Advertisement

ಸಂಪಿಗೆ ಸ್ಪೆಷಲ್

ಒಲವಿನ ಬೆಳಕು ಬೆಳಗುವ ದೀಪದ ಹಬ್ಬ…

ಒಲವಿನ ಬೆಳಕು ಬೆಳಗುವ ದೀಪದ ಹಬ್ಬ…

ಹಿಂದೆಲ್ಲಾ ದೀಪಾವಳಿಯೆಂದರೆ ಹೊಸ ಬಟ್ಟೆಯ ಹಬ್ಬ. ವರುಷಕ್ಕೊಮ್ಮೆ ಹೊಸ ಬಟ್ಟೆ. ಅದು ದೀಕುಂಕುಮ ಅವಿಭಕ್ತ ಕುಟುಂಬ ಪರಂಪರೆಯ ಮನೆಗಳು. ದೂರದೂರಿನಲ್ಲಿರುವ ಬಂಧುಗಳು ದೀಪಾವಳಿ ಬರುತ್ತಿದ್ದಂತೆ ಮನೆಗೆ ಬರುತ್ತಿದ್ದರು. ಜೊತೆಗೆ ಮನೆ ಮಕ್ಕಳಿಗೆ ಹೊಸ ಬಟ್ಟೆ, ಅಂಗಿ… ಹೊಸತನದ ಘಮ…. ಮನೆಯ ತುಂಬೆಲ್ಲ ಪಸರಿಸುತ್ತಿತ್ತು. ತ್ರಯೋದಶಿ ಸಂಜೆ ಗಂಗಾ ಪೂಜೆ… ನೀರು ತುಂಬುವ ಹಬ್ಬ. ಬಚ್ಚಲುಮನೆ ಶುಚಿಗೊಳಿಸಿ, ಹಂಡೆ ತಿಕ್ಕಿ ತೊಳೆದು ಫಳಫಳ ಹೊಳೆದು ಬಳಪದಿಂದ ಗೆರೆ ಎಳೆದು ಹಂಡೆಯ ಕೊರಳಿಗೆ ಗೊಂಡೆ ಹೂ(ಚೆಂಡು ಹೂ)ಗಳ ಮಾಲೆ ಹಾಕಿ….
ಬಾಲ್ಯಕಾಲದಲ್ಲಿ ದೀಪದ ಹಬ್ಬದ ಆಚರಣೆಗಳು ಹೇಗಿದ್ದವು.. ಅದರ ಮಹತ್ವವೇನು ಎಂಬುದರ ಕುರಿತು ಬರೆದಿದ್ದಾರೆ ಪೂರ್ಣಿಮಾ ಸುರೇಶ್

read more
ಕಲಿಸುವಷ್ಟೇ, ಕಲಿಯುವುದೂ ಇದೆ…

ಕಲಿಸುವಷ್ಟೇ, ಕಲಿಯುವುದೂ ಇದೆ…

ಈ ಪುಟ್ಟ ವೀಡಿಯೋ ಎತ್ತುವ ಪ್ರಶ್ನೆಗಳು ಅಸೀಮ. ನಾವು ಎಂಥ ವ್ಯವಸ್ಥೆ ಮತ್ತು ಪರಿಸ್ಥಿತಿಯಲ್ಲಿ ಇದ್ದೇವೆ ಎಂದು ನೋವಾಗುತ್ತದೆ. ಆದರೆ ನೋಯುವುದಕ್ಕಿಂತ ಸಧ್ಯದ ಜರೂರತ್ತೆಂದರೆ ನಾವು ನಮ್ಮ ಹೆಣ್ಣುಮಕ್ಕಳ ಬ್ಯಾಗಿನಲ್ಲಿ ಕಸ್ಮೆಟಿಕ್ಸ್ ಗಳಿಗಿಂತಲೂ ಮುಖ್ಯವಾಗಿ ಒಂದು ಬ್ಲೇಡನ್ನೋ ಅಥವಾ ಪೆಪ್ಪರ್‌ ಸ್ಪ್ರೇಯನ್ನೋ ಇಟ್ಟುಕೊಳ್ಳುವ ಅಭ್ಯಾಸ ಮಾಡಿಸಬೇಕಿದೆ. ಮತ್ತದನ್ನು ಸರಿಯಾದ ಸಂದರ್ಭದಲ್ಲಿ ಸರಿಯಾಗಿ ಬಳಸುವುದನ್ನೂ ಕಲಿಸಬೇಕಿದೆ. ಯಾರೋ ಬಂದು ನಮ್ಮನ್ನು ಕಾಪಾಡುತ್ತಾರೆ ಎಂದು ಕಾಯುವ ಬದಲು, ನಮ್ಮನ್ನು ನಾವೇ ಕಾಪಾಡಿಕೊಳ್ಳುವುದು ಒಳಿತಲ್ಲವೇ…
ಆಶಾ ಜಗದೀಶ್‌ ಬರಹ ನಿಮ್ಮ ಓದಿಗೆ

read more
ಕೈ ಹಿಡಿದು ಮುನ್ನಡೆಸುವ ಕತೆಗಳೆಂಬ ದೋಣಿಗಳು

ಕೈ ಹಿಡಿದು ಮುನ್ನಡೆಸುವ ಕತೆಗಳೆಂಬ ದೋಣಿಗಳು

ಸೂರ್ಯೋದಯದಲ್ಲೋ, ಸೂರ್ಯಾಸ್ತದಲ್ಲೋ ಆಗಸದಲ್ಲಿ ಚೆಲ್ಲಿ ಹೋದ ಬಣ್ಣಗಳು ಕ್ಷಣ ಕ್ಷಣಕ್ಕೂ ಬದಲಾಗುತ್ತಾ ಹೋದಂತೆ, ಗ್ರಹಿಕೆಗಳು ಒಬ್ಬರಿಂದ ಮತ್ತೊಬ್ಬರಿಗೆ ಬದಲಾಗುತ್ತಲೇ ಇರುತ್ತವೆ. ಒಬ್ಬನೇ ವ್ಯಕ್ತಿಯು ಒಂದೊಂದು ಕಾಲದಲ್ಲಿ ಬದುಕನ್ನು ಗ್ರಹಿಸುವ ರೀತಿಯೂ ಬದಲಾಗಿರುತ್ತದೆಯಲ್ಲವೇ. ಹಾಗೆಯೇ ಈ ಕತೆಗಳು ಕೂಡ ಎಂದೆನಿಸುತ್ತದೆ. ಹಾಗೆ ನೋಡಿದರೆ ಎಷ್ಟೊಂದು ಕಲಾತ್ಮಕವಾದ ಕತೆಗಳನ್ನು ಬರೆದರೂ ʻಕತೆಗಾರರುʼ ರೂಪುಗೊಳ್ಳುವುದು ಓದುಗರ ಮನಸ್ಸಿನಲ್ಲಿ ಅಲ್ಲವೇ.
ಕತೆಗಳ ಜಾಡು ಹಿಡಿದ ಬರಹವೊಂದನ್ನು ಬರೆದಿದ್ದಾರೆ ಕೋಡಿಬೆಟ್ಟು ರಾಜಲಕ್ಷ್ಮಿ.

read more
ರಂಗಸ್ಥಳದಲ್ಲೀಗ ಸಮಯಮಿತಿಯ ವಾಗ್ವಿಲಾಸ

ರಂಗಸ್ಥಳದಲ್ಲೀಗ ಸಮಯಮಿತಿಯ ವಾಗ್ವಿಲಾಸ

1985 ಕ್ಕಿಂತ ಮುಂಚೆಯೇ  ಇಡಗುಂಜಿ ಮೇಳ ವಿವಿಧ ಪ್ರವಾಸ ಕೈಗೊಳ್ಳುವ ಸಂದರ್ಭದಲ್ಲಿ ಕಾಲಮಿತಿಯ ಯಕ್ಷಗಾನ  ಪ್ರದರ್ಶನವನ್ನು ಆರಂಭಿಸಿತ್ತು. 1968 ರಲ್ಲಿ ಮತ್ತು 1971ರಲ್ಲಿ ದೆಹಲಿಯಲ್ಲಿ ಜರಾಸಂಧವಧೆ, ಕರ್ಣಪರ್ವ ಮುಂತಾದ ಪ್ರಸಂಗಗಳನ್ನು ಕಾಲಮಿತಿಯಲ್ಲಿ ಪ್ರದರ್ಶಿಸಿತ್ತು. ಆ ಸಂದರ್ಭದಲ್ಲಿ ಜನರ ಮನಸ್ಸು ಇನ್ನು ಸಮಯಮಿತಿಗೆ ಒಗ್ಗಿಕೊಳ್ಳದ ಸಂದರ್ಭವಾದರೂ, ಸುಮಾರು 75ಕ್ಕೂ ಮಿಕ್ಕಿ ಪ್ರದರ್ಶನ ನಡೆಯಿತು. ಹಾಗೆ ನೋಡಿದರೆ ಜಗತ್ತಿನ ಯಾವ ರಂಗಭೂಮಿಗೊ, ನಾಟ್ಯಪ್ರಕಾರಕ್ಕೋ ʻಕಾಲಮಿತಿʼ ಎಂಬುದು ಒಂದು ಚರ್ಚಿಸಬೇಕಾದ ವಿಷಯವೇ ಅಲ್ಲ ಎನ್ನುವ  ಹಿರಿಯ ಕಲಾವಿದ ಕೆರೆಮನೆ ಶಿವಾನಂದ ಹೆಗಡೆ ಅವರು ಮೇಳವನ್ನು ನಡೆಸುವವರೂ ಹೌದು. ಹಿರಿಯ ಕಲಾವಿದರೂ ಹೌದು. ಅವರು ಬರೆದ ಲೇಖನ ಇಂದಿನ ಓದಿಗಾಗಿ. 

read more
‘ಸುದರ್ಶನ’: ಧ್ಯೇಯ ಆದರ್ಶಗಳ ದರ್ಶನ

‘ಸುದರ್ಶನ’: ಧ್ಯೇಯ ಆದರ್ಶಗಳ ದರ್ಶನ

ಸುದರ್ಶನನು ದೀನಾನಂದನಾಗಿ ಗಳಿಸಿದ ಜನಪ್ರಿಯತೆ, ಯಶಸ್ಸು, ನಿರ್ಲಿಪ್ತತೆ ಮತ್ತು ನೈತಿಕ ಕಟ್ಟುಪಾಡುಗಳಿಗೆ ಒಗ್ಗಿದ ಬದುಕಿನ ಕಡೆಗೆ ಕಾದಂಬರಿಯು ಗಮನವನ್ನು ಹರಿಸಿದ್ದರೂ ಇದನ್ನು ಕೇವಲ ಸುದರ್ಶನನ್ನು ಕುರಿತ ಕಾದಂಬರಿಯನ್ನಾಗಿ ಓದಲಾಗದು. ಆತನು ಕಾದಂಬರಿಯ ಪ್ರಧಾನ ಪಾತ್ರವಾದರೂ ಇವನೊಂದಿಗೆ ವೈದೃಶ್ಯದಲ್ಲಿ ನಿಲ್ಲಬಲ್ಲ ಹಲವು ಪಾತ್ರಗಳು ಇವೆ. ಆ ಪಾತ್ರಗಳು ಸೂಚಿಸುವ ಬಹುಮುಖೀ ನೆಲೆಗಳ ಒಟ್ಟು ವಿನ್ಯಾಸದಲ್ಲಿ ಕಾದಂಬರಿಯನ್ನು ಗ್ರಹಿಸಬೇಕಾಗುತ್ತದೆ. ಆನಂದಕಂದರ ‘ಸುದರ್ಶನ’ ಕಾದಂಬರಿಯ ಕುರಿತು ಡಾ. ಸುಭಾಷ್ ಪಟ್ಟಾಜೆ ಬರಹ ನಿಮ್ಮ ಓದಿಗೆ

read more
ಕನ್ನಡಿಗರೆಂಬ ಸಂಪನ್ನರೂ ಸಜ್ಜನರೂ..

ಕನ್ನಡಿಗರೆಂಬ ಸಂಪನ್ನರೂ ಸಜ್ಜನರೂ..

ಇಡೀ ಭಾರತ ದೇಶದಲ್ಲಿ ಸಂಪನ್ನರೆಂದರೆ ಯಾರು? ಎಂದು ಯಾರಾದರೂ ಕೇಳಿದರೆ ನಾನಂತೂ ಕನ್ನಡಿಗರೇ ಎಂದು ಕೇಕೆ ಹಾಕಿ ಹೇಳಬಲ್ಲೆ. ಏಕೆಂದರೆ ಕನ್ನಡಿಗರಷ್ಟು ಸಂಪನ್ನರು ಮತ್ತು ಸಹೃದಯಿಗಳು ಭಾರತದ ಇತರೆ ರಾಜ್ಯಗಳಲ್ಲಿ ಇಲ್ಲ. ಇಂದು ಯಾವುದೇ ರಾಜ್ಯದ, ಯಾವುದೇ ಭಾಷೆಯ ಮಂದಿ ಕರ್ನಾಟಕದಲ್ಲಿ ಬಂದು ನೆಲೆಸಬಹುದು. ಕರ್ನಾಟಕದಲ್ಲಿ ಉದ್ಯೋಗ, ವ್ಯಾಪಾರ ಮಾಡಿಕೊಂಡು ನೆಮ್ಮದಿಯಿಂದ ಜೀವಿಸಬಹುದು. ಎರಡ್ಮೂರು ತಲೆಮಾರುಗಳಿಂದ ಕರ್ನಾಟಕದಲ್ಲಿ ನೆಲೆಸಿದ್ದರೂ ಕನ್ನಡ ಭಾಷೆ ಕಲಿಯದೆ ಸುಖವಾಗಿ ಜೀವನ ನಡೆಸಬಹುದು.  ಕನ್ನಡಿಗರು ಎಷ್ಟು ಸಂಪನ್ನ ಮಂದಿಯೆಂದರೆ ಅನ್ಯಭಾಷಿಕರಿಗೆ ಕನ್ನಡ ಕಲಿಸುವ ಬದಲು ತಾವೇ ಅವರ ಭಾಷೆ ಕಲಿತು, ಅವರೊಂದಿಗೆ ಅದೇ ಭಾಷೆಯಲ್ಲಿ ವ್ಯವಹರಿಸುತ್ತಾರೆ. ವಿಕಾಸ ಹೊಸಮನಿ ಬರಹ ನಿಮ್ಮ ಓದಿಗೆ

read more
ಅಂತೂ ಇಂತೂ ಗ್ರೆಗರಿಯವರಿಗೆ ತೀರ್ಪು ಸಿಕ್ಕಿತು

ಅಂತೂ ಇಂತೂ ಗ್ರೆಗರಿಯವರಿಗೆ ತೀರ್ಪು ಸಿಕ್ಕಿತು

ಎಂಆರ್ ಪಿಎಲ್ ಕಂಪೆನಿಗೆ ತಮ್ಮ ಕೃಷಿ ಜಮೀನನ್ನು ಬಿಟ್ಟುಕೊಡುವುದಿಲ್ಲ ಎಂದು ಹೋರಾಟ ನಡೆಸಿದವರು ಗ್ರೆಗರಿ ಪತ್ರಾವೋ. ಕೊನೆಗೆ ತಮ್ಮ ಫಲವತ್ತಾದ ಕೃಷಿ ಜಮೀನನ್ನು ಬಿಟ್ಟುಕೊಡುವುದು ತೀರಾ ಅನಿವಾರ್ಯವಾದಾಗ, ಜುಜುಬಿ ಬೆಲೆಗೆ ಭೂಮಿ ಬಿಟ್ಟುಕೊಡುವುದಿಲ್ಲ ಎಂಬ ಹೋರಾಟವನ್ನು ನಿರಂತರವಾಗಿ ನಡೆಸಿದವರು. ಅವರ ಹೋರಾಟದ ದೀರ್ಘ ಹಾದಿಯೊಂದಕ್ಕೆ ಈಗ ವಿರಾಮ ಬಿದ್ದಿದೆ. ಸುಪ್ರೀಂ ಕೋರ್ಟ್ ನಲ್ಲಿಅವರು ಎಂಆರ್ ಪಿಎಲ್ ವಿರುದ್ಧ ದಾಖಲಿಸಿದ ಪ್ರಕರಣದಲ್ಲಿ ತೀರ್ಪು ಅವರ ಪರವಾಗಿ ಬಂದಿದೆ.ಗ್ರೆಗರಿ ಕ್ರಮಿಸಿದ ಹಾದಿಯ ಕುರಿತು ಸ್ಥೂಲವಾಗಿ ಬರೆದಿದ್ದಾರೆ ಕೋಡಿಬೆಟ್ಟು ರಾಜಲಕ್ಷ್ಮಿ

read more
ರಾಣಿಯಾಗುವುದೆಂದರೆ ಫೇರಿಟೇಲ್ ನಷ್ಟು ಸುಲಭವಲ್ಲ

ರಾಣಿಯಾಗುವುದೆಂದರೆ ಫೇರಿಟೇಲ್ ನಷ್ಟು ಸುಲಭವಲ್ಲ

ಇಡೀ ಭೂಮಂಡಲದಲ್ಲಿ ರಾಣಿಯೆಂದರೆ ‘ಇಂಗ್ಲೆಂಡಿನ ರಾಣಿ’ ಎಂದೇ ಮನೆಮಾತಾಗಿ, ಆ ಪದಕ್ಕೊಂದು ಜೀವತುಂಬಿದ್ದ ಶತಮಾನದ ಹತ್ತಿರದ ಜೀವವೊಂದು ಕೊನೆಯುಸಿರೆಳೆದಿತ್ತು. ಜಗತ್ತನ್ನು ಅದೆಷ್ಟೋ ಬದಲಾವಣೆಗಳಲ್ಲಿ ಎಲಿಝೆಬೆತ್ ಸ್ವೀಕರಿಸಿದಂತೆಯೇ, ಅವಳ ಸಾವು ಕೂಡ ಹಲವು ತಲೆಮಾರುಗಳ ಜನರಲ್ಲಿ ವೈವಿಧ್ಯಮಯ ಸಂವೇದನೆಗಳನ್ನು ಮೂಡಿಸಿತು. ರಾತ್ರಿಯ ವೇಳೆಗೆ ಲಂಡನ್ನಿನ ಬಕಿಂಗ್ಯಾಮ್ ಅರಮನೆಯ ಬಳಿ ಮಳೆಯನ್ನೂ ಲೆಕ್ಕಿಸದೆ ತಂಡೋಪ ತಂಡವಾಗಿ ಸೇರಿದ ಜನ ರಾಣಿಯ ಸಾವಿಗಾಗಿ ಅಶ್ರುಧಾರೆ ಸುರಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಎಲಿಝೆಬೆತ್ ತನ್ನ ಗಂಡ ಫಿಲಿಪ್ಪನನ್ನು ಸೇರಿದ ಬಗ್ಗೆ, ಆಕೆ ದೇಶಕ್ಕಾಗಿ ತನ್ನ ಬದುಕನ್ನೇ ಮೀಸಲಿಟ್ಟು ಸೇವೆ ಮಾಡಿದ ಬಗ್ಗೆ ಕೊಂಡಾಡುವ ಕವನಗಳು ಹರಿದುಬಂದವು. ಡಾ. ಪ್ರೇಮಲತ ಬಿ. ಅವರ ಬರಹವೊಂದು ಇಲ್ಲಿದೆ. 

read more
ನೆನಪುಗಳ ಮೆರವಣಿಗೆಯಲ್ಲಿ ಸೂಕ್ಷ್ಮಮತಿ ತೇಜಸ್ವಿಯವರ ಕುತೂಹಲಗಳು

ನೆನಪುಗಳ ಮೆರವಣಿಗೆಯಲ್ಲಿ ಸೂಕ್ಷ್ಮಮತಿ ತೇಜಸ್ವಿಯವರ ಕುತೂಹಲಗಳು

ನಾನು ಮೂಡಿಗೆರೆ ಸಂತೆಗೆ ಯಾವಾಗಲೋ ಒಂದೆರಡು ಸಲ ಹೋಗಿರುವೆನು. ಅದೂ ಈಶಾನ್ಯೆ ಸ್ಕೂಲಿಗೆ ಹತ್ತಿರವಿದೆಯೆಂದು. ‘ಫ್ರೆಶ್’ ತರಕಾರಿ ಸಿಕ್ಕುತ್ತೆಂದು. ಒಟ್ಟಿನಲ್ಲಿ ಒಂದು ತಿರುಗಾಟ ಅಂತ ಅಷ್ಟೆ. ಇವರಿಗೆ ಸಂತೆಗೆ ಹೋಗೋದು ಏನೇನೂ ಇಷ್ಟವಿರುತ್ತಿರಲಿಲ್ಲ. ಆದರೆ ಇದ್ದಕ್ಕಿದ್ದಂತೆ ಸಂತೆಗೆ ಹೋಗಿ ಬರ್‍ತೀನಿ ಅಂತ ಒಂದು ಬ್ಯಾಗ್ ಹಿಡಿಕೊಂಡು ಹೋಗೋರು. ಅಲ್ಲಿ ಅದೆಂತೆಂಥ ಮೀನುಗಳು ಇರ್‍ತವೆ ಅಂತ! ನೋಡ್ತನೇ ಇರಬೇಕು! ಅನ್ನಿಸುತ್ತೆ ಅಂತಿದ್ರು. ಕಳೆದ ರಜೆಯಲ್ಲಿ ಮೊಮ್ಮಗಳು ಪುಟಾಣಿ ವಿಹಾ ಯಾರದೋ ಜೊತೆಯಲ್ಲಿ ಸಂತೆಗೆ ಹೋದವಳು ಅವಳೂ ಹಾಗೆ ‘ತ್ರಿಲ್’ ಆಗಿದ್ದಳಂತೆ. ಇಂದು ಪೂರ್ಣಚಂದ್ರ ತೇಜಸ್ವಿಯವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ರಾಜೇಶ್ವರಿ ತೇಜಸ್ವಿಯವರು ಹಂಚಿಕೊಂಡ ಕೆಲವು ನೆನಪುಗಳು ನಿಮ್ಮ ಓದಿಗೆ

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ