ಕನ್ನಡಿಗರೆಂಬ ಸಂಪನ್ನರೂ ಸಜ್ಜನರೂ..
ಇಡೀ ಭಾರತ ದೇಶದಲ್ಲಿ ಸಂಪನ್ನರೆಂದರೆ ಯಾರು? ಎಂದು ಯಾರಾದರೂ ಕೇಳಿದರೆ ನಾನಂತೂ ಕನ್ನಡಿಗರೇ ಎಂದು ಕೇಕೆ ಹಾಕಿ ಹೇಳಬಲ್ಲೆ. ಏಕೆಂದರೆ ಕನ್ನಡಿಗರಷ್ಟು ಸಂಪನ್ನರು ಮತ್ತು ಸಹೃದಯಿಗಳು ಭಾರತದ ಇತರೆ ರಾಜ್ಯಗಳಲ್ಲಿ ಇಲ್ಲ. ಇಂದು ಯಾವುದೇ ರಾಜ್ಯದ, ಯಾವುದೇ ಭಾಷೆಯ ಮಂದಿ ಕರ್ನಾಟಕದಲ್ಲಿ ಬಂದು ನೆಲೆಸಬಹುದು. ಕರ್ನಾಟಕದಲ್ಲಿ ಉದ್ಯೋಗ, ವ್ಯಾಪಾರ ಮಾಡಿಕೊಂಡು ನೆಮ್ಮದಿಯಿಂದ ಜೀವಿಸಬಹುದು. ಎರಡ್ಮೂರು ತಲೆಮಾರುಗಳಿಂದ ಕರ್ನಾಟಕದಲ್ಲಿ ನೆಲೆಸಿದ್ದರೂ ಕನ್ನಡ ಭಾಷೆ ಕಲಿಯದೆ ಸುಖವಾಗಿ ಜೀವನ ನಡೆಸಬಹುದು. ಕನ್ನಡಿಗರು ಎಷ್ಟು ಸಂಪನ್ನ ಮಂದಿಯೆಂದರೆ ಅನ್ಯಭಾಷಿಕರಿಗೆ ಕನ್ನಡ ಕಲಿಸುವ ಬದಲು ತಾವೇ ಅವರ ಭಾಷೆ ಕಲಿತು, ಅವರೊಂದಿಗೆ ಅದೇ ಭಾಷೆಯಲ್ಲಿ ವ್ಯವಹರಿಸುತ್ತಾರೆ. ವಿಕಾಸ ಹೊಸಮನಿ ಬರಹ ನಿಮ್ಮ ಓದಿಗೆ
ಅಂತೂ ಇಂತೂ ಗ್ರೆಗರಿಯವರಿಗೆ ತೀರ್ಪು ಸಿಕ್ಕಿತು
ಎಂಆರ್ ಪಿಎಲ್ ಕಂಪೆನಿಗೆ ತಮ್ಮ ಕೃಷಿ ಜಮೀನನ್ನು ಬಿಟ್ಟುಕೊಡುವುದಿಲ್ಲ ಎಂದು ಹೋರಾಟ ನಡೆಸಿದವರು ಗ್ರೆಗರಿ ಪತ್ರಾವೋ. ಕೊನೆಗೆ ತಮ್ಮ ಫಲವತ್ತಾದ ಕೃಷಿ ಜಮೀನನ್ನು ಬಿಟ್ಟುಕೊಡುವುದು ತೀರಾ ಅನಿವಾರ್ಯವಾದಾಗ, ಜುಜುಬಿ ಬೆಲೆಗೆ ಭೂಮಿ ಬಿಟ್ಟುಕೊಡುವುದಿಲ್ಲ ಎಂಬ ಹೋರಾಟವನ್ನು ನಿರಂತರವಾಗಿ ನಡೆಸಿದವರು. ಅವರ ಹೋರಾಟದ ದೀರ್ಘ ಹಾದಿಯೊಂದಕ್ಕೆ ಈಗ ವಿರಾಮ ಬಿದ್ದಿದೆ. ಸುಪ್ರೀಂ ಕೋರ್ಟ್ ನಲ್ಲಿಅವರು ಎಂಆರ್ ಪಿಎಲ್ ವಿರುದ್ಧ ದಾಖಲಿಸಿದ ಪ್ರಕರಣದಲ್ಲಿ ತೀರ್ಪು ಅವರ ಪರವಾಗಿ ಬಂದಿದೆ.ಗ್ರೆಗರಿ ಕ್ರಮಿಸಿದ ಹಾದಿಯ ಕುರಿತು ಸ್ಥೂಲವಾಗಿ ಬರೆದಿದ್ದಾರೆ ಕೋಡಿಬೆಟ್ಟು ರಾಜಲಕ್ಷ್ಮಿ
ರಾಣಿಯಾಗುವುದೆಂದರೆ ಫೇರಿಟೇಲ್ ನಷ್ಟು ಸುಲಭವಲ್ಲ
ಇಡೀ ಭೂಮಂಡಲದಲ್ಲಿ ರಾಣಿಯೆಂದರೆ ‘ಇಂಗ್ಲೆಂಡಿನ ರಾಣಿ’ ಎಂದೇ ಮನೆಮಾತಾಗಿ, ಆ ಪದಕ್ಕೊಂದು ಜೀವತುಂಬಿದ್ದ ಶತಮಾನದ ಹತ್ತಿರದ ಜೀವವೊಂದು ಕೊನೆಯುಸಿರೆಳೆದಿತ್ತು. ಜಗತ್ತನ್ನು ಅದೆಷ್ಟೋ ಬದಲಾವಣೆಗಳಲ್ಲಿ ಎಲಿಝೆಬೆತ್ ಸ್ವೀಕರಿಸಿದಂತೆಯೇ, ಅವಳ ಸಾವು ಕೂಡ ಹಲವು ತಲೆಮಾರುಗಳ ಜನರಲ್ಲಿ ವೈವಿಧ್ಯಮಯ ಸಂವೇದನೆಗಳನ್ನು ಮೂಡಿಸಿತು. ರಾತ್ರಿಯ ವೇಳೆಗೆ ಲಂಡನ್ನಿನ ಬಕಿಂಗ್ಯಾಮ್ ಅರಮನೆಯ ಬಳಿ ಮಳೆಯನ್ನೂ ಲೆಕ್ಕಿಸದೆ ತಂಡೋಪ ತಂಡವಾಗಿ ಸೇರಿದ ಜನ ರಾಣಿಯ ಸಾವಿಗಾಗಿ ಅಶ್ರುಧಾರೆ ಸುರಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಎಲಿಝೆಬೆತ್ ತನ್ನ ಗಂಡ ಫಿಲಿಪ್ಪನನ್ನು ಸೇರಿದ ಬಗ್ಗೆ, ಆಕೆ ದೇಶಕ್ಕಾಗಿ ತನ್ನ ಬದುಕನ್ನೇ ಮೀಸಲಿಟ್ಟು ಸೇವೆ ಮಾಡಿದ ಬಗ್ಗೆ ಕೊಂಡಾಡುವ ಕವನಗಳು ಹರಿದುಬಂದವು. ಡಾ. ಪ್ರೇಮಲತ ಬಿ. ಅವರ ಬರಹವೊಂದು ಇಲ್ಲಿದೆ.
ನೆನಪುಗಳ ಮೆರವಣಿಗೆಯಲ್ಲಿ ಸೂಕ್ಷ್ಮಮತಿ ತೇಜಸ್ವಿಯವರ ಕುತೂಹಲಗಳು
ನಾನು ಮೂಡಿಗೆರೆ ಸಂತೆಗೆ ಯಾವಾಗಲೋ ಒಂದೆರಡು ಸಲ ಹೋಗಿರುವೆನು. ಅದೂ ಈಶಾನ್ಯೆ ಸ್ಕೂಲಿಗೆ ಹತ್ತಿರವಿದೆಯೆಂದು. ‘ಫ್ರೆಶ್’ ತರಕಾರಿ ಸಿಕ್ಕುತ್ತೆಂದು. ಒಟ್ಟಿನಲ್ಲಿ ಒಂದು ತಿರುಗಾಟ ಅಂತ ಅಷ್ಟೆ. ಇವರಿಗೆ ಸಂತೆಗೆ ಹೋಗೋದು ಏನೇನೂ ಇಷ್ಟವಿರುತ್ತಿರಲಿಲ್ಲ. ಆದರೆ ಇದ್ದಕ್ಕಿದ್ದಂತೆ ಸಂತೆಗೆ ಹೋಗಿ ಬರ್ತೀನಿ ಅಂತ ಒಂದು ಬ್ಯಾಗ್ ಹಿಡಿಕೊಂಡು ಹೋಗೋರು. ಅಲ್ಲಿ ಅದೆಂತೆಂಥ ಮೀನುಗಳು ಇರ್ತವೆ ಅಂತ! ನೋಡ್ತನೇ ಇರಬೇಕು! ಅನ್ನಿಸುತ್ತೆ ಅಂತಿದ್ರು. ಕಳೆದ ರಜೆಯಲ್ಲಿ ಮೊಮ್ಮಗಳು ಪುಟಾಣಿ ವಿಹಾ ಯಾರದೋ ಜೊತೆಯಲ್ಲಿ ಸಂತೆಗೆ ಹೋದವಳು ಅವಳೂ ಹಾಗೆ ‘ತ್ರಿಲ್’ ಆಗಿದ್ದಳಂತೆ. ಇಂದು ಪೂರ್ಣಚಂದ್ರ ತೇಜಸ್ವಿಯವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ರಾಜೇಶ್ವರಿ ತೇಜಸ್ವಿಯವರು ಹಂಚಿಕೊಂಡ ಕೆಲವು ನೆನಪುಗಳು ನಿಮ್ಮ ಓದಿಗೆ
ನೆನಪುಗಳ ಮೆರವಣಿಗೆಯಲ್ಲಿ ಗಣಪತಿ ಬಪ್ಪಾ..
ಹಬ್ಬದ ದಿನ, ಕತ್ತಲೇರುತ್ತಿದ್ದಂತೆ ಮನೆ ತುಂಬಾ ಜನ. ಎಷ್ಟೆಂದರೆ, ೧೩ ಮನೆ ದಾಯ್ ಆಟಕ್ಕೆ ಬೇಕಾಗುವಷ್ಟು ಕೈ, ಮತ್ತೆ ಅವರಿಗೆ ಬೇಕಾದಂತೆ, ಕಾಫಿ ಚಾ ಮಾಡಲಿಕ್ಕೆ, ಹೊರಗಡೆ ನಿಲ್ಲುತ್ತಿದ್ದ ಮಂಡಕ್ಕಿ ಗಾಡಿಯಿಂದ ಮಸಾಲೆ ಮಂಡಕ್ಕಿ ತಂದು ಕೊಡೋಕೆ, ಮತ್ತೆ, ದೊಡ್ಡ-ದೊಡ್ಡ ಗಣಪತಿಗಳ ಮೆರವಣಿಗೆ ಬಂದಾಗ ಅವರಿಗೆ ಹೇಳಲಿಕ್ಕೆ ಬೇಕಾದಷ್ಟು ಜನ. ದಾಯ್ ಆಟದ ಮಂದಿ ಪಳಗಿದ ಕೈಗಳಾದ್ದರಿಂದ, ನಮ್ಮಂತ ಮಕ್ಕಳು ಒಂದೋ ಆಟಕ್ಕುಂಟು ಲೆಕ್ಕಕಿಲ್ಲ ಅಥವಾ ಅರ್ಜೆಂಟಿಗೆ ಒಂದಿಷ್ಟು ನಿಮಿಷ ಬೇಕಾದಾಗ ಕವಡೆಯ ಕರಡಿಗೆ ಮಗಚುವ ಕೈ. ಉಳಿದ ಸಮಯದಲ್ಲಿ, ಮಂಡಕ್ಕಿ-ಸೋಡಾ ಮಜಾ ಮಾಡುತ್ತಾ, ಗಣಪತಿಗಳ ಟ್ರಾಕ್ಟರ್ ಜೊತೆಗೆ, ತಿನ್ನುತ್ತಿದ ಮಂಡಕ್ಕಿ ಪ್ಯಾಕೇಟಿನ ಲೆಕ್ಕ ಇಡುವದು ನಮ್ಮ ಕೆಲಸ. ಗಣೇಶ ಹಬ್ಬದ ನೆನಪುಗಳಿಗೆ ಅಕ್ಷರ ರೂಪ ನೀಡಿದ್ದಾರೆ ಮುರಳಿ ಹತ್ವಾರ್.
ಹೊಗಳಿಕೆಯ ಹಿಂದಿದೆ ನಿರೀಕ್ಷೆಯೆಂಬ ಒತ್ತಡ
ಹೆಣ್ಣುಮಕ್ಕಳಿಗೆ ಅವರ ದೇಹ ವರವೂ ಹೌದು ಶಾಪವೂ ಹೌದು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೆಣ್ಣುಮಕ್ಕಳಿಗೆ ಹಿಂದೆಂದಿಗಿಂತಲೂ ಹೆಚ್ಚು ಸವಾಲುಗಳಿವೆ. ಅದರಲ್ಲೂ ಹೊರಗೆ ದುಡಿಯುವ ಹೆಣ್ಣುಮಕ್ಕಳಿಗೆ ದಿನದಲ್ಲಿ ಒಂದು ತಾಸು ಸಮಾಧಾನದಿಂದ ಕೂರಲು ನಿಲ್ಲಲೂ ಸಮಯ ಸಿಗುವುದಿಲ್ಲ. ಹಿಂದೆಲ್ಲ ನಟಿಯರು, ಮಾಡೆಲಿಂಗ್ ಕ್ಷೇತ್ರದಲ್ಲಿರುವವರು ಮಾತ್ರವೇ ಹೆಚ್ಚಾಗಿ ತಮ್ಮ ದೇಹ ಸೌಂದರ್ಯವನ್ನು ಕಾಪಿಟ್ಟುಕೊಳ್ಳುವಲ್ಲಿ ಕೆಲಸ ಮಾಡುತ್ತಿದ್ದರು. ಈಗ ಹಾಗಿಲ್ಲ. ಫೇಸ್ಬುಕ್ಕು, ಇನ್ಸ್ಟಾಗ್ರಾಂಗಳ ರಂಗುರಂಗಿನ ಜಗತ್ತು ಎಲ್ಲರ ಮೇಲೂ ಪರೋಕ್ಷ ಒತ್ತಡ ಸೃಷ್ಟಿಸುತ್ತಿದೆ. ಅದರ ಆಕರ್ಷಣೆಯಿಂದ ಸೌಂದರ್ಯ ಪ್ರಜ್ಞೆ ಎಲ್ಲರಲ್ಲೂ, ಎಲ್ಲಾ ಕ್ಷೇತ್ರಗಳಲ್ಲೂ ಜಾಗೃತವಾಗಿದೆ ಎನ್ನುತ್ತಾರೆ ರೂಪಶ್ರೀ ಕಲ್ಲಿಗನೂರ್
ನಾಳೆಗೆಂದು ತೆಗೆದಿರಿಸಿದ ಮುಷ್ಟಿ ಪೃಥುಕ
ನಾಳೆಯೆಂಬುದು ನಿಜವೋ ಸುಳ್ಳೋ ಬೇರೆ ಮಾತು. ಆದರೆ ಇಂದಿನ ಜೀವನವನ್ನು ದಾಟುವುದಕ್ಕಾಗಿ ಪ್ರೇರಣೆಯಾಗಿರುವುದು ಈ ʻನಾಳೆʼಗಳು ಅಲ್ಲವೇ. ಜಗತ್ತಿನ ಎಲ್ಲ ಜೀವಿಗಳೂ ನಾಳೆಗಳನ್ನು ಎಷ್ಟೊಂದು ಜತನ ಮಾಡುತ್ತವೆ. ಅದಕ್ಕಾಗಿ ಸದಾ ಶ್ರಮಿಸುತ್ತಲೇ ಇರುತ್ತವೆ. ಆದರೆ ಅದ್ಯಾಕೋ, ಈ ಜೀವಿಗಳ ಸಾಲಿನಲ್ಲಿ ಮನುಷ್ಯನ ಸ್ವಭಾವ ಮಾತ್ರ ವಿಭಿನ್ನವಾಗಿರುತ್ತವೆ. ಮನುಷ್ಯನೂ ನಾಳೆಗಳ ಬಗ್ಗೆ ಯೋಚಿಸಿದರೂ, ಅದಕ್ಕಾಗಿ ಮಾಡುವ ತಯಾರಿ ಮಾತ್ರ ತದ್ವಿರುದ್ಧವಾದುದು. ಸಂಪತ್ತನ್ನು ಜಮೆ ಮಾಡಿದಷ್ಟೂ ತಮ್ಮ ನಾಳೆಗಳು ಭದ್ರವಾಗಿರುತ್ತವೆ ಎಂದು ಭಾವಿಸುತ್ತ ಎಲ್ಲ ಜೀವಿಗಳಿಗೂ ತೊಂದರೆಯುಂಟು ಮಾಡುತ್ತಾನೆ ಎಂದು ಅನಿಸುತ್ತದೆ.
ಕೋಡಿಬೆಟ್ಟು ರಾಜಲಕ್ಷ್ಮಿಬರೆದ ಲೇಖನ
ಖಾದಿಯ ಜನನವೂ ಚರಖಾದ ಪ್ರೀತಿಯೂ
ಬ್ರಿಟಿಷರಿಂದ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ ಎಪ್ಪತ್ತೈದು ವಸಂತಗಳು ತುಂಬಿವೆ. ಸ್ವಾತಂತ್ರ್ಯ ಹೋರಾಟದ ಆ ಹಾದಿಯು ಬಹುದೀರ್ಘವಾದುದು. ಸತ್ಯಾಗ್ರಹ, ಸ್ವದೇಶಿ ಚಿಂತನೆ, ಖಾದಿ ಮತ್ತು ಚರಖಾದ ಮೂಲಕ ನಡೆದ ಅಸಹಕಾರ ಚಳವಳಿಗಳು ಹೋರಾಟದ ಹಾದಿಗೆ ಸಾತ್ವಿಕ ಬಲವನ್ನು ತುಂಬಿವೆ. ಇದರಿಂದಾಗಿ ಹೋರಾಟವು ವಿಶ್ವದಲ್ಲಿಯೇ ವಿಭಿನ್ನವಾಗಿ ಗುರುತಿಸಿಕೊಳ್ಳುವುದು ಸಾಧ್ಯವಾಗಿದೆ. ಆದರೆ ಈ ಖಾದಿ ಮತ್ತು ಚರಖಾ ಎಂಬ ಮಾಧ್ಯಮಗಳಿಗೆ ಚಳವಳಿಯೊಂದನ್ನು ಕಟ್ಟುವ ಸಾಮರ್ಥ್ಯವಿದೆ ಎಂದು ಮಹಾತ್ಮಾ ಗಾಂಧೀಜಿಯವರು ಹೇಗೆ ಗುರುತಿಸಿದರು ಎಂಬುದನ್ನು ಅವರು ‘ನನ್ನ ಸತ್ಯಾನ್ವೇಷಣೆ’ ಯಲ್ಲಿ ವಿವರಿಸಿದ್ದಾರೆ. ಆ ಎರಡು ಅಧ್ಯಾಯಗಳನ್ನು ನೆನಪಿಸಿಕೊಳ್ಳಲು ಇದೊಂದು ಸುಸಂದರ್ಭ ಅಲ್ಲವೇ..
ನಾ ಕಾಣದ ನನ್ನಜ್ಜಿಯರು
ಹೆಣ್ಣುಲೋಕದ ಎಲ್ಲ ತಲ್ಲಣಗಳನ್ನು ನನ್ನೊಳಗೆ ಬೀಜರೂಪಿಯಾಗಿ ಮೊಳೆಯಿಸಿದ್ದಾರೆ. ಆದರೂ ನನ್ನನ್ನು ಅಜ್ಜಿಯ ವಾತ್ಸಲ್ಯದಿಂದ ಪೊರೆದಿದ್ದು ಮಾತ್ರ ನಮ್ಮೂರಿನ ಬಡ್ಕಜ್ಜಿ. ತನ್ನ ಐದನೆಯ ವಯಸ್ಸಿಗೆ ಗಂಡನನ್ನು ಕಳಕೊಂಡು ಜೀವನಪೂರ್ತಿ ಒಂಟಿಯಾಗಿಯೇ ಬದುಕಿದ ಅವಳಿಗೆ ನನ್ನನ್ನೂ ಸೇರಿಸಿದಂತೆ ನೂರಾರು ಮೊಮ್ಮಕ್ಕಳು. ಅರವತ್ತು ದಾಟಿದ ತನ್ನ ಗಂಡ ಮೂರನೆಯಹೆಂಡತಿಯಾದ ತನ್ನನ್ನು ಹೆಗಲಮೇಲೆ ಕೂರಿಸಿಕೊಂಡು ಹೊಳೆದಾಟಿಸಿದ ನೆನಪು ಮಾತ್ರ ಅವಳಿಗಿತ್ತು, ಅವಳ ಮದುವೆಯ ಕಥೆಯನ್ನೂ ಹಾಸ್ಯವಾಗಿ ಹೇಳಿ ನಗಿಸಬಲ್ಲಷ್ಟು ಸ್ಥಿತಪ್ರಜ್ಞತೆ ಅವಳಿಗೆ ಅದೆಲ್ಲಿಂದ ಬಂದಿತ್ತೋ. ಅಜ್ಜಿಯರ ಲೋಕದ ಸಂವೇದನೆಗಳನ್ನು ಸೂಕ್ಷ್ಮವಾಗಿ ಹೆಣೆದಿದ್ದಾರೆ ಸುಧಾ ಆಡುಕಳ









