ಒಳಗೊಂದು ಪರಿಸ್ಥಿತಿ.. ಹೊರಗೊಂದು ಪರಿಸ್ಥಿತಿ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ
ಮಣಿ, “ಸೆಲ್ವಿ ನನ್ನ ಮಾತು ಕೇಳು. ಅಬಾರ್ಶನ್ ಮಾಡಿಕೊಂಡರೆ ಎಲ್ಲವೂ ಸರಿಯೋಗುತ್ತದೆ. ಮುಂದೆ ಅಂತಹ ತಪ್ಪು ನಡೆಯದಂತೆ ನೋಡಿಕೊಳ್ಳೋಣ. ನೀನು ಮುಂದಕ್ಕೆ ಓದಬಹುದು. ನಾನೂ ಹೇಗಾದರು ಮಾಡಿ ರಾತ್ರಿ ತರಗತಿಗಳಿಗೆ ಹೋಗಿ ಡಿಗ್ರಿ ಮುಗಿಸಬಹುದು. ಕಾಲೇಜಿನಲ್ಲಿ ಹೇಗೊ ರಾತ್ರಿಯೊತ್ತು ಆರ್ಟ್ ತರಗತಿಗಳಿಗೆ ಪಾಠ ಮಾಡ್ತಾರೆ” ಎಂದ. ಸೆಲ್ವಿ, “ಇಲ್ಲ ನಾನು ಅಬಾರ್ಶನ್ ಮಾತ್ರ ಮಾಡಿಕೊಳ್ಳುವುದಿಲ್ಲ.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಹದಿಮೂರನೆಯ ಕಂತು ನಿಮ್ಮ ಓದಿಗೆ
ಮಲ್ಲಯ್ಯನ ಮರಳು ತಕರಾರು: ಎಚ್.ಗೋಪಾಲಕೃಷ್ಣ ಸರಣಿ
ಒಂದು ಕಾಲದಲ್ಲಿ ತಮ್ಮ ಜೀವನ ನಿರ್ವಹಣೆಗೆ ಇಲ್ಲಿನ ಕ್ವಾರಿಗಳನ್ನು ನಂಬಿದ್ದ ಹಲವಾರು ಕುಟುಂಬಗಳು ಈಗ ಬೇರೆ ಬೇರೆ ವೃತ್ತಿ ಹಿಡಿದಿದ್ದಾರೆ. ಅದರ ಜತೆಗೆ ದೇವನಹಳ್ಳಿಯಲ್ಲಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಆದ ನಂತರ ಅಲ್ಲಿಗೆ ಹಲವು ಸಂಪರ್ಕ ರಸ್ತೆಗಳ ನಿರ್ಮಾಣ ಶುರು ಆಯಿತು. ಬೆಟ್ಟಹಳ್ಳಿ ಮೂಲಕ ಒಂದು ರಸ್ತೆ ಅಗಲ ಮಾಡುವ ಯೋಜನೆ ಹಮ್ಮಿಕೊಳ್ಳಲಾಯಿತು. BEL ವೃತ್ತದಿಂದ ಈ ರಸ್ತೆ ಬೆಟ್ಟಹಳ್ಳಿ ಹಾದು ಯಲಹಂಕದ ಬಳಿ ದೇವನಹಳ್ಳಿ ರಸ್ತೆ ಸೇರುವಂತೆ ಯೋಜನೆ ರೂಪಿಸಿದ್ದು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಐವತ್ತೈದನೆಯ ಕಂತು
ಮದುವೆ ಮನೆ: ಸುಮಾ ಸತೀಶ್ ಸರಣಿ
ನಮ್ಮ ಮನೆಗ್ಳಲ್ಲಿ ಮದ್ವೇ ಗೊತ್ತಾಗಿದ್ ತಕ್ಷಣ ಮಾಡ್ತಿದ್ದ ಏರ್ಪಾಟು ಅಂದ್ರೆ ಹಂಚು ಇಟ್ಟುಕೊಳ್ಳುವುದು. ಒಂದು ತಿಂಗಳ ಮುಂಚೇನೆ ತಯ್ಯಾರಿ ಇರ್ತಿತ್ತು. ದೊಡ್ಡತ್ತೆ, ಸಾವಿತ್ರಮ್ಮತ್ತೆ ಬಂದು ಸೇರುತ್ತಿದ್ದರು. ಅಕ್ಕ ತಂಗೀರ ಮಕ್ಳು ಸಹಾಯುಕ್ಕೆ ಬರ್ತಿದ್ರು. ಸೇರುಗಟ್ಟಲೆ ಅಕ್ಕಿ ತೊಳೆದು ಹಾಕಿ, ರಾಶಿ ರಾಶಿ ಚಕ್ಲಿ ಮಾಡುತ್ತಿದ್ದರು. ಅಕ್ಕಪಕ್ಕದ ಮನೆ ಹೆಣ್ಣುಮಕ್ಕಳೂ ಬಂದು ಸಹಾಯ ಮಾಡುತ್ತಿದ್ದರು. ನಿಪ್ಪಟ್ಟು, ಕೋಡುಬಳೆ, ಗುಂಡು ಅದೂ ಇದೂ ಮಾಡಿಡುತ್ತಿದ್ರು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ತಮ್ಮೂರಿನ ಮದುವೆ ಮನೆಯ ಸಡಗರಗಳ ಕುರಿತ ಬರಹ ನಿಮ್ಮ ಓದಿಗೆ
ದೊಡ್ಡ ದ್ವೀಪ ಅಕ್ಷರ ದೀಪ ಕ್ಯೂಬಾ: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ
1903ರಿಂದ ಕ್ಯೂಬಾ ದೇಶವು ಗ್ವಾಂಟನಾಮೊ ಹೆಸರಿನ ಕೊಲ್ಲಿಯನ್ನು ಅಮೇರಿಕಾಕ್ಕೆ ಗುತ್ತಿಗೆ ನೀಡಿತ್ತು. ಇದಕ್ಕೆ ಸಂಬಂಧಪಟ್ಟ ಒಪ್ಪಂದವನ್ನು ಮಾಡಿಕೊಂಡಿತ್ತು. ಇದರ ಹೊರತಾಗಿಯೂ ಕೆರಿಬಿಯನ್ ಸಮುದ್ರದಲ್ಲಿ ಸೈನಿಕ ನೆಲೆಯಾಗಿ ಈ ಕೊಲ್ಲಿಯನ್ನು ಬಳಸಲು ಅಮೇರಿಕಾ ಪ್ರಯತ್ನಿಸಿತ್ತು. ಶಸ್ತ್ರಾಸ್ತ್ರಗಳ ಬಳಕೆಯ ಮೂಲಕ ಕ್ಯೂಬಾವನ್ನು ಮೆತ್ತಗಾಗಿಸುವ ಪ್ರಯತ್ನವನ್ನೂ ನಡೆಸಿತ್ತು. ಅಮೇರಿಕಾದ ಈ ಬಗೆಯ ನಡತೆಯಿಂದಾಗಿ ಅದರ ಜೊತೆಗಿನ ಒಪ್ಪಂದ ಅನ್ಯಾಯಕರವಾದದ್ದು ಎನ್ನುವುದು ಕ್ಯೂಬಾದ ಜನರ ಅರಿವಿಗೆ ಬಂತು.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ಕ್ಯೂಬಾ ದೇಶದ ಕುರಿತ ಬರಹ ನಿಮ್ಮ ಓದಿಗೆ
ಎಲೆ ಮರೆಯ ಮಧುರ ಫಲ: ರಂಜಾನ್ ದರ್ಗಾ ಸರಣಿ
ಮೃದುಭಾಷಿ ಮಹಾದೇವಪ್ಪನವರ ವ್ಯಕ್ತಿತ್ವದ ಒಂದು ಮಹತ್ವದ ಅಂಶ ಎಂದರೆ, ಅವರು ಯಾವ ಕಾಲಕ್ಕೂ ಹೊಸದನ್ನು ಬಯಸುವವರು. ತಮ್ಮದೇ ಆದ ವಿಚಾರಕ್ಕೆ ಅಂಟಿಕೊಂಡವರಲ್ಲ. ಒಂದು ವಿಷಯಕ್ಕೆ ಸಂಬಂಧಪಟ್ಟಂತೆ ತಮಗಿಂತಲೂ ಬೇರೆಯವರು ಚೆನ್ನಾಗಿ ತಿಳಿಸಿದರೆ ಅದನ್ನು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಳ್ಳುವಂಥ ಸುಸಂಸ್ಕೃತರು.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 97ನೇ ಕಂತು ನಿಮ್ಮ ಓದಿಗೆ
ಕಪ್ಪು ಸುರಂಗಗಳು ಮತ್ತು ಕಾರ್ಮಿಕರ ಭವಣೆಗಳು: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ
ಮೊದಲನೇ ದಿನ ಕೆಲಸ ಮುಗಿಸಿದ ಮಣಿ ಸಂಪೂರ್ಣವಾಗಿ ಬೆವರಿನಿಂದ ಒದ್ದೆಯಾಗಿಹೋಗಿದ್ದ. ನಂತರ ಪಂಜರದ ಮೂಲಕ ನೆಲದ ಮೇಲಕ್ಕೆ ಬರುವಷ್ಟರಲ್ಲಿ ಸುಸ್ತಾದರೂ ಹೊಸ ಜಗತ್ತಿಗೆ ಬಂದಂತೆ ಆಹ್ಲಾದಕರವಾಗಿ ಕಾಣುತ್ತಿತ್ತು. ಈ ಗಣಿ ಕೆಲಸವನ್ನು ಖಂಡಿತ ಮಾಡಬಾರದು. ಓದು ಮುಂದುವರಿಸಿ ಡಿಗ್ರಿ ಮುಗಿಸಿ ಬೇರೆ ಯಾವುದಾದರು ಸರ್ಕಾರಿ ಇಲಾಖೆಯಲ್ಲಿ ಕೆಲಸಕ್ಕೆ ಸೇರಿಕೊಳ್ಳಬೇಕು ಎಂದುಕೊಳ್ಳುತ್ತ ಸೈಕಲ್ ತುಳಿಯುತ್ತಾ ಮನೆ ಕಡೆಗೆ ಹೊರಟ.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ
ಮರ್ಫಿ: ಸಮಯವೆಂಬ ಭ್ರಮೆಯ ಬರ್ಫಿ: ರಾಮ್ ಪ್ರಕಾಶ್ ರೈ ಕೆ ಸರಣಿ
ಅವಳ ಕಡಲಿನ ಪೂರಾ ಅವನದೇ ನಾವೆಗಳು. ಕಡುಗತ್ತಲಲ್ಲಿ ಬೀಳುವ ಕನಸುಗಳಿಗೆ ಆತನೇ ಕಂದೀಲು. ಇಂತಹ ಪ್ರೇಮದ ಪರಿಯ ವಿವರಣೆ ಆಕೆ ನೀಡುವುದು ಸ್ವತಃ ಆತನ ಮಗನಿಗೆ. ಆದರೆ ಡೇವಿಡ್‌ಗೆ ಎರಡು ಕಹಿ ಗುಳಿಗೆಗಳು ನೆನಪಿದೆ. ಒಂದು ತನ್ನ ಹೆತ್ತವ್ವ ಜನನಿಯಲ್ಲ ಎಂದು. ಮತ್ತು ತನ್ನ ತಂದೆ ಅನಿರೀಕ್ಷಿತ ಅಪಘಾತವೊಂದರಲ್ಲಿ ನಿಧನ ಹೊಂದಿದ್ದಾರೆಂದು.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ಕನ್ನಡದ ‘ಮರ್ಫಿ’ ಸಿನಿಮಾದ ವಿಶ್ಲೇಷಣೆ
ಕತೆ ಕಟ್ಟುವ ಕಲೆಗಾರರು: ಸುಮಾ ಸತೀಶ್ ಸರಣಿ
ಆಗೆಲ್ಲಾ ಯರಗುಂಟೇಗೆ ಊರಿನ ತಂಕ ಬಸ್ಸಿರಲಿಲ್ಲ. ಒಂದೋ ಎರಡೊ ಕಿಲೋಮೀಟರ್ ನಡೆದು ಹೋಗಬೇಕಿತ್ತು. ಇನ್ನೂ ಕತೆ ಮುಗಿದಿಲ್ಲ, ಯಾಸೆಟ್ಗೆ ಅತ್ಲಾಗೆ ನಡಿಯಮ್ಮಿ, ಮನೆತಂಕ ಬರ್ತೀನಿ ಅಂತ ಅದೇ ಅವತಾರದಲ್ಲಿ ಮಗಳಮನೆ ತಂಕಾನೂ ಹೋಗಿದೆ. ಬೀಗರು ಇವ್ರ ಅವತಾರ ನೋಡಿ, ನಕ್ಕಂಡು ಇವತ್ತಿದ್ದು ನಾಳೆ ಹೋಗಿ ಅಂದ್ರಂತೆ. ಈ ಅಜ್ಜಿ, ಹೂ ನನ್ ಕತೆ ಇನ್ನೂ ಮುಗಿದಿಲ್ಲ ಅಂತ ಕತೆ ಪೂರ್ತಿ ಹೇಳಿದ್ದಾದ ಮೇಲೆ ಬೇರೆ ಸೀರೆ ಉಟ್ಕಂಡು ವಾಪಸ್ ಬಂತಂತೆ. ಇದ್ನ ಹೇಳ್ಕಂಡು ನಮ್ಮತ್ತೆದೀರೆಲ್ಲಾ ನಗಾಡ್ತಿದ್ರು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ
ಮೌಲ್ಯಗಳಿರುವುದು ಪಾಲಿಸಲೇ ಹೊರತು, ಬರೀ ಬೋಧಿಸಲಿಕ್ಕಲ್ಲ!!: ಬಸವನಗೌಡ ಹೆಬ್ಬಳಗೆರೆ ಸರಣಿ
ಬಹುತೇಕರು ಮಕ್ಕಳಿಗೆ ತಮ್ಮ ಮಗುವಿನ ಆಸಕ್ತಿಯ ಕ್ಷೇತ್ರ ಯಾವುದು? ಎಂಬುದನ್ನೇ ಗುರುತಿಸಿಯೇ ಇರುವುದಿಲ್ಲ. ತಾವು ಏನನ್ನು ಅಂದುಕೊಂಡಿರುತ್ತಾರೋ ಅದನ್ನು ಸಾಧಿಸಲು ಮಕ್ಕಳ ಮೇಲೆ ಒತ್ತಡ ಹೇರುತ್ತಾರೆ. ಟಿವಿ ಮಾಧ್ಯಮಗಳಲ್ಲಿ ಬರುವ ಸ್ಪರ್ಧೆಗಳಲ್ಲಿ ತಮ್ಮ ಮಗುವೂ ಭಾಗವಹಿಸಬೇಕು, ಬೇಗ ಫೇಮಸ್ ಆಗಬೇಕು ಎಂದು ಕೆಲವರು ತಮ್ಮ ಮಗುವಿಗೆ ಇಷ್ಟವಿದೆಯೋ ಇಲ್ಲವೋ ಎಂದು ಕೇಳದೇ ಸಿಕ್ಕ ಸಿಕ್ಕ ಕ್ಲಾಸ್‌ಗಳಿಗೆಲ್ಲಾ ಸೇರಿಸುತ್ತಾರೆ. ಜೊತೆಗೆ ಮಣಭಾರದ ಪುಸ್ತಕ, ಟ್ಯೂಷನ್! ಆ ಕೋಚಿಂಗ್, ಈ ಕೋಚಿಂಗ್ ಅಂತಾ ಮಕ್ಕಳ ಬಾಲ್ಯ ಇದರಲ್ಲೇ ಕಳೆದುಹೋಗುತ್ತೆ!!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ









