Advertisement

Tag: kendasampige

ಕಲಿತ ಬುದ್ಧಿಗಳೇ ನಮ್ಮ ನೆರಳು: ಎಸ್ ನಾಗಶ್ರೀ ಅಜಯ್ ಅಂಕಣ

ಎಷ್ಟೋ ಜನ ಸರಳತೆ, ಸಹೃದಯತೆ, ಸಹನೆ, ಕರುಣೆಯನ್ನು ನಂಬದೆ ಡಂಭಾಚಾರ, ನಾಟಕ, ಕೃತಕತೆ ಎಂಬ ಹಣೆಪಟ್ಟಿ ಕಟ್ಟಿ ಸಂಶಯದಿಂದಲೇ ಎದುರುಗೊಳ್ಳುತ್ತಾರೆ. ಹಣದೊಂದಿಗೆ ಮದ, ಅಧಿಕಾರದೊಂದಿಗೆ ದರ್ಪ, ಶ್ರೀಮಂತಿಕೆಯೊಂದಿಗೆ ಖಾಯಿಲೆ, ಬಡತನದೊಂದಿಗೆ ನೆಮ್ಮದಿ ಇದ್ದಿರಲೇಬೇಕೆಂದು ಭಾವಿಸಿರುತ್ತಾರೆ. ಅತ್ಯಂತ ರಂಜನೀಯವಾಗಿ ಅದನ್ನು ಬಣ್ಣಿಸಿಯೂ ತೋರುತ್ತಾರೆ. ಪ್ರತಿಯೊಬ್ಬ ಮನುಷ್ಯನೂ ಭಿನ್ನ. ಪ್ರತಿಯೊಬ್ಬರ ಪರಿಸ್ಥಿತಿಯೂ ಭಿನ್ನ. ಒಂದೇ ಅಚ್ಚಿನಲ್ಲಿ ಅಳೆದು, ಸುರಿದು ತಯಾರಾದ ಬದುಕಲ್ಲ ಎಲ್ಲರದ್ದು.
ಎಸ್.‌ ನಾಗಶ್ರೀ ಅಜಯ್‌ ಬರೆಯುವ ‘ಲೋಕ ಏಕಾಂತ’ ಅಂಕಣ

Read More

ಬಸ್ಸಪ್ಪ ಮೇಷ್ಟ್ರ ಸೈಕಲ್ ಪಂಕ್ಚರ್ ಪ್ರಸಂಗ!: ಬಸವನಗೌಡ ಹೆಬ್ಬಳಗೆರೆ ಸರಣಿ

ಮೊದಲೆಲ್ಲಾ ಚಾಡಿ ಹೇಳಿದವರಿಗೆ ಹೊಡೆಯೋ ಬಸ್ಸಪ್ಪ ಮೇಷ್ಟ್ರು ಈ ಸಲ ಅವರಿಗೆ ಹೊಡೆಯಲಿಲ್ಲ. ಬದಲಿಗೆ ನನಗೇ ಜುಳುಪಿಯಿಂದ ಬಾರಿಸಲು ಶುರು ಮಾಡಿದರು! ನೋವಿನಿಂದ ಎಷ್ಟೇ ಅಬ್ಬರಿಸಿದರೂ ಅವರು ಹೊಡೆತ ಮಾತ್ರ ನಿಲ್ಲಿಸಲಿಲ್ಲ. ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಎರಡನೆಯ ಕಂತು ನಿಮ್ಮ ಓದಿಗೆ

Read More

‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ನಾಗರೇಖಾ ಗಾಂವಕರ ಕತೆ

ಕಪಿಲೆ… ಈಗಲೂ ಅದೇ ನೋವಿನ ದನಿ ಕೇಳಿದಂತಾಗುತ್ತಿದೆ. ಈ ನೋವಿನ ಮೂಲದಲ್ಲೂ ಆಕೆಯ ನೆನಪು. ಹೌದು ಆಕೆಯೂ ನನ್ನಂತೆ ಹೆಣ್ಣು. ಹೆಣ್ಣಿನ ನೋವು ಆ ಸೂಕ್ಷ್ಮ ಅವಳಿಗೆ ತಾನೆ ಅರ್ಥವಾಗೋದು. ಏನು ಮಾಡಲಿ.. ಏನು ಆಡಲಿ.. ಚಿಟಿಚಿಟಿ ಎನ್ನುತ್ತಿರುವ ತಲೆ, ಸುತ್ತಿದ ಬಟ್ಟೆ. ಆ ಡಾಕ್ಟರಮ್ಮ ಬರುವವರೆಗೂ ನಿಲ್ಲಬೇಕು. ಕಪಿಲೆ ಏನು ಮಾಡುತ್ತಿದ್ದಾಳೋ? ಬಾಣಂತಿ ಬೇರೆ..
‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ನಾಗರೇಖಾ ಗಾಂವಕರ ಕತೆ “ಸ್ಟಾಕ್‌ಹೋಮ್ ಸಿಂಡ್ರೋಮ್”

Read More

ಪ್ರಪಂಚದಷ್ಟೇ ಪುರಾತನವಾದ ಪ್ರಶ್ನೆಗಳಿಗೆ ಉತ್ತರದ ಹುಡುಕಾಟ: ಸುಧಾ ಆಡುಕಳ ಮಾತುಗಳು

ಅನೇಕ ದಶಕಗಳ ಹಿಂದೆ ಹೀಗೆ ಬಿಸಿಲಲ್ಲಿ ಕುಳಿತು ಮಾತನಾಡಿದ ಬಸುರಿಯರ ಮಕ್ಕಳೀಗ ಸಮಾಜವೆಂಬ ಇರುವೆ ಸಾಲಿನ ಭಾಗವಾಗಿಯೂ, ತಮ್ಮದೇ ಸ್ವಾತಂತ್ರ್ಯದ ಹಾದಿಯನ್ನು ಹುಡುಕಿಕೊಂಡು, ತಾವಿರುವೆಡೆಯಲ್ಲೆಲ್ಲಾ ಪ್ರೀತಿಯ ಧಾರೆಯನ್ನೇ ಹಂಚುತ್ತಾ ಸಾಗಿದ್ದಾರೆ. ಒಡಲೊಳಗೆ ಮಗುವನ್ನು ಹೊತ್ತ ತಾಯಂದಿರ ಬೇಗೆ ಮಾತ್ರ ಎಷ್ಟೇ ಕಾಲ ಸರಿದರೂ ಹೀಗೆಯೇ ಮುಂದುವರೆಯುವುದೇನೋ ಎಂದು ಅನಿಸುತ್ತಲೇ ಇರುತ್ತದೆ. ಹಾಗೆ ನನ್ನ ಮಗುವಿಗೆ ನಾನೇನಾದರೂ ಕಥೆಯನ್ನು ಹೇಳುವಂತಿದ್ದರೆ ಮೇಲೆ ಬರೆದ ಕಥೆಯನ್ನು ಹೇಳುತ್ತಿದ್ದೆ ಮತ್ತು ಕೊನೆಯಲ್ಲಿ ಅವಳಂತೆಯೇ ಒಂದು ವಾಕ್ಯವನ್ನು ಸೇರಿಸುತ್ತಿದ್ದೆ, ಆ ಇಬ್ಬರಲ್ಲಿ ನಾನೂ ಒಬ್ಬಳಾಗಿದ್ದೆ ಎಂದು.
ಸುಧಾ ಆಡುಕಳ ಅನುವಾದಿಸಿದ ಒರಿಯಾನ ಫಲಾಚಿ ಕಾದಂಬರಿ “ಎಂದೂ ಹುಟ್ಟದ ಮಗುವಿಗೆ ಪತ್ರ”ಕ್ಕೆ ಬರೆದ ಅವರ ಮಾತುಗಳು ಇಲ್ಲಿವೆ

Read More

ವಿಶ್ವ ಕಪ್ 2023ನ ಕೊನೆಯ ಹಂತ: ಇ.ಆರ್. ರಾಮಚಂದ್ರನ್ ಅಂಕಣ

ಭಾರತದ ಇನಿಂಗ್ಸ್ ಚೆನ್ನಾಗಿಯೇ ಶುರುವಾಯಿತು. ಎಂದಿನಂತೆ ರೋಹಿತ್ ಶರ್ಮ ರಭಸದ ಹೊಡೆತದಿಂದ ಶುರು ಮಾಡಿದರು. ಒಂದು ಸಿಕ್ಸರ್ ಮತ್ತು ಬೌಂಡರಿ ಹೊಡೆದ ಮೇಲೆ ಮತ್ತೆ ಸಿಕ್ಸರ್ ಹೊಡೆಯಲು ಯತ್ನಿಸಿದಾಗ ಬಾಲ್ ಸ್ವಲ್ಪ ಸ್ಪಿನ್ ಆದ ಕಾರಣ ಅದು ಬೌಂಡರಿಗೆ ಹೋಗಲಿಲ್ಲ. ಅದನ್ನು ಬೆನ್ನಟ್ಟಿಕೊಂಡು ಹೋದ ಟ್ರಾವಿಸ್ ಹೆಡ್ ಅತ್ಯಂತ ಕಠಿಣವಾದ ಕ್ಯಾಚನ್ನು ಕೆಳಗೆ ಬೀಳುತ್ತಲೇ ಹಿಡಿದರು.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ