Advertisement

Tag: kendasampige

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಅಲಕಾ ಕಟ್ಟೆಮನೆ ಬರೆದ ಕಥೆ

“ಇದೇ ವಿಷಯವಾಗಿ ಆವತ್ತು ಅಜ್ಜಿ ಮತ್ತು ಶಣ್ಕೂಸಿನ ನಡುವೆ ಘನಘೋರ ಚರ್ಚೆ ನಡೆಯುತ್ತಿತ್ತು. ಹಾಗೆ ನೋಡಿದರೆ ಅಜ್ಜಿಯಷ್ಟು ಬಿಡುವು ಶಣ್ಕೂಸಿಗೆ ಇರುವುದಿಲ್ಲ. ಅವಳ ದೊಡ್ಡ ಮಗ, ಅಲ್ಲೇ ಸನಿಹದಲ್ಲಿ ಮಡದಿ-ಮಕ್ಕಳೊಂದಿಗೆ ಬೇರೆ ಸಂಸಾರ ಹೂಡಿದ್ದ. ಮಗಳನ್ನು ಘಟ್ಟದ ಕೆಳಗಿನ ಅಣ್ಣನ ಮಗನಿಗೆ ಮದುವೆ ಮಾಡಿಕೊಟ್ಟಿದ್ದಳು. ಈಗ ಅವಳೊಂದಿಗಿರುವ ಕಡೆಯ ಮಗ ಸಂಕನಿಗೆ ತಲೆಗೂದಲು..”

Read More

ದೊಡ್ಡವರಿಗೂ ಸಲ್ಲುವ ಮಕ್ಕಳ ಕಥೆಗಳು

“ಒಂದರ್ಥದಲ್ಲಿ ಪಲ್ಲವಿಯವರು ಹೇಳುವಂತೆ ಭೂಮ್ತಾಯಿಯ ಒಡಲೆಲ್ಲ ಬರಿದಾಗಿ ನಿಜವಾಗಿಯೂ ರೋಗ ಪೀಡಿತ ಅಜ್ಜಿಯೇ ಆಗಿದ್ದಾಳೆ! ಅಂದರೆ, ಮನುಷ್ಯನ ದುರಾಶೆಯ ದೆಸೆಯಿಂದಾಗಿ ಭೂಮಿಯ ಅಂತ್ಯದ ದಿನಗಳು ಸನ್ನಿಹಿತವಾದವೆ ಎಂಬ ಆತಂಕ ಉಂಟಾಗುತ್ತದೆ! ಹೀಗೆ, ಈ ಕಥೆ ಮಕ್ಕಳಿಗೆ ಪರಿಸರ ಸಂರಕ್ಷಣೆಯನ್ನು ಮಾಡದೇ ಹೋದರೆ ಮುಂದಿನ ದಿನಗಳಲ್ಲಿ ಮನುಕುಲಕ್ಕೆ ಖಂಡಿತವಾಗಿಯೂ ಉಳಿಗಾಲವಿಲ್ಲ ಎಂಬ ಎಚ್ಚರಿಕೆಯ ಸಂದೇಶವನ್ನು ನೀಡುತ್ತದೆ. ಹಾಗೆಯೇ, ದೃಷ್ಟಾಂತವೊಂದರ ಮೂಲಕ ತೆರೆದುಕೊಳ್ಳುವ ‘ಎಂದೂ ಮುಗಿಯದ ಕಥೆ’ ಎಂಬ ಕಥೆ, ಮಕ್ಕಳ ಕಲ್ಪನೆಯ ಕ್ಷಿತಿಜವನ್ನು ವಿಸ್ತರಿಸುವ ನಿಟ್ಟಿನಲ್ಲಿದೆ.”

Read More

ನಾನು ನಾನೇ ಆಗಿದ್ದ ಆ ಒಂದು ದಿನ: ಶ್ವೇತಾ ಹೊಸಬಾಳೆ ಲಹರಿ

“ಗಂಡಸರು ಹೀಗೆ ಹೋಗುವುದು ಯಾರಿಗೂ ಅಸಹಜ ಎನ್ನಿಸುವುದೂ ಇಲ್ಲ; ಜವಾಬ್ದಾರಿಗಳಿಂದ ಕಳಚಿಕೊಂಡಂತೆ ಎಂದೂ ಅನ್ನಿಸುವುದಿಲ್ಲ. ದುಡಿಯುವ ಗಂಡಸಿಗೆ ವಿರಾಮ-ವಿಶ್ರಾಂತಿ ಬೇಕು ಎನ್ನುವ ಅನುಕಂಪ. ಅದೇ ಮಗುವನ್ನೂ ನೋಡಿಕೊಂಡು ಮನೆಕೆಲಸಗಳನ್ನು ನಿಭಾಯಿಸುವ, ಅಮ್ಮನಾದ ನಂತರ ವೈಯಕ್ತಿಕ ಜೀವನವೇ ಮರೀಚಿಕೆಯಾಗಿ, ಹವ್ಯಾಸ, ಸಿನೆಮಾ, ನಾಟಕ..”

Read More

ಕುಶಲದರ್ಜಿ ಗೋಪಾಲಿಯ ವ್ಯಾಕುಲಗಳು: ಎಸ್.‌ ಸಿರಾಜ್‌ ಅಹಮದ್‌ ಅಂಕಣ

“ಹೀಗಿರುವಾಗ ಎಲ್ಲೋ ಏನೋ ತಪ್ಪಿದಂತೆ ಕಾಣುತ್ತಿತ್ತು. ಅವನ ಸಣ್ಣಪ್ರಾಯದ ಎರಡನೆಯ ಹೆಂಡತಿ ಅವನಿಗಿಂತ ಹೆಚ್ಚು ಸಮಯವನ್ನು ಅವನ ಪುಟ್ಟ ಅಂಗಡಿಯಲ್ಲಿ ಕಳೆಯಲು ಶುರು ಮಾಡಿದಳು. ಅವಳು ಯಾರು ಬಂದು ಏನು ಮಾತಾಡಿದರೂ ಗಂಡನನ್ನೇ ದಿಟ್ಟಿಸಿ ನೋಡುವಾಗ ಏನೋ ಕಸಿವಿಸಿಯಾಗುತ್ತಿತ್ತು. ಊದುಗೆನ್ನೆಯ, ಉರುಬಿದ ಹೊಟ್ಟೆಯ ಈ ಆಸಾಮಿಯ ಮೇಲೆ ಅವನ ಹೆಂಡತಿ ಯಾಕಿಷ್ಟು ನಿಗಾ ಇಡುತ್ತಿದ್ದಾಳೆಂದು ನಮಗೆ ಮೋಜೆನಿಸುತ್ತಿತ್ತು.”

Read More

ಓ.ಎಲ್. ನಾಗಭೂಷಣಸ್ವಾಮಿ ಅನುವಾದಿಸಿದ ಒರ್ಹಾನ್ ಪಮುಕ್ ಕಾದಂಬರಿಯ ಆಯ್ದ ಭಾಗ

“ಜೂನ್ ತಿಂಗಳ ಮಧ್ಯಭಾಗದಲ್ಲಿ ಒಂದು ದಿನ ಪಕ್ಕದ ಜಮೀನಿಂದ ಜನ ಖುಷಿಯಾಗಿ ಕೂಗಾಡುವುದು, ಗುಂಡು ಹಾರಿಸುವುದು ಕೇಳಿಸಿತು. ಏನೆಂದು ನೋಡುವುದಕ್ಕೆ ಹೋದೆ. ಬಾವಿಯಲ್ಲಿ ನೀರು ಚಿಮ್ಮಿತ್ತು. ಆ ಒಳ್ಳೆಯ ಸುದ್ದಿ ಕೇಳಿದ ತಕ್ಷಣ ಜಮೀನಿನ ಯಜಮಾನ ಸಂಭ್ರಮಪಡುವುದಕ್ಕೆಂದು ರಯೀಸ್ ನಿಂದ ಬಂದಿದ್ದ. ಖುಷಿಯಲ್ಲಿ ಆಕಾಶಕ್ಕೆ ಗುಂಡು ಹಾರಿಸುತಿದ್ದ. ಗಾಳಿಯಲ್ಲಿ ಮದ್ದಿನ ಪುಡಿಯ ಘಾಟಿತ್ತು.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ