Advertisement

Category: ಸರಣಿ

ಬಯಸುವುದು ಒಂದು ಸಿಗುವುದು ಮತ್ತೊಂದು!!: ಬಸವನಗೌಡ ಹೆಬ್ಬಳಗೆರೆ ಸರಣಿ

ನಿಲ್ದಾಣಕ್ಕೆ ನಡೆಯುವಾಗ ಆಗಾಗ್ಗೆ ಎದ್ದು ಬರುತ್ತಿದ್ದ ಶೂಗಳು ನನ್ನ ನಡಿಗೆಯ ವೇಗವನ್ನು ಕುಂಠಿತಗೊಳಿಸಿದ್ದವು. ನಾನು ತಡವಾಗುತ್ತದೆಯೆಂದು ಭಾವಿಸಿ ಶೂಗಳನ್ನು ಕೈಯಲ್ಲಿ ಹಿಡಿದು ರೈಲ್ವೇ ನಿಲ್ದಾಣ ಸಿಗುವವರೆಗೆ ಓಡಿದೆ. ನನ್ನ ಅದೃಷ್ಟಕ್ಕೆ ರೈಲು ಇನ್ನೂ ಹೋಗಿರಲಿಲ್ಲ. ಟಿಕೇಟ್ ತೆಗೆದುಕೊಂಡು ರೈಲನ್ನು ಹತ್ತಿ ಕುಳಿತೆ. ಇದೇ ಮೊದಲ ಬಾರಿಗೆ ನಾನು ಧಾರವಾಡಕ್ಕೆ ಹೋಗುತ್ತಿದ್ದೆ. ನನ್ನ ಎದುರಿಗೆ ಕುಳಿತಿದ್ದವರ ಬಳಿ ಹೇಗೆ ಹೋಗಬೇಕೆಂದು ಕೇಳಿದಾಗ ಅವರು ಮಾಹಿತಿ ತಿಳಿಸಿದರಲ್ಲದೇ ನನ್ನ ಬಗ್ಗೆ ಕನಿಕರ ತೋರಿ “ನಿಮಗೆ ಕೆಲಸ ಸಿಗದಿದ್ದರೆ ನನಗೆ ಕರೆ ಮಾಡಿ ನಾನು ನಿಮಗೆ ಬೇರೊಂದು ಕೆಲಸ ಕೊಡಿಸುತ್ತೇನೆ” ಎಂದು ಅವರ ನಂಬರ್ ಕೊಟ್ಟು ಹೋದರು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

Read More

ಒಂದು ಡೈಲಾಗ್‌ ಹೇಳಿ!: ಚಿತ್ರಾ ವೆಂಕಟರಾಜು ಸರಣಿ

ಕಲಿಕೆಯ ಪ್ರಾರಂಭದಲ್ಲಿ ಎಲ್ಲಾ ಕಲೆಗಳಲ್ಲೂ ಅದನ್ನು ಕಲಿಸುವವರನ್ನು ಅನುಕರಣೆ ಮಾಡುತ್ತಾರೆ. ಒಂದು ಹಂತದಲ್ಲಿ ಅದು ಅನಿವಾರ್ಯ ಕೂಡಾ. ನಂತರ ನಿಧಾನವಾಗಿ ಅದನ್ನು ಬಿಡಿಸಿಕೊಂಡು ಅಂದರೆ ಕೌಶಲವನ್ನು ಮೀರಿ, ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ ಒಂದು ಪಾತ್ರದ ನಡವಳಿಕೆ ಹೇಗಿರಬಹುದು ಎನ್ನುವುದರಿಂದ ನಟನೆಯ ಪ್ರಕ್ರಿಯೆಯನ್ನು ಪ್ರಾರಂಭ ಮಾಡಬೇಕಾಗುತ್ತದೆ. ಇಲ್ಲದಿದ್ದರೆ, ವರ್ಷಗಳ ಹಿಂದೆ ಅನುಕರಣೆ ಮಾಡಿದ ರೀತಿಯಲ್ಲೇ ಎಲ್ಲಾ ಸಂಭಾಷಣೆಗಳನ್ನೂ ಹೇಳುತ್ತೇವೆ. ಕಾಳಿದಾಸನಿಂದ ಹಿಡಿದು ಷೇಕ್ಸ್‌ಪಿಯರ್‌ ನವರೆಗೂ ಎಲ್ಲಾ ನಾಟಕದ ಎಲ್ಲಾ ಪಾತ್ರಗಳೂ ಒಂದೇ ರೀತಿ ಮಾತನಾಡುತ್ತವೆ. ನಿಜ ಜೀವನದಲ್ಲಿ ಮಾತನಾಡುವಂತೆ ರಂಗದ ಪಾತ್ರಗಳು ಮಾತನಾಡಲು ಆಗುವುದಿಲ್ಲ ಅದಕ್ಕೊಂದು ನಾಟಕೀಯತೆ ಇರಬೇಕಾಗುತ್ತದೆ.
ಚಿತ್ರಾ ವೆಂಕಟರಾಜು ಬರೆಯುವ “ಚಿತ್ತು-ಕಾಟು”

Read More

ಕಂಡಂಥ ಕನಸುಗಳು… ಮತ್ತೂ…: ಎಚ್. ಗೋಪಾಲಕೃಷ್ಣ ಸರಣಿ

ಈ ಹಿನ್ನೆಲೆಯಲ್ಲಿ ನಾನೂ ಪ್ರಕಾಶಕ ಆದೆ. ಪುಸ್ತಕ ಮಾರಾಟದಲ್ಲಿ, ಗ್ರಂಥಾಲಯಕ್ಕೆ (ರಾಜ್ಯದಲ್ಲಿನ ಗ್ರಂಥಾಲಯಗಳಿಗೆ ಅವರು ಕೇಳಿದಾಗ ಎರಡು ಮೂರು ಪ್ರತಿ ರವಾನಿಸಬೇಕು)ಕೊಡುವಲ್ಲಿ ಮತ್ತು ಕೆಲವು ಸಲ ಲಂಚವನ್ನು ಕೊಡಬೇಕಾದ ಸಂದರ್ಭ ಸಹ ಹುಟ್ಟುತ್ತದೆ… ಈ ಸಮಸ್ಯೆ ಆಳಕ್ಕೆ ಇಳಿದ ಹಾಗೆ ಇದು ನನ್ನಂತಹ ಸಭ್ಯ, ಸಜ್ಜನನಿಗೆ ಸರಿಹೋಗದ ವ್ಯಾಪಾರ ಅನಿಸಿತಾ? ಇನ್ನುಮೇಲೆ ಪ್ರಕಾಶಕ ಎಂದು ಕರೆಸಿಕೊಳ್ಳಬಾರದು ಎಂದು ನಿರ್ಧರಿಸಿದೆ. ಹೀಗೆ ಒಬ್ಬ ಪ್ರಕಾಶಕ ಆಗಿ ಪೆಂಗ್ವಿನ್ ಅಂತಹ ದೊಡ್ಡ ಸಂಸ್ಥೆಗೆ ಪೈಪೋಟಿ ಕೊಡುವ ನನ್ನಾಸೆ ಅಂದೇ ಕಮರಿ ಹೋಯಿತು!
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ

Read More

ಸುಂದರ ಕಾಡಿನ ರೋಚಕ ಕಥೆಗಳು-೮: ರೂಪಾ ರವೀಂದ್ರ ಜೋಶಿ ಸರಣಿ

ಜೇನು ತುಂಬಿದ ರಟ್ಟಿನ ಜೊತೆಗೆ ಇರುವ ಜೇನು ನೊಣಗಳ ಮೊಟ್ಟೆ ಮರಿ ತುಂಬಿದ್ದ ರಟ್ಟನ್ನು ನಿರ್ದಯವಾಗಿ ಬಿಸಾಡಲಾಗುತ್ತಿತ್ತು. ಈ ಹೊಗೆಯ ತಾಪಕ್ಕೆ ನೂರಾರು ಜೇನು ನೊಣಗಳು ಸಾಯುತ್ತಿದ್ದವು. ಒಂದಿಷ್ಟು ದಿಕ್ಕೆಟ್ಟು ಹಾರಿ ಹೋಗುತ್ತಿದ್ದವು. ಇದನ್ನೆಲ್ಲಾ ಈಗ ನೆನೆದರೆ, ‘ಛೆ… ನಾವು ಮನುಷ್ಯರು ಎಷ್ಟು ಸ್ವಾರ್ಥಿಗಳು. ಪಾಪದ ನೊಣಗಳು ಊರೂರು ಸುತ್ತಿ ಮಕರಂದ ಸಂಗ್ರಹಿಸಿ ತಮಗಾಗಿ ತಯಾರಿಸಿಕೊಂಡಿದ್ದ ಊಟವನ್ನು ಮೋಸದಿಂದ ಅಪಹರಿಸುವುದಲ್ಲದೇ ಅವರ ಪ್ರಾಣಕ್ಕೂ ಹಾನಿಯುಂಟು ಮಾಡುತ್ತೇವಲ್ಲಾ..
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿಯ ಹದಿನೇಳನೆಯ ಕಂತು

Read More

“ಆಕಿ” ಅಂದ್ರ ಅಕ್ಷರ ಕಲಿಸಿದಾಕಿ: ಸುವರ್ಣ ಚೆಳ್ಳೂರು ಸರಣಿ

ಫುಲೆ ಶಾಲೆಯಲ್ಲಿ ಕಲಿತಂತಹ ಹೆಣ್ಣು ಮಕ್ಕಳು ವೈಚಾರಿಕವಾಗಿ ಚಿಂತನೆ ಮಾಡುವಷ್ಟು ಬೆಳೆದು ಬರಹಗಾರರಾದ್ರು, ಅದ್ರಲ್ಲಿ ಭಾರತದ ಮೊಟ್ಟ ಮೊದಲ ಸ್ತ್ರೀವಾದಿ ಲೇಖಕಿ ತಾರಾಬಾಯಿ ಶಿಂಧೆ ಅವರು ಸಾವಿತ್ರಿಬಾಯಿ ಫುಲೆ ಅವರ ಶಿಷ್ಯೆ ಆಗಿದ್ರು, ಈ ರೀತಿಯಾಗಿ ಅದೆಷ್ಟೋ ವಿರೋಧಗಳ ನಡುವೆ ತಮ್ಮ ಸಮಾಜ ಸುಧಾರಣೆಯನ್ನ ಮುಂದುವರಿಸಿದರು. ಈ ಪಾಠದಿಂದ ಗೊತ್ತಾಗೋದೇನಂದ್ರೆ ಶಿಕ್ಷಣಕ್ಕೆ ಯಾವ ಜಾತಿಯ ಹಂಗೂ ಇಲ್ಲ, ಕಲಿಯುವ ಮನಸ್ಸಿದ್ರೆ ಎಂಥವರೂ ಕಲಿತು ಸಾಧನೆ ಮಾಡಬಹುದು’ ಅಂತ ಹೇಳುವಷ್ಟರಲ್ಲಿ ಬೆಲ್ ಆಗಿ ಊಟಕ್ ಬಿಟ್ಟಿತ್ತು, ಮೇಡಂ ಕೂಡ ಆಫಿಸ್ ರೂಮ್ ಕಡೆ ಹೆಜ್ಜೆ ಹಾಕಿದ್ರು.
ಸುವರ್ಣ ಚೆಳ್ಳೂರು ಬರೆಯುವ “ಆಕಿ” ಸರಣಿಯಲ್ಲಿ ನಾಲ್ಕನೆಯ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ