ಮನುಷ್ಯ ಮೃಗ ಸತ್ತೇ ಇಲ್ಲ
ಪ್ರಾಯದಲ್ಲಿ ಸ್ಪರ್ಶವೇ ಸ್ವರ್ಗಸುಖ. ಮುಪ್ಪಾದಾಗ ಕೈಗೆಟುಕದೆ ಕಳೆದು ಹೋದದ್ದರ ನೆನಪೇ ನರಕ. ಅಶ್ವಥ್ ಅವರ ಮುಂದೆ ತಣ್ಣಗೆ ಹೊಂಗೆ ಮರದ ಕೆಳಗೆ ಮಧ್ಯೆ ಮಧ್ಯೆ ಚಹಾ ಕುಡಿಯುತ್ತ ಸಾಕಷ್ಟು ಹೊತ್ತು ಮಾತಾಡಿದ್ದೆ. ಪೋಲಂಕಿ ಅವರು ಹೇಳಿದ್ದನ್ನೆಲ್ಲ ನನಗೆ ಬೇಕಾದಂತೆ ಮರು ಸೃಷ್ಟಿ ಮಾಡಿಕೊಂಡಿದ್ದೆ. `ವುಮೆನ್ ಇನ್ ಲವ್’ ಹಾಗೂ `ಲೇಡಿ ಚಾಟೆರ್‍ಲೀಸ್ ಲವರ್’ ಹೆಸರಿನ ಲಾರೆನ್ಸ್ ಕಾದಂಬರಿಗಳ ತಿರುವಿ ಹಾಕಿದ್ದೆ. ಯಾರಾದರು ಬಲ್ಲವರು ಒಂದು ಅಪರೂಪದ ಸಂಗತಿಯ ಹೇಳಿದ ಕೂಡಲೆ ಅದನ್ನು ಅರೆದು ಕುಡಿದು ನನಗೆ ಬೇಕಾದಂತೆ ಮಾರ್ಪಡಿಸಿಕೊಳ್ಳುತ್ತಿದ್ದೆ.
ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯ ಮೂವತ್ತನೆಯ ಕಂತು
