Advertisement

Tag: kendasampige

ಶ್ರೀರಂಗನಾಯಕ ರಾಜೀವ ಲೋಚನ ರಮಣ…: ವಿನಾಯಕ ಅರಳಸುರಳಿ ಅಂಕಣ

ಕೋಣೆ ಹಾಗೂ ಅದರ ಹಾಸಿಗೆಗಷ್ಟೇ ಸೀಮಿತವಾಗಿ ಹೋದ ಅಜ್ಜನಿಗೆ ಇಡೀ ಮನೆಯಲ್ಲಿ ಸ್ವಲ್ಪವಾದರೂ ಮನೋರಂಜನೆಗೆ ಒದಗುತ್ತಿದ್ದವನು ನಾನೊಬ್ಬನೇ. ಯಾವ್ಯಾವುದೋ ಸಿನಿಮಾ, ಭೂತ, ಪ್ರೇತದ ಕಥೆಗಳನ್ನು ಮನಸ್ಸಿನಲ್ಲಿ ಕಲ್ಪಿಸಿಕೊಂಡು ಅಂಗಳದಲ್ಲಿ ಡಿಶೂಂ ಡಿಶೂಂ ಎಂದು ಗಾಳಿಯೊಡನೆ ಗುದ್ದಾಡುತ್ತ ಸುಳಿದಾಡುತ್ತಿದ್ದ ನನ್ನನ್ನು ಗಣೇಶಾ ಎಂದು ಕರೆಯುತ್ತಿದ್ದ ಅಜ್ಜ ‘ಇಲ್ಲಿ ಜಗುಲೀಲಿ, ನನ್ನ ಎದುರೇ ಆಡು ಗಣೇಶಾ’ ಎಂದು ಗೋಗರೆಯುತ್ತಿದ್ದರು.‌
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”

Read More

ಇದು ಕಲ್ಲು ಕರಗುವ ಸಮಯ!: ಕ್ಷಮಾ ವಿ. ಭಾನುಪ್ರಕಾಶ್ ಕಥಾ ಸರಣಿ

ನಮ್ಮ ಯಾಣದ ಈ ಕಪ್ಪುಶಿಖರ ಒಂದಲ್ಲ, ಹತ್ತಲ್ಲ, ನೂರಲ್ಲ, ಬರೋಬ್ಬರಿ ೨೭೦ ಕೋಟಿ ವರ್ಷಗಳಷ್ಟು ಹಳೇದು. ಅಂದ್ರೇ, ಭೂಮಿ ಮೇಲೆ ಮನುಷ್ಯರೇ ಇರ್ಲಿಲ್ಲ; ನಮಗೆ ಗೊತ್ತಿರೋ ಯಾವ ಪ್ರಾಣಿ ಪಕ್ಷಿಗಳೂ ಇರ್ಲಿಲ್ಲ; ನಿನ್ ಫೇವರೆಟ್ ಡೈನೋಸಾರ್ ಕೂಡ ಇರ್ಲಿಲ್ಲ; ಈ ಯಾಣದ ಕಪ್ಪುಶಿಲೆಗಳು ಮೊದಲ ಬಾರಿಗೆ ಹೀಗೆ ಎದ್ದುನಿಂತಾಗ ಕೆಲವೇ ಬಗೆಯ ಬ್ಯಾಕ್ಟೀರಿಯಾದಂತಹ ಸೂಕ್ಷ್ಮಾಣುಜೀವಿಗಳು ಇದ್ವು ಅಷ್ಟೇ. ಅಂದಿನಿಂದ ಇಂದಿನವರೆಗೆ ಇಲ್ಲೇ ನಿಂತು, ಇಡೀ ಭೂಮಿ ಬದಲಾಗೋದನ್ನ ಕೋಟ್ಯಾನುಕೋಟಿ ವರ್ಷಗಳಿಂದ ನೋಡ್ತಾ ಇದೆ ನಮ್ಮ ಈ ಯಾಣದ ಶಿಲೆಗಳು! ಎಂಥಾ ಅದ್ಭುತ ಅಲ್ವಾ?” ಎಂದ ಮತ್ತೊಮ್ಮೆ ಆ ಬೃಹತ್ ಶಿಲಾಗುಹೆಗಳನ್ನು ಕಣ್ಣರಳಿಸಿ ನೋಡುತ್ತಾ.
ಕ್ಷಮಾ ವಿ. ಭಾನುಪ್ರಕಾಶ್‌ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ದಲ್ಲಿ ಹದಿಮೂರನೆಯ ಕತೆ

Read More

ಚಳಿಚಳಿ ಎನ್ನದಿರಿ!: ವಿನತೆ ಶರ್ಮಾ ಅಂಕಣ

ಮರದಿಂದ ಮನೆ ಕಟ್ಟುವುದು ಅಂದರೆ ಅದಕ್ಕೆ ಅದೆಷ್ಟು ಮರಗಳ ಆಹುತಿಯಾಗುತ್ತದೆ ಎಂದೆನಿಸಬಹುದು ನಿಮಗೆ. ನಿಜ. ವಸಾಹತುಶಾಹಿ ಬ್ರಿಟಿಷರ ಸಂಸ್ಕೃತಿಯಿಂದ ಬಂದ ಮನೆ ಕಟ್ಟುವ ಪರಂಪರೆಗೆ ಮತ್ತು ಕೈಗಾರೀಕರಣಕ್ಕೆ ಮೊದಮೊದಲು ಸಾವಿರಾರು ಎಕರೆ ಪ್ರದೇಶಗಳ ಕಾಡುಗಳು ಆಹುತಿಯಾದವು. ಇದನ್ನು ಲಾಗಿಂಗ್ ಅನ್ನುತ್ತಾರೆ. ಎರಡು ಶತಮಾನಗಳ ಕಾಲ ಆ ರೀತಿ ಟ್ರೀ ಲಾಗಿಂಗ್ ನಡೆಯಿತು. ಖಂಡ-ದೇಶದ ಕಾಡುಗಳು, ವನ್ಯಜೀವಿಗಳು ವಿನಾಶದ ಅಂಚಿಗೆ ಬಂದಾಗ ಸಮಾಜವು, ಸರ್ಕಾರಗಳು ಎಚ್ಚೆತ್ತುಕೊಂಡು ಲಾಗಿಂಗ್ ನಿಲ್ಲಿಸಿ, recycling ಪದ್ಧತಿಯನ್ನು ಆಚರಣೆಗೆ ತಂದರು
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

Read More

ಕೆಮ್ಮಣ್ಣು ಜೀರಿಂಬೆ ಮತ್ತು ಚಿಕ್ಕವ್ವನೆಂಬ ಎಮ್ಮೆ: ಎಸ್. ಗಂಗಾಧರಯ್ಯ ಅನುಭವ ಕಥನ

ನನಗೀಗ ಏನು ಮಾಡಬೇಕೆಂಬುದು ತಿಳಿಯದೆ ಪೂರಾ ಗಾಬರಿಗೊಳಗಾದೆ. ಅಂಥ ಗಾಬರಿಯಲ್ಲೂ ಚಿಕ್ಕವ್ವನ ಜಾರುತ್ತಿದ್ದ ಬಾಲವನ್ನೇ ಆಸರೆಯಾಗಿಸಿಕೊಂಡು ಅವಳ ಬೆನ್ನ ಮೇಲೆ ಕೂತು ಬಚಾವಾಗುವ ಆಸೆಯಿಂದ ಹಿಡಿದಿದ್ದ ಬಾಲವನ್ನೂ ಕೈ ಬಿಟ್ಟು ಮೆಲ್ಲಗೆ ಅವಳ ಮೈಯ್ಯ ಹತ್ತಿರ ಸಾಗಿದೆ. ಅದು ನಾನು ಮಾಡಿಕೊಂಡ ದೊಡ್ಡ ಯಡವಟ್ಟಾಗಿತ್ತು. ಮೊದಲೇ ನೊಣ ಕೂತರೆ ಜಾರುವಷ್ಟು ನುಣುಪಾಗಿದ್ದ ಅವಳ ಮೈ ನೀರಿನೊಳಗಿದ್ದುದರಿಂದ ಅದಕ್ಕೆ ಮತ್ತಷ್ಟು ನುಣುಪು ಬಂದು ಮತ್ತಷ್ಟು ಜಾರುತ್ತಾ ನಾನು ಎಷ್ಟೇ ಪಟ್ಟು ಹಾಕಿದರೂ ಆ ಪಟ್ಟುಗಳೆಲ್ಲಾ ಮಕಾಡೆ ಮಲಗಿದವು.
ಎಸ್.‌ ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”

Read More

ಭಯ, ಭಕ್ತಿ, ಮತ್ತು ಬೆರಗು!: ಸುಕನ್ಯಾ ಕನಾರಳ್ಳಿ ಅಂಕಣ

ಕತ್ತಲೆಯ ಭಯದಲ್ಲಿ ಲಬೋ ಲಬೋ ಬಾಯಿ ಬಡಿಯುವಾಗಲೇ ಕಣ್ಣಿನ ಅಂಚಿನಿಂದ ಬೀದಿ ಬೆಳಕಲ್ಲಿ ಎಳೆ ಎಳೆಯಾಗಿ ಬೀಳುತ್ತಿದ್ದ ಮಳೆ ಕಾಣಿಸಿ ಅಳು ಥಟ್ಟನೆ ನಿಂತೇ ಹೋಗಿತ್ತು. ಹಿಂದೆ ಕತ್ತಲೆಯ ಪರದೆ. ಅದರ ಮೇಲೆ ನೀಳವಾಗಿ ಬೀಳುತ್ತಿದ್ದ ಹೊಳೆವ ಮಳೆಯ ವೈಭವ! ನನ್ನ ಎಳೆಯ ಮನಸ್ಸಿಗೆ ಬೆರಗೋ ಬೆರಗು. ಬುದ್ಧಿ ಬೆಳೆಯುವ ಮುಂಚೆಯೇ ಕತ್ತಲೆ, ಗುಮ್ಮ, ದೆವ್ವ ಇತ್ಯಾದಿಗಳ ಬಗ್ಗೆ ಬೆಚ್ಚಿ ಬೀಳುತ್ತಿದ್ದ ಮನಸ್ಸಿಗೆ ಕತ್ತಲೆಯ ಸೌಂದರ್ಯ ಮತ್ತು ಮಳೆಯ ಲಾಲಿತ್ಯ ತಾಗಿ ಮೌನವಾಗಿ ನಿಂತುಬಿಟ್ಟಿದ್ದೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ