ಹಾರಲು ತವಕಿಸುವ ಮನಸ್ಸಿಗೆ ಪ್ರವಾಸವೆಂಬ ರೆಕ್ಕೆಯಿರಲಿ
ಎಲ್ಲ ಹಕ್ಕಿಗಳಂತೆಯೇ ನನ್ನ ಕಣ್ಣಿಗೆ ಕಾಣಿಸಿದ ಆ ಹಕ್ಕಿ ವಿಶೇಷವಾದುದು ಎಂದು ನನಗೇನೂ ಗೊತ್ತಿರಲಿಲ್ಲ. ಜೀವನದಲ್ಲಿ ಎಷ್ಟೋ ಬಾರಿ ಹೀಗೆಯೇ ಆಗುತ್ತದೆ. ನಮ್ಮೊಡನೆ ಇರುವ ಯಾವುದೋ ವಿಷಯದ ವಿಶೇಷತೆ, ಇನ್ಯಾರೋ ಹೇಳಿದಾಗಲೇ ಅರಿವಾಗುವುದು. ಹಕ್ಕಿಗಳೋ ಸದಾ ವಿಶೇಷ ಕತೆಗಳನ್ನು ತಿಳಿದಿರುತ್ತವೆ. ಯಾಕೆಂದರೆ ಪ್ರವಾಸ ಎಂಬುದು ಅವುಗಳಿಗೆ ವಿಶೇಷವೇ ಅಲ್ಲ. ಆದರೆ ಮನುಷ್ಯರು ಮಾತ್ರ ಪ್ರವಾಸ ಹೋಗಬೇಕಾದರೆ..
ಭಾಷಾ ಕಲಿಕೆಯ ಕುತೂಹಲಕರ ಆಯಾಮಗಳು
ಭಾಷೆಯನ್ನು ಮಕ್ಕಳು ಮಾತನಾಡಲು, ವಿಷಯಗಳನ್ನು ತಿಳಿಯಲು ಮಾತ್ರವೇ ಬಳಸುವುದಿಲ್ಲ. ಭಾಷೆಯನ್ನವರು ಓದುವುದು ಮತ್ತು ಬರೆಯುವುದರ ಮೂಲಕ ಮಾತ್ರವೇ ಕಲಿಯುವುದೂ ಇಲ್ಲ. ಅವರ ಅನುಭವಕ್ಕೆ ನಿಲುಕುವ ಪ್ರತಿಯೊಂದು ವಸ್ತುಗಳು ಮತ್ತು ದೈನಂದಿನ ಅನುಭವಗಳ ಮೂಲಕ ಭಾಷೆಯನ್ನು ಕಲಿಯುತ್ತಾ ಹೋಗುತ್ತಾರೆ. ಎಷ್ಟು ಹೊಸ ಅನುಭವಗಳಿಗೆ ತೆರೆದುಕೊಳ್ಳುವರೋ ಅಷ್ಟು ಹೆಚ್ಚು ಪದ ಸಂಪತ್ತು ಮತ್ತು ಭಾಷಾಜ್ಞಾನ ಅವರಲ್ಲಿ ವೃದ್ಧಿಯಾಗುತ್ತ ಸಾಗುತ್ತದೆ. …
ಕ್ರಾಂತಿಗೆ ಹೊಳಪು ನೀಡಿದ ಮಾತೆ ಸಾವಿತ್ರಿ ಬಾಯಿ ಫುಲೆ
ಸ್ವತಂತ್ರಪೂರ್ವ ಭಾರತದ ಪ್ರಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆಯವರು ಮಹಿಳೆಯರ ಸಮಸ್ಯೆಗಳನ್ನು ಆಲಿಸುವುದಕ್ಕಾಗಿ 1852 ರಲ್ಲಿ ಸ್ಥಾಪಿಸಿದ್ದ ‘ಮಹಿಳಾ ಸೇವಾ ಮಂಡಳಿ’ಯು ದೇಶದ ಮೊಟ್ಟಮೊದಲ ಮಹಿಳಾ ಸೇವಾ ಸಂಸ್ಥೆ ಎನಿಸಿತು. ಟೀಕೆಗಳನ್ನು, ಆರೋಪಗಳನ್ನು ಸಮರ್ಥವಾಗಿ ಮಾತ್ರವಲ್ಲ ಬಹಳ ತಾಳ್ಮೆಯಿಂದ ಎದುರಿಸಿದವರು. ಸಂಕ್ರಾಮಿಕ ರೋಗ ಪ್ಲೇಗ್ನಿಂದಾಗಿ ಸಾಲು ಸಾಲು ಸಾವು-ನೋವುಗಳು ಸಂಭವಿಸಿದಾಗ ಸಾವಿತ್ರಿ ಹಾಗೂ ಅವರ ಮಗ ಯಶವಂತ…
ಸಮಯದ ಆಡಿಟಿಂಗ್ ಎಂಬೊಂದು ಲಾಭದಾಯಕ ಸಂಗತಿ
ಡಿಜಿಟಲ್ ಲೋಕವು ಬದುಕಿಗೆ ವೇಗವನ್ನು ಕೊಡುತ್ತದೆ. ಎಲ್ಲಿಗೋ ಪ್ರಯಾಣಿಸುವುದಕ್ಕಾಗಿ ಸಮಯವನ್ನು ಮೀಸಲಿಡಬೇಕಿಲ್ಲ, ಯಾವುದೋ ವಸ್ತುವನ್ನು ತರಿಸಿಕೊಳ್ಳಲು ಸಮಯವನ್ನು ಖರ್ಚು ಮಾಡಬೇಕಿಲ್ಲ. ತಿಂಡಿ ತಿನಿಸು, ಉಡುಪು, ಸಾಮಾಜಿಕ ಚರ್ಚೆಗಳು, ಕಾರ್ಯಕ್ರಮಗಳು, ಸಂಭ್ರಮಗಳೆಲ್ಲವೂ ಡಿಜಿಟಲ್ ಲೋಕವನ್ನು ಸರ ಸರನೇ ಪ್ರವೇಶಿಸಿಬಿಟ್ಟಿವೆ. ಹೀಗೆ ನಮಗೆ ಉಳಿತಾಯವಾಗುವ ಸಮಯವೆಷ್ಟು, ಅದನ್ನು ನಾವು ಹೇಗೆಲ್ಲಾ…
ಸಂದರ್ಶಕರಿಂದ ತಪ್ಪಿಸಿಕೊಂಡ ಕವಿ ತಿರುಮಲೇಶರ ಸ್ವಯಂ ಸಂದರ್ಶನ
ದೂರದ ಹೈದರಾಬಾದಿನಲ್ಲಿ ತಮ್ಮ ಜೀವಿತದ ಬಹುಭಾಗವನ್ನು ಕಳೆದಿರುವ ಕನ್ನಡದ ಹಿರಿಯ ಕವಿ ಕೆ.ವಿ. ತಿರುಮಲೇಶರು ತಮ್ಮ ಕುರಿತು ಬಹಳ ಕಮ್ಮಿ ಮಾತನಾಡಿದವರು. ಬರಹಗಾರನಿಗಿಂತ ಬರಹದ ಕುರಿತು ಹೆಚ್ಚು ಚರ್ಚೆಯಾಗಬೇಕೆಂದು ಹೇಳುತ್ತಲೇ ಬಂದವರು. ಬರಹಗಾರ ಆತ್ಮ ಚರಿತ್ರೆಯನ್ನೂ ಕೂಡಾ ಬರೆಯಬಾರದು ಎಂದು ಪ್ರತಿಪಾದಿಸುವವರು. ಆದರೆ ಇತ್ತೀಚೆಗೆ ಕೊಂಚ ಮನಸ್ಸು ಬದಲಿಸಿ ತಮ್ಮದೊಂದು ಕಲ್ಪಿತ ಸಂದರ್ಶನವನ್ನು ತಾವೇ…
ಇದೇನಿದು!! ಸಂತೆ, ಕೋವಿ…
ಮನೆಗೆ ಬಂದವರು ಬಾ ಇಲ್ಲಿ ಎಂದು ಕರೆದರು. ಓದು ಈ ಚೀಟಿ ಎಂದು ಕೊಟ್ಟರು. ಅಲ್ಲೊಬ್ಬ ವೈದ್ಯ ಮಹಾಶಯ ಮನುಷ್ಯರ ನೆರಳಿಗೆ ‘ಟ್ರೀಟ್ಮೆಂಟ್’ ಕೊಡುತ್ತಿದ್ದನಂತೆ. ಅವರಿಗೆ ಚಿಕ್ಕಮಗಳೂರಿನಲ್ಲಿ ಸನ್ಮಾನವಂತೆ. ಅವರನ್ನು ನೋಡಲು ನೂಕು ನುಗ್ಗಲಾಟ ಸಂತೆಯಲ್ಲಿ. ಎಷ್ಟು ನಿಜ, ಎಷ್ಟು ಸುಳ್ಳು, ವಾಸಿಯಾಗುವುದಾದರೂ ಹೇಗೆ. ಇಂಥವರಿಗೂ ರೋಗಿಗಳ ನುಗ್ಗಾಟವಿರುತ್ತೆಲ್ಲ ಅಂದರು. ಮಾರನೆಯ ದಿನದ ಪತ್ರಿಕೆ ನೋಡಿ ಇನ್ನೂ ಕುತೂಹಲ, ಆಶ್ಚರ್ಯ, ಆ ವೈದ್ಯ ಮಹಾಶಯನಿಗೆ ಕೊಟ್ಟ ಸನ್ಮಾನದ ಬಗ್ಗೆ, ಪತ್ರಿಕೆಯಲ್ಲಿ ದೊಡ್ಡದಾಗಿ ವರದಿಯಾಗಿದೆ! ಮೂಡಿಗೆರೆ ಹ್ಯಾಂಡ್ ಪೊಸ್ಟ್ ನಲ್ಲಿ ರಾಜೇಶ್ವರಿ ತೇಜಸ್ವಿ ಬರಹ
ಕಾರ್ ಕಾರ್ ಕಾರ್ ಎಲ್ನೋಡಿ ಕಾರ್
ಕೆಟ್ಟ ಮೇಲೆ ಬುದ್ಧಿ ಬಂತು ಅಂತಾರಲ್ಲ ಹಾಗೆ ನಾನು ಈ ಘಟನೆಯಾದಮೇಲೆ ಕಾರೊಳಗೆ ಇಂಥಾ ಡೇಂಜರಸ್ ಐಟಮ್ ಗಳನ್ನು ತೆಗೆದುಕೊಂಡು ಹೋಗುತ್ತಿರಲಿಲ್ಲ. ಸಿಕ್ಕಾಪಟ್ಟೆ ಪ್ರೀತಿಯಿಂದ ಇವನು ನೋಡಿಕೊಳ್ಳುತ್ತಿದ್ದ ಕಾರು ನಮ್ಮನ್ನ ಅಕ್ಕ ಪಕ್ಕದ ದೇಶಗಳಿಗೆ ಸುಖವಾಗಿ ಕರೆದುಕೊಂಡು ಹೋಗಿ ಬರುತ್ತಿತ್ತು. ಸ್ವಲ್ಪ ವರ್ಷಗಳಾದಮೇಲೆ ಒಂದು ದಿನ ಬೆಳಗ್ಗೆ ಇವನು ನನ್ನನ್ನು ಸ್ಕೂಲಿಗೆ ಬಿಡುವಾಗ ಕಾರಿನಲ್ಲಿ ಏನೋ ಕಟ್ ಕಟ್ ಕಟ್ ಎಂದು ಸದ್ದಾಯಿತು. “ಏನೋ ಸಮಸ್ಯೆ ಆಗಿದೆ, ನಿನ್ನ ಬಿಟ್ಟಮೇಲೆ ಹಾಗೇ ಸೀದಾ ಟೊಯೋಟಾ ಸರ್ವೀಸ್ ಸೆಂಟರ್ಗೆ ಹೋಗಿ…
ಯಂತ್ರವೂ, ರಿಪೇರಿ ಡ್ರೆಸ್ಸೂ…
ಒಂದು ಸಲ ಕವಿತಾ ಲಂಕೇಶ್ ಮತ್ತು ಗೌರಿ ಲಂಕೇಶ್ ಮನೆಗೆ ಬರುತ್ತೇವೆಂದು ತಿಳಿಸಿದರು. ಕಿರಗೂರಿನ ಗಯ್ಯಾಳಿಗಳು ಸಿನೆಮಾ ಮಾಡುವುದರ ಬಗ್ಗೆ ಮಾತಾಡಬೇಕೆಂದು. ಅವತ್ತು ನನ್ನ ಮಹಾರಾಜ ಮಿಕ್ಸಿ, ಕೆಲಸ ಮಾಡುತ್ತಿದ್ದಾಗ ಕರ್ಕಶ ಸದ್ದಿನೊಂದಿಗೆ ಗಕ್ಕನೆ ನಿಂತು ಹೋಯಿತು. ಮಹಡಿ ಮೇಲಿದ್ದ ಇವರಿಗೆ ಆ ಕರ್ಕಶ ಸದ್ದಿನಿಂದಲೇ ಗೊತ್ತಾಗಿತ್ತು ಎಲ್ಲ. ಸರಿರಾತ್ರಿ ಹನ್ನೆರಡೂವರೆ ಗಂಟೆಗೆ ಕೆಳಗೆ ಬಂದು ಮಿಕ್ಸಿಯನ್ನು ಬಿಚ್ಚಿ ನೋಡಿದ್ದಾರೆ. ಬಳಿಕ ಎಮರಿ ಪೇಪರ್ ನಲ್ಲಿ ತಿಕ್ಕಿ ಕ್ಲೀನ್ ಮಾಡಿ ಹಾಕಿದ್ರು.. ಅವರಿಗೆ ನನ್ನ ಮೇಲೆ ಪ್ರೀತಿ ಎನ್ನುವುದಕ್ಕಿಂತ ಯಂತ್ರದ ಬಗ್ಗೆ ಕುತೂಹಲ. ರಾಜೇಶ್ವರಿ ತೇಜಸ್ವಿ ಬರೆಯುವ ಮೂಡಿಗೆರೆ ಹ್ಯಾಂಡ್ ಪೋಸ್ಟ್.
ಬೀಸುಕಲ್ಲು ಸಾಗಿಸಿದ ಕಥೆ
ಊಟ ಉಪಚಾರವಾದ ಮೇಲೆ ನಾನು ಶ್ರೀದೇವಿ ಜೊತೆ ಅಡುಗೆ ಮನೆ ಸೇರಿದೆ. ನೋಡ್ತೀನಿ ಬಿಸೋಕಲ್ಲು ಒಂದು ಸಿದ್ಧವಾಗಿದೆ! ಒಮ್ಮೆಗೇ ನಾವಿಬ್ಬರು ಮಿಂಚಿನ ಸಂಚಾರವಾದಂತೆ ಕಾರ್ಯಪ್ರವೃತ್ತರಾದೆವು. ಇಬ್ಬರಿಗೂ ಒಂದೇಸಲ ಒಟ್ಟಿಗೇ ಪರಿಸ್ಥಿತಿಯ ಬಗ್ಗೆ ಜ್ಞಾನೋದಯವಾಯಿತು. ತೇಜಸ್ವಿಗೆ ಕಲ್ಲು ಗೋಚರಿಸದಂತೆ ಗೊತ್ತಾಗದಂತೆ ನಮ್ಮ ಮನೆಗೆ ಸಾಗಿಸುವುದಾದರೂ ಹೇಗೆ. ಕೊನೆಗೊಂದು ಉಪಾಯ ಮಾಡಿದೆವು.
ಮೂಡಿಗೆರೆ ಹ್ಯಾಂಡ್ ಪೋಸ್ಟ್ ನಲ್ಲಿ ರಾಜೇಶ್ವರಿ ತೇಜಸ್ವಿ ಬರೆದ ಬರಹ.








