ನಮ್ಮನ್ನಗಲಿದ ಪ್ರೊ. ಮುಜಫ್ಫರ್ ಅಸ್ಸಾದಿ: ರಂಜಾನ್ ದರ್ಗಾ ಸರಣಿ
ಅವರ ಚಿಂತನೆ ಬರಿ ರಾಜಕೀಯ ವಿಜ್ಞಾನಕ್ಕೆ ಸೀಮಿತವಾಗಿಲ್ಲ. ಸಮಾಜೋ ಧಾರ್ಮಿಕ ಆರ್ಥಿಕ ಚಿಂತನೆಗಳು ಅವರ ರಾಜಕೀಯ ಪ್ರಜ್ಞೆಯ ಪರಿಧಿಯಲ್ಲಿ ಬರುತ್ತವೆ. ಜನಮುಖಿ ಅಕ್ಯಾಡೆಮಿಕ್ ಆಗಿ ಅವರು ಬಹಳಷ್ಟು ಸಾಧಿಸಿದ್ದಾರೆ. ಬಡ ಅಲ್ಪಸಂಖ್ಯಾತರಷ್ಟೇ ಅಲ್ಲದೆ ದಲಿತರು ಮತ್ತು ಹಿಂದುಳಿದವರ ಬಗ್ಗೆಯೂ ಆಳವಾದ ಚಿಂತನೆಗಳನ್ನು ದಾಖಲಿಸಿದ್ದಾರೆ. ಸ್ತ್ರೀವಾದದ ಕುರಿತು ಬರೆದಿದ್ದಾರೆ. ನಾಗರಹೊಳೆ ಬುಡಕಟ್ಟು ಜನರ ಪುನರ್ವಸತಿ ಕುರಿತು ಸಮಿತಿಯ ಮುಖ್ಯಸ್ಥರಾಗಿ ವರದಿ ಒಪ್ಪಿಸಿದ್ದಾರೆ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ
ದ್ವಿತೀಯ ಪಿಯುಸಿಯ ಅಂತಿಮ ಪರೀಕ್ಷೆಯ ಎಡವಟ್ಟಿನ ಪ್ರಸಂಗಗಳು!!: ಬಸವನಗೌಡ ಹೆಬ್ಬಳಗೆರೆ ಸರಣಿ
ನನಗೆ ಒತ್ತಡ ಶುರುವಾಗಿ ಪರೀಕ್ಷೆಯ ಪ್ರವೇಶ ಪತ್ರವನ್ನು ಎಲ್ಲಾ ಕಡೆ ಹುಡುಕಿದಾಗ ರಾತ್ರಿ 10 ಘಂಟೆಯವರೆಗೂ ನನಗೆ ಸಿಗಲಿಲ್ಲ. ನನಗೆ ಏನು ಮಾಡಬೇಕು ಅಂತಾನೆ ಗೊತ್ತಾಗಲಿಲ್ಲ. ಟೆನ್ಷನ್ ಆಗಿ ಏನು ಮಾಡಬೇಕು ಎಂದು ಗೊತ್ತಾಗದೇ ಕುಳಿತಿದ್ದಾಗ ರಾತ್ರಿ 10 ಗಂಟೆಯ ಸುಮಾರಿಗೆ ನಮ್ಮ ಸೀನಿಯರ್ ‘ಅನಿಲ್’ ಹಾಸ್ಟೆಲ್ ಮೈದಾನದಲ್ಲಿ ‘ನಿನ್ನ ಹಾಲ್ ಟಿಕೆಟ್ಟು ಸಿಕ್ಕಿತು’ ಎಂದು ತಂದುಕೊಟ್ಟಾಗ ‘ಬದುಕಿದೆಯಾ ಬಡ ಜೀವವೇ’ ಎಂದುಕೊಂಡು ಆಗ ಇಂಗ್ಲೀಷ್ ಓದಲು ಕುಳಿತೆ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಮೂವತ್ತನೆಯ ಕಂತು ನಿಮ್ಮ ಓದಿಗೆ
ನಮ್ ಸೈಟ್ ಎಲ್ಲಿದೆ! : ಎಚ್. ಗೋಪಾಲಕೃಷ್ಣ ಸರಣಿಯ ಐವತ್ತನೆಯ ಕಂತು!
ಮೊದಲನೇ ಮಗನ ಚೆಡ್ಡಿಗೆ ಕೂಡುವ ಭಾಗದಲ್ಲಿ ತೇಪೆ ಹಾಕಿಸಿ ಎರಡನೆಯವನಿಗೆ ಹಾಕುತ್ತಿದ್ದರು, ಅವನ ನಂತರ ಮೂರನೇ ಅವನು, ಅದಾದ ಮೇಲೆ ನಾಲ್ಕು, ಐದು ಹೀಗೆ. ಕೊನೇ ಹುಡುಗನ ಬಳಿ ಬರುವ ಹೊತ್ತಿಗೆ ಚಡ್ಡಿಗೆ ತೇಪೆ ಹಾಕಲು ಜಾಗವೇ ಇರ್ತಾ ಇರಲಿಲ್ಲ. ಆಗಿನ್ನೂ ಪ್ರೈವೇಟ್ ಸ್ಕೂಲ್ ಬಂದಿರಲಿಲ್ಲ ಮತ್ತು ಎಲ್ಲರೂ ಸರ್ಕಾರಿ ಶಾಲೆ. ತೇಪೆ ಇಲ್ಲದಿರುವ ಚೆಡ್ಡಿ ಹಾಕಿದವನು ಮನೆಯ ಮೊದಲ ಮಗ ಎಂದು ಸುಲಭವಾಗಿ ಗೊತ್ತಾಗುತ್ತಿತ್ತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಐವತ್ತನೆಯ ಕಂತು
ಜೈಲು ಕಟ್ಟಿಸಿ ಬಂಧಿಗಳಾಗಿದ್ದು!: ಪೂರ್ಣೇಶ್ ಮತ್ತಾವರ ಸರಣಿ
ಅತ್ತ ನೋಡಿದರೆ ಅದೆಲ್ಲಿ ನಮ್ಮ ಹೆಸರುಗಳು, ಮಾರ್ಕ್ಸ್ಗಳು ತಾರೆ ಜಮೀನ್ ಪರ್ ಸಿನಿಮಾದಲ್ಲಿ ಶಿಕ್ಷಕಿ ಸರ್ಪ್ರೈಸ್ ಮ್ಯಾತ್ಸ್ ಟೆಸ್ಟ್ ಕೊಟ್ಟಾಗ, ಶಿಕ್ಷಕರು ನೌನ್, ಪ್ರನೌನ್ ಎಂದಾಗ ಅಂಕಿ ಸಂಖ್ಯೆಗಳು, ಅಕ್ಷರಗಳೆಲ್ಲಾ ಹುಡುಗನೆದುರು ಜೀವ ತಳೆದು ಕುಣಿದಾಡುತ್ತವಲ್ಲ.. ಹಾಗೆಯೇ ನಮ್ಮ ಮುಂದೆ ಜೀವ ತಳೆದು “ಕಾಪಾಡಿ ಕಾಪಾಡಿ ನಮ್ಮನ್ನು ಬಿಟ್ಟು ಹೋಗಬೇಡಿ” ಎಂದು ಕಿರುಚಿಕೊಳ್ಳುತ್ತೇವೆಯೋ, “ಕನಿಷ್ಠ ಪಕ್ಷ ಕೆಲ ಗಣ್ಯ ಅಪರಾಧಿಗಳಂತೆ ಮುಖ ಮುಚ್ಚಿಕೊಳ್ಳಲು ಮಾಸ್ಕ್, ಕರ್ಚೀಪ್ಗಳನ್ನಾದರೂ ಕೊಟ್ಟು ಹೋಗಿ” ಎಂದು ಕೇಳುತ್ತೇವೆಯೋ ಎನಿಸಲಾರಂಭಿಸಿತ್ತು.
ಪೂರ್ಣೇಶ್ ಮತ್ತಾವರ ಬರೆಯುವ “ನವೋದಯವೆಂಬ ನೌಕೆಯಲ್ಲಿ…” ಸರಣಿ
ಒಡೆದದ್ದನ್ನು ಇಡಿಯಾಗಿಸಿಕೋ ಮೆಕ್ಸಿಕೋ: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ
ವಿಶ್ವದಲ್ಲಿ ಅತೀ ಹೆಚ್ಚು ಜ್ವಾಲಾಮುಖಿಗಳಿಗೆ ನೆಲೆಯಾಗಿರುವ ದೇಶ ಮೆಕ್ಸಿಕೋ. ರಾಷ್ಟ್ರದ ಹೆಚ್ಚಿನ ಪರ್ವತ ಪ್ರದೇಶಗಳಲ್ಲಿ ಜ್ವಾಲಾಮುಖಿಗಳು ಕಂಡುಬರುತ್ತವೆ. ಆಶ್ಚರ್ಯದ ಸಂಗತಿಯೆಂದರೆ, ವಿಶ್ವದ ಅತ್ಯಂತ ಚಿಕ್ಕ ಜ್ವಾಲಾಮುಖಿಯೂ ಇರುವುದು ಮೆಕ್ಸಿಕೋದಲ್ಲಿ. ಪ್ಯೂಬ್ಲಾ ಸಮೀಪದಲ್ಲಿರುವ ಕ್ಯುಕ್ಸ್ಕೊಮೇಟ್ ಜ್ವಾಲಾಮುಖಿಯ ಎತ್ತರ ಕೇವಲ 43 ಅಡಿ. ಇದು ಈಗ ನಿಷ್ಕ್ರಿಯವಾಗಿದೆ. 1910ರಲ್ಲಿ ಮೆಕ್ಸಿಕೋದಲ್ಲಿ ಕ್ರಾಂತಿ ನಡೆದಿತ್ತು. ಇದರ ಪರಿಣಾಮವನ್ನು ಈಗಿನ ಕಾಲಘಟ್ಟದಲ್ಲಿಯೂ ಕಾಣುವುದಕ್ಕೆ ಸಾಧ್ಯವಿದೆ.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿ
ನೈಸರ್ಗಿಕ ಜಗತ್ತಿಗೆ ಒಬ್ಬ ಅವಿಶ್ರಾಂತ ಮಾರ್ಗದರ್ಶಿ: ಎಸ್. ಜಯಶ್ರೀನಿವಾಸ ರಾವ್ ಸರಣಿ
ರೆಯ್ನಾಲ್ಡ್ಸ್ ಗಮನಿಸಿದಂತೆ, “ಈ ಸ್ವಯಂ ಪ್ರಜ್ಞೆಯು ಸಮೃದ್ಧವಾದ ಮತ್ತು ಸುಲಲಿತವಾದ ಸೇರ್ಪಡೆಯಾಗಿದೆ.” ಆಲಿವರ್-ರ ಕಾವ್ಯದಲ್ಲಿ ಕಂಡುಬರುವ ವಿಷಯಗಳಿಗೆ ಸಂಬಂಧಿಸಿದಂತೆ ವಿಸ್ಮಯದ ವ್ಯಾಪಕ ಸ್ವರವಿದೆ. ಆಲಿವರ್ ಅವರ ಕಾವ್ಯ “ಕವಿ ವಿಲಿಯಮ್ ಬ್ಲೇಕ್-ನ ಕವಿದೃಷ್ಟಿಯ ದಿವ್ಯದರ್ಶನದ ಗುಣ” ಹೊಂದಿವೆ ಎಂದು ರೆಯ್ನಾಲ್ಡ್ಸ್ ಅರಿತರು.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಅಮೇರಿಕಾ ದೇಶದ ಕವಿ ಮೇರಿ ಆಲಿವರ್-ರವರ (Mary Oliver, 1935-2019) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ
ಸೀಮೆಯಿಂದ…. ಸುಗ್ಗಿವರೆಗೆ: ಸುಮಾವೀಣಾ ಸರಣಿ
“ನೀವು ತಿಂದದ್ದಕ್ಕೆ ಹಣ ಕೊಡಬೇಕಿಲ್ಲ ಎಂಥಾ ಸೌಲಭ್ಯವಿದು? ಪುಕ್ಕಟೆಯೇ? ಎಂದು ನೀವು ಕೇಳಬಹುದು ಇಲ್ಲ ಇದಕ್ಕೆ ಉದ್ರಿ ಎನ್ನುವರು. ಕೌಂಟರ್ ಮುಂದೆ ‘ನನ್ನ ಹೆಸರ್ಲೆ ಹಚ್ರಿ ಎಂದು ಹೇಳಿದರೆ ಸಾಕು ಹಚ್ಚುವುದೊಂದೇ ಹಳ್ಳಿ ಫಳಾರದಂಗಡಿಯ ಮಾಲಿಕನ ಕರ್ಮ. ಸುಗ್ಗಿಗೊಮ್ಮೆ ನಾಲ್ಕುಚೀಲ ಜೋಳ ತಂದು ಹೋಟೆಲಿಗೆ ಹಚ್ಚಿದರೆ ಬಾಕಿ ಚುಕ್ತಾ ಆಯ್ತು. ವರ್ಷದವರೆಗೂ ಪೂರಿ, ಬಜಿಗಳನ್ನು ತಿನ್ನುತ್ತಾ ಊರಸುದ್ದಿಯನ್ನು, ಮಾತನಾಡುತ್ತಾ ಎದುರಿಗಿರಲಾರದವರ ಗೇಲಿ ಮಾಡುತ್ತಾ ಹೊತ್ತನ್ನು ಕಳೆಯಬಹುದು” ಎಂಬ ಸಾಲುಗಳು ವೀರೆಂದ್ರ ಸಿಂಪಿಯವರ ‘ಹಳ್ಳಿಯ ಚಹಾ ಹೋಟೆಲುಗಳು’ ಲಲಿತ ಪ್ರಬಂಧದ ಸಾಲುಗಳು.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿ
ಸಿಕ್ಕೀತೆ ಮುಂದಿನ ದಾರಿ …: ಗುರುಪ್ರಸಾದ ಕುರ್ತಕೋಟಿ ಸರಣಿ
ಅಮೆರಿಕೆಯಲ್ಲಿನ ಸಿರಿತನ ಬಡತನ ಎರಡೂ ನೋಡಿದೆ. ಅತಿಯಾಗಿ ಖರ್ಚು ಮಾಡುವವರನ್ನೂ ಕಂಡೆ, ಮಿತವಾಗಿ ಹಾಸಿಗೆ ಇದ್ದಷ್ಟು ಕಾಲು ಚಾಚುವವರನ್ನೂ ನೋಡಿದ್ದೆ. ನನ್ನ ಜೊತೆಗೆ ಕೆಲಸ ಮಾಡುತ್ತಿದ್ದ ಜಿಮ್ ಎಂಬ ಒಬ್ಬ ಸಹೋದ್ಯೋಗಿ ಹತ್ತು ಡಾಲರ್ಗೆ ತೊಳೆದು ಇಸ್ತ್ರಿ ಮಾಡಿ ಮಾರುತ್ತಿದ್ದ ಸಂಸ್ಥೆಯೊಂದರಿಂದ ಸೆಕಂಡ್ ಹ್ಯಾಂಡ್ ಟೀ ಶರ್ಟ್ ಕೊಂಡೆ ಅಂತ ಹೆಮ್ಮೆಯಿಂದ ಬೀಗಿದ್ದನ್ನು ನೋಡಿದ್ದೆ. ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಕೊನೆಯ ಬರಹ
ಹುಚ್ಚಾಟಗ್ಳು: ಸುಮಾ ಸತೀಶ್ ಸರಣಿ
ಸ್ಯಾನೆ ಟೇಮಿದ್ರೆ ಉಂಗುರ ಸೆಂದಾಗಿ ಮಾಡ್ತಿದ್ವಿ. ವೈನಾಗಿ ಜಡೆ ಹೆಣ್ದು ಅದುನ್ನ ಬೆಳ್ಳಿನ್ ಗಾತ್ರುಕ್ಕೆ ಸರ್ಯಾಗಿ ಬಗ್ಗಿಸಿ, ಸುತ್ತಿ ಬಾಲ ಇಲ್ದಂಗೆ ಮಾಡೀವಿ. ಆತ್ರ ಇದ್ರೆ ತಿಥಿ ಮಾಡ್ಸಾ ಐನೋರು ದರ್ಬೇನಾಗೆ (ಒಣಗಿದ್ ಹುಲ್ಲು) ಸುಮ್ಕೆ ಒಂದು ಗಂಟು ಆಕಿ, ಬೆಟ್ಟಷ್ಟು ಉದ್ದೂಕೆ ನಿಟಾರ್ ಅಂತ ನಿಂತಿರಾ ಹುಲ್ಲು ಕೊಟ್ಟು ಉಂಗ್ರ ಆಕ್ಕಳಿ ಅಂಬಲ್ವೇ ಅಂಗೇ ನಾವೂ ಸುಮ್ಕೆ ಒಂದು ಗಂಟು ಹಾಕಿ, ಉದ್ದೂಕೆ ಗರಿ ಅಂಗೇ ಬುಟ್ಟು, ಕೈಯಾಗೆ ಏರ್ಸಿ ಓಡ್ತಿದ್ವಿ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ










