Advertisement

Tag: kendasampige

ಬಣ್ಣ, ರುಚಿ ಮತ್ತು ಪರಿಮಳ: ಮಾಲತಿ ಶಶಿಧರ್‌ ಅಂಕಣ

ಅಷ್ಟು ಹೊತ್ತು ಎರಡು ದೇಹ ಒಂದೇ ಪ್ರಾಣದಂತೆ ಕೆಲಸ ಮಾಡಿ ಮುಗಿಸಿದ ನಾವಿಬ್ಬರು ಕದ್ದ ಮಾವು ಹಂಚಿಕೊಳ್ಳುವಾಗ ಪರಮ ದ್ವೇಷಿಗಳಾಗಿಬಿಡುತ್ತಿದ್ದೆವು. ಇದ್ದ ನಾಲ್ಕು ಹಣ್ಣನ್ನು ಭಾಗ ಮಾಡಿಕೊಳ್ಳಲು ಯುದ್ಧ ನಡೆಸುತ್ತಿದ್ದೆವು. ಅವುಗಳ ಬಣ್ಣ ರುಚಿ ಪರಿಮಳಕ್ಕಾಗಿ ಕಿತ್ತಾಟ. ನಾನು ಕಷ್ಟ ಪಟ್ಟು ಕದ್ದೆ ನನಗೆ ಜಾಸ್ತಿ ಎಂದು ನಾನಂದರೆ ದೊಡ್ಡಮ್ಮನನ್ನು ಎಷ್ಟು ಕಷ್ಟ ಪಟ್ಟು ಅತ್ತ ಬರದಂತೆ ತಡೆದೆ? ನನಗೆ ಹೆಚ್ಚು ಎನ್ನುತ್ತಿದ್ದ ಅಣ್ಣ. ಹೀಗೆ ಕಿತ್ತಾಡುತ್ತಲೇ ಹೇಗೋ ತಿಂದು ಮುಗಿಸಿ ಮಾಡಿದ ಸರ್ಕಸ್ ನೆನೆಸಿಕೊಂಡು ಪಕಪಕ ನಗುತ್ತಿದ್ದೆವು.
“ಹೊಳೆವ ನದಿ” ಅಂಕಣದಲ್ಲಿ ಮಾಲತಿ ಶಶಿಧರ್ ಬರಹ ನಿಮ್ಮ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮಂಜುನಾಯಕ ಚಳ್ಳೂರು ಕತೆ

ಅಪ್ಪ ಒಂದುಕಟ್ಟು ಬೀಡಿ ಮುಗಿಸಿದ್ದ. ಆತ ಎದ್ದು ಇನ್ನೂ ಬಾರಕೋಲು ತಗೊಂಡಿರಲಿಲ್ಲ, ನಾನೂ, ಸಾಂತ ಕೀಲಿಕೊಟ್ಟ ಗೊಂಬೆಗಳಂತೆ ಹೊಯ್ಕೊಳ್ಳಕೆ ಶುರು ಮಾಡಿದೆವು. ಅಪ್ಪನ ಸಿಟ್ಟು ನಮ್ಮ ಮೇಲೆ ವರ್ಗಗೊಂಡಿತು. ಇಬ್ಬರ ಬೆನ್ನಿಗೊಂದೊಂದು ಜೋರಾಗಿ ಗುದ್ದುಕೊಟ್ಟ. ನನಗಂತು ಅಳಲಿಕ್ಕೆ ಉಸುರು ಇಲ್ಲದಂಗಾಗಿತ್ತು. ಅವ್ವ ಅವತ್ತು ಉದಗಳ್ಳಿ ತಗಂಡು ಬೀಸಿದಳು ಅಪ್ಪನಿಗೆ. ಆತನ ಮೊಣಕಾಲಿಗೊಂದು ಗಿಚ್ಚ ಕುಂತಿತು. ಧಾರಾಕಾರ ರಕ್ತ ಸುರಿಯತೊಡಗಿತು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮಂಜುನಾಯಕ ಚಳ್ಳೂರು ಬರೆದ ಕತೆ “ವಜ್ರಮುನಿ”

Read More

“ಶಿವಗಂಗೆ” ಹತ್ತಿದ ನೆನಪುಗಳು: ಎಚ್. ಗೋಪಾಲಕೃಷ್ಣ ಸರಣಿ

ಕಡಲೆಕಾಯಿ ತಿನ್ನುತ್ತಾ ಹಾದಿ ಸವೆಯಿತು. ಸೌತೆಕಾಯಿ, ಬಾಳೆಹಣ್ಣು ಕಡಲೆಕಾಯಿ ನಂತರ ಖಾಲಿ. ಬೆಟ್ಟದ ಬುಡ ಸೇರುವಷ್ಟರಲ್ಲಿ ಕೈ ಖಾಲಿ ಆಗಿ ನಿರಾಳ ಅನಿಸಿತ್ತು. ಅಲ್ಲೂ ಎರಡೋ ಮೂರೋ ಗೋಲಿ ಸೋಡಾ ಕುಡಿದೆವು. ಬೆಟ್ಟ ಏರಲು ಶುರು ಹಚ್ಚಿದೆವು. ತುಂಬಾ ಕಡಿದಾದ ದೊಡ್ಡ ದೊಡ್ಡ ಬಂಡೆಗಳನ್ನು ಮೆಟ್ಟಲು ತರಹ ಮಾಡಿ ಹತ್ತುವವರಿಗೆ ಅನುಕೂಲ ಆಗಲಿ ಅಂತ ಪೈಪು ಹಾಕಿದ್ದಾರೆ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಹದಿನೆಂಟನೆಯ ಕಂತು ನಿಮ್ಮ ಓದಿಗೆ

Read More

ವಿಫಲಪ್ರೇಮಿಯ ತಪ್ಪೊಪ್ಪಿಗೆಗಳು: ರಹಮತ್ ತರೀಕೆರೆ

ವಿದ್ಯಾರ್ಥಿನಿಯರಲ್ಲಿ ಒಬ್ಬಾಕೆ ಕವಿತೆ ಬರೆಯುತ್ತಿದ್ದಳು. ಸರಳವಾದ ಪದದ ಅರ್ಥ-ಅದನ್ನು ತರಗತಿಯಲ್ಲೂ ಕೇಳಬಹುದಿತ್ತು- ಕೇಳಿಕೊಂಡು ಸ್ಟಾಫ್‌ರೂಮಿಗೆ ಬರುತ್ತಿದ್ದಳು. ಸಹೋದ್ಯೋಗಿಗಳು `ನೀನೇ ಹುಡುಗಿ ತರಹ ನಾಚ್ಕೊತೀ ಯಲ್ಲೋ’ ಎಂದು ಛೇಡಿಸುತ್ತಿದ್ದರು. ಬದುಕಿನ ಬಗ್ಗೆ ಭವಿಷ್ಯದ ಬಗ್ಗೆ ಚಿಂತನೆ ಹೊಣೆಗಾರಿಕೆ ಇಲ್ಲದೆ ಹುಟ್ಟಿದ ಎಳಸು ಆಕರ್ಷಣೆಗಳವು. ಆದರೂ ಒಬ್ಬಾಕೆಯ ದೊಡ್ಡ ಕಣ್ಣುಗಳ ಮುಖ ಚಿತ್ತದಲ್ಲಿ ಉಳಿದುಬಿಟ್ಟಿದೆ. ಚೆಲ್ಲು ವರ್ತನೆಯ ಆಕೆ, ಕನ್ನಡದಲ್ಲಿ ಭಯಂಕರ ಕಾಗುಣಿತ ತಪ್ಪು ಮಾಡುತ್ತಿದ್ದಳು. ಚೆಲುವನ್ನು ಕೊಟ್ಟು ಬುದ್ಧಿಯನ್ನು ಕೊಡದ ವಿಧಿಯನ್ನು ಬೈದುಕೊಂಡು, ಭಾಷಾ ದೋಷಗಳನ್ನು ಉದಾರವಾಗಿ ತಿದ್ದುತ್ತಿದ್ದೆ.
ಡಾ. ರಹಮತ್‌ ತರೀಕೆರೆಯವರ ಆತ್ಮಕಥನ “ಕುಲುಮೆ”ಯ ಒಂದು ಅಧ್ಯಾಯ ನಿಮ್ಮ ಓದಿಗೆ

Read More

ಅಲ್ಪ ಕಾಲದ ಗೆಳೆಯರು: ಮಾರುತಿ ಗೋಪಿಕುಂಟೆ ಸರಣಿ

ಅವನು ಎರಡೂ ಬ್ಯಾಟುಗಳನ್ನು ನನಗೆ ಕೊಟ್ಟ. ಆ ಬ್ಯಾಟುಗಳೊಂದಿಗೆ ಮನೆಯಲ್ಲಿ ತಮ್ಮನೊಂದಿಗೆ ಆಡುತ್ತಿದ್ದೆ. ಹದಿನೈದು ದಿನವಾದರೂ ಶಾಲೆಗೆ ಆತ ಬರಲಿಲ್ಲ. ಹೊಸದುರ್ಗದ ಕಡೆ ಯಾವುದೊ ಊರಿಗೆ ಹೋದರು ಅಂತ ಗೊತ್ತಾಯ್ತು. ಅಲ್ಲಿನ ಶಾಲೆಗೆ ನೇರವಾಗಿ ವರ್ಗಾವಣೆ ಪತ್ರವನ್ನು ತರಿಸಿಕೊಂಡಿದ್ದರು. ಅಯ್ಯೋ ಆತನ ಪೂರ್ಣ ವಿಳಾಸವು ಇರಲಿಲ್ಲ. ಶಾಲೆಯಲ್ಲಿ ಕೇರಾಫ್‌ ವಿಳಾಸವನ್ನೆ ಕೊಟ್ಟಿದ್ದರು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಹದಿನೆಂಟನೆಯ ಕಂತು

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ