Advertisement

Tag: ಕೆಂಡಸಂಪಿಗೆ

ಸಮಾಜದ ಸ್ವಾಸ್ಥ್ಯ ಮತ್ತು “ಇಮಾಮ್ ಸಾಹೇಬರ ಕುದುರೆ”: ವೈ.ಎಸ್.‌ ಹರಗಿ ಕಾದಂಬರಿಯ ಕುರಿತು ಸಂಗೀತ ರವಿರಾಜ್ ಬರಹ

ಶಾಂತಿಪುರದಲ್ಲಿ ಒಂದಾನೊಂದು ಕಾಲದಲ್ಲಿ ಎರಡು ಧರ್ಮದವರ ಸಾಮರಸ್ಯ ಸಹಜವಾಗಿ ಇತ್ತು. ಕ್ರಿಸ್ತ ಶಕ 1811 ರಲ್ಲಿ ಬದುಕಿದ್ದ ಇಮಾಮ್ ಸಾಹೇಬರೇ ಸ್ವತಃ ಕುದುರೆ ಏರಿ ಕಡುಬಿನ ಕಾಳಗದ ದಿವಸ ಹಿರೇಮಠದ ಗುರುಲಿಂಗೇಶ್ವರನ ಗದ್ದುಗೆಯವರೆಗೂ ಬಂದು, ಗದ್ದುಗೆಗೆ ಹೂಮಾಲೆ ಹಾಕಿ ಕೈಮುಗಿದು ಹೋಗುತ್ತಿದ್ದರಂತೆ. ಆ ಪ್ರತೀತಿ ಮುಂದುವರೆದುಕೊಂಡು ಬಂದು ತದನಂತರ ಊರಿನ ಜನರು ತಾವೇ ಕಟ್ಟಿಕೊಂಡ ಮತ ಧರ್ಮಗಳ ಗೋಡೆಗಳ ಆಚೆ ಈಚೆ ಪರಸ್ಪರ ಮೂಗು ಮುರಿಯುತ್ತಿದ್ದರೆ, ಹಿರೇಮಠದ ಗರ್ಭಗುಡಿ ಗೋಪುರ ಮತ್ತು ಇಮಾಮ್ ಸಾಹೇಬರ ದರ್ಗಾ ಕಟ್ಟೆಯ ಮೇಲೆ ಬೆಳೆದು ನಿಂತ ಆಕಾಶದೆತ್ತರದ ಬೇವಿನ ಮರಗಳು ಮಾತ್ರ ಅನ್ಯೋನ್ಯತೆಯಿಂದ ಪರಸ್ಪರ ಮುಖ ನೋಡಿ ನಿತ್ಯವು ಶಾಂತಿಪುರದ ಜನರ ಹುಚ್ಚುತನಕ್ಕೆ ನಗೆಯಾಡುವಂತೆ ಕಾಣುತ್ತದೆ.
ವೈ.ಎಸ್.‌ ಹರಗಿ ಕಾದಂಬರಿ “ಇಮಾಮ್ ಸಾಹೇಬರ ಕುದುರೆ” ಕುರಿತು ಸಂಗೀತ ರವಿರಾಜ್, ಚೆಂಬು ಬರಹ

Read More

ತಿರುವುಮುರುವಿನ ಹಾದಿಯಲ್ಲಿ….: ಜುಲೇಖಾ ಬೇಗಂ ಜೀವನ ವೃತ್ತಾಂತ

ನಾನು ಕಲಾವಿದೆ ಎಂಬುದು ಅವರಿಗೂ ತಿಳಿದಿರದ ವಿಷಯವೇನಲ್ಲ. ನನ್ನ ಬಗ್ಗೆ ಪೂರ್ತಿಯಾಗಿ ವಿಚಾರಿಸಿಕೊಂಡೇ ಬಂದಿದ್ದರು. ನನ್ನೊಳಗಿನ ಕಲೆಗೆ ಅವಮಾನ ಮಾಡಬಾರದೆಂದೂ ಹಾಗೇ ಅದನ್ನು ಪೋಷಿಸಬೇಕೆಂದು ಕಿವಿಮಾತೇನೊ ಹೇಳಿದರು. ಹೇಳಿದ ಮಾತು ಕಿವಿಯ ಮೇಲೆ ಬೀಳಲೇ ಇಲ್ಲ! ಆಗುವುದಿಲ್ಲ ಎಂದು ಮುಖಭಂಗಿಯಲ್ಲೇ ಕೂತಿದ್ದೆ. ಆಗುಹೋಗುಗಳನ್ನು ನೋಡುತ್ತಿದ್ದ ಅಪ್ಪ, ‘ಏನ್ ಮಾತಾಡ್ತೀಯೋ, ಮನ್ಷನೇನೊ ನೀನು? ನನ್ ಮಗ್ಳು ಏನ್ ಹೇಳ್ತಾ ಅದಾಳು!
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಇಪ್ಪತ್ಮೂರನೆಯ ಕಂತು

Read More

ಗುಬ್ಬಚ್ಚಿ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಗುಬ್ಬಚ್ಚಿಯ ಕೂಗು ಸಣ್ಣ ಸಣ್ಣ ಚಿಲಿಪಿಲಿ ಧ್ವನಿಗಳು. ಗುಂಪಾಗಿ ಹಾರಾಡುವಾಗ, ಪರಸ್ಪರ ಸಂಪರ್ಕಕ್ಕಾಗಿ ಮತ್ತು ಎಚ್ಚರಿಸಲು ಅಥವಾ ವಿಶ್ರಾಂತಿ ಪಡೆಯುವ ವೇಳೆಯಲ್ಲಿ ಚಿರ್.ಪ್, ಟಿಶ್.ಲ್ಪ್.. ಅಥವಾ ಫಿಲ್.ಪ್ ಮುಂತಾದ ಕೂಗುಗಳ ಮೂಲಕ ಸಂಪರ್ಕಿಸುತ್ತವೆ. ಅಲ್ಲದೆ, ಗೂಡಿನ ಮಾಲೀಕತ್ವವನ್ನು ಘೋಷಿಸಲು ಮತ್ತು ಸಂತಾನವೃದ್ಧಿ ಋತುವಿನಲ್ಲಿ ಸಂಗಾತಿಯನ್ನು ಆಕರ್ಷಿಸಲು ಗಂಡು ಗುಬ್ಬಚ್ಚಿ ಇಂತಹ ಕರೆಗಳನ್ನು ಪುನಃ ಪುನಃ ಮತ್ತು ವೇಗದೊಂದಿಗೆ ಕೂಗುತ್ತದೆ. ಗುಬ್ಬಚ್ಚಿಗಳು ರಾತ್ರಿ ಎಲೆಭರಿತ ಮರಗಳು, ಮುಳ್ಳು ಪೊದೆಗಳಲ್ಲಿ ವಿಶ್ರಾಂತಿ ಪಡೆಯುತ್ತವೆ.
ಡಾ. ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ “ಗುಬ್ಬಚ್ಚಿ” ಹಕ್ಕಿಯ ಕುರಿತ ಬರಹ ಇಲ್ಲಿದೆ

Read More

ವೀರೇಶ ಶಿವಲಿಂಗಪ್ಪ ಸಜ್ಜನ ಬರೆದ ಈ ಭಾನುವಾರದ ಕತೆ “ಕ್ಯಾನವಾಸ್”

ಪ್ರಭಾಳನ್ನ ನಾನೊಬ್ಬ ಹುಚ್ಚನಂತೆ ಆವಾಹಿಸಿಕೊಂಡೆ. ಅವಳನ್ನೇ ಬದುಕಿನ ಬಣ್ಣವಾಗಿಸಿಕೊಂಡೆ. ಕಾವಾದ ಹಿಡಿ ಹಿಡಿ ಮಣ್ಣಿನಲ್ಲೂ ಆಕೆಯ ಹೆಜ್ಜೆಗಳನ್ನ ತಡಕಾಡಿದೆ. ನನ್ನ ಪ್ರತಿ ಪೇಂಟಿಂಗಿನಲ್ಲೂ ಆಕೆಯನ್ನ ಚಿತ್ರಿಸಿದೆ. ನನ್ನ ಜೀವನದಲ್ಲಿ ಘಟಿಸಿದ ವಾಸುದೇವನ ಬಣ್ಣಗಳು, ಅಮ್ಮನ ಚಿತ್ರಗಳು, ಈ ನನ್ನ ಪ್ರಭಾ- ಸತ್ಯ. ಪ್ರಭಾ ಪ್ಯಾಲೆಟ್ಟಿನಲ್ಲಿ ಕಲಿಸಿದ ಬಣ್ಣದಂತೆ. ವಾಸುದೇವನನ್ನ ಚಿತ್ರಿಸುವಾಗ ನನ್ನನ್ನ ಚಿತ್ರಿಸಿದ ಪ್ರಭಾ. ಈಕೆ ಕಲಾಕೃತಿಯಲ್ಲ. ಚಿತ್ರವಲ್ಲ.
ವೀರೇಶ ಶಿವಲಿಂಗಪ್ಪ ಸಜ್ಜನ ಬರೆದ ಈ ಭಾನುವಾರದ ಕತೆ “ಕ್ಯಾನವಾಸ್” ನಿಮ್ಮ ಓದಿಗೆ

Read More

ಬೀಜಾವೃತ ಅಪಘಾತ ವೃತ್ತಾಂತ!: ಕ್ಷಮಾ ವಿ ಭಾನುಪ್ರಕಾಶ್ ಕಥಾ ಸರಣಿ

ವಿಭಾ, “ಅಲ್ಲ ಬಾವ, ಬೀಜಗಳು ಇಲ್ಲದ ಕಲ್ಲಂಗಡಿ, ದ್ರಾಕ್ಷಿ ಇವೆಲ್ಲಾ ತಿನ್ನಕ್ಕೇನೋ ಚೆನ್ನಾಗಿರತ್ತೆ. ಆದ್ರೆ, ಒಂದು ಸಲ ಹಣ್ಣು ಬಿಟ್ರೆ, ಆ ಗಿಡದ ಕಥೆ ಮುಗೀತಾ? ಬೀಜಗಳೇ ಇಲ್ದೇ ಆ ಗಿಡ ಮರಿ ಹಾಕೋದು ಹೇಗೆ? ಅಂದ್ರೆ, ಹೊಸ ಗಿಡ ಬೆಳೆಯೋದು ಹೇಗೆ? ಪ್ರಕೃತಿ ಇಂಥಾ ಕೆಲ್ಸ ಯಾಕೆ ಮಾಡ್ತು ಅಂತ ಆಶ್ಚರ್ಯ ಆಗತ್ತೆ” ಎಂದಳು. ಆಗ ಪ್ರಕಾಶ್, “ನೀನು ಹೇಳಿದ್ದು ನಿಜವೇ ವಿಭಾ. ಯಾವುದೇ ಪ್ರಭೇದವಾಗ್ಲೀ, ತನ್ನ ಉಳಿವಿನ ಕಡೆ, ತನ್ನ ಸಂತತಿಯನ್ನ ಬೆಳೆಸೋ ಕಡೆ ಸಹಜವಾಗಿಯೇ ಗಮನ ಇರತ್ತೆ. ಪ್ರತೀ ಜೀವಿಯ, ಪ್ರತೀ ‘ಸ್ಪೀಶೀ’ ಅಂದ್ರೆ ಪ್ರಭೇದದ ಮೂಲಭೂತ ಕೆಲಸ ಅದು. ಆದ್ರೆ, ನಿಸರ್ಗದಲ್ಲಿ ಕೂಡ ಕೆಲವೊಮ್ಮೆ ‘ಆಕ್ಸಿಡೆಂಟ್’ ಆಗತ್ತೆ!” ಎಂದ.
ಕ್ಷಮಾ ವಿ. ಭಾನುಪ್ರಕಾಶ್‌ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ದಲ್ಲಿ ಹದಿನಾರನೆಯ ಕತೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ