Advertisement

Tag: kendasampige

ಸೈಕ್ಲೋನ್ ಮತ್ತು ಮುತ್ತಿನ ಹಾರ: ಸುಮಾವೀಣಾ ಸರಣಿ

ಅಂದು ಎಲ್ಲರಿಗೂ ಆಶ್ಚರ್ಯ, “ಸಿಸ್ಟರ್ ಎಷ್ಟು ಫ್ರೀಯಾಗಿದ್ದಾರೆ, ಒಳ್ಳೆ ಮೂಡಿನಲ್ಲಿದ್ದಾರೆ!” ಎಂದು. ಪಾಠ ಓದಿಸಿದರು… ತಪ್ಪು ಓದಿದರೂ ಅಷ್ಟೇನೂ ದಂಡಿಸಲಿಲ್ಲ. ಕಡೆಗೆ “ನಿನ್ನೆ ಫಿಲ್ಮ್ ತುಂಬಾ ಚಂದ ಇತ್ತಲ್ವ” ಎಂದರು. ಎಲ್ಲರೂ ಮರೆತು “ಹೌದು! ಹೌದು1” ಹಾಗೆ ಹೀಗೆ ಎಂಬ ಡಿಸ್ಕಶನ್ ಶುರುಮಾಡಿದರು. ಅದರ ಮುಂದಿನ ಪ್ರಶ್ನೆ “ಯಾರು ಯಾರು ನೋಡಿದ್ದೀರ?” ಎನ್ನುವುದಾಗಿತ್ತು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಹದಿನೈದನೆಯ ಕಂತು ನಿಮ್ಮ ಓದಿಗೆ

Read More

ನಗುತ್ತಲೆ ಬದುಕಿದವಳು ನನ್ನಮ್ಮ: ಮಾರುತಿ ಗೋಪಿಕುಂಟೆ ಸರಣಿ

ನನಗಾಗ ಐದಾರು ವರ್ಷಗಳಿರಬೇಕು. ಪ್ರತಿದಿನ ಅಮ್ಮ ಕೂಲಿ ಹೋಗುತ್ತಿದ್ದಳು. ಅವಳಿಗೆ ಬರುವ ಅಲ್ಪ ಕೂಲಿಯಲ್ಲಿ ಇಡಿ ಬದುಕನ್ನು ನಡೆಸಬೇಕು. ಅದರಲ್ಲಿ ಬೆಳಗಿನ ಚಹಾದಿಂದ ಹಿಡಿದು ರಾತ್ರಿಯ ಊಟದವರೆಗೂ ಕೂಲಿಯ ಹಣದಿಂದಲೆ ಸರಿದೂಗಿಸಬೇಕು. ಅಕ್ಷರ ಜ್ಞಾನವಿಲ್ಲದ ಆಕೆ ಹೇಗೆ ನಿಭಾಯಿಸುತ್ತಿದ್ದಳೊ. ಇಂದಿಗೂ ಅದೊಂದು ಆಶ್ಚರ್ಯದ ಸಂಗತಿ.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿ

Read More

ಆರ್ಯಕನೆಂಬ ನಾಯಕ: ಸತೀಶ್‌ ತಿಪಟೂರು ಬರಹ

ನಾವು ಮಾಡುವ ರಂಗಕೃಷಿಯು ಪ್ರಾಮಾಣಿಕವಾಗಿದ್ದರೆ ಪ್ರತಿಕ್ಷಣವೂ ಹುಟ್ಟುವ ಅಹಂಕಾರವನ್ನು ವಿಸರ್ಜಿಸುತ್ತಲೇ ಇರುತ್ತದೆ ಎಂದು ಹೇಳಿದೆ. ಯಾರ ಸ್ಮೃತಿಗಳು ಸಮಾಜದ ನೋವಿನಿಂದ ಅದ್ದುಕೊಂಡಿರುತ್ತದೋ, ಸಮುದಾಯದ ಕಾಳಜಿಗಳಲ್ಲಿ ಬೆಸೆದುಕೊಂಡಿರುತ್ತದೋ, ಅಂತಹ ಪ್ರಕೃತಿಗಳು ಹಣ, ಅಧಿಕಾರ, ಪ್ರಭಾವಳಿಗಳಿಂದ ಒದಗಿಬರಬಹುದಾದ ಅಹಂಕಾರದಿಂದ ಮುಕ್ತವಾಗಿರುತ್ತದೆ. ಇಲ್ಲಿ ಯಾರ ಬೇರುಗಳು ಸಡಿಲವಾಗಿರುತ್ತದೋ ಅಂತಹವರ ಪ್ರಕೃತಿ ಪಲ್ಲಟವಾಗುತ್ತದೆ; ಮತ್ತು ಹಾಗೆ ಆದುದಕ್ಕೆ ಇರುವ ಕಾರಣಗಳನ್ನು ದೊಡ್ಡದು ಮಾಡುತ್ತಾ ತಮ್ಮ ಇರುವಿಕೆಗೆ ಸಮರ್ಥನೆಯನ್ನು ನೀಡುತ್ತದೆ ಎಂದು ಹೇಳಿದೆ. ಹಣ, ಅಧಿಕಾರ, ಪ್ರಭಾವಳಿಗಳನ್ನು ಧಾರಣೆ ಮಾಡಿಕೊಂಡು ಜೀರ್ಣಿಸಿಕೊಳ್ಳುವ ಶಕ್ತಿಬೇಕು.
ಸತೀಶ್‌ ತಿಪಟೂರು ಅವರ “ಮಣ್ಣಿನ ಬಂಡಿಯಲ್ಲಿ ಫುಕುವೋಕಾ” ಕೃತಿಯ ಮತ್ತೊಂದು ಅಧ್ಯಾಯ ನಿಮ್ಮ ಓದಿಗೆ

Read More

ಭಾವಗಳ ‘ತೇರ’ ಯಾತ್ರೆ….: ರಾಮ್ ಪ್ರಕಾಶ್ ರೈ ಕೆ ಬರಹ

ಜೈಲಿನ ಕೈದಿಯೊಬ್ಬರು “ನಾವು ಮನುಷ್ಯರಾಗಿ ಹುಟ್ಟಿಲ್ಲ, ಮನುಷ್ಯರಾಗಲು ಹುಟ್ಟಿದ್ದೇವೆ” ಎಂದರೆ, ಇನ್ನೊಮ್ಮೆ “ಜೈಲು ಹೆರಿಗೆ ಮನೆಯಂತೆ, ಇಲ್ಲಿಗೆ ಬಂದವರು ಹೊಸ ಹುಟ್ಟು ಪಡೆದೇ ಹೊರಹೋಗುವುದು” ಎನ್ನುತ್ತಾರೆ. ಸುಖದ ಬದುಕು ಸಾಗುತ್ತಿರಬೇಕಾದರೆ ಹಿರಿಯ ಮಹಿಳೆಗೆ ಬಸ್ಸಿನ ಸೀಟು ಬಿಟ್ಟುಕೊಡುವ ಪ್ರಿಯ, ಕಷ್ಟ ಕಾಲಿಟ್ಟಾಗ ಆ ಮಹಿಳೆಯ ಕಡೆಗೆ ನಿರ್ಭಾವುಕ ನೋಟವನ್ನು ಬೀರುವ ಪರಿ, ಆ ಬದಲಾವಣೆಯಂತೂ ಮಾನವ ಬದುಕಿನ ವಾಸ್ತವ ನಡುವಳಿಕೆಗೆ ಹಿಡಿದ ದರ್ಪಣದಂತೆ ಕಾಣುತ್ತದೆ.
ಹೇಮಂತ್‌ ರಾವ್‌ ನಿರ್ದೇಶನದ “ಸಪ್ತ ಸಾಗರದಾಚೆ ಎಲ್ಲೋ” ಸಿನಿಮಾದ ಕುರಿತು ರಾಮ್ ಪ್ರಕಾಶ್ ರೈ ಕೆ ಬರಹ

Read More

“ಮೀನು ಒಂದು ಪಿಟೀಲಾಗಿದ್ದಿದ್ದರೆ..”: ಎಸ್.‌ ಜಯಶ್ರೀನಿವಾಸ ರಾವ್ ಸರಣಿ

ರಾಕ್ಪೆಲ್ನಿಸ್‌ರ ಪ್ರಕಾರ, ರಾಷ್ಟ್ರದ ಆರ್ಥಿಕ ಪರಿಸ್ಥಿತಿ, ಬೂದು ಬಣ್ಣದ ಗುಬ್ಬಚ್ಚಿ, ‘ರೊಮ್ಯಾಂಟಿಸಿಸಂ-ನ ನೀಲಿ ಹೂವು,’ ನಮ್ಮ ನಮ್ಮ ಸ್ವಂತ ಅಸ್ಮಿತೆಗಳು – ಇಂತಹವುಗಳನ್ನು ಮರುಪಡೆಯಲು ಯತ್ನಿಸುವ ಮುನ್ನ ಭಾಷೆಯ ಕುದುರೆ ಲಾಯಗಳನ್ನು ಮೊದಲು ಸ್ವಚ್ಛಗೊಳಿಸಬೇಕು.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ