ಇದು ಮಾತು-ಅಕ್ಷರ-ದೃಶ್ಯಗಳ ಲಂಪಟ ಕಾಲ!: ಸುಕನ್ಯಾ ಕನಾರಳ್ಳಿ ಅಂಕಣ
ಶಬ್ದಲಜ್ಜೆಯೂ ಸೇರಿದಂತೆ ಹಲವಾರು ಬಗೆಯ ಲಜ್ಜೆಗಳ ಅಗತ್ಯ ಈಗ ಹಿಂದೆಂದಿಗಿಂತಲೂ ಹೆಚ್ಚಾಗಿ ಇರುವಂತೆ ಅನ್ನಿಸುತ್ತದೆ. ಮೊನ್ನೆ ನಮ್ಮ ಅಪಾರ್ಟ್ಮೆಂಟಿನ ಸರದಾರನೊಬ್ಬ ಒಂದು AI ವಿಡಿಯೋ ಹಾಕಿ, ‘ನೋಡಿ, ಎಲ್ಲ ಬಗೆಯ ಸುರಕ್ಷೆ ಇರುವ ಫ್ಲಾಟಿಗೆ ಸಹ ಪೂರ್ತಿಯಾಗಿ ಮುಖವಾಡ ತೊಟ್ಟ ಮಂದಿ ನುಗ್ಗಿರುವ ರೀತಿ!’ ಎಂದು ತತ್ತರಬತ್ತರ ಬೇತುಕೊಂಡಿದ್ದು ನೋಡಿ ನಗು ಬಂದಿತ್ತು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಮೂವತ್ನಾಲ್ಕನೆಯ ಬರಹ
ರಕುತದಿ ಬರೆದೆನು ಇದ ನಾನು…: ವಿನಾಯಕ ಅರಳಸುರಳಿ ಅಂಕಣ
ಪತ್ರ ಕೇವಲ ಸಾಮಾನ್ಯ ಜನರ ಅಂತರಾಳವನ್ನು ಹಾಗೂ ಕಷ್ಟ-ಕಾರ್ಪಣ್ಯಗಳಷ್ಟನ್ನೇ ಹಂಚಿಕೊಳ್ಳುವ ಮಾಧ್ಯಮವಷ್ಟೇ ಆಗಿರಲಿಲ್ಲ. ಸ್ವಾತಂತ್ರ್ಯ ಹೋರಾಟಗಾರರಿಂದ ಹಿಡಿದು ಚಿಂತಕರ ತನಕ ಎಷ್ಟೋ ಪ್ರಖರ ವ್ಯಕ್ತಿಗಳು ತಮ್ಮ ಹೋರಾಟಗಳನ್ನೂ, ಚಿಂತನೆಗಳನ್ನೂ ಬೇರೆಯವರಿಗೆ ದಾಟಿಸಲು ಆಯ್ದುಕೊಂಡ ಮಾರ್ಗಗಳ ಪೈಕಿ ಪತ್ರವೂ ಒಂದು. ಸೆರೆಯಲ್ಲಿದ್ದಾಗ, ಭೇಟಿ ಸಾಧ್ಯವಿಲ್ಲದಾಗ ತಮ್ಮ ಸಹಚರರಿಗೆ, ಅನುಯಾಯಿಗಳಿಗೆ ಸೂಚನೆಗಳನ್ನು ನೀಡಲೆಂದು ಕಳುಹಿಸಿದ ರಹಸ್ಯ ಓಲೆಯ ನಡುವೆ ಬರೆದ “ಸ್ವಾತಂತ್ರ್ಯ ಸುಮ್ಮನೆ ಬರುವುದಿಲ್ಲ ಗೆಳೆಯಾ.”
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”ಯ ಮತ್ತೊಂದು ಬರಹ ನಿಮ್ಮ ಓದಿಗೆ
ಆಸ್ಟ್ರೇಲಿಯನ್ ಬಹುತ್ವಗಳ ಆತಂಕ ಸಮಯ: ಡಾ. ವಿನತೆ ಶರ್ಮ ಅಂಕಣ
ಅಂದರೆ ಆಸ್ಟ್ರೇಲಿಯಾದಲ್ಲಿ ಎಲ್ಲರೂ ಸಲ್ಲುತ್ತಾರೆ ಎಂದಾಯಿತು. ಯಾವುದೇ ಭಾಷೆ ಮಾತನಾಡುತ್ತಿರಲಿ, ಯಾವುದೇ ಸಂಸ್ಕೃತಿಯನ್ನು ಆಚರಿಸುತ್ತಿರಲಿ, ಯಾವುದೇ ಧರ್ಮವನ್ನು ಪಾಲಿಸುತ್ತಿರಲಿ, ಎಲ್ಲಾರೂ ಇಲ್ಲಿ ಸಲ್ಲುತ್ತಾರೆ. ಅವರ ಆಹಾರ, ಉಡುಗೆತೊಡುಗೆಗಳ ವೈವಿಧ್ಯತೆ, ಇಂಗ್ಲಿಷ್ ಭಾಷೆಯ ಉಚ್ಚಾರಣೆ ಎಲ್ಲವೂ ಸಹ್ಯ, ಸಲ್ಲುತ್ತದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ
ಮನುಷ್ಯನ ಒಂದೇ ಜನ್ಮದಲ್ಲಿ ಹಲವು ಜನ್ಮಗಳು – ಏನಿದರ ಮರ್ಮ?: ಎಲ್. ಜಿ. ಮೀರಾ ಅಂಕಣ
ನಮ್ಮ ಗುರುತು ನಮಗೇ ಸಿಗದಷ್ಟು ನಾವು ಬದಲಾವುಗುವುದರ ಮರ್ಮ ಏನು? ಅದೂ ಅಲ್ಲದೆ ಎಲ್ಲರೂ ಹೀಗಾಗುವುದಿಲ್ಲ. ಎಲ್ಲ ಸಿದ್ಧಾರ್ಥರೂ ಬುದ್ಧರಾಗುವುದಿಲ್ಲ, ಎಲ್ಲ ನವಕೋಟಿ ನಾರಾಯಣರೂ ಪುರಂದರದಾಸರಾಗುವುದಿಲ್ಲ, ಎಲ್ಲ ಅಂಗುಲಿಮಾಲರೂ ಬೌದ್ಧಭಿಕ್ಷುವಾಗುವುದಿಲ್ಲ. ಹೀಗೆ ತಮ್ಮನ್ನು ತಾವು ಗುರುತೇ ಸಿಗದಂತೆ ನವೀಕರಿಸಿಕೊಳ್ಳಲು ಎಲ್ಲರಲ್ಲೂ ಇಲ್ಲದ ಏನೋ ಒಂದು ಗುಣವಿಶೇಷ ಈ ವ್ಯಕ್ತಿಗಳಲ್ಲಿ ಇರಬೇಕು ಅಥವಾ ಹೀಗೆ ಬದಲಾವುಗುವುದಕ್ಕಾಗಿ ಏನೋ ಒಂದು ಬಲವಾದ ಕಾರಣವನ್ನು ಬದುಕು ನಿರ್ಮಿಸಿರಬೇಕು.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ
ಹೆಣ್ಣು ನೋಡಲೆಂದು ಬಂದವರು!: ಸುಕನ್ಯಾ ಕನಾರಳ್ಳಿ ಅಂಕಣ
ಅದೂ ಸರಿಯೇ. ಅಂತಾರಾಷ್ಟ್ರೀಯ ಕರೆ ದುಬಾರಿ ತಾನೇ? ಟಿಪಿಕಲ್ ಅಮೆರಿಕನ್ ಎಂದು ಗೊಣಗಿಕೊಂಡು ನಾನು ಸುಮ್ಮನಾದರೂ ಮನೆಯಲ್ಲಿ ರಂಪವಾಗುವುದೇನೂ ತಪ್ಪಲಿಲ್ಲ. ‘ಅಲ್ಲಿಂದಾ ಫೋನ್ ಮಾಡಿದವನ ಹತ್ತಿರ ಒಳ್ಳೆಯ ಮಾತಾಡೋದು ಬಿಟ್ಟು, ನಾನು ಕರಮಿ, ನಾನು ಕುಳ್ಳಿ, ನಾನು ಡುಮ್ಮಿ ಅಂತ ಹೇಳಿಕೊಳ್ತಾಳಲ್ಲ ನಿನ್ನ ಮಗಳು, ಏನನ್ನಬೇಕು ಇದಕ್ಕೆ?’ ಎಂದು ಚಂದ್ರಣ್ಣ ತಲೆ ಮೇಲೆ ಕೈಹೊತ್ತುಕೊಂಡಿದ್ದರು. ‘ಅಲ್ಲಿಂದಾ ಫೋನ್ ಮಾಡಿದವನ ಪ್ರಶ್ನೆ ಅಷ್ಟು ಸ್ಪಷ್ಟವಾಗಿದ್ದರೆ ಇಲ್ಲಿಂದಾ ಮಾತಾಡುವ ನನ್ನ ಉತ್ತರ ಸಹ ಸ್ಪಷ್ಟವಾಗಿರಬೇಕು ತಾನೇ?’ ಎಂದು ವಿಶಾಲಮ್ಮನ ಹತ್ತಿರ ನಾನು ಬೇತುಕೊಂಡಿದ್ದೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ
ಕಾಸರವಳ್ಳಿ, ಕಾಯ್ಕಿಣಿ ಮತ್ತು ಟ್ರಾಫಿಕ್!: ಸುಕನ್ಯಾ ಕನಾರಳ್ಳಿ ಅಂಕಣ
ನಮ್ಮ ಅಪಾರ್ಟ್ಮೆಂಟಿನ ತನಕವೂ ಇದ್ದ ಪೊಲೀಸರನ್ನು ಕಂಡಾಗ ಮಾತ್ರ ಇದು ಜಯಂತ ಎಫೆಕ್ಟ್ ಅಲ್ಲ ಅಂತ ಅರಿವಾಗಿತ್ತು. ಸೆಕ್ಯೂರಿಟಿ ಹತ್ತಿರ ನಿಲ್ಲಿಸಿ ಏನ್ರೀ ಇದು ಅವಾಂತರ ಎಂದು ವಿಚಾರಿಸಿದೆ. ‘ಅಯ್ಯೋ, ಮೇಡಮ್. ಸಿಎಂ ಬರ್ತಾ ಇದಾರೆ. ಪಕ್ಕದ ಹೋಟೆಲ್ಲಿನಲ್ಲಿ ಪ್ರಜಾವಾಣಿ ವಾರ್ಷಿಕ ಸಾಧಕಿಯರಿಗೆ ಅಭಿನಂದನೆ ಸಮಾರಂಭ ಇದೆ. ನಿಮ್ಮ ಹೆಸರು ಸಹ ಒಂದಲ್ಲಾ ಒಂದು ದಿನ ಬರುತ್ತೆ ನೋಡ್ತಾ ಇರಿ,’ ಎಂದು ರೇಗಿಸಿದಾಗ, ‘ಆ ಹೊತ್ತಿಗೆ ನಾನು ಇರೊಲ್ಲ. ಇದ್ದರೂ ಹೋಗೊಲ್ಲ,’ ಎಂದು ಉಡಾಫೆಯಿಂದ ನಕ್ಕು ಗೇಟನ್ನು ದಾಟಿ ಒಳಹೊಕ್ಕು ಸಮಾಧಾನದ ನಿಟ್ಟುಸಿರು ಬಿಟ್ಟೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ
ಮೊಬೈಲ್ ಬಂದುದು...: ವಿನಾಯಕ ಅರಳಸುರಳಿ ಅಂಕಣ
ದೂರವಿದ್ದಷ್ಟೂ ನಕ್ಷತ್ರದ ಅಂದ ಜಾಸ್ತಿಯಂತೆ. ಪಕ್ಕದ ಮನೆಯಲ್ಲಿದ್ದಾಗ ಯಕ್ಷಲೋಕದ ಮಾಯಾಗೋಲದಂತೆ ಭಾಸವಾಗುತ್ತಿದ್ದ, ಮರದ ಕೊರಡಿನಲ್ಲಿ ಕೆತ್ತಿ ಆಡುವಂತೆ ಪ್ರೇರೇಪಿಸಿದ್ದ ಮೊಬೈಲು ತನ್ನದೇ ಅಂಗೈಗೆ ಬಂದ ಕೆಲವೇ ದಿನಗಳಲ್ಲಿ ಮರದ ಕೊರಡಿನಷ್ಟೇ ಸಾಮಾನ್ಯ ಸಂಗತಿಯಾಗಿಹೋಯಿತು. ಅದರಲ್ಲಿ ಬರುತ್ತಿದ್ದ ಮೆಸೇಜ್, ಕಾಲ್ಗಳ ಜೊತೆ ಆಚೆ ಬದಿಯಿಂದ ಅವನ್ನು ಕಳಿಸುತ್ತಿದ್ದ ವ್ಯಕ್ತಿಗಳೂ ಹಳಸಿಹೋಗಿದ್ದರಿಂದ ಮೊಬೈಲು ಹಳೆಯ ಹೆಂಡತಿ/ಹಳೆಯ ಗಂಡನಂತೆ ತನ್ನಲ್ಲಿನ ಹೊಸತನವನ್ನು ಕಳೆದುಕೊಂಡುಬಿಟ್ಟಿತು.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”ಯ ಬರಹ ನಿಮ್ಮ ಓದಿಗೆ
ಆಸ್ಟ್ರೇಲಿಯಾದಲ್ಲಿ ಪರಿಸರ ಹೋರಾಟ ಮತ್ತೂ…: ಡಾ. ವಿನತೆ ಶರ್ಮ ಅಂಕಣ
ಅವರ ಈ ಎಲ್ಲಾ ನಡೆಗಳಿಂದ ನಾಶವಾಗಿದ್ದು ಆಸ್ಟ್ರೇಲಿಯಾದ ಮೂಲನಿವಾಸಿಗಳಾದ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೈಟ್ ದ್ವೀಪವಾಸಿಗಳ ಜನಪಂಗಡಗಳಲ್ಲಿ ಇದ್ದ ಬಹುಭಾಷೆಗಳು, ಬಹುಸಂಸ್ಕೃತಿಗಳು ಮತ್ತು ಬಹುತ್ವವನ್ನು ಅಪ್ಪಿಕೊಂಡಿದ್ದ ನೆಲ-ನಾಡುಗಳ ಸಂಬಂಧಗಳು, ಅಸ್ಮಿತೆ, ಪ್ರಾಪಂಚಿಕ ದೃಷ್ಟಿಕೋನಗಳು. ಅದೃಷ್ಟಕ್ಕೆ, ಅವು ಸಂಪೂರ್ಣವಾಗಿ ನಿರ್ನಾಮವಾಗದೆ, ನಿಧಾನವಾಗಿ ಮೂಲವಾಸಿಗಳು ಸುಧಾರಿಸಿಕೊಂಡರು. ನ್ಯಾಯಕ್ಕಾಗಿ, ತಮ್ಮ ನೆಲಕ್ಕಾಗಿ, ಅಸ್ತಿತ್ವಕ್ಕೆ, ಅಸ್ಮಿತೆಗೆ ಹೋರಾಡಿದರು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ
ಕನ್ನಡ ವಿಜ್ಞಾನ ಸಂವಹನಕ್ಕೆ ಡಾ. ಕೆ. ಶಿವರಾಮ ಕಾರಂತರ ಕೊಡುಗೆ: ಎಲ್. ಜಿ. ಮೀರಾ ಅಂಕಣ
ಇಂತಹ ವಿಚಾರ ಮನಸ್ಸಿಗೆ ಬಂದ ಮೇಲೆ ಕಾರಂತರು ಸುಮ್ಮನೆ ಕೂರುವ ಜಾಯಮಾನದವರಲ್ಲ. ಮಕ್ಕಳಿಗೆ ತಮ್ಮ ಜಿಲ್ಲೆಯಾದ ದಕ್ಷಿಣಕನ್ನಡದ ಪರಿಚಯವನ್ನು ಸ್ವಾರಸ್ಯಕರವಾಗಿ ಮತ್ತು ಚಿತ್ರಸಹಿತವಾಗಿ ಮಾಡಿಕೊಡುವ `ಚಿತ್ರಮಯ ದಕ್ಷಿಣಕನ್ನಡ’ ಕೃತಿಯನ್ನು ರಚಿಸಿಯೇಬಿಟ್ಟರು. ಇದಕ್ಕಾಗಿ ಜಿಲ್ಲೆಯ ತುಂಬ ಓಡಾಡಿ ಅನೇಕ ಛಾಯಾಚಿತ್ರಗಳನ್ನು ತೆಗೆದರು, ಚಿತ್ರಗಳನ್ನು ಸ್ವತಃ ಬರೆದರು! ಮುಂದೆ ಮಕ್ಕಳಿಗಾಗಿ ಮತ್ತು ಆಸಕ್ತ ದೊಡ್ಡವರಿಗಾಗಿ `ದಕ್ಷಿಣ ಹಿಂದೂಸ್ಥಾನ’ ಕೃತಿಯನ್ನು ಹಾಗೂ `ಬಾಲಪ್ರಪಂಚ’, `ವಿಜ್ಞಾನ ಪ್ರಪಂಚ’ ಎಂಬ ವಿಶ್ವಕೋಶಗಳನ್ನು ರಚಿಸಿದರು.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ನಲವತ್ತೈದನೆಯ ಬರಹ










