿಸುತ್ತಾರೆ? ಎಂಬ ಗೊಂದಲದ ಆದರೆ ಪ್ರಸ್ತುತ ಪ್ರಶ್ನೆಯೂ ಇಲ್ಲಿದೆ! ನಮ್ಮ ತಲೆಮಾರಿನವರು ತಂದೆ ತಾಯಿಯರ ಮಾನಸಿಕ ಜಗತ್ತಿನಿಂದ ಕ್ರಮೇಣ ದೂರವಾದರೆ, ಇಂದಿನವರದು ಧಿಡೀರ್ ದೂರವಾಗುವಿಕೆ! ಭಾವನೆಗಳ ಘರ್ಷಣೆ! ಕೋಚಿಂಗ್ ಸೆಂಟರಿನಲ್ಲಿ ಡೆಪ್ಯೂಟಿ ಕರೆಸ್ಪಾಂಡೆಂಟ್ ಆಗಿದ್ದ ಮೇಲ್ ಮಧ್ಯಮ ವರ್ಗದ ರಂಗನಾಥ್ ಮತ್ತು ಶಿಕ್ಷಕಿ ಸುಧಾ ದಂಪತಿಗಳ ಮಕ್ಕಳು ವಿಕ್ರಮ್ ಹಾಗೂ ಪ್ರಾರ್ಥನಾ.
ಕೆ ಸತ್ಯನಾರಾಯಣ ಕಾದಂಬರಿ “ಕಾಲಜಿಂಕೆ”ಯ ಕುರಿತು ಸಿ ಬಿ ಶೈಲಾ ಜಯಕುಮಾರ್ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ