Advertisement

Tag: ನಾಗರೇಖಾ ಗಾಂವಕರ

ನಾಗರೇಖಾ ಗಾಂವಕರ ಬರೆದ ಈ ಭಾನುವಾರದ ಕತೆ “ಸೋಡಿನಾಟ”

ನೌಕರಿ ಸೇರಿದ ಹೊಸದರಲ್ಲಿ ಅಪ್ಪನ ಉಮೇದಿಗೆ ಕಡಿಮೆ ಇರಲಿಲ್ಲ. ಸಾಯುವವರೆಗೂ ಮನೆಯ ಜವಾಬ್ದಾರಿ ನಿಭಾಯಿಸುತ್ತಾ ಬದುಕಿದ ಜೀವ ತನ್ನಪ್ಪ. ಸಾಯುವ ಹಿಂದಿನ ದಿನವೂ “ಅಪ್ಪಾ!! ಸುಸ್ತಾಗಿದೆ ನಿಂಗೆ. ಮನಿಕಾ” ಎಂದು ಹಾಸಿಗೆ ಜಾಡಿಸಿ ತಲೆದಿಂಬು ಸರಿ ಮಾಡಿಕೊಟ್ಟರೆ “ಮಾಬ್ಲೂ ಮಲಗುಲಾ ಮನೇ!! ಆ ಹಾಳೆ ಕಟ್ಟು ತಕಂಡ ಬಾ!!” ಎಂದು ತಮ್ಮ ಲೆಕ್ಕದ ಪುಸ್ತಕ ತರಿಸಿಕೊಂಡು ಆ ವರ್ಷದ ಖರ್ಚು ವೆಚ್ಚ ಬರೆದುದನ್ನು ಮತ್ತೊಮ್ಮೆ ಚೆಕ್ ಮಾಡಿದ್ದರು. “ಮಾಬ್ಲು ಗಿಡವಕ್ಕೆ ಈ ಸಲ ಗೊಬ್ಬರ ಹಾಕಬೇಕಾಗತ. ಯಾರಿಗರೂ ಹೇಳ.
ನಾಗರೇಖಾ ಗಾಂವಕರ ಬರೆದ ಕತೆ “ಸೋಡಿನಾಟ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಜೀವಂತಿಕೆ ಒಸರುವ ಕವಿತೆಗಳು: ಸ್ಮಿತಾ ಅಮೃತರಾಜ್ ಬರಹ

ನಾವು ಬದುಕುವ ರೀತಿ ನೀತಿ‌ ನಮ್ಮ ಪ್ರತಿಷ್ಟೆ ಪರಾಕಾಷ್ಟೆಗಳು ಅದೆಷ್ಟಿದ್ದರೂ ನಾವೆಲ್ಲರೂ ಮನುಷ್ಯರು. ಆಳದಲ್ಲಿ ನಾವೆಲ್ಲರೂ ಅನುಭವಿಸುವ ಭಾವಗಳು ಒಂದೇ. ನಾನಾ ಸ್ತರಗಳಲ್ಲಿ‌ ಪ್ರಕಟಗೊಳ್ಳುವ ನಮ್ಮ ನೋವು ನಲಿವು ಗೆಲುವು ಸೋಲು ಅಪಮಾನ ಎಲ್ಲವೂ ಇಲ್ಲಿ ಕವಿತೆಯಾಗಿ ನಿಸೂರಾಗುತ್ತವೆ. ನಾಗರೇಖಾ ತನ್ನದೇ ರೀತಿಯಲ್ಲಿ ಕವಿತೆ ಕಟ್ಟುವ ಕೌಶಲ್ಯವನ್ನು‌‌ ಸಿದ್ಧಿಸಿಕೊಂಡಿದ್ದಾರೆ. ತಾನು ಬದುಕಿದ, ತಾನು ಕಾಣುವ ಸುತ್ತ ಮುತ್ತಲಿನ ಸಹಜ ಸಂಗತಿಗಳನ್ನು ಕವಿತೆಯ ಮೂಲಕ‌ ತರುತ್ತಾ ಅದನ್ನು ಮತ್ಯಾವುದೋ‌ ಸಂದರ್ಭಕ್ಕೆ, ಸಂಗತಿಗಳಿಗೆ ಕೊಂಡಿ ಕೂಡಿಸುತ್ತಾರೆ. ಒಂದು ವಸ್ತುವನ್ನು ತೆರೆದಿಡುತ್ತಾ ಮತ್ಯಾವುದೋ ಹೊಳಹನ್ನು ಕಾಣಿಸುವುದು ನಾಗರೇಖರ ಕವಿತೆ ವೈಶಿಷ್ಟ್ಯತೆ.
ನಾಗರೇಖಾ ಗಾಂವಕರ ಕವನ ಸಂಕಲನ “ಪಾದಕ್ಕೊಂದು ಕಣ್ಣು” ಕುರಿತು ಸ್ಮಿತಾ ಅಮೃತರಾಜ್‌ ಬರಹ

Read More

‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ನಾಗರೇಖಾ ಗಾಂವಕರ ಕತೆ

ಕಪಿಲೆ… ಈಗಲೂ ಅದೇ ನೋವಿನ ದನಿ ಕೇಳಿದಂತಾಗುತ್ತಿದೆ. ಈ ನೋವಿನ ಮೂಲದಲ್ಲೂ ಆಕೆಯ ನೆನಪು. ಹೌದು ಆಕೆಯೂ ನನ್ನಂತೆ ಹೆಣ್ಣು. ಹೆಣ್ಣಿನ ನೋವು ಆ ಸೂಕ್ಷ್ಮ ಅವಳಿಗೆ ತಾನೆ ಅರ್ಥವಾಗೋದು. ಏನು ಮಾಡಲಿ.. ಏನು ಆಡಲಿ.. ಚಿಟಿಚಿಟಿ ಎನ್ನುತ್ತಿರುವ ತಲೆ, ಸುತ್ತಿದ ಬಟ್ಟೆ. ಆ ಡಾಕ್ಟರಮ್ಮ ಬರುವವರೆಗೂ ನಿಲ್ಲಬೇಕು. ಕಪಿಲೆ ಏನು ಮಾಡುತ್ತಿದ್ದಾಳೋ? ಬಾಣಂತಿ ಬೇರೆ..
‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ನಾಗರೇಖಾ ಗಾಂವಕರ ಕತೆ “ಸ್ಟಾಕ್‌ಹೋಮ್ ಸಿಂಡ್ರೋಮ್”

Read More

ನೆನಪುಗಳಿಗೆ ಜೀವ ತುಂಬುವ ಬರಹ: ಸ್ಮಿತಾ ಅಮೃತರಾಜ್ ಬರಹ

ನನಗಿಲ್ಲಿ ಲೇಖಕಿಯ ಬರೆಹಗಳು ಇಷ್ಟವಾಗುವುದಕ್ಕೆ ಅನೇಕ ಕಾರಣಗಳಿವೆ. ಮೊದಲನೆಯದಾಗಿ ಬಾಲ್ಯದಲ್ಲಿ ನಮಗೆ ನೋವು, ಕೀಳರಿಮೆ, ಅಪಮಾನ, ತಾರತಮ್ಯ ಎಲ್ಲದರ ಅನುಭವಗಳಿಗೆ ಒಡ್ಡಿಕೊಂಡು ಒಂದಲ್ಲ ಒಂದು ಹಂತದಲ್ಲಿ ಮನಸ್ಸನ್ನು ಹಿಡಿಮಾಡಿಕೊಂಡಿರುತ್ತೇವೆ. ಒಂದು ಕ್ಷಣ ಅದು ಮನಸ್ಸನ್ನು ಘಾಸಿಗೊಳಿಸಿದರೂ ಮರುಕ್ಷಣಕ್ಕೆ ಮರೆತು ಮೆಟ್ಟಿನಿಲ್ಲುವ ಛಾತಿಯೂ ಜೊತೆಜೊತೆಗೆ ಹುಟ್ಟಿಕೊಳ್ಳುತ್ತಿತ್ತು.
ನಾಗರೇಖಾ ಗಾಂವಕರ ಬರೆದ ಬಾಲ್ಯದ ಅನುಭವಗಳ ಕುರಿತ ಬರಹಗಳ “ಬಣ್ಣದ ಕೊಡೆ” ಕೃತಿಯ ಕುರಿತು ಸ್ಮಿತಾ ಅಮೃತರಾಜ್ ಸಂಪಾಜೆ ಬರಹ

Read More

ಮತ್ತೆ ಬಂದಿದೆ ಯುಗಾದಿ, ತರದು ಅಂದಿನ ಉಮೇದಿ

ಯುಗಾದಿಗೆ ಪರಿಸರದ ಕುರಿತ ಮಾತೇಕೆ? ಎಂದು ಪ್ರಶ್ನಿಸಬಹುದು ನೀವು!! ಚೈತ್ರಮಾಸದ ಪ್ರಾರಂಭದ ದಿನ ಯುಗಾದಿಯ ಆಚರಣೆ. ಪ್ರಕೃತಿಯ ಜೊತೆ ನಮ್ಮ ಸಂಬಂಧವನ್ನು ಆಚರಣೆಗಳ ಮುಖಾಂತರ ಗಟ್ಟಿಗೊಳಿಸಿಕೊಳ್ಳುತ್ತಾ ಬಂದ ದೇಶ ನಮ್ಮದು. ಪ್ರಕೃತಿ ಪೂಜೆಯೇ ನಮ್ಮ ಪೂರ್ವಿಕರ ನೈಜ ಆಚರಣೆಗಳಾಗಿದ್ದವು ಎಂಬುದು ನಮಗೆಲ್ಲ ತಿಳಿದ ಸಂಗತಿಯೇ..
ಪ್ರಕೃತಿ ಜೊತೆಗೆ ನಂಟಿರುವ ಯುಗಾದಿ ಹಬ್ಬ ಇಂದಿನ ದಿನಗಳಲ್ಲಿ ಹೇಗೆ ಆಚರಿಸಲ್ಪಡುತ್ತಿದೆ ಎನ್ನುವುದರ ಕುರಿತು ಬರೆದಿದ್ದಾರೆ ನಾಗರೇಖಾ ಗಾಂವಕರ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ