Advertisement

Tag: kendasampige

ಅನುಸೂಯ ಯತೀಶ್ ಬರೆಯುವ ಹೊಸ ಸರಣಿ “ಬೆಳೆಯುವ ಮೊಳಕೆ” ಶುರು

ಮೂರನೇ ತರಗತಿ ಮಗುವಿನಿಂದ ಲಕ್ಷದವರೆಗೂ ಸಂಖ್ಯಾ ಬರವಣಿಗೆಯನ್ನು ನಿರೀಕ್ಷಿಸಿದ್ದು ನನ್ನ ಪ್ರಮಾದ ಎಂದು ತಕ್ಷಣವೇ ಹೊಳೆಯಿತು. ಆ ವಿದ್ಯಾರ್ಥಿಯ ಬಳಿ ಹೋದೆ, ಆ ಮಗು‌ಭಯದಿಂದ ಥರಥರ ನಡುಗುತ್ತಾ “ಕಲಿತುಕೊಳ್ಳುವೆ ಮಿಸ್ ಹೊಡಿಬೇಡಿ, ಬೈಬೇಡಿ” ಅಂದಳು. ಆ ಕ್ಷಣ ಕಣ್ಣಾಲಿಗಳು ತುಂಬಿ ಅವಳ ಕೈ ಮೇಲೆ ನನ್ನ ಪೌರುಷದ ಹನಿಗಳು ಬಿದ್ದು ಅವಳ ಕೈಯನ್ನ ತೊಳೆದವು.
ಅನುಸೂಯ ಯತೀಶ್ ಬರೆಯುವ ಮಕ್ಕಳೊಂದಿಗಿನ ಶಿಕ್ಷಕಿಯ ಅನುಭವ ಕಥನದ ಹೊಸ ಸರಣಿ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಪದ್ಮನಾಭ ಭಟ್, ಶೇವ್ಕಾರ ಕತೆ

ಮಳೆಗಾಲವಾದ್ದರಿಂದ ಅಂಗಳದಲ್ಲಿ ಜಾರಿಕೆಯಾಗಿತ್ತು. ಎಚ್ಚರಿಕೆಯಿಂದ ನಡೆದು, ಬಾಗಿಲ ಮುಂದೆ ನಿಂತು, ಅತ್ತಿದ್ದ ಕಣ್ಣುಗಳನ್ನೆಲ್ಲ ಚೊಕ್ಕವಾಗಿ ಒರೆಸಿಕೊಂಡು “ಅತ್ತೆ..” ಎಂದು ಕರೆದೆ. ಎಷ್ಟೇ ತಡೆ ಹಿಡಿದಿದ್ದರೂ ಧ್ವನಿ ನಡುಗಿತು. ಬಾಗಿಲ ತೆಗೆದ ಅತ್ತೆ ಒಳಗೆ ಕರೆದು ಒಂದುಸಲ ನನ್ನ ಮೆಲಿಂದ ಕೆಳಗಿನವರೆಗೆ ನೋಡಿದವಳೇ “ಅಪ್ಪ ಹೊಡೆದ್ನಾ..?” ಕೇಳಿದಳು. ಮಾತಾಡಿದರೆ ಎಲ್ಲಿ ಅಳು ಬಂದು ಬಿಡುತ್ತದೇನೋ ಎಂದು `ಹೌದು’ ಎಂಬಂತೆ ತಲೆ ಅಲ್ಲಾಡಿಸಿ ಕೇಪಿನಡಬ್ಬ ಕೊಟ್ಟೆ.
‘ನಾನು ಮೆಚ್ಚಿದ ನನ್ನ ಕತೆʼಯ ಸರಣಿಯಲ್ಲಿ ಪದ್ಮನಾಭ ಭಟ್, ಶೇವ್ಕಾರ ಕತೆ “ಕೇಪಿನ ಡಬ್ಬಿ”

Read More

ಜೈಲಿನಲ್ಲಿ ಇಂದ್ರಲೋಕ: ಕೆ. ಸತ್ಯನಾರಾಯಣ ಸರಣಿ

ಎಲ್ಲವೂ ಭರ್ತಿಯಾಗಿದ್ದವು. ಖಾಲಿಯಾದ ತಕ್ಷಣ ಹೊಸಬರು ಯಾರಾದರೂ ತಕ್ಷಣ ಬಂದು ಹಿಡಿದುಕೊಂಡುಬಿಡುತ್ತಿದ್ದರು. ಸಚಿವರು, ನಾಯಕರು, ಪದಾಧಿಕಾರಿಗಳು, ಕುಲಾಧಿಪತಿಗಳು, ಗುತ್ತಿಗೆದಾರರು, ಅಭಿಯಂತರರು, ಒಬ್ಬರ ಮೇಲೆ ಒಬ್ಬರು, ಒಬ್ಬರ ಹಿಂದೆ ಒಬ್ಬರು. ಪಿಸುಮಾತುಗಳಲ್ಲಿ ಕೇಳಿಸಿದ ಪ್ರಕಾರ, ನ್ಯಾಯಾಲವು ಜಾಮೀನು ಆದೇಶವನ್ನು ನೀಡುವಾಗ, ರದ್ದುಪಡಿಸುವಾಗ, ಇಂದ್ರಭವನದಲ್ಲಿ ಯಾವ ರೀತಿಯ, ಯಾವ ಸ್ತರದ ಮನೆಗಳು, ವಿಲ್ಲಾಗಳು ಯಾವಾಗ ಖಾಲಿಯಾಗುತ್ತವೆ….
ಕೆ. ಸತ್ಯನಾರಾಯಣ ಬರೆಯುವ “ಜೈಲು ಕತೆಗಳು” ಸರಣಿ

Read More

ವಿದೇಶದಲ್ಲಿ ಸ್ವದೇಶೀ ಘಮಲು…: ಗುರುಪ್ರಸಾದ ಕುರ್ತಕೋಟಿ ಸರಣಿ

ಅಮೆರಿಕೆಯಲ್ಲಿ ಎಲ್ಲ ಕಡೆ ಇರುವಂತೆಯೇ ಅಲ್ಲೊಂದು ಕನ್ನಡ ಸಂಘ ಇದೆ. ತುಂಬಾ ವಿಶಿಷ್ಟವಾದ ಕನ್ನಡಿಗರ ಬಳಗ ಅದು. ಎಲ್ಲ ಕನ್ನಡಿಗರು ಸೇರಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಲ್ಲಿ ಆಚರಿಸುತ್ತಾರೆ ಅಂತ ತಿಳಿಯಿತು. ಮುಂದೆ ಬರುವ ಒಂದು ಕಾರ್ಯಕ್ರಮದಲ್ಲಿ ಕೆಲವರು ಸೇರಿ ಒಂದು ಸಣ್ಣ ನಾಟಕ ಮಾಡುವ ಉತ್ಸಾಹದಲ್ಲಿದ್ದರು. ಅದೇ ವೇಳೆ ನಾನು ಬಂದಿದ್ದೆನಲ್ಲ.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಆರನೆಯ ಬರಹ

Read More

ದಕ್ಕಿದ್ದಕ್ಕೆ ಕೃತಜ್ಞತೆ ಇರಲಿ : ಎಸ್ ನಾಗಶ್ರೀ ಅಜಯ್ ಅಂಕಣ

ತಮಗೆ ಬೇಕಾದ ಕೋರ್ಸಿಗೆ ಪ್ರವೇಶ ದೊರೆಯಲಿಲ್ಲ, ಅಂದುಕೊಂಡಷ್ಟು ಅಂಕ ಬರಲಿಲ್ಲ, ಪ್ರೀತಿಸಿದ ಹುಡುಗಿ ಕರೆ ಸ್ವೀಕರಿಸಲಿಲ್ಲ, ಮದುವೆಗೆ ಮನೆಯಲ್ಲಿ ಒಪ್ಪಿಗೆಯಿಲ್ಲ, ವರ್ಷದೊಳಗೆ ಮಕ್ಕಳಾಗಲಿಲ್ಲ ಎಂಬ ‘ಇಲ್ಲ’ಗಳಿಗೆ ಜೀವತೆರುವ, ಬದುಕಿದ್ದರೂ ಉತ್ಸಾಹ, ಆಶಾವಾದವನ್ನೇ ಕಳೆದುಕೊಳ್ಳುವವರಿದ್ದಾರೆ. ಮುಂದೇನು? ಮುಂದೇನು?
ಎಸ್ ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣದ ಬರಹ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ