ಉತ್ತರ ಕೊರಿಯಾ, ಇದು ಸರಿಯಾ?: ಡಾ. ವಿಶ್ವನಾಥ ಎನ್ ನೇರಳಕಟ್ಟೆ ಸರಣಿ
ಉತ್ತರ ಕೊರಿಯಾದಲ್ಲಿ ಕಲೆ, ಸಂಸ್ಕೃತಿ ಇವೆಲ್ಲವೂ ಕೂಡಾ ಬೆಳವಣಿಗೆ ಕಾಣುತ್ತಿರುವುದು ರಾಷ್ಟ್ರೀಯತೆಯ ಹೆಸರಿನಲ್ಲಿ. ಎಲ್ಲಾ ರೀತಿಯ ಕಲಾಕೃತಿಗಳ, ಪ್ರದರ್ಶನ ಕಲೆಗಳ ಅಂತಿಮ ಉದ್ದೇಶ ರಾಷ್ಟ್ರದ ಪ್ರಗತಿ ಮತ್ತು ರಾಷ್ಟ್ರಕ್ಕೆ ಸಾಂಸ್ಕೃತಿಕ ಅಸ್ಮಿತೆಯನ್ನು ಒದಗಿಸಿಕೊಡುವುದು ಎಂಬ ಭಾವನೆಯನ್ನು ಬಲವಾಗಿ ರೂಪಿಸಲಾಗುತ್ತಿದೆ. ಉತ್ತರ ಕೊರಿಯಾದ ಪ್ರಮುಖ ಶಿಲ್ಪಕಲಾಕೃತಿಗಳು ಯಾವುವು ಎಂದು ಗಮನಹರಿಸಿದಾಗ ಕಿಮ್ ಇಲ್ ಸುಂಗ್ ಅವರ ಪ್ರತಿಮೆಗಳು ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತವೆ.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿ
ಕನ್ನಡಿಗೆ ಗೊತ್ತಿಲ್ಲ. ಕಡಲಿಗೆ ಗೊತ್ತು: ಎಸ್. ಜಯಶ್ರೀನಿವಾಸ ರಾವ್ ಸರಣಿ
ಅವರು ರಮಣೀಯ ದೃಶ್ಯಗಳನ್ನು ಕಲ್ಪಿಸಿಕೊಳ್ಳುವುದಿಲ್ಲ; ಬದಲಿಗೆ ದಿನನಿತ್ಯದ ವಿದ್ಯಮಾನಗಳ ಜತೆಗೆ ನಗರ ಮತ್ತು ಅದರ ನಿವಾಸಿಗಳ ಜತೆ ಜರಗಿದ ಮಾತುಕತೆಗಳಲ್ಲಿ ಅವರು ಪಡೆದ ಸಂತೋಷಕ್ಕೆ ಒತ್ತು ನೀಡುತ್ತಾರೆ. ಈ ಕವಿತೆಗಳ ವಿಶಿಷ್ಟ ಛಾಪು ಕವಿಯ ಮೌಖಿಕ ವಾಕ್ಚಾತುರ್ಯವೂ ಆಗಿದೆ; ಲಯ ಮತ್ತು ಮನವಿ ಜತೆಯಾಗಿರುವ ಕವಿತೆಗಳಿವು, ಮತ್ತು ಈ ಕವನಗಳು ವೋಲ್ಡ್ ಅವರಿಗೆ ವಿಶಾಲವಾದ ಮತ್ತು ನಿಷ್ಠಾವಂತ ಓದುಗರ ಸಮೂಹವನ್ನು ತಂದುಕೊಟ್ಟಿತ್ತು.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ನೋರ್ವೇ (Norway) ದೇಶದ ಕವಿ ಯಾನ್ ಎರಿಕ್ ವೊಲ್ಡ್-ರ (Jan Erik Vold) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ
ಕೀರು ಟೇಸ್ಟ್: ಸುಮಾವೀಣಾ ಸರಣಿ
ಇನ್ನು ದೊಡ್ಡವರು ತಪ್ಪು ಬರೆಯುವುದಿಲ್ಲವೆ… ಅವರೂ ಬರೆಯುವರು ಚನ್ನೇಗೌಡ ಬರೆಯಲು ಚೆನ್ನೈಗೌಡ ಎಂದೊಮ್ಮೆ ಕೈ ತಪ್ಪಿನಿಂದ ಬಂದಿತ್ತು. ಒಮ್ಮೆ ಹೀಗೆ…. ಹಿತೈಷಿಗಳೊಬ್ಬರು ಬಹಳ ಸಂತೋಷದಿಂದ ವಾಟ್ಸ್ಆಪ್ಲ್ಲಿ ಸಂದೇಶಿಸುತ್ತಿದ್ದರು ಕಡೆಗೆ ಆದಷ್ಟು ಬೇಗ ಆಗಲಿ ಎಂದು ಟೈಪಿಸುವುದರ ಬದಲು ಆದಷ್ಟು ಬೇಗ ಅಗಲಿ ಎಂದಿದ್ದನ್ನು ನೋಡಿ ಕಣ್ ಕಣ್ ಬಿಟ್ಟಹಾಗೆ ಇನ್ನೊಬ್ಬರು ನಿಮ್ಮ ಬರಹ ಸತ್ವಯುತವಾಗಿದೆ ಎನ್ನುವ ಬದಲು ಸತ್ತಂತಿದೆ ಎಂದಿದ್ದರು…
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಮೂರನೆಯ ಬರಹ
ಅಮಾನುಷ ಮನಸ್ಥಿತಿಗಳ ಮಧ್ಯೆ ಮನುಷ್ಯತ್ವದ ತಲಾಶು: ರಾಮ್ ಪ್ರಕಾಶ್ ರೈ ಕೆ. ಸರಣಿ
ನಾಪತ್ತೆಯಾಗಿದ್ದಾರೆ ಎಂಬ ನೋಟಿಸುಗಳು ಇನ್ನೂ ವಿಲೇವಾರಿಯಾಗದೆ ಕಚೇರಿ ಫಲಕದಲ್ಲಿ ಕುಳಿತುಕೊಂಡಿರುವುದೇ ಆ ಮನುಷ್ಯನ ಸ್ವಭಾವಕ್ಕೆ ಹಿಡಿದ ಕನ್ನಡಿ. ಅವನ ಸರಹದ್ದಿನಲ್ಲಿ ಸ್ಲಮ್ಮಿನ ಭಾರವಾದ ಉಸಿರುಗಳೇ ಹೆಚ್ಚಿದ್ದರಿಂದ, ಆ ಜೀವಗಳಿಗೆ ಅಲ್ಲಿ ಬೆಲೆ ಇರುತ್ತಿರಲಿಲ್ಲ. ಮಾನವೀಯತೆಯ ಬಗ್ಗೆ ಪುಟಗಟ್ಟಲೆ ಮಾತುಗಳು ಕೇಳಿಬಂದರೂ ನಮ್ಮ ಸುತ್ತಮುತ್ತಲೇ ಇರುವ ಖಾಲಿ ಕಿಸೆಯ ಜನರ ಜೀವ-ಜೀವನ ಸದಾ ಅನಾಥವಲ್ಲವೇ
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ಹಿಂದಿಯ ‘ಸೆಕ್ಟರ್ -36’ ಸಿನಿಮಾದ ವಿಶ್ಲೇಷಣೆ
ಏಕೆ ಇಷ್ಟೊಂದು ದ್ವೇಷ!: ಕೆ. ಸತ್ಯನಾರಾಯಣ ಪ್ರವಾಸ ಸರಣಿ
ಇವರೆಲ್ಲ ಎಷ್ಟು ಸುಖವಾಗಿದ್ದಾರೆ, ಆರಾಮವಾಗಿದ್ದಾರೆ, ಯಾವುದೇ ಗೊಂದಲವಿಲ್ಲ, ತಳಮಳವಿಲ್ಲ. ಮುಖದಲ್ಲಿ ಅದೆಷ್ಟು ಜೀವಂತಿಕೆ, ಆರೋಗ್ಯ, ಉಲ್ಲಾಸ. ಯಾವುದರಲ್ಲೂ ಆತುರವಿಲ್ಲ, ಧಾವಂತವಿಲ್ಲ. ಪ್ರತಿ ಕ್ಷಣವನ್ನೂ ವಿವರವಾಗಿ, ವಿರಾಮವಾಗಿ ಅನುಭವಿಸುತ್ತಿದ್ದಾರೆ. ವಾಯುವಿಹಾರದ ಸಮಯದಲ್ಲಿ. ಟ್ರಾಮ್ ಒಳಗಡೆ ಕುಳಿತಾಗ, ಮಾರ್ಕೆಟ್ನಲ್ಲಿ ವ್ಯಾಪಾರ ಮಾಡುವಾಗ, ಸ್ಕೂಲ್ ಬಳಿ ಮಕ್ಕಳನ್ನು ಬಿಡಲು ಬರುವಾಗ ನೋಡಿದ್ದೇನೆ. ಎಲ್ಲರೂ ಬಿಳಿ ಬಣ್ಣದವರು, ಕೆಂಪು ಬಣ್ಣದವರು. ತುಂಬಾ ಸುಖವಾಗಿದ್ದಾರೆ, ಸಂತೃಪ್ತಿಯಿಂದಿದ್ದಾರೆ ಎಂಬ ಭಾವನೆ. ಸರಿ, ಅವರು ಸಂತೋಷವಾಗಿದ್ದರೆ, ಸುಖವಾಗಿದ್ದರೆ ನನಗೇಕೆ ಈ ರೀತಿಯ ಅಸೂಯೆ, ದ್ವೇಷ?
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್ಲ್ಯಾಂಡ್ಸ್ ಬಾಣಂತನ” ಸರಣಿ
ಮತ್ತೆ ಸಿಗುವ ಆಶಯದ ಪಯಣ: ಚಂದ್ರಮತಿ ಸೋಂದಾ ಸರಣಿ
ಮನೆಯ ಜನರೆಲ್ಲರಿಗೂ ʻಹೋಗಿ ಬರ್ತೇನೆʼ ಎನ್ನುತ್ತ ಅವರು ಎಲ್ಲಿದ್ದಾರೋ ಅಲ್ಲಿಗೆ ಹೋಗಿ ಹೇಳುವುದು, ಅಲ್ಲಿಂದ ನಡುಮನೆಯಲ್ಲಿ ಕೆಲಹೊತ್ತು ಮಾತನಾಡುತ್ತ ನಿಲ್ಲುವುದು, ಅಲ್ಲಿಂದ ಜಗಲಿಗೆ, ಅನಂತರ ಹೆಬ್ಬಾಗಿಲಲ್ಲಿ ತುಸುಹೊತ್ತು ಮಾತನಾಡುತ್ತ ನಿಂತರೆ, ಹೊರಡಲು ಮುಂದಾದವರು ʻಇನ್ನೂ ಮಾತು ಮುಗಿದಿಲ್ವಾ?ʼ ಎಂದು ಕೇಳುತ್ತಲೇ ʻಬಂದೆʼ ಎಂದು ಬಾಯಲ್ಲಿ ಹೇಳಿದರೂ ಅಂಗಳದ ತುದಿಯಲ್ಲಿ ಒಂದು ಗಳಿಗೆಯ ಮಾತುಕತೆ. ಹೀಗೆ ಸಾಗುವ ವಿದಾಯದ ಕ್ಷಣ ನೆನಪಿಡುವಂಥದು. ಕೆಲವೊಮ್ಮೆ ಮನೆಗೆ ಬಂದ ಅಣ್ಣ-ತಮ್ಮಂದಿರು, ಅಥವಾ ಅಕ್ಕ-ತಂಗಿಯರನ್ನು ಕಳುಹಿಸಲು ಊರಬಾಗಿಲತನಕ ಹೋಗುವುದಿದೆ. ಎಲ್ಲರ ಎದುರಿನಲ್ಲಿ ಹಂಚಿಕೊಳ್ಳಲು ಆಗದ ಅದೆಷ್ಟೋ ಸಂಗತಿಗಳು ಅಲ್ಲಿ ವಿನಿಮಯಗೊಳ್ಳುತ್ತಿದ್ದವು.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಕೊನೆಯ ಕಂತು
ದೂರದೂರಲ್ಲಿ ಸಿಕ್ಕನು ಅಣ್ಣ: ಗುರುಪ್ರಸಾದ ಕುರ್ತಕೋಟಿ ಸರಣಿ
ಅದೇನು ಅದೃಷ್ಟವೋ ಕೂಡಲೇ ಉತ್ತರಿಸಿದ. ಬಾ ಅಂತ ಆಹ್ವಾನಿಸಿದ ಕೂಡ. ಪುಣ್ಯಕ್ಕೆ ಲ್ಯಾಂಡ್ ಲೈನ್ನಿಂದ ಕರೆ ಕೂಡ ಮಾಡಿದ. ಅವನ ಜೊತೆಗೆ ನಾನು ಬಹುಶಃ ಪ್ರಥಮ ಬಾರಿಗೆ ಮಾತಾಡಿದ್ದೆ! ನಾನು ಹುಟ್ಟುವುದಕ್ಕಿಂತ ಮೊದಲೆಯೇ ಅವನು ಭಾರತ ಬಿಟ್ಟು ಬಂದಿದ್ದ ಕಾರಣ ನಾನು ಅವನ ಜೊತೆಗೆ ಈಗಾಗಲೇ ಮಾತಾಡಬಹುದಾದ ಅವಕಾಶಗಳು ತೀರಾ ಕಡಿಮೆ ಇದ್ದವು. ಅವನು ಮಾತಾಡುವ ಶೈಲಿ ನನ್ನ ಅಪ್ಪನ ತರಹವೇ ಅನಿಸಿತು. ಬಹಳ ಖುಷಿ ಆಯ್ತು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಇಪ್ಪತ್ತೈದನೆಯ ಬರಹ
ಗದಗ ನನ್ನ ಹೃದಯಕ್ಕೆ ಬಹು ಹತ್ತಿರದ ಊರು. ಅಲ್ಲಿ ನಾನು ಹುಟ್ಟಿದ್ದು ಅಷ್ಟೇ ಆದರೂ ಅಲ್ಲಿ ಕಳೆದ ಕೆಲವೇ ಕೆಲವು
ಚಿಕ್ಕ್ಮಾಲೂರಿನ ದೊಡ್ಮನೆ: ಸುಮಾ ಸತೀಶ್ ಸರಣಿ
ಮೈಗೆ ಲೈಫ಼್ ಬಾಯ್ ಸೋಪು. ಮಕಕ್ಕೆ ಮೈಸೂರು ಸ್ಯಾಂಡಲ್ ಸೋಪು. ಮನೆ ಮಂದೀಗೆಲ್ಲಾ ಒಂದೆ ಸೋಪು. ಅದ್ಯಾಕೋ ಗೊತ್ತಿಲ್ಲಪ್ಪ ಮೈಸೂರು ಸ್ಯಾಂಡ್ಲು ಮಕಕ್ಕೆ ಮಾತ್ರ. ಮೈಗೆಲ್ಲ ಲೈಫ್ ಬಾಯಿ. ಮಕ ಬೆಳ್ಳಕಾದ್ರೆ ಸಾಕು ಅಂತ್ಲೋ ಏನೋ! ನಾನು ಚಿಕ್ಕೋಳಾಗಿದ್ದಾಗಿಂದ ಮದ್ವೆ ಆಗಾತಂಕ ಅದೇ ಎರ್ಡು ಸೋಪುಗಳ ರೂಡಿ ಬಂದಿತ್ತು. ಹಲ್ಲಿಗೆ ನಂಜನಗೂಡು ಹಲ್ಲಿನಪುಡಿ. ಒಂದೇ ಕಿತ ಹಲ್ಲುಜ್ಜೋದು. ರಾತ್ರಿ ಉಜ್ಜೋ ಇಸ್ಯವೇ ಗೊತ್ತಿರ್ಲಿಲ್ಲ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಚಿಕ್ಮಾಲೂರಿನ ಮನೆ-ಮನೆಯ ಜನಗಳ
ಸಹಪಾಠಿಗಳ ಸಾಧನೆ ಹಾಗೂ ಕೊಂಡಜ್ಜಿ ಕ್ಯಾಂಪ್: ಬಸವನಗೌಡ ಹೆಬ್ಬಳಗೆರೆ ಸರಣಿ
ಈ ಕ್ಯಾಂಪಿನಿಂದ ಬಂದು ವಾಪಸ್ಸು ಹೋದಾಗಲೇ ನನಗೆ ತಿಳಿದದ್ದು ಈ ಸಮಯದಲ್ಲಿ ಹಲವಾರು ಪಾಠಗಳನ್ನು ನಮ್ಮ ಮೇಷ್ಟ್ರು ಮುಗಿಸಿದ್ದಾರೆ ಎಂಬುದು. 8 ರಲ್ಲಿ ಮೂರನೇ ರ್ಯಾಂಕು, 9 ರಲ್ಲಿ ಎರಡನೇ ರ್ಯಾಂಕು ಬಂದಿದ್ದವನು 10 ನೇ ತರಗತಿಯಲ್ಲಿ ಮೊದಲ ರ್ಯಾಂಕನ್ನು ಗಳಿಸುತ್ತಾನೆ ಎಂಬ ಹಲವರ ನಿರೀಕ್ಷೆ ಸುಳ್ಳಾಗಲು ಇದೂ ಒಂದು ಕಾರಣವಾಗಿತ್ತು. ಎಷ್ಟೇ ಪ್ರಯತ್ನ ಪಟ್ಟರೂ ಪಾಠದ ವಿಷಯದಲ್ಲಿ ನನಗೆ ರೀಟೇಕ್ ಆಗಲು ಸಾಧ್ಯವಾಗಲೇ ಇಲ್ಲ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ










