ವಾರಾನ್ನದ ಅರೆ ಆತ್ಮಚರಿತ್ರೆ: ಕೆ. ಸತ್ಯನಾರಾಯಣ ಕಥಾ ಸರಣಿ
ಅರ್ಧ ಮನೆಗಳಲ್ಲಿ ವರ್ಷಕ್ಕೆ ಒಂದು ದಿನವೂ ಉಪ್ಪಿನಕಾಯಿ ಹಾಕ್ತಾ ಇರಲಿಲ್ಲ. ಆಯ್ತು ತಿಂಡಿ-ತೀರ್ಥ ಸಿಗುತ್ತಲ್ಲ ಅಂತ ಅಂದುಕೊಂಡರೆ, ವಿಪರೀತ ಪಾತ್ರೆ, ಪಡಗ, ನೆಂಟರಿಷ್ಟರ ಊಟದ ಎಲೆಗಳು. ಇಂತಹ ದಿನಗಳಲ್ಲಿ ರಾತ್ರಿ ಕೂಡ ಊಟ ಮಾಡಿಕೊಂಡು ಹೋಗು ಎಂದರೂ ಭಯವೇ! ಊಟ ಸಿಗುತ್ತೆ ಅಂತ ಉಳಿದುಕೊಂಡರೆ, ಮತ್ತೆ ಪಾತ್ರೆ, ಪಗಡಿ, ಎಂಜಲು, ಗೋಮ. ಮಕ್ಕಳೇ ಧೈರ್ಯ ಮಾಡಿ ಊಟ ಏನೂ ಬೇಡ, ಮಧ್ಯಾಹ್ನ ತಿಂದದ್ದೇ ಇನ್ನೂ ಅರಗಿಲ್ಲ ಅಂತ ಅರ್ಧ ಸುಳ್ಳು ಹೇಳೋರು.
ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”
ಮಿಂಚುಳಗಳು ಮತ್ತು ಕಲ್ಬಾವಿ: ಎಸ್. ಗಂಗಾಧರಯ್ಯ ಅನುಭವ ಕಥನ
ಇವರು ಯಾರೊಬ್ಬರನ್ನು ಬೈದದ್ದಾಗಲಿ, ಯಾರ ಮೇಲೆ ಆಗಲಿ ಸಿಟ್ಟು ಮಾಡಿಕೊಂಡಿದ್ದನ್ನಾಗಲಿ ನಾನು ಯಾವತ್ತೂ ಕಂಡಿರಲಿಲ್ಲ. ಚಂದದ ನಗು ಹಾಗೂ ಮೌನ ಇವರ ಬಲು ದೊಡ್ಡ ಶಕ್ತಿಗಳಾಗಿದ್ದವು. ಇನ್ನೊಬ್ಬರಿಗೆ ಭಾರವಾಗದಂತೆ ಬದುಕಬೇಕು ಅಂತ ಯಾವಾಗಲೂ ಹೇಳುತ್ತಿದ್ದ ಗೋವಿಂದಪ್ಪ ತನ್ನ ಕೈಲಾದ ಕೆಲಸವನ್ನು ಮಾಡುತ್ತಿದ್ದರು. ಅಂತೆಯೇ ಯಾರಾದರೂ ಯಾವುದಾದರೂ ಕೆಲಸವನ್ನು ಹೇಳಿದರೆ ಒಂಚೂರೂ ಬೇಸರವಿಲ್ಲದೆ ಪಾಲಿಸುತ್ತಿದ್ದರು. ಒಂಥರಾ ನಿರುಮ್ಮಳ ಜೀವಿ. ಆದರೆ ಇಂಥ ಗೋವಿಂದಪ್ಪ ನಿದ್ದೆಗೆ ಜಾರಿದಾಗ ಮಾತ್ರ ಸಹಿಸಲಸಾಧ್ಯದ ವ್ಯಕ್ತಿಯಾಗಿಬಿಡುತ್ತಿದ್ದರು. ಏಕೆಂದರೆ ಇವರು ಹೊಡೆಯುತ್ತಿದ್ದ ಗೊರಕೆಯ ಸದ್ದು ಅವರು ಮಲಗಿದ್ದ ಮನೆಯವರಿಗೆ ಮಾತ್ರವಲ್ಲ ಸುತ್ತಲ ಯಾವ ಜೀವಿಯನ್ನೂ ಬಡಪಟ್ಟಿಗೆ ಬಿಡುತ್ತಿರಲಿಲ್ಲ.
ಎಸ್. ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”
ಬಾಸ್ಗಳು ಹೀಗಿದ್ರೆ ಎಷ್ಟು ಚೆಂದ ಅಲ್ವಾ??: ಬಸವನಗೌಡ ಹೆಬ್ಬಳಗೆರೆ ಸರಣಿ
ಒಮ್ಮೆ ಹೀಗೆ ಆಯ್ತಂತೆ: ಒಮ್ಮೆ ಒಂದು ಕಚೇರಿಯವರ ಬಳಿ ದೇವರು ಪ್ರತ್ಯಕ್ಷನಾಗಿ ‘ನಿಮಗೇನು ವರ ಬೇಕು’ ಎಂದು ಕೇಳಿದನಂತೆ. ಆಗ ಬಾಸಿಗೂ ಮೊದಲೇ ಅವರ ಸಿಬ್ಬಂದಿಯೊಬ್ಬನು ‘ನಾನು ಅಮೇರಿಕಾಗೆ ಹೋಗುವ ವರ ನೀಡು’ ಎಂದನಂತೆ. ತಕ್ಷಣ ದೇವರು ‘ತಥಾಸ್ತು’ ಎಂದನಂತೆ. ಮತ್ತೊಬ್ಬನೂ ಸಹ ‘ನಾನು ಲಂಡನ್ಗೆ ಹೋಗುವಂತೆ ಮಾಡು’ ಎಂದಾಗ ದೇವರು ಹಾಗೆ ಮಾಡಿದನಂತೆ. ಆಗ ಬಾಸಿನ ಸರದಿಯಲ್ಲಿ ದೇವರ ವರ ಕೇಳುವಾಗ ಅವನಿಗಿಂತ ಮುಂಚೆ ಅವರ ನೌಕರರು ವರ ಕೇಳಿದ್ದಕ್ಕೆ ಸಿಟ್ಟು ಬಂದು ಅವರಿಬ್ಬರೂ ಕಚೇರಿಗೆ ವಾಪಸ್ಸು ಬರುವ ಹಾಗೆ ಮಾಡು ಎಂದು ಕೇಳಿದನಂತೆ!!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ
ಬದುಕಿನ ನಾಟಕ ನೋಡಿ…: ಜುಲೇಖಾ ಬೇಗಂ ಜೀವನ ವೃತ್ತಾಂತ
ಈ ಗಂಡಾಂತರವೊಂದು ಕಳೆಯುತ್ತಿದ್ದಂತೆ ನನ್ನನ್ನು ಬೇರೆ ಕಂಪೆನಿಗೆ ಸದ್ದಿಲ್ಲದೆ ಕರೆದೊಯ್ದಿದ್ದರು. ಲಕ್ಷ್ಮೀಬಾಯಿಯವರ ಗಂಡ ವೆಂಕಟ ರೆಡ್ಡಿ ಅವರ ಜೊತೆ ನಂಜಪ್ಪ, ಜಕ್ಲಿ ಈಶ್ವರ ಎಲ್ಲ ಸೇರಿಕೊಂಡು ಬೇರೆ ಕಂಪೆನಿಗೆ ಹೋಗೋಣ ಎಂದು ಸೂರ್ಯಬಾನುಗೆ ಕರೆದುಕೊಂಡು ಹೋದರು. ಹೋದದ್ದೇ, ಇನ್ನು ಐದೇ ದಿನಗಳಲ್ಲಿ ನಾಟಕ ಶುರು ಮಾಡುತ್ತೇವೆ ಎಂದರು. ಇನ್ನೂ ಐದು ದಿನಗಳು! ಹಾಗಿದ್ದರೆ ಊರಿಗೆ ಹೋಗಿ ಬರಬಹುದಲ್ಲಾ ಎನಿಸಿತು. ತಕ್ಷಣ ಮಾಲೀಕರಲ್ಲಿ ಹೋಗಿ ಕೇಳಿದೆ. ಊರಿಗೆ ಹೋಗಿಬರಬೇಕಿದೆ. ನಾಟಕ ಶುರುವಾಗುವುದರೊಳಗೆ ಇಲ್ಲಿಗೆ ಬಂದು ಸೇರುವಂತೆ ನೋಡಿಕೊಳ್ಳುವ ಹೊಣೆ ನನ್ನದು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ”
ಜೇನು ಪೊಟರೆಯ ಹಾವು, ಕ್ವಾಕ್ ಡಾಕ್ಟರ್ ಮತ್ತವಳ ಹಾವು ಹಿಡಿವ ಗಂಡ: ಎಸ್. ಗಂಗಾಧರಯ್ಯ ಅನುಭವ ಕಥನ
ಅಲ್ಲಿನ ಪರಿಸ್ಥಿಯನ್ನು ಅವಲೋಕಿಸಿ ನಾನು ಹಾವು ಹಿಡಿಯುವಾಗ ಮನೆಯೊಳಕ್ಕೆ ಯಾರೂ ಬರಬಾರದೆಂದೂ ಬಾಗಿಲು ಹಾಕಿಕೊಂಡಿದ್ದಾನೆ. ಅದಾದ ಅರ್ಧ ಗಂಟೆಗೆ ಕೈಯಲ್ಲಿ ಮಾರುದ್ದದ ನಾಗರ ಹಾವನ್ನು ಹಿಡಿದು ಹೊರ ಬಂದು ನೆರೆದಿದ್ದ ಜನರಿಗೆಲ್ಲಾ ಹಾವನ್ನು ತೋರಿಸಿ ಶಬ್ಬಾಶ್ಗಿರಿಯನ್ನು ಪಡೆದು ಐನೂರು ರೂಪಾಯಿಯನ್ನೂ ನಾಲ್ಕೈದು ಸೇರು ರಾಗಿಯನ್ನೂ ಇಸುಕಂಡು ಬಂದಿದ್ದಾನೆ. ನಿಟ್ಟುಸಿರುಬಿಟ್ಟ ಮನೆಯವರು ಬಾಣದ ದೇವರ ಹಟ್ಟಿಯ ಜುಂಜಪ್ಪ ದೇವರಿಗೆ ಹರಕೆ ಕಟ್ಟಿಕೊಂಡು ಮನೆಯೊಳಕ್ಕೆ ಹೋಗಿದ್ದಾರೆ.
ಎಸ್. ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಆರನೆಯ ಕಂತು
ಕಾರ್ಯಕ್ರಮದ ಲೆಕ್ಕಾಚಾರಗಳು: ಎಚ್. ಗೋಪಾಲಕೃಷ್ಣ ಸರಣಿ
ಇದೇ ತರಹದ ಅನುಭವ ಎರಡು ಮೂರು ಸಲ ಬೇರೆ ಬೇರೆ ಸಂದರ್ಭಗಳಲ್ಲಿ ಆಯಿತು. ಜತೆಯಲ್ಲಿದ್ದವರು ಹುರಿದುoಬಿಸಿ ನನ್ನ ಹಕ್ಕುಗಳ ರಕ್ಷಣೆಗಾಗಿ ಜಗಳಕ್ಕೆ ಪ್ರೆರೇಪಿಸಿದ್ದರು. ಜಗಳ ಸಹ ಆಡಿದ್ದೆ! ಜಗಳದ ಎಫೆಕ್ಟ್ ಬೇರೆ ರೀತಿ ಆಯಿತು. ಆಗಿದ್ದು ಬೇರೆ ರೀತಿ ಅಂದರೆ ಕಾಸು ಗೀಸು ಹೆಸರು ಬರುವಂತಹ ಸರ್ಕಾರದ ಪ್ರಾಯೋಜಿತ ಕೆಲಸಗಳಿಂದ ದೂರ ಆದೆ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ
ಕುಡುಗೊಕ್ಕು ಹರಟೆಮಲ್ಲ: ಡಾ. ಎಸ್.ವಿ. ನರಸಿಂಹನ್ ಸರಣಿ
ಇವು 22 ಸೆಂಮೀಟರ್ ಗಾತ್ರದ ಹಕ್ಕಿಗಳು. ಕಡುಗಂದು ಬಣ್ಣದ ದೇಹ; ಮುಖದಲ್ಲಿ ಎದ್ದು ಕಾಣುವ ಬಿಳಿ ಹುಬ್ಬು, ಬಿಳಿ ಬಣ್ಣದ ಗಲ್ಲ ಮತ್ತು ಎದೆ; ಕುಡುಗೋಲಿನಂತೆ ಬಾಗಿದ, ಹಳದಿ ಬಣ್ಣದ ಗಟ್ಟಿಮುಟ್ಟಾದ ಕೊಕ್ಕು, ಅಷ್ಟೇ ಬಲಿಷ್ಟವಾದ ಕಾಲು ಮತ್ತು ಪಾದಗಳು; ಬಹುದೂರ ಹಾರಲಾಗದ, ಸಣ್ಣ-ಗುಂಡಾದ ರೆಕ್ಕೆಗಳು. ಸಡಿಲವಾಗಿ ಅಂಟಿಸಿರುವಂತೆ ಕಾಣುವ ಬಾಲ. ಸಾಧಾರಣವಾಗಿ ಆರರಿಂದ ಏಳು ಪಕ್ಷಿಗಳು ಒಟ್ಟಾಗಿ ವಾಸಮಾಡುತ್ತವೆ.
ಡಾ. ಎಸ್.ವಿ. ನರಸಿಂಹನ್ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ ಕುಡುಗೊಕ್ಕು ಹರಟೆಮಲ್ಲ
ಹಕ್ಕಿಯ ಕುರಿತ ಬರಹ ಇಲ್ಲಿದೆ
ಮೋಸದ ಆಟ…: ಜುಲೇಖಾ ಬೇಗಂ ಜೀವನ ವೃತ್ತಾಂತ
ಮಾರನೇ ದಿನ, ನಾವೆಲ್ಲರೂ ಏಳುವ ಹೊತ್ತಿಗಾಗಲೇ ಸಾಲಗಾರರೆಲ್ಲ ಸೇರಿದ್ದರು. ಸಹಾಯರ್ಥ ಪ್ರದರ್ಶನ ಆಡಿದ ಮೇಲೆ, ಅದರಲ್ಲೂ ಹೌಸ್ಫುಲ್ ಕಲೆಕ್ಷನ್ ಗಳಿಸಿದ ಮೇಲೆ ದುಡ್ಡು ವಾಪಾಸು ಕೇಳಲು ಬರುವುದು ನ್ಯಾಯಸಮ್ಮತ ತಾನೆ. ಈ ಬಾರಿ, ಪಕ್ಕಾ ವ್ಯವಹಾರಸ್ಥರಂತೆ ಅವರೆಲ್ಲ ಕಂಡಿದ್ದರು. ನಾವೂ ಅಷ್ಟೇ, ಕಂಪೆನಿಯ ಸಾಲವನ್ನು ನಮ್ಮ ಮಾಲೀಕರು ಈಗ ತೀರಿಸುತ್ತಾರೆ ನೋಡಿ ಎಂಬ ಭಾವಭಂಗಿಯಲ್ಲೇ ನಿಂತಿದ್ದೆವು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಹತ್ತೊಂಭತ್ತನೆಯ ಕಂತು
ಕೆಮ್ಮಣ್ಣು ಜೀರಿಂಬೆ ಮತ್ತು ಚಿಕ್ಕವ್ವನೆಂಬ ಎಮ್ಮೆ: ಎಸ್. ಗಂಗಾಧರಯ್ಯ ಅನುಭವ ಕಥನ
ನನಗೀಗ ಏನು ಮಾಡಬೇಕೆಂಬುದು ತಿಳಿಯದೆ ಪೂರಾ ಗಾಬರಿಗೊಳಗಾದೆ. ಅಂಥ ಗಾಬರಿಯಲ್ಲೂ ಚಿಕ್ಕವ್ವನ ಜಾರುತ್ತಿದ್ದ ಬಾಲವನ್ನೇ ಆಸರೆಯಾಗಿಸಿಕೊಂಡು ಅವಳ ಬೆನ್ನ ಮೇಲೆ ಕೂತು ಬಚಾವಾಗುವ ಆಸೆಯಿಂದ ಹಿಡಿದಿದ್ದ ಬಾಲವನ್ನೂ ಕೈ ಬಿಟ್ಟು ಮೆಲ್ಲಗೆ ಅವಳ ಮೈಯ್ಯ ಹತ್ತಿರ ಸಾಗಿದೆ. ಅದು ನಾನು ಮಾಡಿಕೊಂಡ ದೊಡ್ಡ ಯಡವಟ್ಟಾಗಿತ್ತು. ಮೊದಲೇ ನೊಣ ಕೂತರೆ ಜಾರುವಷ್ಟು ನುಣುಪಾಗಿದ್ದ ಅವಳ ಮೈ ನೀರಿನೊಳಗಿದ್ದುದರಿಂದ ಅದಕ್ಕೆ ಮತ್ತಷ್ಟು ನುಣುಪು ಬಂದು ಮತ್ತಷ್ಟು ಜಾರುತ್ತಾ ನಾನು ಎಷ್ಟೇ ಪಟ್ಟು ಹಾಕಿದರೂ ಆ ಪಟ್ಟುಗಳೆಲ್ಲಾ ಮಕಾಡೆ ಮಲಗಿದವು.
ಎಸ್. ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”









