ನಮ್ಮಮ್ಮ ನಾಗಮ್ಮ: ಸುಮಾ ಸತೀಶ್ ಸರಣಿ
ಒಟ್ನಾಗೆ ಅಮ್ಮ ದೋಡ್ಡ ಸಂಸಾರದಾಗೆ ಸೈ ಅನ್ನುಸ್ಕಂಡಿದ್ದು ಸಣ್ದೇನಲ್ಲ. ಅಪ್ಪ ರಾಜಕೀಯದಾಗಿತ್ತು. ಮನೇನಾಗೆ ಇರ್ತಾ ಇರ್ಲಿಲ್ಲ. ಮಾತುಕತೆಗೆ ಸಿಗುತ್ಲೇ ಇರ್ಲಿಲ್ಲ. ಮನ್ ತುಂಬಾ ಜನ. ಕೆಲ್ಸ. ಮದಮದಲು ಅತ್ತೆದೀರ್ಗೆ ಬಿಗುಮಾನ ಇತ್ತು. ನಮ್ಮ ದೊಡ್ಡತ್ತೆ ಮಾತೂ ಅಂದ್ರೆ ಮನ್ಯಾಗೆ ವೇದವಾಕ್ಯ. ಅವ್ರೂ ಒಂದಿನ ನಾವು ಎಂಟು ಜನ ಯಾವತ್ತಿದ್ರೂ ಒಂದೇನೇಯಾ ಅಂತ ಯೋಳ್ದಾಗ ಅಮ್ಮುಂಗೆ ನಾನೊಬ್ಳೇ ಅಲ್ವಾ ಅಂಗಾರೆ ಹೊರುಗ್ನೋಳು ಅಂತ ಸಂಕಟ ಆಗಿ ಮರೇನಾಗೆ ಕಣ್ಣಾಗೆ ನೀರು ಹಾಕ್ಕಂಡಿದ್ದ್ರು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ತಮ್ಮ ತಾಯಿಯ ಕುರಿತ ಬರಹ ನಿಮ್ಮ ಓದಿಗೆ
ಅಚ್ಚರಿಯ “ಅಭಯಾ” ತೊಟ್ಟ ಮನಸ್ಸು: ದರ್ಶನ್ ಜಯಣ್ಣ ಸರಣಿ
ಮನಸಿನಲ್ಲಿ ಯಾಕೋ ತಳಮಳ ಶುರುವಾಯಿತು. ಇವರಾರೋ ಫೋನ್ ನಂಬರ್ ಶೇರ್ ಮಾಡುತ್ತಿಲ್ಲ, ಐಡೆಂಟಿಟಿ ಶೇರ್ ಮಾಡುತ್ತಿಲ್ಲ, ಕೇವಲ ನನ್ನ ವಿವರ ಪಡೆದು, ಇಲ್ಲಿಗೆ ಕರೆಸಿಕೊಂಡಿದ್ದಾರೆ, ಈಗಲೂ ಕಾಯಿಸುತ್ತಿದ್ದಾರೆ ಎಂದುಕೊಳ್ಳುವಷ್ಟರಲ್ಲಿ ಯಾರೋ ಪುಸ್ತಕಗಳನ್ನು ಹೊತ್ತು ಬರುತ್ತಿರುವುದು ಕಾಣಿಸಿತು. “ಓಹ್, ಇವರೋ ಅಭಯಾ ತೊಟ್ಟ ಮಹಿಳೆ!” ತಮ್ಮ ಮುಖವೊಂದನ್ನ ಕಾಣುವಹಾಗೆ ಬಿಟ್ಟು ಇಡೀ ದೇಹಕ್ಕೆ ಅಭಯಾ ತೊಟ್ಟಿದ್ದಾರೆ. ಕಾರಿನಿಂದ ಹೊರಗಡೆ ಇಳಿದೆ. “ಬುಕ್ಸ್?” ಎಂದು ಕೇಳಿದರು. “ಎಸ್” ಎಂದೆ. ನಲವತ್ತು ರಿಯಾಲ್ ಕೊಡಲು ಹೇಳಿದರು, ಕೊಟ್ಟೆ. ಹಣಪಡೆದು ಪುಸ್ತಕಗಳನ್ನು ಕೊಟ್ಟು ಹೊರಟುಬಿಟ್ಟರು!
ದರ್ಶನ್ ಜಯಣ್ಣ ಬರೆಯುವ “ಸೌದಿ ಡೇಟ್ಸ್” ಸರಣಿಯ ಐದನೆಯ ಕಂತು
ನಮ್ಮ ಕಾಲದ ಕೃಷಿ….: ರೂಪಾ ರವೀಂದ್ರ ಜೋಶಿ ಸರಣಿ
ಈ ಗದ್ದೆ ಕೆಲಸ ನಡೆಯುವಾಗ ನಾನಂತೂ ಮಧ್ಯಾಹ್ನ ಶಾಲೆ ಬಿಟ್ಟೊಡನೆ ಗದ್ದೆಗೆ ಓಡುತ್ತಿದ್ದೆ. ಅವೆಲ್ಲವನ್ನೂ ಕಣ್ಣು ತುಂಬಿಕೊಳ್ಳುತ್ತ, ಅವರ ಮಾತು, ಗಲಗಲ ನಗೆಗೆ ನಾನೂ ಹಲ್ಲು ಕಿಸಿಯುತ್ತ ಮೈ ಮರೆತು ನಿಂತು ಬಿಡುತ್ತಿದ್ದೆ. ತಿರುಗಾ ಆಯಿ ಜೋರಾಗಿ ಕರೆದು, “ಯೇ ಬಾರೇ. ಊಟ ಮಾಡಿ ಶಾಲೆಗೆ ಹೊರಡು” ಎಂದು ಗದರಿದಾಗ, “ಥೋ… ಇದೊಂದು ಮಳ್ಳು ಶಾಲೆ” ಎಂದು ನನ್ನೊಳಗೇ ಗೊಣಗುತ್ತ, ಅಲ್ಲಿಂದ ಕಾಲು ಕೀಳುತ್ತಿದ್ದೆ.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿ
ಆರಿಸಬಹುದು ಕಿಚ್ಚು; ಆರಿಸುವುದ್ಹೇಗೆ ಇದ್ದರೆ ಹೊಟ್ಟೆಕಿಚ್ಚು?!: ಬಸವನಗೌಡ ಹೆಬ್ಬಳಗೆರೆ ಸರಣಿ
ರೈತ ‘ನಾನು ಬಿತ್ತುವ ಬೀಜಗಳನ್ನೇ ನನ್ನ ನೆರೆಹೊರೆಯ ಹೊಲದ ರೈತರಿಗೂ ನೀಡುತ್ತೇನೆ’ ಎಂದು ಹೇಳಿದನಂತೆ! ಆಗ ಅವರಿಗೆ ಇನ್ನೂ ಅಚ್ಚರಿಯಾಗಿ ‘ನೀವು ನಿಮ್ಮ ಸ್ಪರ್ಧಾಳುಗಳಿಗೆ ಕೊಟ್ಟರೆ ನೀವೇ ನಿಮ್ಮ ಸ್ಪರ್ಧಿಯನ್ನು ಬೆಳೆಸಿದಂತಾಗುವುದಿಲ್ಲವೇ?’ ಎಂದಾಗ ಆ ರೈತ ‘ನಾನು ಬಿತ್ತುವ ಬೀಜಗಳನ್ನೇ ಅಕ್ಕಪಕ್ಕದವರಿಗೂ ಕೊಟ್ಟರೆ ಫಲ ಬಿಡುವ ಸಮಯದಲ್ಲಿ ಪರಾಗಸ್ಪರ್ಶದಿಂದಾಗಿ ನನ್ನ ಹೊಲದ ಫಲವು ಉತ್ತಮವಾಗುತ್ತದೆ. ಒಂದೊಮ್ಮೆ ಅಕ್ಕಪಕ್ಕದ ಹೊಲದವರು ಕಮ್ಮಿ ಗುಣಮಟ್ಟವಿರುವ ಬೀಜಗಳನ್ನು ಬಿತ್ತಿದರೆ ಫಲ ಬಿಡುವ ಸಮಯದಲ್ಲಿ ಆ ಹೊಲದ ಪರಾಗರೇಣುಗಳಿಂದ ನನ್ನ ಹೊಲದ ಫಲವೂ ಕಮ್ಮಿಯಾಗುತ್ತದೆ!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ
ಭಾಷೆಯೊಳಗೆ ಇನ್ನೊಂದು ಭಾಷೆ: ಸುಮಾವೀಣಾ ಸರಣಿ
ದೋಸೆ ಚಟ್ನಿಯ ಘಮ ನಮ್ಮ ಮೂಗನ್ನು ದಾಟಿ ಭರ್ರನೆ ದೇಹ ಪ್ರವೇಶಿಸುತ್ತಿತ್ತು. ಅದೇ ಭರದಲ್ಲಿ ತಿಂದಿದ್ದರೆ ಚೆನ್ನಾಗಿತ್ತು. ಸುಮ್ಮನಿರಲಾರದೆ “ಇದು ಏನು ಚಟ್ನಿ” ಎಂದೆ. ಹೊಟೆಲ್ ಮಾಣಿಗೆ ಕನ್ನಡ ಅರ್ಥವಾಯಿತು ಆದರೆ ಉತ್ತರವನ್ನು ತೆಲುಗಿನಲ್ಲಿಯೇ “ಇದಿ ಪಲ್ಲಿ ಚಟ್ನಿ” ಎಂದ. ಕಸಿವಿಸಿ ಆಯಿತು “ಹೇಗ್ ಮಾಡ್ತೀರಿ?” ಅಂದೆ ಅದಕ್ಕವನು “ಪಲ್ಲಿಲನು ಧಂಚಿ, ವೆಯಿಂಚಿ, ಪುಡಿಛೇಸಿ…” ಎನ್ನುತ್ತಿದ್ದಂತೆ ವಾಕರಿಕೆ ಬರಲು ಶುರುವಾಯಿತು. ಕನ್ನಡದಲ್ಲಿ ‘ಪಲ್ಲಿ’ ಅಂದರೆ ‘ಹಲ್ಲಿ’ ಅಲ್ಲವೆ. ಆದರೂ ಬಿಡಲಿಲ್ಲ; ಗೂಗಲಮ್ಮನ ಸಹಾಯ ಪಡೆದು ನೋಡಿದರೆ ತೆಲುಗಿನಲ್ಲಿ ‘ಪಲ್ಲಿ’ ಅಂದರೆ ಕನ್ನಡದಲ್ಲಿ ‘ನೆಲಗಡಲೆ’ ಅಂತಿತ್ತು.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಇಪ್ಪತ್ತೆರಡನೆಯ ಬರಹ ನಿಮ್ಮ ಓದಿಗೆ
ಉಲ್ಟಾಪಲ್ಟಾ ಆದ ನನ್ನ ಪ್ಲಾನು! : ಎಚ್. ಗೋಪಾಲಕೃಷ್ಣ ಸರಣಿ
ಅವರು ಎಲೆಕ್ಟ್ರಿಕ್ ಕಾಂಟ್ರಾಕ್ಟ್ ಮಾಡ್ತಾ ಇದ್ದರು, ಪಾರ್ಟ್ ಟೈಮ್ ಆಗಿ. ನೀನೂ ಇದನ್ನೇ ಮಾಡು, ದುಡ್ಡು ಚೆನ್ನಾಗಿ ಸಿಗುತ್ತೆ, ಹೇಗಿದ್ದರೂ ನಿಮ್ಮದು ಹೊಸಾ ಏರಿಯ, ಬೇಕಾದಷ್ಟು ಜನ ಮನೆ ಕಟ್ಟುತ್ತಾರೆ, ನೀನೇ ಕಾಂಟ್ರಾಕ್ಟ್ ಮಾಡಬಹುದು ಅಂತ ಹುರಿದುಂಬಿಸಿ ಏಣಿ ಹತ್ತಿಸಿದ್ದ. ಪಾರ್ಟ್ ಟೈಮ್ ಕೆಲಸ, ಅದೂ ಚೆನ್ನಾಗಿ ದುಡ್ಡು ಮಾಡಬಹುದು ಅನ್ನುವ ಹಾಗಿದ್ದರೆ ಒಂದು ಕೈ ನೋಡೇ ಬಿಡೋಣ ಅನ್ನುವ ಉತ್ಸಾಹ ತುಂಬಿತ್ತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ
ಮಳೆ ಜಿನುಗಿಗೆ ಅರಳುವ ಜೀವನಪ್ರೀತಿ: ಭವ್ಯ ಟಿ.ಎಸ್. ಸರಣಿ
ಮಳೆಗಾಲ ಮಲೆನಾಡಿನ ವಸುಂಧರೆಯನ್ನು ಸಿಂಗರಿಸಿದೆ. ಮಂಜು ಆವರಿಸಿದ ಬೆಟ್ಟ ಗುಡ್ಡಗಳು, ಮಳೆಯಲ್ಲಿ ಮಾತ್ರ ಗೋಚರಿಸುವ ಸೀತಾಳೆಯಂತಹ ವನಸುಮಗಳು, ಬಗೆಬಗೆಯ ಅಣಬೆಗಳು, ದಾರಿಯುದ್ದಕ್ಕೂ ಮನಸೆಳೆಯುವ ಸಣ್ಣ ಸಣ್ಣ ಜಲಪಾತಗಳು, ತುಂಬಿ ಹರಿಯುವ ನದಿ ತೊರೆಗಳು ಮಲೆನಾಡನ್ನು ಭೂ ಲೋಕ ಸ್ವರ್ಗವಾಗಿಸಿವೆ. ದೂರದೂರುಗಳಿಂದ ಪ್ರವಾಸಿಗರು ಮಳೆಗಾಲದಲ್ಲಿ ಮಲೆನಾಡಿನ ದೃಶ್ಯ ವೈಭವ ಸವಿಯಲು ಬರುತ್ತಿದ್ದಾರೆ. ಅನೇಕ ರೆಸಾರ್ಟ್ಗಳು, ಹೋಂ ಸ್ಟೇಗಳು ತಲೆಎತ್ತಿವೆ. ಮಲೆನಾಡು ತನ್ನ ಮೊದಲ ನೀರವ, ನಿರ್ಜನ ಭವ್ಯತೆಯನ್ನು ಕಳೆದುಕೊಳ್ಳುವ ಭೀತಿಯೂ ಇದೆ.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿ
ಗಯಾನಾ ದೇಶದ ಕವಿ ಮಾರ್ಟಿನ್ ಕಾರ್ಟರ್: ಎಸ್. ಜಯಶ್ರೀನಿವಾಸ ರಾವ್ ಸರಣಿ
ಕಾರ್ಟರ್ ತನ್ನ ಕವಿತೆಗಳಲ್ಲಿ, ಸರಳವಾದ, ಸ್ಪಷ್ಟವಾದ ಶೈಲಿಯನ್ನು ಇಷ್ಟಪಡುತ್ತಾರೆ. ದೀರ್ಘವಾದ ಸಂಕೀರ್ಣ ಕವಿತೆಗಳಿಗಿಂತ ಸರಳವಾದ ಕವಿತೆಗಳನ್ನು ಬರೆಯುವುದು ಹೆಚ್ಚು ಕಷ್ಟ ಎಂದು ಅವರ ಅಭಿಪ್ರಾಯ. ಸರಿಯಾಗಿರುವುದು ಮುಖ್ಯ. “ಇದು ಇದಕ್ಕೆ ಸರಿ ಅಥವಾ ಅದಕ್ಕೆ ಸರಿ ಎಂಬ ಪ್ರಶ್ನೆಯಲ್ಲ, ಅದು ಸರಿಯಾಗಿದೆ ಅಂತ ಅನಿಸಬೇಕು, ಅಷ್ಟೆ. ಕೆಲವೊಮ್ಮೆ ನಿಮಗೆ ಕವಿತೆಗಳ ಪುಸ್ತಕವೊಂದು ಸಿಗುತ್ತದೆ, ಅದರಲ್ಲಿ ಒಂದು ಕವಿತೆಯು ಕವಿ ಹೇಳುತ್ತಿರುವ ವಿಷಯಕ್ಕೆ ಸಂಪೂರ್ಣವಾಗಿ ಸರಿಯಾಗಿರಬಹುದು…
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಗಯಾನಾ (Guyana) ದೇಶದ ಖ್ಯಾತ ಕವಿ ಮಾರ್ಟಿನ್ ಕಾರ್ಟರ್-ರವರ (Martin Carter, 1927-1997) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ
ನನ್ನ ಪುಟ್ಟ ಶಾಲೆ: ರೂಪಾ ರವೀಂದ್ರ ಜೋಶಿ ಸರಣಿ
ನಮ್ಮ ಗುರ್ಜಿ ಎಲ್ಲರ ಕೈ ಮೇಲೆ ಕಿತ್ತಳೆ ತೊಳೆ ಆಕಾರದ ಪೆಪ್ಪರಮಿಠಾಯಿ ಇಡುತ್ತಿದ್ದಂತೇ, ಅದು ಬುಳಕ್ಕನೆ ಬಾಯಿಗಿಳಿದು ಬಿಡುತ್ತಿತ್ತು. ನಾವೆಲ್ಲ ಅದನ್ನು ಕಡಿಯದೇ ದವಡೆಯಲ್ಲಿ ಅದುಮಿಟ್ಟುಕೊಂಡು ಮೆಲ್ಲಗೆ ರಸ ಹೀರಿ, ಹೀರಿ ಚಪ್ಪರಿಸುತ್ತಿದ್ದೆವು. ಅದು ಖಾಲಿಯಾಗುವ ತನಕ ಮಾತು ಕತೆ ಎಲ್ಲ ಬಂದ್… ನಮ್ಮಿಡೀ ದಿನದ ಸಂಭ್ರಮ, ಸಂತೋಷ ಆ ಪುಟ್ಟ ಮಿಠಾಯಿಗೋಸ್ಕರವೇ ಇರುತ್ತಿತ್ತೊ ಗೊತ್ತಿಲ್ಲ.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿ










