Advertisement
ಯೂ ಆರ್ ಹರ್ಟಿಂಗ್ ಮೀ ತೇಜಸ್ವಿ…

ಯೂ ಆರ್ ಹರ್ಟಿಂಗ್ ಮೀ ತೇಜಸ್ವಿ…

ಧ್ಯಾನಸ್ಥ ಪೀಠದ ಕಡೆ ಹಾಕಿದ್ದ ಕಲ್ಲುಗಳ ಮೇಲು ಚಪ್ಪಡಿಗಳನ್ನು ತೆಗೆಯಬೇಕೆಂದು ತೇಜಸ್ವಿಗೆ ಒತ್ತಡ ಪ್ರಾರಂಭವಾಯಿತು. ಈ ಬಗ್ಗೆ ಕೆಟಿ ಯೊಂದಿಗೆ ಸಾಕಷ್ಟು ಚರ್ಚೆ ಮಾಡಿದರೂ ಕೆಟಿ ಒಪ್ಪಲಿಲ್ಲ. ತೇಜಸ್ವಿಗೆ ಒತ್ತಡ ಅತಿಯಾದಾಗ ‘ಒಂದು ದಿನ ರಾತ್ರಿ ಹನ್ನೆರೆಡು  ಗಂಟೆವರೆಗೂ ಕರೆ ಮಾಡಿ ತೆಗೆಯಲೇ ಬೇಕು ಸ್ವಲ್ಪ ಚೇಂಜ್ ಆಗಬೇಕೆಂದು ತೇಜಸ್ವಿ ಒತ್ತಡ ಹಾಕಿದಾಗ ಬೇಸತ್ತ ಕೆಟಿ ಫೋನಿನಲ್ಲಿ ‘ಯೂ ಆರ್ ಹರ್ಟಿಂಗ್ ಮೀʼ ಎಂದು ಫೋನಿಟ್ಟರಂತೆ. ಅದಾದ ನಂತರ ತೇಜಸ್ವಿ ಮತ್ತೆಂದು ಕೆಲಸದ ವಿಚಾರದಲ್ಲಿ ಮಧ್ಯೆ ಪ್ರವೇಶ ಮಾಡಲಿಲ್ಲವಂತೆ. ಕೆ.ಟಿ. ಕಲ್ಪನೆಯಂತೆ ಸ್ಮಾರಕ ನಿರ್ಮಾಣವಾಯಿತು.
ಕೆ.
ಟಿ. ಶಿವಪ್ರಸಾದ್  ಹಾಗೂ ಪೂರ್ಣಚಂದ್ರ ತೇಜಸ್ವಿಯವರ ಒಡನಾಟದ ಕುರಿತ ನಾಗರಾಜ್‌ ಹೆತ್ತೂರು ಕೃತಿ “ಶಿವ ಮೇಡ್‌ ಬೈ ತೇಜಸ್ವಿ”ಯ ಆಯ್ದ ಭಾಗ

ಈ ನಡುವೆ ಸ್ಮಾರಕ ನಿರ್ಮಾಣ ಸಂದರ್ಭ ನಡೆದ ಕೆಲ ಘಟನೆಗಳನ್ನು ಕೆ.ಟಿ. ಕಾರಿನಲ್ಲಿ ಹೇಳುತ್ತಾ ಬಂದಿದ್ದರಿಂದ ಈ ಬಗ್ಗೆ ನಮ್ಮ ಕಲ್ಪನೆಯನ್ನು ಇನ್ನಷ್ಟು ವಿಸ್ತರಿತ್ತು.

ಕುವೆಂಪು ಮರಣ ನಂತರ ಹೀಗೊಂದು ಸ್ಮಾರಕ ಮಾಡಬೇಕೆಂದು ತೀರ್ಮಾನ ಮಾಡಿದಾಗ `ನೀನೆ ಕಲ್ಪನೆ ನೀಡಿ ಮಾಡು’ ಎಂದು ಹೇಳಿದ್ದವರು ತೇಜಸ್ವಿ. ಇವರಿಬ್ಬರ ಕಲ್ಪನೆಯು ಇದಾಗಿದ್ದರೂ ಕೆಲವು ಕಠಿಣ ನಿರ್ಧಾರವನ್ನೂ ಕೈಗೊಳ್ಳುಬೇಕಿದ್ದನ್ನು ನೆನಪಿಸಿಕೊಂಡರು ಕೆಟಿ.

ಧ್ಯಾನಸ್ಥ ಪೀಠದ ಕಡೆ ಹಾಕಿದ್ದ ಕಲ್ಲುಗಳ ಮೇಲು ಚಪ್ಪಡಿಗಳನ್ನು ತೆಗೆಯಬೇಕೆಂದು ತೇಜಸ್ವಿಗೆ ಒತ್ತಡ ಪ್ರಾರಂಭವಾಯಿತು. ಈ ಬಗ್ಗೆ ಕೆಟಿ ಯೊಂದಿಗೆ ಸಾಕಷ್ಟು ಚರ್ಚೆ ಮಾಡಿದರೂ ಕೆಟಿ ಒಪ್ಪಲಿಲ್ಲ. ತೇಜಸ್ವಿಗೆ ಒತ್ತಡ ಅತಿಯಾದಾಗ ‘ಒಂದು ದಿನ ರಾತ್ರಿ ಹನ್ನೆರೆಡು  ಗಂಟೆವರೆಗೂ ಕರೆ ಮಾಡಿ ತೆಗೆಯಲೇ ಬೇಕು ಸ್ವಲ್ಪ ಚೇಂಜ್ ಆಗಬೇಕೆಂದು ತೇಜಸ್ವಿ ಒತ್ತಡ ಹಾಕಿದಾಗ ಬೇಸತ್ತ ಕೆಟಿ ಫೋನಿನಲ್ಲಿ ‘ಯೂ ಆರ್ ಹರ್ಟಿಂಗ್ ಮೀʼ ಎಂದು ಫೋನಿಟ್ಟರಂತೆ.

ಅದಾದ ನಂತರ ತೇಜಸ್ವಿ ಮತ್ತೆಂದು ಕೆಲಸದ ವಿಚಾರದಲ್ಲಿ ಮಧ್ಯೆ ಪ್ರವೇಶ ಮಾಡಲಿಲ್ಲವಂತೆ. ಕೆ.ಟಿ. ಕಲ್ಪನೆಯಂತೆ ಸ್ಮಾರಕ ನಿರ್ಮಾಣವಾಯಿತು.

ಹಾಗೆ ಇಂತಹುದೊಂದು ಸ್ಮಾರಕ ನಿರ್ಮಾಣದ  ಸಂಪೂರ್ಣ ಜವಬ್ದಾರಿಯನ್ನು ವಹಿಸಿಕೊಂಡ ಎಸ್. ಎಂ ಕೃಷ್ಣ ಅಳಿಯ ಸಿದ್ಧಾರ್ಥ ಕೊಟ್ಟ ಸಹಕಾರವನ್ನು ಕೆಟಿ ನೆನೆಯುತ್ತಾರೆ. ಸ್ಮಾರಕಕ್ಕೆ ಬೇಕಿದ್ದ ಕಲ್ಲುಗಳನ್ನು ತಂದು ಹಾಕಲಾಗಿತ್ತು. ಟನ್ ಗಟ್ಟಲೆ ಇದ್ದ ಕಲ್ಲುಗಳನ್ನು ಎತ್ತಿ ನಿಲ್ಲಿಸಲು ಕಷ್ಟವಾಗುವ ಸ್ಥಿತಿ ಬಂದಿತ್ತು. ಈ ಸಂದರ್ಭ ಸಿದ್ದಾರ್ಥನಿಗೆ ಈ ವಿಚಾರ ತಿಳಿಸಿ ಕ್ರೇನ್ ಬೇಕು ಎಂದರು. ದಿನಕ್ಕೆ ಇಪ್ಪತೈದು ಸಾವಿರ ಬಾಡಿಗೆ ಒಂದು ತಿಂಗಳು ಬೇಕು ಎಂದಾಗ ಒಂದಿಷ್ಟೂ ಬೇಸರ ಮಾಡಿಕೊಳ್ಳದ ಸಿದ್ಧಾರ್ಥ ಸರಿ ಮಾಡಿ ಎಂದು ಸಹಕಾರ ಕೊಟ್ಟಿದ್ದನ್ನು ನೆನೆಯುತ್ತಾರೆ.

ಇಲ್ಲಿ ಕಲ್ಲುಗಳ ನಿಲ್ಲಿಸಿದ್ದು, ನಂತರ ತೇಜಸ್ವಿ ಇದ್ದಕ್ಕಿದ್ದಂತೆ ಒಮ್ಮೆ ರಾತ್ರಿ ಕರೆ ಮಾಡಿ ಸ್ಮಾರಕ ನಿರ್ಮಿಸಲಾಗಿದೆ. ಕಲ್ಲು ನಿಲ್ಲಿಸಿದ್ದಾಗಿದೆ ಭೂಕಂಪ ಏನಾದರೂ ಆದ್ರೆ..? ಏನು ಮಾಡೋದು  ಎಂದು ಆತಂಕ ವ್ಯಕ್ತಪಡಿಸಿದರಂತೆ.

ಅದಕ್ಕೆ ಪ್ರತಿಯಾಗಿ ಕೆ.ಟಿ. ಏನು ಮಾಡಲು ಸಾಧ್ಯ..? ಅವನ್ನೆಲ್ಲಾ ನಮಗೆ ತಡೆಯಲು ಸಾಧ್ಯವೇ..? ಎಂದರಂತೆ.

ಇಂತಹ ಹಲವಾರು ಘಟನೆಗಳನ್ನು ಕಾರಿನಲ್ಲಿ ಕೆಟಿ ನೆನಪಿಸಿಕೊಂಡಿದ್ದರು.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ