Advertisement

Tag: kendasampige

ಪ್ರತಿಭೆಯ ತಿಜೋರಿಯಿಂದ ಜಗತ್ತನ್ನು ಶ್ರೀಮಂತಗೊಳಿಸಿದವನು

ಬರಹಗಾರನಾಗಲು ಲಂಡನ್ ಗೆ ಬಂದಿಳಿದ ಷಾ ಸರಿಯಾದ ಉದ್ಯೋಗ ಇಲ್ಲದೆ ತಾಯಿಯಿಂದ ಮತ್ತು ಆಕೆಯ ಹೊಸ ಗಂಡನಿಂದ ವಾರಕ್ಕೆ ಸಿಗುವ ಒಂದು ಪೌಂಡ್ ಹಣದ ಮೇಲೆ ಅವಲಂಬಿತನಾಗಿದ್ದ. ಮಧ್ಯಾಹ್ನಗಳನ್ನು ಬ್ರಿಟಿಷ್ ಮ್ಯೂಸಿಯಮ್‌ನ ಓದುವ ಕೋಣೆಯಲ್ಲಿ ಕಳೆಯುತ್ತಿದ್ದ. ಶಾಲೆಯಲ್ಲಿ ಯಾವುದನ್ನು ಪಡೆಯಲಾಗಲಿಲ್ಲವೋ ಲೈಬ್ರರಿಯ ಓದಿನಲ್ಲಿ ಅವನ್ನು ಓದಿ ಗಳಿಸುವ ಪ್ರಯತ್ನ ಮಾಡುತ್ತಿದ್ದ. ಕಾದಂಬರಿ ಬರೆಯಲು ಶುರು ಮಾಡಿದ. ಇನ್ನು ಸಂಜೆಯ ಹೊತ್ತಿಗೆ ಉಪನ್ಯಾಸಗಳು ಚರ್ಚೆಗಳು ನಡೆಯುವ ಲಂಡನ್ ನ ತಾಣಗಳನ್ನು ಹುಡುಕಿಕೊಂಡು ಅಲೆಯುತ್ತಿದ್ದ.
‘ನೀಲಿ ಫಲಕಗಳಲಿ ನೆನಪಾಗಿ ನಿಂದವರು’ ಸರಣಿಯಲ್ಲಿ ನಾಟಕಕಾರ ಬರ್ನಾರ್ಡ್‌ ಷಾ ಬಗ್ಗೆ ಬರೆದಿದ್ದಾರೆ ಯೋಗೀಂದ್ರ ಮರವಂತೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಹನಮಂತ ಹಾಲಿಗೇರಿ ಬರೆದ ಕತೆ

ಅವತ್ತೆ ಹುಚ್ಚರಾಮ ನಿಶ್ಚಯಿಸಿಬಿಟ್ಟ. ಅವ್ವಗೆ ಹೇಳಿ ತಾನು ಹ್ಯಾಂಗಾದರೂ ಮಾಡಿ ಯಾವ ಹೆಂಗ್ಸನ್ನಾದರೂ ಲಗ್ನ ಆಗಿ ಬಿಡಬೇಕು. ನಾಳೆಯೇ ಅವ್ವಳನ್ನು ಕೇಳಿಬಿಡಬೇಕು. ಅವ್ವ ಯಾರನ್ನಾದರೂ ತಂದು ನನಗೆ ಗಂಟು ಹಾಕಿಯೇ ಹಾಕುತ್ತಾಳೆ ಎಂಬ ಭರವಸೆಯೊಂದಿಗೆ ಆತ ಅವತ್ತು ಮಲಗಲು ಪ್ರಯತ್ನಿಸಿದ. ಆದರೆ ಮಲಗಲು ಪ್ರಯತ್ನಿಸಿದ್ದೆ ಬಂತು. ನಿದ್ದೆ ಹತ್ತಿರ ಸುಳಿಯಲಿಲ್ಲ. 
 ‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ಹನಮಂತ ಹಾಲಿಗೇರಿ ಬರೆದ “ಸಕಲರೋಳು ಲಿಂಗಾತ್ಮಾ ಕಾಣಾ” ಕಥೆ ನಿಮ್ಮ ಈ ಭಾನುವಾರದ ಓದಿಗೆ

Read More

ಬ್ರೋಕನ್ ವಿಂಗ್ಸ್: ಮಧ್ಯಮ ವರ್ಗದ ಪಡಿಪಾಟಲು

ವ್ಯಕ್ತಿಯೊಬ್ಬನಲ್ಲಿ ಒಡಮೂಡುವ ಭಾವನೆಗಳನ್ನು ಇನ್ನೊಂದು ಜೀವಿಗೆ ಸಂವಹಿಸುವ ಬಗೆಯಲ್ಲಿ ಆಯಾ ಪ್ರದೇಶದ ಸಾಂಸ್ಕೃತಿಕ ಅಂಶಗಳು ಪ್ರಧಾನ ಭೂಮಿಕೆಯಲ್ಲಿರುತ್ತವೆ ಎನ್ನುವುದೂ ಅಷ್ಟೇ ನಿಜವಾದ ಸಂಗತಿ. ವಿಸ್ತಾರವಾದ ಈ ಪ್ರಪಂಚದಲ್ಲಿ ಸಾಸ್ಕೃತಿಕ ಅಂಶಗಳು ಅನೇಕ ರೂಪಗಳಲ್ಲಿರುವುದು ಸಾಧ್ಯವಿದೆ. ಹೀಗಿರುವಾಗ ಹತ್ತಾರು ಸಾವಿರ ಮೈಲಿ ದೂರವಿರುವ ಪುಟ್ಟ ದೇಶದ ಚಲನಚಿತ್ರವೊಂದನ್ನು ನೋಡಿದಾಗ, ಇಗೋ ಇಲ್ಲೇ ನಮ್ಮ ಅಕ್ಕಪಕ್ಕದಲ್ಲಿರುವ ಮಧ್ಯಮ ವರ್ಗದ ಸಂಸಾರದಲ್ಲಿ ಹೀಗೆ ನಡೆಯಬಹುದು ಎನ್ನಿಸುವ ಹಾಗಿದ್ದರೆ ನಿಜಕ್ಕೂ ಸೋಜಿಗವಲ್ಲದೆ ಮತ್ತೇನು?
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್‌’ ಸರಣಿ

Read More

ಇದು ಪ್ರೇಕ್ಷಕಾನುಸಂಧಾನ

ಒಂದು ಪ್ರಸಂಗದಲ್ಲಿ ಭೀಷ್ಮ, ಸತ್ಯವತಿಯನ್ನು ತುಂಬಾ ವರ್ಣನೆ ಮಾಡಿದ್ದನ್ನುಸರೋಜಕ್ಕ ನೋಡಿದರು. ತಂದೆ ಇಷ್ಟ ಪಟ್ಟ ಹೆಣ್ಣನ್ನು ತಾಯಿ ಅಂತನೇ ನೋಡಬೇಕಿತ್ತು. ಹಾಗೆಲ್ಲಾ ತುಂಬಾ ವರ್ಣನೆ ಮಾಡಿದ್ದು ಆಭಾಸವಾಯಿತು ಅಂದರು. ಕರ್ಣಪರ್ವದಲ್ಲಿ ಕರ್ಣ ಪಾಪ, ಪಾಂಡವರಾಗಿ ಹುಟ್ಟಿದರೂ ಏನು ಇಲ್ಲ. ತಾಯಿ ಇದಾರೆ, ತಮ್ಮಂದಿರಿದಾರೆ. ಆದರೂ ಯಾರೂ ಇಲ್ಲ. ಇಡೀ ಮಹಾಭಾರತದಲ್ಲಿ ಕರ್ಣ ಅಂದ್ರೆ ಬಹಳ ಪ್ರೀತಿ. ಕುಂತಿ ನೋಡಿದ್ರೆ ಸಿಟ್ಟು ಬರತ್ತೆ ಒಂದೊಂದ್ಸಲ. ಆದರೆ ಕೀಲಿ ಕೈ ಇರೋದು ಕೃಷ್ಣನ ಹತ್ರನೇ. ಕಪಟ ನಾಟಕ ಅಂತನೇ ಇದೆಯಲ್ಲ.
ಕೃತಿ. ಆರ್. ಪುರಪ್ಪೇಮನೆ ಅವರು ಯಕ್ಷಾರ್ಥ ಚಿಂತಾಮಣಿ ಸರಣಿಯ‌ ಬರಹ

Read More

ಯುದ್ಧ ನಂತರದ‌ ಕತ್ತಲಲ್ಲಿ ಅರಿವಿನ ಬೆಳಕು

ಜೈನಾ ದುಬಾಯಿಂದ ಬೈರುತ್ ಗೆ ಬಂದು ಅಲ್ಲಿಂದ ಆಕ್ರಮಣಕ್ಕೆ ಒಳಗಾದ ಬಿಂಟ್ ಬಿಲ್‌ ಊರನ್ನು ತಲುಪಿರುತ್ತಾಳೆ. ಟೋನಿಯೊಂದಿಗೆ ಪ್ರಯಾಣ ಸಾಗುತ್ತಿದ್ದಂತೆ ಇಬ್ಬರಿಗೂ ತಮ್ಮಷ್ಟಕ್ಕೆ ಇರುವುದು ಅಸಹಜವೆನ್ನಿಸಿ, ನಿಧಾನವಾಗಿ ಕೇವಲ ವ್ಯಕ್ತಿಗಳಂತೆ ಇದ್ದವರು ಪರಸ್ಪರ ಅರಿತುಕೊಳ್ಳಲು ಪ್ರಾರಂಭಿಸುತ್ತಾರೆ. ಇದು ಅವರ ಭಾವಗಳಲ್ಲಿ, ಮುಖಚಹರೆಗಳಲ್ಲಿ ವ್ಯಕ್ತವಾಗುವುದನ್ನು ಸಮೀಪ ಚಿತ್ರಿಕೆಗಳಲ್ಲಿ ನಿರೂಪಿತಗೊಂಡಿವೆ. ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್‌’ನಲ್ಲಿ ಲೆಬನಾನ್‌ನ ʻಅಂಡರ್‌ ದ ಬಾಂಬ್ಸ್ʼ ಸಿನಿಮಾದ ವಿಶ್ಲೇಷಣೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ