ವೈ ದಿಸ್ ಡೆಲಿವರಿ ಡೆಲಿವರಿ ಡಿ…: ಸುಮಾವೀಣಾ ಸರಣಿ
ಮೊನ್ನೆ ಆಚೆ ಹೋಗಕೆ ಇದ್ದೆ. ಅಲ್ಲೊಬ್ಬ ಡೆಲಿವರಿ ಬಾಯ್ ಫೋನ್ ಲೌಡಲ್ಲಿ ಇಟ್ಕೊಂಡು “ಹಲೋ ಇವತ್ತು ಡಿಲೆವರಿ ಇತ್ತು” ಎಂದ. ಆಚೆಕಡೆಯಿಂದ ಹಲೋ ತಮ್ಮ ಹೆಸರು ಅಂದ್ರೆ ರತ್ನ ಅಂದ್ರು. ಹೌದು ಮೇಡಮ್ ಡೆಲಿವರಿ ಮಾಡ್ತೀನಿ ನೀವ್ ಇರ್ತೀರ ಎಂದರೆ ಆ ಕಡೆಯಿಂದ ಇಲ್ಲ ನನ್ ಮಗಳ್ ಇರ್ತಾಳೆ ಫೋನ್ ಮಾಡಿ ಹೇಳ್ತೀನಿ… ಹಣ ಕಳ್ಸ್ತೀನಿ ಅಲ್ಲೆ ಡೆಲಿವರಿ ಮಾಡಿ” ಅನ್ನೋದ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಹದಿನೈದನೆಯ ಬರಹ ನಿಮ್ಮ ಓದಿಗೆ
‘ರೈತ ಕವಿ’ ಲೆನಾರ್ಟ್ ಸ್ಯೋಗ್ರೆನ್ : ಎಸ್. ಜಯಶ್ರೀನಿವಾಸ ರಾವ್ ಸರಣಿ
ಈ ಕಾರ್ಯದ ವಿರೋಧಾಭಾಸದ ಸ್ವರೂಪವು ಅವರ ಕವಿತೆಗಳಿಗೆ ಒಂದು ರೀತಿಯ ಮೊಂಡುತನದ ನಿಷ್ಠುರತೆಯನ್ನು ನೀಡುತ್ತದೆ. ಮೌನದ ದಿಕ್ಕಿನಲ್ಲಿ ಮಾತನಾಡುವ ಈ ಮಾತು, ಭಾಷೆಯ ಮೂಲಕ ಭಾಷೆಯಿಲ್ಲದವರ ಜಗತ್ತನ್ನು ವ್ಯಾಖ್ಯಾನಿಸುವ ಈ ಪ್ರಯತ್ನ – ಅದರೊಂದಿಗೆ, ಯಾವಾಗಲೂ ಅಡಗಿರುವ ವೈಫಲ್ಯದ ಭಾವನೆಯ ಜೊತೆ – ಸ್ಯೋಗ್ರೆನ್ ಅವರು ಇದನ್ನು ಮುವ್ವತ್ತಕ್ಕೂ ಹೆಚ್ಚು ಕವನ ಸಂಕಲನಗಳಲ್ಲಿ ನಿರಂತರವಾಗಿ ಮತ್ತು ಸಮಚಿತ್ತದಿಂದ ನಿರ್ವಹಿಸುತ್ತಾ ಬಂದಿದ್ದಾರೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಸ್ವೀಡನ್ ದೇಶದ ಕವಿ ಲೆನಾರ್ಟ್ ಸ್ಯೋಗ್ರೆನ್-ರವರ (Lennart Sjögren, 1930) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು
ಎಡವಟ್ಟುಗಳ ಸರಮಾಲೆ…: ಎಚ್. ಗೋಪಾಲಕೃಷ್ಣ ಸರಣಿ
ಇಲ್ಲೂ ಒಂದು ಭಾರೀ ತಪ್ಪು ಆಗಿಬಿಟ್ಟಿತು, ನಮ್ಮ ಯಾರ ನೆರವೂ ಇಲ್ಲದೆ… ಮೆಟ್ಟಲಿಗೆ ಅಂತ ಬಾರ್ ಬೆಂಡರ್ ಕಂಬಿ ಕಟ್ಟಿದ. ಕಾಂಕ್ರೀಟು ದಿವಸ ಅವನಿರಲಿ ಅಂತ ಮಲ್ಲಯ್ಯ ಹೇಳಲಿಲ್ಲ, ನಾನೂ ಅವನಿಗೆ ಹೇಳಲಿಲ್ಲ. ಕಾಂಕ್ರಿಟ್ ಹಾಕ್ತಾ ಇದಾರೆ. ಮೆಟ್ಟಲಿಗೆ ಅಂತ ಕಟ್ಟಿದ ಕಂಬಿ ಮುಂದಿನಿಂದ ಮೆಟ್ಟಲು ಏರುವ ರೀತಿ ಇರಬೇಕಿತ್ತು. ಅದು ಹೇಗೆ ಇಟ್ಟರೂ ಸರಿ ಬರ್ತಿಲ್ಲ! ನೋಡಿ ನಿಮ್ಮೋನು ಮಾಡಿರೋ ತಿರುಪತಿ ಕೆಲಸ. ಅವನಿಗೆ ಈಗಲೇ ಬರಕ್ಕೆ ಹೇಳಿ…! ಅವನನ್ನ ಹುಡುಕಿ ನಾನೆಲ್ಲಿ ಹೋಗಲಿ ಆ ಸಮಯದಲ್ಲಿ? ಫೋನ್ ಬೇರೆ ಇಲ್ಲ!
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ
ಕಡುಬಿನ ಪುರಾಣ: ಭವ್ಯ ಟಿ.ಎಸ್. ಸರಣಿ
ಮಳೆಗಾಲದಲ್ಲಿ ಮಲೆನಾಡಿನ ಹಸು, ಎತ್ತುಗಳಿಗೆ ಹುರುಳಿಕಾಳು ಬೇಯಿಸಿ ಕೊಡುತ್ತಾರೆ. ಈ ಹುರುಳಿ ಬೇಯಿಸಿದ ನೀರಿಗೆ ಹುರುಳಿಕಟ್ಟು ಎನ್ನುತ್ತಾರೆ. ಇದರ ರುಚಿ ಬಲ್ಲವರೇ ಬಲ್ಲರು. ಕುದ್ದು ದಪ್ಪಗಾಗಿ ಹದಗೊಂಡ ಹುರುಳಿಕಟ್ಟಿಗೆ ಸಾಸಿವೆ, ಬೆಳ್ಳುಳ್ಳಿ, ಕರಿಬೇವು, ಒಣ ಮೆಣಸಿನ ಒಗ್ಗರಣೆ ಕೊಟ್ಟು, ಸ್ವಲ್ಪ ವಾಟೆಹುಳಿ ಅಥವಾ ಹುಣಸೆಹಣ್ಣು ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿದರೆ ಘಮಘಮಿಸುವ ಹುರುಳಿಕಟ್ಟಿನ ಸಾರು ತಯಾರಾಗುತ್ತದೆ. ಇದನ್ನು ಕಡುಬಿಗೆ ಕಲಸಿ ತಿಂದರೆ ಸ್ವರ್ಗಕ್ಕೆ ಮೂರೇ ಗೇಣು.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿ
ಯುಗ ಯುಗಾದಿ ಕಳೆದರೂ ಮರೆಯಲಾಗದ ಸಂಭ್ರಮ: ಸುಮಾ ಸತೀಶ್ ಸರಣಿ
ಮನೆ ಹೆಂಗಸರಿಗೆ ಮಧ್ಯರಾತ್ರಿಯಿಂದಲೇ ಸುರುವಾಗ್ತಿತ್ತು. ಬೆಳಗಿನ ಜಾವ ಎರಡು ಗಂಟೆಯಿಂದಲೇ ಹೂರಣ ರುಬ್ಬುವ, ಒಬ್ಬಟ್ಟು ತಟ್ಟುವ, ಬೇಯಿಸುವ ಸದ್ದು. ಹೋಳಿಗೆ ವಾಸನೆಗೆ ಊರೆಲ್ಲಾ ಘಮಗುಡುತ್ತಿತ್ತು. ಒಬ್ಬಟ್ಟು ಸಾರು ಮರಳಿಸುತ್ತಿದ್ದರೆ ಮೂಗಿನ ಹೊಳ್ಳೆಗಳು ಅರಳಿ, ನಿಮಿರುತ್ತಿದ್ದವು. ದೊಡ್ಡ ದೊಡ್ಡ ಬೇಸನ್ನುಗಳಲ್ಲಿ ಒಬ್ಬಟ್ಟಿನ ರಾಶಿ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಹಳ್ಳಿ ಯುಗಾದಿಯ ಸಂಭ್ರಮಗಳ ಕುರಿತ ಬರಹ ನಿಮ್ಮ ಓದಿಗೆ
ಗತಕಾಲದ ಚಿನ್ನದ ಗಣಿ ಕೊಲಂಬಿಯಾ: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ
ಕೊಲಂಬಿಯಾದಲ್ಲಿ ದೊಡ್ಡವರು ಮಾತ್ರವಲ್ಲ, ಚಿಕ್ಕ ಮಕ್ಕಳೂ ಸಹ ಕಾಫಿಪ್ರಿಯರು. ಊಟದ ನಂತರವೂ ಸಹ ಕಾಫಿ ಕುಡಿಯುವ ಅಭ್ಯಾಸವನ್ನು ಇವರು ಇಟ್ಟುಕೊಂಡಿದ್ದಾರೆ. ರಾತ್ರಿಯ ಊಟದ ನಂತರ ಹೆತ್ತವರೇ ತಮ್ಮ ಮಕ್ಕಳಿಗೆ ಕಾಫಿಯನ್ನು ಕುಡಿಯುವುದಕ್ಕೆ ಕೊಡುತ್ತಾರೆ. ಇದನ್ನು ‘ಕಾಫಿ ಕಾನ್ ಲೆಚೆ’ ಎಂದು ಕೊಲಂಬಿಯನ್ ಭಾಷೆಯಲ್ಲಿ ಕರೆಯಲಾಗುತ್ತದೆ. ಅಂದರೆ ‘ಹಾಲಿನ ಜೊತೆಗೆ ಕಾಫಿ’ ಎಂದರ್ಥ. ಮಕ್ಕಳಿಗೆ ಹಾಲಿನ ಜೊತೆಗೆ ಬೆರೆಸಿದ ಲೈಟಾದ ಕಾಫಿಯನ್ನು ಕೊಡುವ ದೊಡ್ಡವರು ಸ್ಟ್ರಾಂಗ್ ಕಾಫಿಯನ್ನೇ ಕುಡಿಯುತ್ತಾರೆ.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿ
ಹಸೆಮಣೆಯೇರಿದ ತಾಯಿ…: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ
ಪದ್ಮನಾಭನ್, ಸುಮತಿ ಕೊರಳಿಗೆ ತಾಳಿ ಕಟ್ಟುತ್ತಾನೆ. ಮದುವೆ ನಡೆಸುತ್ತಿದ್ದ ಹಿರಿಯಾತ ಎದ್ದು ಕುಂಡದ ಸುತ್ತಲೂ ಏಳು ಸುತ್ತುಗಳನ್ನು ಹಾಕುವಂತೆ ಹೇಳುತ್ತಾರೆ. ಸೆಲ್ವಿ ನಿಧಾನವಾಗಿ ಹೊಟ್ಟೆಯನ್ನು ಹಿಡಿದುಕೊಂಡು ಎದ್ದುನಿಂತು ಗಂಡನ ಹಿಂದೆ ನಡೆಯುತ್ತಾಳೆ. ಸುತ್ತಲೂ ನೆರೆದಿದ್ದವರೆಲ್ಲ ಸೆಲ್ವಿಯ ಹೊಟ್ಟೆಯನ್ನೇ ನೋಡುತ್ತಾರೆ. ಸೆಲ್ವಿ ಕ್ಲಾಸ್ಮೇಟ್ ಸ್ವಾಮಿ ಗುಂಪು ಮತ್ತು ಹುಡುಗಿಯರ ಗುಂಪು ಬೆರಗಾಗಿ ನೋಡುತ್ತಾರೆ. ಮದುವೆ ಮುಗಿದು ಎಲ್ಲರೂ ಅವರನ್ನು ವಿಶ್ ಮಾಡಿ ಪಕ್ಕದಲ್ಲಿದ್ದ ಪೆಂಡಾಲ್ ಒಳಕ್ಕೆ ಊಟಕ್ಕೆ ಹೊರಡುತ್ತಾರೆ.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿ
ತಿರುವುಗಳ ಪಯಣದಲ್ಲೊಂದು ಒಲವಿನ ಬೆಳಕು: ರಾಮ್ ಪ್ರಕಾಶ್ ರೈ ಕೆ ಸರಣಿ
ಮಣಿರತ್ನಂ ಜಾನರ್ ಎಂದು ಕರೆಯಬಹುದಾದ ಶೈಲಿಯ ಕಥಾನಕವಿದು. ಅಲೈಪಾಯುದೆ, ರೋಜಾ, ಓಕೆ ಕಣ್ಮಣಿ ತೆರನಾದ ಚಿತ್ರ. ಇಲ್ಲಿ ಅಬ್ಬರಗಳಿಲ್ಲ. ಅನುರಾಗದ ಅತೀ ಸರಳ ವಿಜೃಂಭಣೆಯಿದೆ. ಬದುಕಿನ ನೈಜ ಮಾಧುರ್ಯವಿದೆ. ವಿಷಾದವಿದೆ, ನಿರ್ವಾತವಿದೆ. ನೋವು ನಲಿವಿನ ಸ್ಯಾಂಡ್ ವಿಚ್ ಕೂಡ. ನಿರ್ದೇಶಕ ಅಶೋಕ್ ತಮ್ಮ ಮೊದಲ ಪ್ರಯತ್ನದಲ್ಲಿ ಕೆಂಪು ಹೊಳೆಯ ತಟದ ಮೇಲೆ ನಡೆದ ಚಾರಣಿಗರ ನಾಪತ್ತೆಯ ಬಗ್ಗೆ ಮಾತನಾಡಿದ್ದರು.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ಕನ್ನಡದ ‘ದಿಯಾ’ ಸಿನಿಮಾದ ವಿಶ್ಲೇಷಣೆ
ಚುಟುಕು ಹೇಳಿ ನಾನು ಎಲ್ಲರ ಮುಂದೆ ಚುಟುಕಾಗಿದ್ದು!!!: ಬಸವನಗೌಡ ಹೆಬ್ಬಳಗೆರೆ ಸರಣಿ
ನಾನು ಹೀಗೆ ಹೇಳಿದ ನಂತರ ಎಲ್ಲರೂ ನನ್ನ ಚುಟುಕನ್ನು ಮೆಚ್ಚುತ್ತಾರೆ ಎಂದುಕೊಂಡಿದ್ದೆ. ಆದರೆ ಆಗಿದ್ದೆ ಬೇರೆ. ಸಾಹಿತ್ಯದ ಬಗ್ಗೆ ಆಸಕ್ತಿಯಿದ್ದ ಬಿಕೆಎಂ ಸರ್ ಎದುರಿಗೆ ಹೇಳಿದ್ದರೆ ಅವರು ಅದನ್ನು ಯಾವ ರೀತಿಯಾಗಿ ತೆಗೆದುಕೊಳ್ಳುತ್ತಿದ್ದರೋ ಗೊತ್ತಿಲ್ಲ. ಆದರೆ ಅವರು ನನಗೆ ಹಿಗ್ಗಾ ಮುಗ್ಗಾ ಬಯ್ದರು. ಹುಡುಗಿಯರು ಜಗತ್ತಿನಲ್ಲಿ ನಾನೇನೋ ದೊಡ್ಡ ತಪ್ಪು ಮಾಡಿದ್ದ ರೀತಿಯಲ್ಲಿ ನನ್ನನ್ನು ನೋಡಲು ಶುರು ಮಾಡಿದರು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಮೂವತ್ನಾಲ್ಕನೆಯ ಕಂತು ನಿಮ್ಮ ಓದಿಗೆ










