Advertisement

Tag: kendasampige

ಶ್ರೀಲೋಲ ಸೋಮಯಾಜಿ ಬರೆದ ಈ ಭಾನುವಾರದ ಕತೆ

ಕುಟುಂಬಕ್ಕೆ ಆಗಮಿಸಿದ ಹೊಸ ಸದಸ್ಯೆಯ ಆಗಮನದ ಸಂತೋಷ ಬರಿಯ ಹದಿನೈದು ದಿನಗಳಲ್ಲಿ ಕಮರಿಹೋಯಿತು. ಆಸ್ಪತ್ರೆಯಿಂದ ಹೊರಬರುವ ಮೊದಲೇ ಮೊದಲ ಬಾರಿಗೆ ದಪ್ಪ ಸೂಜಿಯಿಂದ ಚುಚ್ಚಿಸಿಕೊಂಡು ರಕ್ತವನ್ನು ದೇಹದ ಒಳಗೆ ದಾಟಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಅಳುತ್ತಿದ್ದ ಮಗುವನ್ನು ನೋಡಲಾಗದ ರಮ್ಯಾ ಕೋಣೆಯಿಂದ ಹೊರಗೆ ಓಡಿಬಂದು ಬಿಕ್ಕಿಬಿಕ್ಕಿ ಅಳತೊಡಗಿದಳು.
ಶ್ರೀಲೋಲ ಸೋಮಯಾಜಿ ಬರೆದ “ಮೊನಾಲಿಸಾಳ ನಗು” ಕತೆ ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಕಾವ್ಯ ಸಂಚಾರಿಣಿ ಮಮತಾ ಸಾಗರ: ಬಾನು ಮುಷ್ತಾಕ್ ಮುನ್ನುಡಿ

ಮಮತಾ ಸಾಗರ್‌ ಭಾಷೆಯಲ್ಲಿ ಹೇಳುವುದಾದರೆ ಆಕೆಯ ಪದಸಂಚಾರದ ಲಯ, ಗತಿ, ಭಾವ, ಅರ್ಥ ವ್ಯಾಪ್ತಿ ಮತ್ತು ಭಾಷೆಯ ನಿಲ್ಲದ ಪಯಣ ಕವಿಯತ್ರಿಯಂತೆಯೆ ಆಕೆಯ ಪದಗಳು ಕೂಡ ನಿರಂತರ ಸಂಚಾರದಲ್ಲಿರುತ್ತವೆ. ಹೀಗಾಗಿ ಆಕೆಯ ಭಾವನೆ ಮತ್ತು ಭಾವತೀವ್ರತೆಗಳಿಗೆ ಜಡ್ಡು ಮತ್ತು ಜಿಡ್ಡು ಹಬ್ಬಿಲ್ಲ. ಕೆಲವೆಡೆ ಪ್ರಖರವಾಗಿ ಇಡೀ ಆಸ್ತಿತ್ವವನೆ ಕಲಕುವ ಸಾಲುಗಳು ಯರ್ರಾ ಬಿರ್ರಿ ಕಲ್ಲು ಮಳೆಗರೆದಂತೆ ಮತ್ತೊಮ್ಮೆ ಪುಷ್ಪ ವೃಷ್ಟಿಯಂತೆ ಮತ್ತೊಮೆ ತಣ್ಣಗೆ ಕರಗುವ ಮಂಜಿನ ಕಠಾರಿ ಆಳವಾಗಿ ಎದೆಗಿಳಿದಂತೆ ಕಾಡುತ್ತಲೇ ಹೋಗುತ್ತವೆ.
ಮಮತಾ ಜಿ. ಸಾಗರ ಇಲ್ಲಿಯವರೆಗಿನ ಕವಿತೆಗಳ ಸಂಕಲನ “ಪದಸಂಚಾರ”ಕ್ಕೆ ಬಾನು ಮುಷ್ತಾಕ್‌ ಬರೆದ ಮುನ್ನುಡಿ

Read More

ಎಲ್ಲವೂ…. ಮರಳು ಮರಳೂ…: ಎಚ್. ಗೋಪಾಲಕೃಷ್ಣ ಸರಣಿ

ಮನೆಗೆ ಬರಬೇಕಾದರೆ ಮತ್ತೊಂದು ಯೋಚನೆ ತಲೆ ಕೆಡಿಸಿತು. ಸೈಟ್ ಮಧ್ಯ ಮಾರ್ಕ್ ಮಾಡ್ತಾ ಇದಾನೆ. ಮಧ್ಯದಿಂದ ಯಾರಾದರೂ ಮಾರ್ಕ್ ಮಾಡ್ತಾರಾ? ನಾನು ದಾಖಲು ಮಾಡ್ತಿರೋ ಈ ಪ್ರಸಂಗ ನಾಲ್ಕೂ ಕಾಲು ದಶಕದ ಹಿಂದೆ. ಅಂದರೆ ಆಗಿನ್ನೂ ಮೊಬೈಲ್ ಫೋನು, ಲ್ಯಾಂಡ್ ಲೈನ್ ಫೋನು ಇವೆಲ್ಲಾ ಇರದಿದ್ದ ಕಾಲ. ಏನಾದರೂ ಸಮಸ್ಯೆ, ಅದಕ್ಕೆ ಪರಿಹಾರ ಬೇಕು ಅಂದರೆ ಒಂದು ಮುಖಾಮುಖಿ ಮಾತು, ಇಲ್ಲ ಅಂದರೆ ಪೋಸ್ಟ್ ಮೂಲಕ ಕಾರ್ಡು ಅಥವಾ ಇನ್ ಲ್ಯಾಂಡ್ ಲೆಟರ್, ಇಲ್ಲಾ ಕಾಗದದಲ್ಲಿ ಬರೆದು ಅದನ್ನ ಕವರ್‌ನಲ್ಲಿ ಇಟ್ಟು ಪೋಸ್ಟ್ ಡಬ್ಬಕ್ಕೆ ಹಾಕಿ ಉತ್ತರಕ್ಕೆ ಕಾಯೋದು!
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಐವತ್ನಾಲ್ಕನೆಯ ಕಂತು

Read More

ಮರೆವೆಂಬ ಮಾರ್ಜಾಲ, ಪರಿಸ್ಥಿತಿಯೆಂಬ ಮೂಷಿಕ…: ರಾಮ್ ಪ್ರಕಾಶ್ ರೈ ಕೆ ಸರಣಿ

ಲೋಕದ ಕಣ್ಣಿಗೆ ಚಚ್ಚೂ ನಾಪತ್ತೆಯಾದ ಪಟ್ಟಿಯಲ್ಲೇ ಇರಬೇಕಿದೆ. ಏಕೆಂದರೆ ಉಳಿದ ಜೀವಗಳ ಉಸಿರು ಬಂಧನದ ಬೇಗೆಗೆ ಬಿದ್ದು ಸುಡಬಾರದೆಂದರೆ ಆ ಘಟನೆಯನ್ನು ಮರೆಯಲೇ ಬೇಕಿದೆ. ಹೀಗೆ ದಿನ ಕಳೆದಾಗ ಮತ್ತೆ ಅಪ್ಪು ಪಿಳ್ಳೆ ಎಲ್ಲವನ್ನೂ ಮರೆತು ಹೋಗುತ್ತಾರೆ. ಮರಳಿ ತನಿಖೆ, ಮತ್ತದೇ ಕಹಿಯ ಅಂತ್ಯ ಎಲ್ಲವೂ ಮೋಟಾರಿನ ಚಕ್ರದಂತೆ ಮತ್ತದೇ ಆರಂಭ ಅದೇ ಅಂತ್ಯ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ಮಲಯಾಳಂನ ‘ಕಿಷ್ಕಿಂದಾ ಕಾಂಡಮ್’ ಸಿನಿಮಾದ ವಿಶ್ಲೇಷಣೆ

Read More

ಊರ ಮಾರಮ್ಮನ ಪರಿಸೆ: ಸುಮಾ ಸತೀಶ್ ಸರಣಿ

ನಾವೂ ಚಿಕ್ಕವರಿರುವಾಗ ಸನಿ ಸನಿವಾರ ಈರಾಪುರಕ್ಕೆ ಕಾಯಮ್ಮಾಗಿ ಹೋಗ್ತಿದ್ವಿ. ಅಲ್ಲಿ ಅಕ್ಕ ಪಕ್ಕದ ಬೀದಿಗ್ಳಾಗೆ ಸನಿ ಮಾತ್ಮ ಮತ್ತೀಗ ಈರಬದ್ರಸೋಮಿ ಗುಡೀಗ್ಳೂ ಅವ್ವೆ. ‌ಈರಬದ್ರನ‌ ಗುಡೀನಾಗೇ ಸಾಮಿಗೆ ಪಂಚಲೋಹುದ್ದು ಕಣ್ಣು ಮೀಸೆ ಮೆತ್ತಿತ್ತು. ಅದ್ನ ನೋಡ್ತಿದ್ದಂಗೇ ಬೋ ಕ್ವಾಪ್ವಾಗವ್ನೆ ಅಂತ ಅನ್ನುಸ್ತಿತ್ತು. ಮುಂದ್ಕಿರಾ ಜಾಗ್ದಾಗೆ ಲಿಂಗಧೀರರ ಬಟ್ಟೆ‌ ಬೊಂಬೇನೂ ಇಕ್ಕಿದ್ರು. ಕಣ್ ಅಳ್ಳಿಸಿಕಂಡು ನೋಡ್ತಿದ್ವು. ಪರಿಸೇನಾಗೆ ಅವ್ರ ಕುಣ್ತ ಕಂಡು‌ ನಮ್ಗೆ ತೇಟು ಬೊಂಬೇನೇ ನೋಡ್ದಂಗಾಗಿ, ಅದೇ ಏನಾರಾ ಎದ್ದು ಬಂದೈತೋ ಏನೋ‌ ಅಂಬಂಗಾಗ್ತಿತ್ತು. ಆದ್ರೆ ಅದು ಆಳೆತ್ರುಕ್ಕಿತ್ತು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ