“ಡೆಸರ್ಟ್ಸ್” ಮಾತ್ರ ಬೇಡಪ್ಪ….: ದರ್ಶನ್ ಜಯಣ್ಣ ಸರಣಿ
ಈ ಪ್ರಯಾಣದ ನಡುವೆಲ್ಲಾ ನನ್ನನ್ನು ಕಾಡಿದ ವಿಷಯ ಮಧ್ಯದಲ್ಲೆಲ್ಲೋ ಗಾಡಿ ಪಂಕ್ಚರ್ ಆದರೆ ಏನು ಮಾಡುವುದು? ಎಸಿ ಕೈಕೊಟ್ಟರೆ ಹೇಗೆ ಸಂಭಾಳಿಸುವುದು? ಮರಳ ಮಳೆ ಬಂದು ದಾರಿ ಕಾಣದಾದರೆ ಏನು ಗತಿ, ಇತ್ಯಾದಿ. ಹಾಗೇನೂ ಆಗದಿದ್ದರೂ ರಿಯಾದ್ ತಲುಪುವವರೆಗೂ ಮತ್ತು ಎರಡು ದಿನದ ನಂತರ ವಾಪಾಸು ಬರುವಾಗಲೂ ನನ್ನನ್ನು ಬಿಟ್ಟು ಬಿಡದೆ ಕಾಡಿದ ಪ್ರಶ್ನೆಗಳು ಇವು. ದಾರಿ ಅತ್ಯಂತ ಬ್ಯುಸಿಯಾಗಿದ್ದರೂ, ಅಲ್ಲಲ್ಲಿ ಹತ್ತಾರು ಕಿಲೋಮೀಟರ್ಗಳ ನಂತರವೇ ಪೆಟ್ರೋಲ್, ತಿಂಡಿ ತಿನಿಸು, ಪಂಕ್ಚರ್ ಅಂಗಡಿ ಮತ್ತು ಇನ್ನಿತರೆ ಅಂಗಡಿಗಳು ನಿಗದಿತ ಜಾಗದಲ್ಲಿ ಮಾತ್ರವೇ ಇರುವುದು ಪರಿಸ್ಥಿತಿಯನ್ನ ಇನ್ನಷ್ಟು ಬಿಗಡಾಯಿಸಿತ್ತು.
ದರ್ಶನ್ ಜಯಣ್ಣ ಬರೆಯುವ “ಸೌದಿ ಡೇಟ್ಸ್” ಸರಣಿ
ಬೋಧಿಸುವಾಗ ಮಕ್ಕಳನ್ನು ನಿಭಾಯಿಸಿದ ರೀತಿ..: ಬಸವನಗೌಡ ಹೆಬ್ಬಳಗೆರೆ ಸರಣಿ
ಒಬ್ಬ ಹುಡುಗ ಮಾತ್ರ ‘ಡ್ಯಾನ್ಸಿಂಗ್’ ಪದ ಹೇಳಿದಾಗ ಜಾಸ್ತಿಯೇ ಕುಣಿಯುತ್ತಾ ಬಂದು ನನ್ನ ಹತ್ತಿರವೇ ಬಂದುಬಿಟ್ಟ. ನನಗೆ ತಕ್ಷಣಕ್ಕೆ ಸಿಟ್ಟು ಬಂದು ಒಂದು ಏಟನ್ನು ಕೊಟ್ಟುಬಿಟ್ಟೆ. ಅವನು ಜೋರಾಗಿ ಅಳಲು ಶುರು ಮಾಡಿದ. ಹಿಂದೆ ಪಾಠ ನೋಡಲು ಕುಳಿತ ಲೆಕ್ಚರ್ ನನಗೆ ಬಯ್ಯುತ್ತಾರೆಂದು ನಾನು ತಕ್ಷಣ ಅಳುತ್ತಿದ್ದ ಹುಡುಗನ ಬಳಿ ಹೋಗಿ ಮತ್ತೆ ಟಚ್ ಮಾಡಿದಂತೆ ಮಾಡಿ ‘ಬೀಟಿಂಗ್’ ಎಂದು ಹೇಳಿದೆ. ಹುಡುಗರೂ ‘ಬೀಟಿಂಗ್…… ಬೀಟಿಂಗ್’ ಎಂದರು. ಅವನು ಅಳುವುದನ್ನು ತೋರಿಸಿ ‘ಕ್ರೈಯಿಂಗ್.. ಕ್ರೈಯಿಂಗ್’ ಎಂದು ಹೇಳಿದೆನು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಮೂವತ್ತೆಂಟನೆಯ ಕಂತು ನಿಮ್ಮ ಓದಿಗೆ
ಮನಸ್ಸರಳಿಸುವ ಮೋಹಕ ರಂಗೋಲಿ: ಸುಮಾವೀಣಾ ಸರಣಿ
ಭಾರತೀಯ ರಂಗೋಲಿಗಳಲ್ಲಿ ಪರ್ವತ ಪ್ರಾಂತ್ಯ, ಕರಾವಳಿ ಮತ್ತು ಮೈದಾನ ಪ್ರಾಂತ್ಯಗಳಲ್ಲಿ ವಿಭಿನ್ನವಾಗಿ ಮೂಡಿಬರುತ್ತವೆ. ಪರ್ವತ ಪ್ರಾಂತ್ಯ ಅಂದರೆ ರಾಜಸ್ಥಾನ, ಉತ್ತರಪ್ರದೇಶ, ಹಿಮಾಚಲ ಪ್ರದೇಶ ಇಲ್ಲಿ ಬಿಡಿಸುವ ರಂಗೋಲಿ ರೇಖೆಗಳನ್ನು ಕೂಡಿಕೊಂಡಿದ್ದು ಅಗಲದ್ದಾಗಿರುತ್ತದೆ. ಚಿಕ್ಕಚಿಕ್ಕ ರೇಖೆಗಳನ್ನು ಬಳಸಿ ಬಂಗಾಳ ಮತ್ತು ಬಿಹಾರ ಪ್ರಾಂತ್ಯದವರು ಬಿಡಿಸುತ್ತಾರೆ. ಇವೆರಡರ ಜೊತೆಗೆ ಬಳ್ಳಿಗಳ ರಂಗೋಲಿ ಕರ್ನಾಟಕ, ಆಂಧ್ರ, ತಮಿಳುನಾಡಿನಲ್ಲಿದೆ. ಕೇರಳದವರ ಪುಷ್ಪರಂಗೋಲಿಯಂತೂ ವಿಶ್ವವಿಖ್ಯಾತ. ಓಣಂ ಆಚರಣೆಯ ಅವಿಭ್ಯಾಜ್ಯ ಅಂಗ ಎಂದರೆ ಈ ಪುಷ್ಪರಂಗೋಲಿ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಹದಿನೆಂಟನೆಯ ಬರಹ ನಿಮ್ಮ ಓದಿಗೆ
ಎಕೆಲೋಫ಼್ ಎಂಬ “ಸರ್ರಿಯಲಿಸ್ಟ್” ಕವಿ: ಎಸ್. ಜಯಶ್ರೀನಿವಾಸ ರಾವ್ ಸರಣಿ
ಎಕೆಲೋಫ಼್ ಅವರ ವೃತ್ತಿಜೀವನದ ಪ್ರತಿಯೊಂದು ತಿರುವಿನಲ್ಲೂ ಇದೇ ಕಥೆ ಪುನರಾವರ್ತನೆಯಾಗುತ್ತಿತು. ಮೂವತ್ತರ ದಶಕದ ಉತ್ತರಾರ್ಧದಲ್ಲಿ ಎಕೆಲೋಫ಼್ ಮಾನವ ವ್ಯಕ್ತಿನಿಷ್ಠೆಗೆ ಆಮೂಲಾಗ್ರ ಮತ್ತು ಹೆಚ್ಚು ಅಮೂರ್ತವಾದ ದೃಷ್ಟಿಕೋನದೆಡೆಗೆ ತಮ್ಮ ಕಾವ್ಯಪ್ರಯೋಗ ನಡೆಸುತ್ತಿದ್ದರು.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಸ್ವೀಡನ್ ದೇಶದ ಕವಿ ಗುನ್ನಾರ್ ಎಕೆಲೋಫ಼್-ರವರ (Gunnar Ekelof, 1907-1968) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು
ಮೇಸ್ತ್ರಿಯೊಂದಿಗೆ ಗೆದ್ದ ಯುದ್ಧ…: ಎಚ್. ಗೋಪಾಲಕೃಷ್ಣ ಸರಣಿ
ನನ್ನ ತಲೆಯಿಂದ ದೊಡ್ಡ ಹೊರೆ ಇಳಿದ ಹಾಗನ್ನಿಸಿತು. ಸಾವಿರಾರು ರುಪಾಯಿ ಮಿಗಿಸಿದ ಸಂತೋಷ ಆಯ್ತು. ರೂಪಿ ಸೆವ್ಡ್ ಈಸ್ ರೂಪಿ ಅರ್ನ್ಡ್ ಎನ್ನುವ ಫಿಲಾಸಫಿ ನನ್ನದು ಆ ಕಾಲದಿಂದಲೇ…….! ಈ ಸಂತೋಷ ಒಂದುಕಡೆ ಮತ್ತು ಇಡೀ ಜೀವಮಾನ ಅನುಭವಿಸಬೇಕಿದ್ದ ಮಾನಸಿಕ ಒತ್ತಡ ಒಂದುಕಡೆ ನಿವಾರಣೆ ಆದ ಖುಷಿ ಸಿಕ್ತಾ?
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಅರವತ್ತನೆಯ ಕಂತು
ಮಳೆ ಹಿಡಿಯೋ ಮೊದ್ಲು…..: ಭವ್ಯ ಟಿ. ಎಸ್. ಸರಣಿ
ಮಳೆಗಾಲ ಬಂತೆಂದರೆ ಮೀನುಗಳ ಕಾಲವೂ ಬಂದಂತೆಯೇ. ಹತ್ ಮೀನು, ಅವ್ಲು, ಗೌರಿ ಮೊದಲಾದ ಹೊಳೆ ಮೀನುಗಳು ಸಿಗುವಾಗ ರುಚಿಕರವಾದ ಮೀನು ಸಾರಿಗೆ ಬೇಕಾದ ತರತರದ ಹುಳಿಗಳು ಈ ಮೇ ತಿಂಗಳಲ್ಲಿ ತಯಾರಾಗಬೇಕು. ಮಲೆನಾಡಿನ ಕಾಡುಗಳಲ್ಲಿ ವಾಟೆ ಮರ ಇರುತ್ತದೆ. ಈ ವಾಟೆ ಕಾಯಿಗಳನ್ನು ಉದುರಿಸಿ ತಂದು ಸಣ್ಣಗೆ ಹೆಚ್ಚಿ, ಒಣಗಿಸಿ, ಬೀಜ ತೆಗೆದು ಉಪ್ಪು ಹಾಕಿ ಡಬ್ಬಿಗಳಲ್ಲಿ ಸಂಗ್ರಹಿಸಿಡುತ್ತಾರೆ.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿಯಲ್ಲಿ ಮಳೆ ಶುರುವಾಗುವ ಮುಂಚೆ ಮಾಡಿಟ್ಟುಕೊಳ್ಳುವ ಸಿದ್ಧತೆಗಳ ಕುರಿತ ಬರಹ ಇಲ್ಲಿದೆ
ಏಷ್ಯಾದ ಕಳೆದುಹೋದ ಜಗತ್ತು ಇಂಡೋನೇಷ್ಯಾ: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ
ಇಂಡೋನೇಷ್ಯಾವು ನೂರಕ್ಕೂ ಹೆಚ್ಚು ಅಳಿವಿನಂಚಿನಲ್ಲಿರುವ ಜೀವಿಗಳಿಗೆ ನೆಲೆಯಾಗಿದೆ. ಏಷ್ಯಾದ ಕಳೆದುಹೋದ ಜಗತ್ತು ಎನ್ನುವ ವಿಶೇಷ ಹೆಸರನ್ನು ಹೊಂದಿದೆ ಇಂಡೋನೇಷ್ಯಾ. ಬೇರೆ ಕಡೆಗಳಲ್ಲಿ ಕಂಡುಬರದ, ಈಗಾಗಲೇ ಅಳಿದುಹೋದ ಅಪರೂಪದ ಜೀವಿಗಳು ಇಲ್ಲಿ ಕಂಡುಬರುತ್ತವೆ. ಸುಮಾತ್ರನ್ ಘೇಂಡಾಮೃಗ, ಒರಾಂಗ್-ಉಟಾನ್ಸ್, ಅನೋವಾ, ಸುಮಾತ್ರಾನ್ ಹುಲಿ, ಸಮುದ್ರ ಆಮೆಗಳು, ಟಾರ್ಸಿಯಸ್ ಟಾರ್ಸಿಯರ್, ಕೊಮೊಡೊ ಡ್ರ್ಯಾಗನ್, ಮೆರಾಕ್ ಮೊದಲಾದವು ಇಲ್ಲಿ ಕಾಣಸಿಗುವ, ಬೇರೆಲ್ಲೂ ಹೆಚ್ಚಾಗಿ ಕಾಣಸಿಗದ ಜೀವಿಗಳು.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ಇಂಡೋನೇಷ್ಯಾ ದೇಶದ ಕುರಿತ ಬರಹ ನಿಮ್ಮ ಓದಿಗೆ
ಸೌದಿ ಡೇಟ್ಸ್ – 2: ದರ್ಶನ್ ಜಯಣ್ಣ ಸರಣಿ
ಸೌದಿ ಆಧುನಿಕತೆಯನ್ನ ಎಲ್ಲರಂತೆ ಅಪ್ಪಿಕೊಂಡರೂ ಅದನ್ನ ಒಪ್ಪಿಕೊಂಡಿರಲಿಲ್ಲ. ಸಂಪ್ರದಾಯ ಮತ್ತು ಆಧುನಿಕತೆ, ಇಸ್ಲಾಂ ಮತ್ತು ಇತರೆ ಧಾರ್ಮಿಕ ಪದ್ಧತಿಗಳು, ಹಣ ಗಳಿಕೆ ಮತ್ತು ಜಾಗತಿಕ ಪ್ರಭಾವ, ಶಿಕ್ಷಣ ಮತ್ತು ಧರ್ಮ, ಸಂಪನ್ಮೂಲಗಳು ಮತ್ತು ನುರಿತ ಕೆಲಸಗಾರರು, ಕಮಾಂಡ್ ಅಂಡ್ ಕಂಟ್ರೋಲ್ ಇವೇ ಮುಂತಾದ ವಿಷಯಗಳನ್ನ ಎರಡು ದೋಣಿಯ ಪಯಣ ಅಂತಲೇ ಬಹುಶ ಭಾವಿಸಿತ್ತು ಅನ್ನಿಸುತ್ತದೆ. ಇತರೇ ಅರಬ್ ರಾಷ್ಟ್ರಗಳು ಇಲ್ಲಿಗೆ ಬಂದು ನೆಲಸಿ ನೌಕರಿ ಮಾಡುವವರನ್ನು ಮುಕ್ತವಾಗಿ ನಮ್ಮ ದೇಶವನ್ನ ಕಟ್ಟಿದವರಲ್ಲಿ ಇವರ ಪಾಲೂ ಹೆಚ್ಚಿದೆ ಎಂದು ಹೇಳಿದರೆ ಸೌದಿ ಅಂತಾ ಯಾವ ಹೇಳಿಕೆಯನ್ನೂ ಕೊಡುವುದಿಲ್ಲ.
ದರ್ಶನ್ ಜಯಣ್ಣ ಬರೆಯುವ “ಸೌದಿ ಡೇಟ್ಸ್” ಸರಣಿ
ಮಹಾಮಾತೆ ನನ್ನತ್ತೆ: ಸುಮಾ ಸತೀಶ್ ಸರಣಿ
ಅವರ ಜೀವನ ಪ್ರೀತಿ ಬಲು ಹಿತವಾಗಿತ್ತು. ಮನೆತುಂಬ ಮಕ್ಕಳಿದ್ದಾಗ ತರಾವರಿ ಅಡುಗೆ ಮಾಡುತ್ತಿದ್ದರು. ಕೊನೆಗೆ ತಾವಿಬ್ಬರೇ ಇರುವಾಗಲೂ ಯಾವೊಂದು ತಿಂಡಿಯನ್ನೂ ಬಿಡದೆ ಮಾಡುತ್ತಿದ್ದರು. ಇಡ್ಲಿ, ದೋಸೆ, ಕಡುಬು, ಒಬ್ಬಟ್ಟು ಊಹೂ ಯಾವುದೂ ಬಿಡುತ್ತಿರಲಿಲ್ಲ. ಸೋಮಾರಿತನ ಇವರನ್ನು ಕದ್ದು ನೋಡಲೂ ಹೆದರಿ ಓಡುತ್ತಿತ್ತು. ಕೊನೆಗೆ ಮಾಮ ಹೋದ ಮೇಲೆ ಸುಮಾರು ವರ್ಷಗಳು ಒಬ್ಬರೇ ಇದ್ದಾಗಲೂ ಅದೇ ಆಹಾರ ಪದ್ಧತಿಯಿತ್ತು. ತಾವೊಬ್ಬರೇ ತಿನ್ನದೆ ಅಕ್ಕಪಕ್ಕದವರಿಗೆ, ಹತ್ತಿರದ ಬಡಮಕ್ಕಳಿಗೆ, ಕೂಲಿ ಕೆಲಸದವರಿಗೆ ಕೊಟ್ಟು ತಿನ್ನುತ್ತಿದ್ದರು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ ಬರಹ










