Advertisement

Tag: ಕತೆ

ಕೋಡೀಹಳ್ಳಿ ಮುರಳೀಮೋಹನ್ ಅನುವಾದಿಸಿದ ತೆಲುಗಿನ ಎಸ್.ವಿ. ಕೃಷ್ಣ ಕತೆ

“ಏಕೆಂದರೆ.. ಒಂಟಿತನ! ಯಾರೂ ನನ್ನ ಜೊತೆ ಮಾತನಾಡುವುದಿಲ್ಲ. ಯಾರೂ ನನ್ನನ್ನು ನೋಡಲು ಸಹ ಬಯಸುವುದಿಲ್ಲ. ನಾನು ಒಂಟಿತನಕ್ಕೆ ರೂಢಿಯಾಗಿದ್ದೇನೆ. ಹೇಗೋ ‘ಏಕಾಂತತೆ’ಯಂತೆ ಭಾಸವಾಗುವ ಈ ಮನಸ್ಥಿತಿಗೆ ನಾನು ರೂಢಿಸಿಕೊಂಡಿದ್ದೇನೆ. ಈ ಸ್ಥಿತಿ.. ಈ ಒಂಟಿತನ.. ಈ ಏಕಾಂತತೆಯಲ್ಲಿ ಮಾತ್ರ ನಾವು ಶಾಂತಿಯಿಂದ ಇರಲು ಸಾಧ್ಯ. ಯಾರೂ ನಮ್ಮನ್ನು ನೋಡುವುದಿಲ್ಲ, ಯಾರೂ ನಮ್ಮ ಬಳಿಗೆ ಬರುವುದಿಲ್ಲ, ಯಾರೂ ನಮ್ಮನ್ನು ನೋಯಿಸುವುದಿಲ್ಲ, ಯಾರೂ ಕೋಪಗೊಳ್ಳುವುದಿಲ್ಲ..”
ಕೋಡೀಹಳ್ಳಿ ಮುರಳೀಮೋಹನ್ ಅನುವಾದಿಸಿದ ತೆಲುಗಿನ ಎಸ್.ವಿ. ಕೃಷ್ಣ ಬರೆದ ಕತೆ “ಅಂತರ್ ನೇತ್ರ” ನಿಮ್ಮ ಈ ಭಾನುವಾರದ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ವಿನಯಾ ಒಕ್ಕುಂದ ಕತೆ

ಲ್ಲಯ್ಯ, ನಮ್ಮ ಅಜ್ಜಿಮನೆಯ ಮಾವಿನ ಮರದ ಕೆಳಗೆ ಸೈಕಲ್ ನಿಲ್ಲಿಸಿ ಎಲ್ಲಿಗೆ ಹೋಗುತ್ತಿದ್ದೆ ಮಾರಾಯ? ನಾನು ಪಿಯುಸಿ ಓದುತ್ತಿದ್ದ ಒಂದು ಮೇ ರಜೆಯ ಮಧ್ಯಾಹ್ನ ಚಿಪ್ಪಿಕಲ್ಲಿನ ಸಾರು ಕುದಿಸ್ತಾ ಇರುವಾಗ- ಅಮ್ಮ ದಿಕ್ಕಬಳ್ಳಿ ಮೆಟ್ಟಿ ಬಂದವಳಂತೆ ಬಂದು ‘ಹಡಬೆ ಹೆಣ್ಣೆ! ಮರ್ಯಾದೆ ಕಳೀತಿಯೇನೇ?’ ಎಂದವಳೇ ಒಲೆಮೇಲಿನ ಸಾರೆತ್ತಿ ತೊಡೆ ಮೇಲೆ ಸುರಿದುಬಿಟ್ಟಳು! ನನ್ನ ನೋವುಗಳೇ ಹೀಗೆ. ಇಲ್ಲಿದೆ ಅಂತ ತೋರಿಸಿಕೊಳ್ಳಲು ಆಗದೆ ಹಾಗೆ! ಹೇಳು, ನಾ ಮಾಡಿದ ತಪ್ಪೇನು?
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ವಿನಯಾ ಒಕ್ಕುಂದ ಕತೆ “ಒಂದು ಖಾಸಗಿ ಪತ್ರ” ನಿಮ್ಮ ಈ ಭಾನುವಾರದ ಓದಿಗೆ

Read More

ರಾಜಲಕ್ಷ್ಮಿ ಎನ್. ರಾವ್ ಬರೆದ ಕತೆ “ಆಗಸ್ಟ್ ಹದಿನೈದು”

ಎಲ್ಲಿಂದಲೋ ಸಿನೆಮಾ ಹಾಡು ಕೇಳಿ ಬಂತು. ಕಡೆಯ ಆಟ ಮುಗಿಯಿತೇನೋ ‘ತಾರಾ ಗಗನಮೇ…’ ತಲೆಯೆತ್ತಿ ನೋಡಿದ. ಆಕಾಶದಲ್ಲೂ ಸ್ವಾತಂತ್ರ್ಯೋತ್ಸವದ ಸಂಭ್ರಮ. ಲಕ್ಷೋಪಲಕ್ಷ ನಕ್ಷತ್ರಗಳು, ಬೊಂಬಾಯಿನಲ್ಲಿ ವಿದ್ಯುದ್ದೀಪಮಾಲೆಗಳ ನಡುವಿನಲ್ಲಿ ಇವುಗಳನ್ನು ಗಮನವಿಟ್ಟು ನೋಡಿರಲಿಲ್ಲ. ಇಲ್ಲಿ ನಿಸರ್ಗಕ್ಕೆ ಮಾನವನ ಸ್ಪರ್ಧೆಯಿಲ್ಲ. ಬೊಂಬಾಯಿನಲ್ಲಿ ವಿದ್ಯುದ್ದೀಪಗಳ ಗೊಂದಲಕ್ಕೆ ಸಿಕ್ಕಿ ಆಕಾಶ ಕೆಂಪಾಗಿತ್ತು.
ಹಿರಿಯ ಕತೆಗಾರ್ತಿ ರಾಜಲಕ್ಷ್ಮಿ ಎನ್. ರಾವ್ ಬರೆದ ಸಮಗ್ರ ಕತೆಗಳನ್ನು ಚಂದನ್‌ ಗೌಡ “ಸಂಗಮ” ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಿಸಿದ್ದು, ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಈ ಸಂಕಲನದ “ಆಗಸ್ಟ್ ಹದಿನೈದು” ಕತೆ ನಿಮ್ಮ ಓದಿಗೆ

Read More

ಪ್ರವೀಣ್‌ ಕುಮಾರ್‌ ಜಿ. ಬರೆದ ಈ ಭಾನುವಾರದ ಕತೆ

ರಾಜಣ್ಣನ ಕೊನೆಯ ಮಾತುಗಳನ್ನು ಕೇಳಿಸಿಕೊಂಡು ಕವಿತಾಳ ಕಣ್ಣುಗಳು ಗಾಬರಿಯಲ್ಲಿ ಅಗಲವಾದವಾ? ಅವನಿಗದು ಗೊತ್ತಾಗಲಿಲ್ಲವಾದರೂ ಉಸಿರು ಎಳೆಯುತ್ತಿದ್ದ ಕವಿತಾ “ನೀನಾದ್ಮ್ಯಾಲೆ ನನ್ನ ಯಾರೂ ಮುಟ್ಟಿಲ್ಲ.” ಎಂದು ಗೊಗ್ಗರು ದನಿಯಲ್ಲಿ ಹೇಳಿದ ಮಾತಿಗೆ ಬೇಕಾದ ಉಸಿರು ಪೂರ್ತಿ ಗಂಟಲಿನಿಂದಲೇ ಹೊರಗೆ ಹೋಗುತ್ತಿತ್ತು. “ನೀನಾದ್ಮ್ಯಾಲೆ ನನ್ನ…” ಎಂಬ ಶಬ್ದವೊಂದೇ ಅವನಿಗೆ ಅರ್ಧಂಬರ್ಧ ಕೇಳಿಸಿದ್ದು, ಅದೂ ಬರೀ ಗೊರಗೊರ. ಅವಳನ್ನೇ ದಿಟ್ಟಿಸುತ್ತಿದ್ದ ರಾಜಣ್ಣ ಕೆಲವೇ ಕ್ಷಣಗಳಲ್ಲಿ ಅವಳ ಉಸಿರು ನಿಂತಿದ್ದನ್ನು ಗೊತ್ತುಮಾಡಿಕೊಂಡು ತನ್ನ ಕುತ್ತಿಗೆಗೂ ಚಾಕು ಹಾಕಿಕೊಂಡ.
ಪ್ರವೀಣ್‌ ಕುಮಾರ್‌ ಜಿ. ಕಥಾ ಸಂಕಲನ “ಬಯಲು” ಕೃತಿಯ ಶೀರ್ಷಿಕೆ ಕತೆ ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ರಾಜಲಕ್ಷ್ಮಿ ಎನ್. ರಾವ್ ಬರೆದ ಕತೆ “ಸ್ವಾತಂತ್ರ್ಯ ದಿನ”

ಮತ್ತೆ ದೃಷ್ಟಿ ಜನರಿಂದ ದೂರ ಹೋಯಿತು. ಇಬ್ಬನಿಯ ಅವಕುಂಠನವನ್ನು ಕಳೆದುಕೊಂಡು ಹೂಗಳು ಮುಗ್ಧತೆಯನ್ನು ಕಳೆದುಕೊಂಡು ಕಠಿಣರಾದ ನಿರಸನಿಗಳಂತೆ ರಾವು ಬಡಿಯುವ ಬಣ್ಣಗಳನ್ನು ತೋರುತ್ತಿದ್ದವು. ಬಾವುಟ ಬಿಸಿಲಿನ ತೀಕ್ಷ್ಣತೆಗೆ ಸೋತು ಮಲಗಿತ್ತು. ಆಕಾಶದ ಒಂದು ಭಾಗದಲ್ಲಿ ಬೂದು ಬಣ್ಣದ ಮೋಡಗಳು ಇಕ್ಕಟ್ಟಾಗಿ ಮಲಗಿದ್ದವು. ಸ್ಲಮ್ ಪ್ರದೇಶ, ಇಂದೊಂದೇ ದಿನ ಆಕಾಶದಲ್ಲಿ ಈ ಮೋಡಗಳಿಗೆ ಜಾಗ, ಮತ್ತೆ ನಾಳಿನಿಂದ ಆಕಾಶದ ತುಂಬ ಕಾರ್ಖಾನೆ ಹೊಗೆಯ ಮೋಡಗಳು, ನಾಳಿನಿಂದ ಆಕಾಶ ತಿಪ್ಪೆ…
ಹಿರಿಯ ಕತೆಗಾರ್ತಿ ರಾಜಲಕ್ಷ್ಮಿ ಎನ್. ರಾವ್ ಬರೆದ ಸಮಗ್ರ ಕತೆಗಳನ್ನು ಚಂದನ್‌ ಗೌಡ “ಸಂಗಮ” ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಿಸಿದ್ದು, ಈ ಸಂಕಲನದ “ಸ್ವಾತಂತ್ರ್ಯ ದಿನ” ಕತೆ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ