ಕಾಡುಕೋಳಿ: ಡಾ. ಎಸ್.ವಿ. ನರಸಿಂಹನ್ ಸರಣಿ
ಇನ್ನು ಈ ಕಾಡುಕೋಳಿಗಳನ್ನು ಸಾಕಿ ಬೆಳೆಸುವುದು ಅಸಾಧ್ಯ ಎನ್ನುವುದು ನಿಮಗೆ ತಿಳಿದೇ ಇದೆ. ಹಾಗಿರುವಾಗ ಕೋಳಿಗಳನ್ನು ಸಾಕಿ ಬೆಳೆಸುತ್ತಾರಲ್ಲ ಅದು ಹೇಗೆ ಎಂದು ನೀವು ಕೇಳಬಹುದು. ಗೂಡಿನಲ್ಲಿ ಸಾಕಿ ಬೆಳೆಸುವ ಕೋಳಿಗಳು, ಕೆಂಪು ಕಾಡುಕೋಳಿ ಎಂಬ ಮತ್ತೊಂದು ಪ್ರಭೇದದ ಪಕ್ಷಿ. ಕೆಂಪು ಕಾಡುಕೋಳಿಗಳು ಭಾರತದ ಉತ್ತರ ಮತ್ತು ಪೂರ್ವ ಭಾಗದಲ್ಲಿರುವ ರಾಜ್ಯಗಳ ಹಾಗೂ ಪೂರ್ವ ಏಶಿಯಾ ದೇಶಗಳ ಕಾಡುಗಳಲ್ಲಿ ಮಾತ್ರ ಕಂಡುಬರುವ ಹಕ್ಕಿಗಳು. ಸುಮಾರು 8-10 ಸಾವಿರ ವರ್ಷಗಳಿಂದಲೂ, ಪ್ರಪಂಚದ ನೂರಾರು ದೇಶಗಳಲ್ಲಿ, ಮೊಟ್ಟೆ ಹಾಗೂ ಮಾಂಸಕ್ಕಾಗಿ ಸಾಕುತ್ತಿರುವುದು ಇದೇ ಕೆಂಪು ಕಾಡುಕೋಳಿಗಳನ್ನು ಎಂದರೆ ನಿಮಗೆ ಆಶ್ಚರ್ಯವಾಗಬಹುದು!
ಡಾ. ಎಸ್.ವಿ. ನರಸಿಂಹನ್ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿ
ಗಣೇಶ ಮೂರ್ತಿಯ ಗಿಫ್ಟ್ ಮಹಿಮೆ…: ಬಸವನಗೌಡ ಹೆಬ್ಬಳಗೆರೆ ಸರಣಿ
ಒಮ್ಮೆ ವೈದ್ಯರ ಬಳಿ ನಮ್ಮ ಕಂಪೆನಿಯ ಬಗ್ಗೆ ಹೆಚ್ಚಿಗೆ ಹೇಳಲು ಹೋಗಿ ಅವರಿಂದ ಉಗಿಸಿಕೊಂಡಿದ್ದೆ. ಚಿಕ್ಕವನಿದ್ದಾಗಿಂದಲೂ ನಾನು ಮತ್ತೊಬ್ಬರಿಂದ ಹೇಳಿಸಿಕೊಳ್ಳುವುದಾಗಲಿ, ಬಯ್ಯಿಸಿಕೊಳ್ಳುವ ಕೆಲಸ ಮಾಡಿರಲಿಲ್ಲ. ಒಂದೊಮ್ಮೆ ಈ ಕೆಲಸದಲ್ಲಿ ಯಾರಾದ್ರೂ ಏನಾದ್ರೂ ಅಂದರೆ ಕೆಲಸವನ್ನು ಬಿಟ್ಟು ಹೋಗುವಷ್ಟು ಸಿಟ್ಟು ಬರುತ್ತಿತ್ತು. ಆದರೆ ನನಗೆ ಜೀವನದಲ್ಲಿ ಸೆಟ್ಲ್ ಆಗಬೇಕೆಂಬ ಮನೋಭಿಲಾಶೆ ಇದ್ದುದರಿಂದ ಎಷ್ಟೇ ಒತ್ತಡ ಬಂದರೂ ನಾನು ಸಹಿಸಿಕೊಳ್ಳುತ್ತಿದ್ದೆ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಅರವತ್ತನೆಯ ಕಂತು ನಿಮ್ಮ ಓದಿಗೆ
ಬ್ಯಾಟಿ ಬಸಮ್ಮನ ಕತೀ ಕೇಳ್ರಿ…: ಸುವರ್ಣ ಚೆಳ್ಳೂರು ಸರಣಿ
ನಾನು ಹಿಂಗ ನನ್ನ ಬದುಕನ್ನ ನಾನಾ ಕಟ್ಟಿಗ್ಯಂಡು ದುಡ್ಯಾಕತೀನಿ, ಹೆಣಮಕ್ಕಳಂದ್ರ ಬರೀ ಅಂದ ಚಂದ ಮೈ ಬಣ್ಣ ಅನ್ಕೊಂಡಿರೋರ್ನ ಮಿರ್ಚಿನ ಬಿಸಿ ಎಣ್ಯಾಗ ಎದ್ದಿದಂಗ ಎದ್ದಿ ಕಳಸ್ತಿನಿ, ದಾರಿಯೊಳಾಗ ದಿಕ್ಕಿರಲಾರದ ಸಿಕ್ಕ ಈ ರಾಮಪ್ಪಗೂ ನನಗೂ ಕತಿ ಕಟ್ಟತಾರ ಆದ್ರ, ತಲಿ ಸರಿ ಇಲ್ಲದಿರೊ ಆತಗ ಬೇಕಾಗಿರಾದು ಎರಡೊತ್ತಿನ ಊಟ ಅಷ್ಟ! ಎರಡಕ್ಷರ ಗೊತ್ತಿರೊ ನನಗ, ಯಾವ ಜಾತಿ ಜಿಡ್ಡಿನ ಮ್ಯಾಗೂ ನಂಬಿಕಿ ಇಲ್ಲ. ಊರಿನ್ಯಾರು ಅದೆಷ್ಟSS ಕತಿ ಕಟ್ಟಿದರೂನು ನಾನು ನನ್ನ ಕತಿನ ನಾನೇ ಬರಿಯಾಕಿ’ ಅಂತ ಮತ್ತೊಮ್ಮೆ ಜೋರಾಗಿ ನಗತೊಡಗಿದ್ಲು. ಆಕಿ ಮಾತ್ ಕೇಳಿ ಮೈ ಜುಮ್ಮಂದಂಗಾತು.
ಸುವರ್ಣ ಚೆಳ್ಳೂರು ಬರೆಯುವ “ಆಕಿ” ಸರಣಿಯ ಒಂಭತ್ತನೆಯ ಬರಹ
ಮೆಕ್ಸಿಕೋ ದೇಶದ ಕವಿ ವಿಕ್ಟರ್ ಡಿ ಲಾ ಕ್ರೂಜ಼್ ಕಾವ್ಯ ಪರಿಚಯ: ಎಸ್. ಜಯಶ್ರೀನಿವಾಸ ರಾವ್ ಸರಣಿ
ಜ಼ಪೊಟೆಕ್-ನಲ್ಲಿ ಅವರ ಭಾಷೆಯನ್ನು ‘ಡೈಡ್ಕ್ಸಾಜಾ’ (Diidxazá) ಎಂದು ಕರೆಯಲಾಗುತ್ತದೆ, ಇದು “ನಾಲಿಗೆ” ಮತ್ತು “ಮೋಡ” ಪದಗಳನ್ನು ಸಂಯೋಜಿಸಿ “ಮೋಡಗಳ ಭಾಷೆ” ಎಂಬ ಅರ್ಥ ಬರುವ ಪದವಾಗಿದೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಮೆಕ್ಸಿಕೋ (Mexico) ದೇಶದ ಜ಼ಪೊಟೆಕ್ ಮೂಲಜನಾಂಗಕ್ಕೆ ಸೇರಿದ ಜ಼ಪೊಟೆಕೋ (Zapoteco) ಭಾಷಾ ಕವಿ ವಿಕ್ಟರ್ ಡಿ ಲಾ ಕ್ರೂಜ಼್-ರವರ (Victor De La Cruz, 1948-2015) ಕಾವ್ಯದ ಕುರಿತ ಬರಹ
ಕಂಚುಕುಟಿಗ: ಡಾ. ಎಸ್.ವಿ. ನರಸಿಂಹನ್ ಸರಣಿ
ಕಂಚುಕುಟ್ಟಿಗಗಳಿಗೆ ಹಣ್ಣುಗಳೆಂದರೆ ಬಹಳ ಇಷ್ಟ, ಅದರಲ್ಲೂ ನಗರವೇ ಆಗಿರಲಿ, ಗ್ರಾಮಾಂತರ ಪ್ರದೇಶವೇ ಆಗಿರಲಿ, ಯಾವುದೇ ಮರವಿರಬಹುದು, ಅದರಲ್ಲೂ ಅತ್ತಿ, ಆಲ, ಅರಳಿ, ಬಸರಿ ಹಣ್ಣುಗಳೆಂದರೆ, ಗುಂಪಾಗಿ ಬಂದು ಔತಣ ಕೂಟದಲ್ಲಿ ಭಾಗವಹಿಸುತ್ತವೆ; ಅಲ್ಲದೆ ಕೀಟಗಳು, ಸಣ್ಣ ಜೀವಿಗಳು ಮತ್ತು ಹೂ ಮಕರಂದವೂ ಇವುಗಳ ಆಹಾರದ ಪಟ್ಟಿಯಲ್ಲಿ ಸೇರಿವೆ. ಮಹಾ ಬಕಾಸುರ ಕೂಡ! ಇವು ಮಕರಂದವನ್ನು ಹೀರುವಾಗ, ಕೊಕ್ಕಿನ ಬುಡದಲ್ಲಿರುವ ಕೂದಲಿನಲ್ಲಿ ಪರಾಗಗಳು ಅಂಟಿಕೊಳ್ಳುತ್ತವೆ.
ಡಾ. ಎಸ್.ವಿ. ನರಸಿಂಹನ್ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ ಕಂಚುಕುಟಿಗ ಹಕ್ಕಿಗಳ ಕುರಿತ ಬರಹ ಇಲ್ಲಿದೆ
ಸಾಹಿತಿಗಳ ಶೋಷಣೆ…: ಎಚ್. ಗೋಪಾಲಕೃಷ್ಣ ಸರಣಿ
ಈಗಲೂ ಅಂದಿನ ನಮ್ಮ ಭಂಡಾಟ ನೆನೆಸಿಕೊಂಡರೆ ಈಗಲೂ ನಾಲ್ಕು ತೆಪರಾಕಿ ನಮಗೆ ನಾವೇ ಕೊಟ್ಕೋಬೇಕು ಅನಿಸುತ್ತೆ ಸರ. ಪಾಪ ಕನ್ನಡದ ಸಾಹಿತಿಗಳು ಬಡವರು, ಕಾಸು ಕಾಸಿಗೆ ಪರದಾಡುವಷ್ಟು ಬಡವರು ಅಂತ ಗೊತ್ತಿದ್ದೂ ಅವರಿಗೆ ಸಂಭಾವನೆ ಕೊಡದೆ ಬರೀ ಅರ್ಧ ಕಪ್ ಕಾಫಿ ಎರಡು ಬಿಸ್ಕತ್ನಲ್ಲಿ ಅವರ ನಾಲ್ಕೈದು ಗಂಟೆ ವೇಸ್ಟ್ ಮಾಡ್ತಾ ಇದ್ದೆವು ಅನ್ನುವ ಸಂಕಟ! ಮೊದಮೊದಲು ಹೀಗೆ ಸಭೆ ನಡೆಸುವಾಗ ಮುಜುಗರ ಅಂತ ಅನಿಸುತ್ತಾ ಇರಲಿಲ್ಲ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ
ಸುಂದರ ಕಾಡಿನ ರೋಚಕ ಕಥೆಗಳು-೧೨: ರೂಪಾ ರವೀಂದ್ರ ಜೋಶಿ ಸರಣಿ
ಬೆಳಗಾಗುವುದೊರಳಗೆ, ಸುದ್ದಿ ಕಾಳ್ಗಿಚ್ಚಿನಂತೇ ಎಲ್ಲೆಡೆ ಹರಡಿತ್ತು. ಈಗ ತನಿಖೆ ಶುರುವಾಯಿತು. ತನಿಖೆಯಲ್ಲಿ ಹೊರಬಿದ್ದ ವರದಿ ನಿಜಕ್ಕೂ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಈ ಕೆಲಸ ಮಾಡಿದವನೊಬ್ಬ ದೊಡ್ಡ ರಾಜಕೀಯ ವಶೀಲಿ ಇರುವ ಮನುಷ್ಯ. ಅಲ್ಲಿಯ ತನಕವೂ ಸುತ್ತೂರಿನವರ ಕಣ್ಣಲ್ಲಿ ಆತ ಪ್ರತ್ಯಕ್ಷ ದೇವರಾಗಿದ್ದ. ಬಡವರ ಪಾಲಿನ ಕಾಮಧೇನು ಎಂದೆಲ್ಲ ಹೆಸರು ಗಳಿಸಿದ್ದ ಆತ, ಮಾಡುತ್ತಿದ್ದ ಈ ಕಳ್ಳತನದ ಕೆಲಸ ಜಗಜ್ಜಾಹೀರಾದ ದಿನ ಎಲ್ಲರೂ ಆತನನ್ನು ಮನಸಾರೆ ಶಪಿಸಿದ್ದರು.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿ
ಅತ್ತಿ ಲಸಮಮ್ಮನೂ… ಜೂನಿ ಬೀರಮ್ಮನೂ…: ಸುವರ್ಣ ಚೆಳ್ಳೂರು ಸರಣಿ
ಇದನ್ನೆಲ್ಲಾ ಕೇಳಿದಾಗೊಮ್ಮೆ ಬೀರಮ್ಮ ಜೋರಾಗಿ ‘ಅಲಲೊ ಜಿಟ್ಟಿಗುಳ, ಬಿಳಿ ಧೋತ್ರ ಉಟ್ಗಂಡು ಮನ್ಯಾಗ ಹೆಂಡತಿ ಮಾಡಿರೊ ಅಡಿಗಿ ಉಂಡ್ಕಂತ, ಊರ್ ಒಣ ರಾಜಕೀಯ ಮಾಡಿಕ್ಯಂತ, ಅವರಿವರಿಂದ ಸುತ್ತಿಗ್ಯಂತ, ಅಜ್ಜ ಮಾಡಿದ್ದ ಆಸ್ತಿಗೆ ಜೋತಾಡಿಕ್ಯಂತ, ಊರಮಂದಿ ಬಗ್ಗೆ ಮಾತಾಡಿಕ್ಯಂತ ಊರ ಕಟ್ಟಿಮ್ಯಾಗ ಕುಂತಗಂಡು ಪಂಟ್ ಹೋಡಿತಿರಾದು ನೀವು. ನನ್ನಂಗ ದುಡದು ಉಂಡಿರೇನ್ ಯಾವತ್ತರಾ? ಅಜ್ಜ ನೆಟ್ಟಿರಾ ಆಲದ ಮರಕ್ಕ ಜೋತಾಡಾದಲ್ಲ, ನೀವು ದುಡದು ಉಣ್ಣಾದು ಕಲ್ತು ಆವಾಗ ನನ್ನ್ ಮುಂದ ಬಂದ್ ಇಂತಾ ಒಣ ಮಾತಾಡ್ರಿ ಕೇಳ್ತಿನಿ’.
ಸುವರ್ಣ ಚೆಳ್ಳೂರು ಬರೆಯುವ “ಆಕಿ” ಸರಣಿ
ಉದ್ದಕೊಕ್ಕಿನ ಸೂರಕ್ಕಿ: ಡಾ. ಎಸ್.ವಿ. ನರಸಿಂಹನ್ ಸರಣಿ
ಉದ್ದಕೊಕ್ಕಿನ ಸೂರಕ್ಕಿಗಳು ಉದುರೆಲೆ, ಕುರುಚಲು ಕಾಡು, ಎಸ್ಟೇಟು, ಮನೆಗಳ ಸುತ್ತಮುತ್ತಲು ಬೆಳೆದ ಹೂದೋಟಗಳಲ್ಲಿ ವಾಸ ಮಾಡುತ್ತವೆ. ಉದ್ದಕೊಕ್ಕಿನ ಸೂರಕ್ಕಿಗಳು ನೆಕ್ಟರಿನೈಡೆ ಕುಟುಂಬಕ್ಕೆ ಸೇರಿದ ಇತರ ಸೂರಕ್ಕಿಗಳಂತೆ ಮಕರಂದಪ್ರಿಯ ಹಕ್ಕಿಗಳು. ಕಾಡಿನಲ್ಲಾಗಲೀ, ಎಸ್ಟೇಟು-ಹೂದೋಟವೇ ಆಗಲೀ, ಮರಗಿಡಗಳಲ್ಲಿ ಹೂವರಳಿದರೆ ಸಾಕು, ಮಕರಂದಕ್ಕಾಗಿ ಎಲ್ಲಿದ್ದರೂ ಹಾಜರು! ಮಕರಂದವನ್ನು ಹೀರುವುದಕ್ಕಾಗಿಯೇ ಹೇಳಿಸಿ ಮಾಡಿಸಿದಂತಿರುವ, ಬಾಗಿದ ಉದ್ದವಾದ ಕೊಕ್ಕು ಮತ್ತು ಕೊಳವೆಯಂತಹ ನಾಲಿಗೆ.
ಡಾ. ಎಸ್.ವಿ. ನರಸಿಂಹನ್ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ ಉದ್ದಕೊಕ್ಕಿನ ಸೂರಕ್ಕಿಗಳ ಕುರಿತ ಬರಹ ಇಲ್ಲಿದೆ










