ಊರು ಬಿಟ್ಟವರ ಹಾಡುಪಾಡು
ಪಟ್ಟಣದಲ್ಲಿ ಸೈಟು ಮಾಡಿ, ದೊಡ್ಡ ದೊಡ್ಡ ಬಂಗಲೆ ಕಟ್ಟುವುದನ್ನೇ ಜೀವನದ ಅತಿದೊಡ್ಡ ಯಶಸ್ಸು ಎಂಬ ಹುಸಿ ಸುಳ್ಳನ್ನು ಮುಗ್ಧ ಮನಸ್ಸುಗಳಲ್ಲಿ ಬಿತ್ತಲಾರಂಭಿಸಿಬಿಟ್ಟರು. ಅದರ ಪರಿಣಾಮ ಬಾಗಿಲು ಹಾಕಿದ ದೊಡ್ಡ ದೊಡ್ಡ ಬಂಗಲೆಗಳಲ್ಲಿ ವೈಚಾರಿಕತೆ, ಸಾಂಸ್ಕೃತಿಕ ನೆಲೆಗಟ್ಟುಗಳು ಮಾಯವಾಗಿ, ಹಳ್ಳಿಯ ಹೆಂಚಿನ ಮನೆಗಳಲ್ಲೇ ಉಳಿದುಬಿಟ್ಟವು. ಹಳ್ಳಿಗಳಲ್ಲಿ ಹಾಗಿರಲಿಲ್ಲ. ತಾತನಿಗೆ ಅಷ್ಟು ವಯಸ್ಸಾದರೂ ಅವನೇ ಮನೆಯ ಯಜಮಾನ, ಅಪ್ಪ ಚಿಕ್ಕಪ್ಪ ದೊಡ್ಡಪ್ಪಂದಿರೆಲ್ಲಾ ತಾತನ ಮಾತನ್ನು ಎಂದಿಗೂ ಎತ್ತಾಕುತ್ತಿರಲಿಲ್ಲ.
ಹಳ್ಳಿಯ ಜೀವನ ಮತ್ತು ಪಟ್ಟಣದ ವಾಸದ ನಡುವೆಯಿರುವ ದೊಡ್ಡ ಕಂದಕದ ಕುರಿತು…
ಕಲಾಕ್ಷೇತ್ರದ ಧ್ರುವ ನಕ್ಷತ್ರದಂತೆ ಹೊಳೆದ ಬಿರ್ಜು ಮಹಾರಾಜ್…
ಬಿರ್ಜು ಮಹಾರಾಜರು ಕಥಕ್ ನಿರ್ಧಿಷ್ಟ ಪರಂಪರೆಯಿಂದ ಬಂದವರಾದರೂ ಅವರು ಆ ಕ್ಷೇತ್ರದಲ್ಲಿ ಪ್ರಯೋಗಶೀಲರಾಗಿ ಕೆಲಸ ಮಾಡಿದರು. ಅವರ ವಿಶಿಷ್ಟವಾದ ಶೈಲಿಯಲ್ಲಿ “ಸಮ್” ತೋರಿಸುವ ವಿಧಾನದಲ್ಲಿ ಪರಂಪರೆಗೆ ಹೊಸ ಮಾದರಿ ತಂದರು. ಇದು ಕೆಲವರಲ್ಲಿ ಅಸಮಾಧಾನ ಉಂಟಾದರೂ ತನ್ನ ಬದಲಾವಣೆ ಹೇಗೆ ಕಥಕ್‌ನ ವಿವಿಧ ಕೋನಗಳ ನಿಲುವು ಭಂಗಿಯನ್ನು ಬಳಸಿಕೊಂಡೇ ಆದ ಹೊಸ ಆವಿಷ್ಕಾರ ಎಂದು ಪ್ರತಿಪಾದಿಸಿದಾಗ ವಿರೋಧ ಕರಗಿ ಘರಾಣೆಯ ಹಿರಿಯರಿಂದ ಪ್ರಶಂಸೆ ಬಂತು!
ಇತ್ತೀಚೆಗೆ ನಮ್ಮನ್ನು ಅಗಲಿದ, ಕಥಕ್ ಕ್ಷೇತ್ರದ ಅಪ್ರತಿಮ ಸಾಧಕ ಬಿರ್ಜು ಮಹಾರಾಜ್ ಕುರಿತು ಕೆರೆಮನೆ ಶಿವಾನಂದ ಹೆಗಡೆ ಬರೆದ ಬರಹ ಇಲ್ಲಿದೆ.
ಕನ್ನಡ ಸಿನಿಮಾಗಳ ಸಾಂಸ್ಕೃತಿಕ ಅಭಿವ್ಯಕ್ತಿಯ ಮುಖಗಳು
ನಿರ್ದಿಷ್ಟ ಪ್ರದೇಶ ಹಾಗೂ ನಿರ್ದಿಷ್ಟ ಕಾಲಘಟ್ಟದ ಸಂಸ್ಕೃತಿಯನ್ನು ದೃಶ್ಯಾತ್ಮಕವಾಗಿ ಪ್ರಸ್ತುತಪಡಿಸುವ ಸಿನಿಮಾಗಳು ಸಾಂಸ್ಕೃತಿಕ ನಿರ್ದಿಷ್ಟತೆಯನ್ನು ಗುರುತಿಸಿಕೊಳ್ಳಲು ಸಹಕಾರಿಗಳಾಗಿವೆ. ಹೀಗೆ ಸಂಸ್ಕೃತಿಯನ್ನು ಒಳಗೊಂಡು ರೂಪುಗೊಳ್ಳುವ ಸಿನಿಮಾಗಳು ಸಾಮಾಜಿಕ ಪರಿವರ್ತನೆಗಳನ್ನೂ ಉಂಟುಮಾಡುತ್ತವೆ. ಹಾಗೆ ನೋಡಿದರೆ ಸಿನಿಮಾಗಳು ಜನರನ್ನು ಕ್ಷಿಪ್ರವಾಗಿ ಪ್ರಭಾವಿಸಬಲ್ಲವು. ನಮ್ಮ ನಾಡಿನ ಜನಪರ ಚಳವಳಿಗಳು, ಇತಿಹಾಸ ಮತ್ತು ಸಾಂಸ್ಕೃತಿಕ ವಿಚಾರಗಳು ಕನ್ನಡ ಸಿನಿಮಾಗಳಲ್ಲಿ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿ ಮೂಡಿ ಬಂದಿವೆ…
ಮಹಾಚೈತ್ರ ಮತ್ತು ಸಿರಿಸಂಪಿಗೆ ನಾಟಕಗಳ ವರ್ತಮಾನದ ಓದು
ಡಾ. ಎಚ್. ಎಸ್. ಶಿವಪ್ರಕಾಶ್ ಅವರ ಮಹಾಚೈತ್ರ ಮತ್ತು ಚಂದ್ರಶೇಖರ ಕಂಬಾರರ ಸಿರಿಸಂಪಿಗೆ ನಾಟಕಗಳು ಸಂಧಿಸುವ ಸಾಮಾನ್ಯ ಬಿಂದು, ದೇಸಿ ಪರಂಪರೆಗಳು ಯಜಮಾನ್ಯಕ್ಕೆ ತೋರುವ ಪ್ರತಿರೋಧದ ನೆಲೆಯಲ್ಲಿದೆ. ಸಾಮಾಜಿಕ ಸಾಂಸ್ಕೃತಿಕ ಮತ್ತು ಆರ್ಥಿಕ ಯಾಜಮಾನ್ಯದ ನೆಲೆಗಳನ್ನು ಸೈದ್ಧಾಂತಿಕವಾಗಿ ಮತ್ತು ಕ್ರಿಯಾವಾದಿಯಾಗಿ ಒಂದು ನಾಟಕ ಮುಖಾಮುಖಿಯಾದರೆ, ಇನ್ನೊಂದು ನಾಟಕವು ಯಾಜಮಾನ್ಯ ಸೃಷ್ಟಿಸುವ ಮೇಲುಕೀಳಿನ ಮನೋ ಸಂರಚನೆಗಳನ್ನು ಅದರ ಬೀಜರೂಪದಲ್ಲೇ…
ಲೈವ್‌ಗಳಲ್ಲಿ ಬಂಧಿಯಾದ ನಾದಲೋಕದ ಸುಖ-ದುಃಖ
ಹೊಸ ವರ್ಷ ಹೊಸ ನಿರೀಕ್ಷೆಯ ಈ ಸಂದರ್ಭದಲ್ಲಿ ಸಂಗೀತ ಕಲಾವಿದರು ಬದಲಾದ ಸನ್ನಿವೇಶಗಳ ಕುರಿತು ಆಗಾಗ ವಿಚಾರ ವಿನಿಮಯ ಮಾಡಿಕೊಳ್ಳುವುದುಂಟು. ಲೈವ್ ಕಾರ್ಯಕ್ರಮಗಳ ಇತಿಮಿತಿಗಳ ಕುರಿತ ಸಂವಾದವನ್ನು ಅಕ್ಷರ ರೂಪದಲ್ಲಿ ಪೋಣಿಸಲು ನಡೆಸಿದ ಪ್ರಯತ್ನವಿದು. ಸಂಗೀತದ ಲೈವ್ ಕಾರ್ಯಕ್ರಮಗಳಿದ್ದಾಗ, ಕಲಾವಿದರಿಗೆ ತಯಾರಿ ಮಾಡಿಕೊಳ್ಳಲು ಸಾಕಷ್ಟು ಸಮಯ ದೊರೆಯುತ್ತದೆ. ಆದರೆ ‘ಲೈವ್ʼ ಪ್ರಕ್ರಿಯೆಯ ಮೂಲಕ ಸಂಗೀತದ ವಾತಾವರಣವನ್ನು ಸೃಷ್ಟಿಸುವುದು ಸಾಧ್ಯವೇ ಎಂಬುದರ ಕುರಿತು ಹಿಂದುಸ್ಥಾನೀ ಗಾಯಕಿ ಶ್ರೀಮತಿ ದೇವಿ ಇಲ್ಲಿ ಬರೆದಿದ್ದಾರೆ.
ಪ್ರದರ್ಶನವೋ, ಪರೀಕ್ಷೆಯೋ, ಗಟ್ಟಿಮನಸ್ಸಂತೂ ಮುಖ್ಯ
ಕಳೆದ ವರ್ಷ ಲಾಕ್ ಡೌನ್ ಹೇರಿಕೆಯಾಗಿದ್ದಾಗ, ಕಲಾವಿದರು ಬಹಳವೇ ಕಷ್ಟಪಟ್ಟಿದ್ದರು. ಆರ್ಥಿಕತೆಯೇ ಮುಖ್ಯವಾಗಿರುವ ಈ ಕಾಲದಲ್ಲಿ ಕಲೆಯನ್ನು ಎರಡನೇ ಆದ್ಯತೆಯನ್ನಾಗಿ ಪರಿಗಣಿಸುವುದನ್ನುಕಂಡಾಗ ಬೇಸರವೆನಿಸುವುದು. ಆದರೆ ವಾಸ್ತವವಾಗಿ ಅದು ಸಮಾಜವನ್ನು ಸಂತೈಸುವ ಮಾರ್ಗ. ನಾಟ್ಯಶಾಸ್ತ್ರದ ಶ್ಲೋಕದ ಪ್ರಕಾರ ಅದು ಜನರನ್ನು ತಿದ್ದುವ, ರಂಜನೆಯ ಮೂಲಕ ಅವರಲ್ಲಿ ಮೌಲ್ಯಗಳನ್ನು ಬಿತ್ತುವ ಮಾರ್ಗವಾಗಿದೆ. ಈ ಹಿನ್ನೆಲೆಯಲ್ಲಿ ಯೋಚಿಸುವ ಕಲಾವಿದರ ಮನಸ್ಸು ಗಟ್ಟಿಯಾಗಿರುತ್ತದೆ.
ಸಾಹಿತ್ಯ ಲೋಕದಲ್ಲಿ ‘ಜೋಳವಾಳಿ, ವೇಳೆವಾಳಿ’ಗಳ ಋಣಭಾವ
ದೇಶಸೇವೆಗೆ ನಿಷ್ಠರಾಗಿರುವ ಪಡೆಯನ್ನೇ ಹಿಂದಿನ ಕಾಲದಲ್ಲಿ ರಾಜರು ಕಟ್ಟುತ್ತಿದ್ದರು. ಸಮಯದ ಹಂಗಿಲ್ಲದೆ ಜೀವದ ಹಂಗಿಲ್ಲದೆ ರಾಜ್ಯಕ್ಕಾಗಿ, ರಾಜನ ಕ್ಷೇಮಕ್ಕಾಗಿ ಪ್ರಾಣ ಕೊಡುವವರ ಸಮೂಹವೇ ಇರುತ್ತಿತ್ತು. ಅವರನ್ನು ಜೋಳವ್ಯಾಳಿಗಳು, ವೇಳೆವಾಳಿಗಳು ಎಂದು ಕರೆಯುತ್ತಿದ್ದರು.ಅವರ ಬಗ್ಗೆ ಅನೇಕ ಕಥೆ, ಕವನ ಲಾವಣಿಗಳು ಸೃಷ್ಟಿಯಾಗುತ್ತಿದ್ದವು, ಕನ್ನಡ ಸಾಹಿತ್ಯ ಲೋಕದಲ್ಲಿ ಈ ಎರಡು ಪದಗಳ ಬಳಕೆಯು ಯಾವೆಲ್ಲ ಸಂದರ್ಭಗಳಲ್ಲಿ…
ಹಾರಲು ತವಕಿಸುವ ಮನಸ್ಸಿಗೆ ಪ್ರವಾಸವೆಂಬ ರೆಕ್ಕೆಯಿರಲಿ
ಎಲ್ಲ ಹಕ್ಕಿಗಳಂತೆಯೇ ನನ್ನ ಕಣ್ಣಿಗೆ ಕಾಣಿಸಿದ ಆ ಹಕ್ಕಿ ವಿಶೇಷವಾದುದು ಎಂದು ನನಗೇನೂ ಗೊತ್ತಿರಲಿಲ್ಲ. ಜೀವನದಲ್ಲಿ ಎಷ್ಟೋ ಬಾರಿ ಹೀಗೆಯೇ ಆಗುತ್ತದೆ. ನಮ್ಮೊಡನೆ ಇರುವ ಯಾವುದೋ ವಿಷಯದ ವಿಶೇಷತೆ, ಇನ್ಯಾರೋ ಹೇಳಿದಾಗಲೇ ಅರಿವಾಗುವುದು. ಹಕ್ಕಿಗಳೋ ಸದಾ ವಿಶೇಷ ಕತೆಗಳನ್ನು ತಿಳಿದಿರುತ್ತವೆ. ಯಾಕೆಂದರೆ ಪ್ರವಾಸ ಎಂಬುದು ಅವುಗಳಿಗೆ ವಿಶೇಷವೇ ಅಲ್ಲ. ಆದರೆ ಮನುಷ್ಯರು ಮಾತ್ರ ಪ್ರವಾಸ ಹೋಗಬೇಕಾದರೆ..
ಭಾಷಾ ಕಲಿಕೆಯ ಕುತೂಹಲಕರ ಆಯಾಮಗಳು
ಭಾಷೆಯನ್ನು ಮಕ್ಕಳು ಮಾತನಾಡಲು, ವಿಷಯಗಳನ್ನು ತಿಳಿಯಲು ಮಾತ್ರವೇ ಬಳಸುವುದಿಲ್ಲ. ಭಾಷೆಯನ್ನವರು ಓದುವುದು ಮತ್ತು ಬರೆಯುವುದರ ಮೂಲಕ ಮಾತ್ರವೇ ಕಲಿಯುವುದೂ ಇಲ್ಲ. ಅವರ ಅನುಭವಕ್ಕೆ ನಿಲುಕುವ ಪ್ರತಿಯೊಂದು ವಸ್ತುಗಳು ಮತ್ತು ದೈನಂದಿನ ಅನುಭವಗಳ ಮೂಲಕ ಭಾಷೆಯನ್ನು ಕಲಿಯುತ್ತಾ ಹೋಗುತ್ತಾರೆ. ಎಷ್ಟು ಹೊಸ ಅನುಭವಗಳಿಗೆ ತೆರೆದುಕೊಳ್ಳುವರೋ ಅಷ್ಟು ಹೆಚ್ಚು ಪದ ಸಂಪತ್ತು ಮತ್ತು ಭಾಷಾಜ್ಞಾನ ಅವರಲ್ಲಿ ವೃದ್ಧಿಯಾಗುತ್ತ ಸಾಗುತ್ತದೆ. …









