Advertisement

Tag: ಕೆಂಡಸಂಪಿಗೆ

ಒಂದು ಸುಳ್ಳು ಒಂದು ಸತ್ಯ: ಆಶಾ ಜಗದೀಶ್ ಅಂಕಣ

ಬಹುಶಃ ಕತೆಗಳ ಅವಶ್ಯಕತೆಯಿಲ್ಲ ಆ ವನಸಿರಿಗೆ. ಜೀವಂತ ಕತೆ ಹೊತ್ತು ಓಡಾಡುವ ಅದೆಷ್ಟು ಜನ ಇಲ್ಲೊಮ್ಮೆ ಬಂದು ತಮ್ಮ ಜೋಡಿ ಹೆಜ್ಜೆಗಳ ಗುರುತು ಮಾಡಿ ಹೋಗಿದ್ದರೋ… ಕತೆಗಳು ನಮಗೆ ಬೇಕು. ನಮ್ಮೊಳಗಿನ ಕತೆಗಿಂತ ಭಿನ್ನವಾದ ಕತೆಯ ಕುರಿತಾದ ಹುಚ್ಚು ಕೂತೂಹಲವನ್ನ ತಣಿಸಿಕೊಳ್ಳಲಿಕ್ಕಾಗಿ… ಸುಳ್ಳೇ ಆದರೂ ನಂಬಲು ಸಿದ್ಧರಿರುತ್ತೇವಲ್ಲ ಹೇಗಿದ್ದರೂ… ಕತೆ ಕಟ್ಟುವುದರಲ್ಲಿ ನಿಸ್ಸೀಮರು ನಾವು.
ಆಶಾ ಜಗದೀಶ್ ಬರೆಯುವ “ಆಶಾ ಲಹರಿ” ಅಂಕಣ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ರಘುನಾಥ ಚ.ಹ. ಕತೆ

ಅಪ್ಪನ ನಂಬಿಕೆಗಳು ಬದಲಾಗಿದ್ದರೂ, ನೈತಿಕವಾಗಿ ಅವರು ಕುಸಿದಿದ್ದರೂ, ಅಪ್ಪ ಬ್ರಾಂದಿ ಅಂಗಡಿಯ ಗಲ್ಲಾದ ಮೇಲೆ ಕೂರುವ ಚಿತ್ರವನ್ನು ಕಲ್ಪಿಸಿಕೊಳ್ಳುವುದು ಮೋಹನನಿಗೆ ತೀರಾ ಅಸಹನೀಯವಾಗಿ ಕಂಡಿತು. ಬ್ರಾಂದಿ ಅಂಗಡಿಯ ಗುತ್ತಿಗೆ ಹಿಡಿದರೆ ಅಪ್ಪ ಇನ್ನೆಂದೂ ಮೊದಲಿನ ದಾರಿಗೆ ಬರುವುದಿಲ್ಲ ಎನ್ನಿಸಿ, ಅಪ್ಪನ ನಿರ್ಧಾರವನ್ನು ವಿರೋಧಿಸಲು ಮೋಹನ ನಿರ್ಧರಿಸಿದ.
‘ನಾನು ಮೆಚ್ಚಿದ ನನ್ನ ಕತೆʼಯ ಸರಣಿಯಲ್ಲಿ ರಘುನಾಥ ಚ.ಹ. ಬರೆದ ಕತೆ “ಕಾಲ ದಾರಿಯಲಿ ಹುಲ್ಲು”

Read More

ಬದುಕೆಂಬ ಚಹಾಗೊಂದಿಷ್ಟು ಒಲವಿನ ಸಕ್ಕರೆ: ರಾಮ್ ಪ್ರಕಾಶ್ ರೈ ಕೆ. ಸರಣಿ

ಜನಾರ್ಧನನ ಸಹೋದ್ಯೋಗಿ, ಆಪ್ತ ಮಿತ್ರ ಅಸಿಸ್ಟೆಂಟ್ ಶ್ರೀನಿವಾಸ ಅಸಂಖ್ಯ ಬಾರಿ ಅವನ ಪತ್ನಿಯ ಜೊತೆ ಮಾತನಾಡುತ್ತಲೇ ಇರುತ್ತಿದ್ದ. ಜೊತೆಯಾಗಿ ದಿನಗಳು ರಾಶಿಗಟ್ಟಲೆ ಕಳೆದರೂ, ಆಷಾಢದ ಮಳೆಯಂತೆ ಇವರ ಸಂವಾದ ಮುಗಿಯುವುದಿಲ್ಲ, ಈ ಪ್ರೀತಿಯ ಬಣ್ಣಿಸುವ ಪರಿಯೆಂತು ಎಂದು ಜನಾರ್ಧನ ಅಂದುಕೊಳ್ಳುತ್ತಿದ್ದ. ಒಂದು ಬಾರಿ ಶ್ರೀನಿವಾಸನ ಮನೆಗೆ ಹೋಗುವ ಜನಾರ್ಧನನಿಗೆ ಅವನ ಪತ್ನಿಗೆ ಮಾತು ಬರುವುದಿಲ್ಲ ಎಂದು ತಿಳಿಯುತ್ತದೆ.
ರಾಮ್ ಪ್ರಕಾಶ್ ರೈ ಕೆ. ಸರಣಿ

Read More

ಒಂಟಿತನ, ಖೋಖೋ, ಕಪ್ಪುಬಿಳುಪಿನ ಗಾಂಧಿ ಚಿತ್ರ: ಮಾರುತಿ ಗೋಪಿಕುಂಟೆ ಸರಣಿ

ಮೊದಮೊದಲು ಮೂವತ್ತು ನಲವತ್ತು ಸೆಕೆಂಡ್‌ಗಳಲ್ಲಿ ಔಟಾಗುತ್ತಿದ್ದ ನಾನು ಕ್ರಮೇಣ ಆಟದ ಪಟ್ಟುಗಳನ್ನು ತಿಳಿದುಕೊಂಡು ಒಂದೊಂದೆ ಕಲಿಯುತ್ತಾ ಹೋದೆ. ದಿನಕಳೆದಂತೆ ಎರಡು ನಿಮಿಷ ಓಡುವಷ್ಟರ ಮಟ್ಟಿಗೆ ತರಬೇತಾದೆ. ಹಂತ ಹಂತವಾಗಿ ಆಡುತ್ತಾ ಮೊದಲನೆ ಬ್ಯಾಚ್‌ಗೆ ಶಿಫ್ಟಾದೆ. ಕೊನೆಗೆ ಗಂಡು ಮಕ್ಕಳ ಖೊಖೋ ಪಂದ್ಯಕ್ಕೆ ಕ್ಯಾಪ್ಟನ್ ಆಗುವಷ್ಟರಮಟ್ಟಿಗೆ ಪ್ರಾವೀಣ್ಯತೆ ಪಡೆದೆ.
ಮಾರುತಿ ಗೋಪಿಕುಂಟೆ ಬರೆಯುವ ಸರಣಿ

Read More

ಆಧುನಿಕ ಮನೋಧರ್ಮದ ಭರತನ ಚರಿತ್ರೆ: ಚಂದ್ರಮತಿ ಸೋಂದಾ ಬರಹ

ಪಿತೃಪ್ರಧಾನ ವ್ಯವಸ್ಥೆಯ ದೌರ್ಬಲ್ಯಗಳನ್ನು ಸೂಕ್ಷ್ಮವಾಗಿ ಎತ್ತಿ ತೋರಿಸುತ್ತಲೇ ಅದಕ್ಕೆ ವಿಭಿನ್ನವಾದ ಇನ್ನೊಂದು ಮುಖವೂ ಸಾಧ್ಯವಿದೆ ಎನ್ನುವ ಪಿಸುನುಡಿಯೊಂದಿಗೆ ಹೊರಡುವ ಕೃತಿ ನಿಧಾನವಾಗಿ ಅದರ ಸಾಧ್ಯತೆಯನ್ನು ಅನಾವರಣಗೊಳಿಸುತ್ತ, ಸರಿಯಾದ ದಾರಿ ಹೀಗಿರಬೇಕು ಎನ್ನುವಂತೆ ಮುಂದುವರಿಯುತ್ತದೆ. ರಾಜಸತ್ತೆಯಲ್ಲಿ ಹಿರಿಮಗನಿಗೆ ಪಟ್ಟಗಟ್ಟಿದ ಮೇಲೆ ಉಳಿದ ಅಣ್ಣತಮ್ಮಂದಿರು, ಪರಿವಾರದವರು ರಾಜನನ್ನು ಅವಲಂಬಿಸಿಯೇ ಇರಬೇಕೆನ್ನುವ ತಥಾಗತ ನಂಬಿಕೆಯಲ್ಲಿ ಉಳಿದವರ ಮನಃಸ್ಥಿತಿ ಏನಿದ್ದೀತು? ಹೇಗಿದ್ದೀತು?
ಡಾ. ಆರ್ ಸುನಂದಮ್ಮ ಬರೆದ “ಭರತಕಲ್ಪ” ಕೃತಿಯ ಕುರಿತು ಡಾ. ಚಂದ್ರಮತಿ ಸೋಂದಾ ಬರಹ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ