Advertisement

Tag: ವಿನಾಯಕ ಅರಳಸುರಳಿ

ದೇವ್ರು ಶಾಣ್ಯಾ ಅದಾನ್ರೀ… : ವಿನಾಯಕ ಅರಳಸುರಳಿ ಅಂಕಣ

ಹೌದಲ್ಲವೇ? ಎಲ್ಲಾ ಸರಿಯಾಗಿರುವ ಹೊತ್ತಿನಲ್ಲೂ ಯಾವುದೋ ಒಂದು ಕೊರಗು ನಮ್ಮನ್ನು ಕಾಡುತ್ತಲೇ ಇರುತ್ತದೆ. ಮಧ್ಯಾಹ್ನದ ನೆರಳಿನಲ್ಲಿ ಯಾರದೋ ಹುಡುಕಾಟ… ಸಂಜೆಯ ತಂಪಲ್ಲಿ ಯಾವುದೋ ನೆನಪು.. ರಾತ್ರೆಯ ಕನವರಿಕೆಯಲ್ಲಂತೂ ಎಂಥದ್ದೋ ದುಃಖ… ಇವೆಲ್ಲಾ ಏಕೆ? ಕಳೆದ ನೆನ್ನೆಗಳೇ ಅದೇಕೋ ಚಂದ ಎನಿಸುತ್ತವೆ. ಇಂದು ಎನ್ನುವುದು ಯಾವಾಗಲೂ ಕಹಿ ಕಹಿ. ಈ ಕ್ಷಣಕ್ಕೆ ಮೈ ಚಾಚಿ ಮಲಗಿರುವ ಹಂಸತೂಲಿಕಾ ತಲ್ಪದಲ್ಲೂ ಹಿಂದೆಂದೋ ಅರೆನಿದಿರೆ ಹೊತ್ತು ತಂದಿದ್ದ ಗುಡಿಸಲಿನ ಒರಟು ನೆಲದ್ದೇ ಕನವರಿಕೆ.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”ಯ ಬರಹ ನಿಮ್ಮ ಓದಿಗೆ

Read More

ಬದುಕು ಈಗ ತುಂಬ ಸುಲಭ…: ವಿನಾಯಕ ಅರಳಸುರಳಿ ಅಂಕಣ

ಕಾಲ ಬದಲಾಯಿತು. ಆಧುನಿಕತೆ ಎದ್ದು ನಿಂತಿತು. ಕಟ್ಟಿಗೆ ಕಡಿಯುವುದು ಕಷ್ಟ ಎಂದು ಗೀಝರ್ ಬಂತು. ಮತ್ತಿ ಸೊಪ್ಪು ಸಿಗುತ್ತಿಲ್ಲ ಎಂದು ಶ್ಯಾಂಪೂ ಬಂತು. ಅಮ್ಮ ಊರಲ್ಲಿದ್ದಾಳೆ ಎಂದಾಗ ಜೊಮ್ಯಾಟೋ ಬಂತು. ಕಾಲಿಗೆ ಬದಲಾಗಿ ಕಾರು ಬಂತು. ಸಾಕ್ಷಾತ್ ದ್ವಾಪರ ಯುಗದ ಕಾಳಿಂಗವೇ ಮೆಟ್ರೋದ ರೂಪ ತಾಳಿ ಹರಿದು ಬಂತು. ಎಲ್ಲವೂ ಸುಲಭವಾಯಿತು. ಸುಲಲಿತವಾಯಿತು. ಇಡೀ ಪ್ರಪಂಚವೇ ಬೆರಳ ತುದಿಯಲ್ಲಿ ಸಿಕ್ಕಿಕೊಂಡಿತು. ಮನುಷ್ಯ ಲೋಕದ ಬಾವುಟವೊಂದು ಚಂದ್ರನ ಅಂಗಳದಲ್ಲಿ ಪಟಪಟಿಸಿತು. “ವಿ ಆರ್ ಅಡ್ವಾನ್ಸ್ಡ್.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”ಯ ಬರಹ ನಿಮ್ಮ ಓದಿಗೆ

Read More

ಬೆಂಗಳೂರು ಟೂ ಶಿವಮೊಗ್ಗ…: ವಿನಾಯಕ ಅರಳಸುರಳಿ ಅಂಕಣ

ತನ್ನ ದಾರಿಯಲ್ಲಿ ಸಿಗುವ ಪ್ರತಿಯೊಂದು ಪುಟ್ಟ ಪಟ್ಟಣದ ನಿಲ್ದಾಣವನ್ನೂ ಹೊಕ್ಕು, ಆತಿಥ್ಯ ಸ್ವೀಕರಿಸಿ, ಟಾಟಾ ಹೇಳಿಯೇ ಅದು ಹೊರಡುವುದು. ಅಂಥಾ ನಿಲ್ದಾಣಗಳಲ್ಲಿ ನುಗ್ಗಿ ಹತ್ತಿಕೊಳ್ಳುವ, ಉದ್ಯೋಗಕ್ಕಾಗಿ ಪಕ್ಕದೂರಿನ ಶಾಲೆಗೋ, ಆಚೆ ಪಟ್ಟಣಕ್ಕೋ ಹೋಗುವ ಉದ್ಯೋಗಿಗಳು. ಬೆಂಗಳೂರಿನಷ್ಟು ಕಿಕ್ಕಿರಿಯದ, ಬರೀ ಆಕಾಶ ಕಾಣುವಷ್ಟು ಗಗನಚುಂಬಿಗಳಿರುವ ಕಟ್ಟಡಗಳ ಸಮುದ್ರವಲ್ಲದ, ಎಲ್ಲವನ್ನೂ ಮಾರಾಟಕ್ಕಿಡದ, ಕೊಂಚ ಸಾಗಿದರೆ ಮುಗಿದು ಹೋಗಿ ಕಾಡು, ಮರಗಳ ಹಳ್ಳಿಯೊಂದು ಪ್ರತ್ಯಕ್ಷವಾಗುವ ಈ ಪುಟ್ಟ ಪಟ್ಟಣದಲ್ಲಿ ಬದುಕು ಕಟ್ಟಿಕೊಂಡ ಇವರೆಲ್ಲ ಎಷ್ಟು ಪುಣ್ಯಾತ್ಮರಲ್ಲವೇ ಎಂದುಕೊಳ್ಳುವಾಗಲೇ ಅವರು ಬಸ್ಸಿಳಿದು ಹೆದ್ದಾರಿಯಿಂದ ಕವಲೊಡೆದ ರಸ್ತೆಯೊಂದರಲ್ಲಿ ನಡೆಯುತ್ತ ಮರೆಯಾಗುತ್ತಾರೆ.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”

Read More

ಒಳಬಾರದು ಆ ವಸಂತ…:  ವಿನಾಯಕ ಅರಳಸುರಳಿ ಅಂಕಣ

ಮಹಾನಗರಿಯ ಏರಿಯಾಗಳುದ್ದಕ್ಕೂ ಈಗ ಹೂಬಿಟ್ಟ ಮರಗಳು. ಬೀದಿ ಬೀದಿಯಲ್ಲೂ ಉದುರಿ ಬಿದ್ದ ಲಕ್ಷಾಂತರ ಹೂವುಗಳು. ಕಾಯಿ, ಹಣ್ಣು, ಬೀಜವಾಗದೇ ಉದುರಿಹೋದ ಅವನ್ನು ನೀಲಿ ಅಂಗಿ ತೊಟ್ಟ ಬಿಬಿಎಂಪಿ ನೌಕರರು ರಾಶಿ ಮಾಡುವುದನ್ನು ನಿರ್ಭಾವುಕವಾಗಿ ನೋಡಿ ನಮ್ನಮ್ಮ ಕಂಪನಿಯ ಎಂಟ್ರಿ ಗೇಟನ್ನು ಹೊಗ್ಗುತ್ತೇವೆ.‌ ಇಲ್ಲಿ ಹೊಕ್ಕಾಗಿಂದ ಪ್ರಕೃತಿಯ ಇಂಥಾ ಅದೆಷ್ಟೋ ವಸಂತಗಳಿಗೆ ನಮ್ಮೆದೆಯಲ್ಲಿ ಎಂಟ್ರಿ ಬಂದ್ ಮಾಡಿಕೊಂಡಿದ್ದೇವೆ. ಎಷ್ಟೋ ಚೈತ್ರ, ವೈಶಾಖ, ಕಾರ್ತೀಕ, ಮಾಗಿಗಳು ನಮ್ಮನ್ನು ಸೋಕದೆಯೇ ವಿಫಲ ಹೂವಾಗಿ ಉದುರಿಹೋಗಿವೆ. ಹಾಗಾಗಿಯೇ ಆಫೀಸು ಕದ ಮುಚ್ಚಿದ ಒಂದು ಶನಿವಾರ, ಒಂದು ಭಾನುವಾರವನ್ನು ಕಳೆಯಲಾರದೆ ನಿರುಪಾಯರಾಗಿದ್ದೀವೇನೋ ಅನ್ನಿಸಿತು.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”ಯ ಬರಹ ನಿಮ್ಮ ಓದಿಗೆ

Read More

ನಿಮಿಷಗಳನ್ನು ಕಡೆಗಣಿಸಿದವರು…: ವಿನಾಯಕ ಅರಳಸುರಳಿ ಅಂಕಣ

ಬಿಡುವಿನ ನಿಮಿಷಗಳಲ್ಲಿ ನಾವು ಕೈಗೊಳ್ಳುವ ಚಿಕ್ಕ ಚಿಕ್ಕ ವ್ಯವಸ್ಥಿತ ಕಾರ್ಯಗಳು ನಮ್ಮ ಒಳಗನ್ನು ರೂಪಿಸುತ್ತವೆ. ಮಲಗಿ ಎದ್ದ ದಿಂಬನ್ನು ಹಾಸಿಗೆಯ ತುದಿಯಲ್ಲಿ ಒಪ್ಪವಾಗಿ ಇಡುವುದಕ್ಕೂ, ಕೊಂಚ ಕೆಳಗೆ ಹಾಗೇ ಬಿಡುವುದಕ್ಕೂ ನಡುವಿನ ಅಂತರ ಕೆಲವೇ ಸೆಂಟೀಮೀಟರುಗಳಷ್ಟಾದರೂ ಅದನ್ನು ಆ ಎರಡು ಬೇರೆ ಬೇರೆ ಜಾಗಗಳಲ್ಲಿಟ್ಟ ವ್ಯಕ್ತಿಯ ವ್ಯಕ್ತಿತ್ವದ ನಡುವಿನ ವ್ಯತ್ಯಾಸ ಮೈಲಿಗಳಷ್ಟು! ಇನ್ನು ನಮ್ಮ ಇನ್ನೊಂದು ಸಮಸ್ಯೆಯೆಂದರೆ ಹೆಚ್ಚಿನ ಸಲ ನಮ್ಮನ್ನು ಹೆಚ್ಚಾಗಿ ತೊಡಗಿಸಿಕೊಂಡಿದ್ದರೂ ಆದಾಯವಲ್ಲದ ಕಾರ್ಯಗಳ ಆಳಕ್ಕೆ ನಾವು ಇಳಿಯುವುದೇ ಇಲ್ಲ‌.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”ಯ ಬರಹ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ