ತನ್ನೋಟಿ ಮಾತಾ ಆಶೀರ್ವಾದವೇ ಸೈನಿಕರಿಗೆ ಸ್ಫೂರ್ತಿ
ಇಂಡೋ-ಪಾಕ್ ಸರಹದ್ದು ನೋಡಲೇ ಬೇಕು ಎನ್ನುವ ಆಸೆ ಗುದ್ದತೊಡಗಿತು. ದೇಶಭಕ್ತಿ ಮರುಭೂಮಿಯ ಓಯಸಿಸ್ನಂತೆ ಚಿಮ್ಮುತ್ತಿತ್ತು. ಕಾಲೇಜು ದಿನಗಳಲ್ಲಿ ಎನ್.ಸಿ.ಸಿ ಜಲಸೇನೆ ವಿಭಾಗದಲ್ಲಿದ್ದೆ. ಹಿಂದೂ ಮಹಾಸಾಗರವನ್ನು ಉದ್ದಗಲಕ್ಕೂ ಈಜಿ ವರಾಹವತಾರವೆತ್ತಿ ಭಾರತ ಮಾತೆಯನ್ನು ರಕ್ಷಿಸಿಕೊಂಡು ಬಂದ್ಹಾಗೆ ಕಂಡಿದ್ದ ಕನಸು ನೆನಪಾಗುತ್ತಲೇಯಿತ್ತು. ದೇಶ ಭಕ್ತಿಯೊಂದೇ ಸ್ಥಾಯಿ ಭಾವ ಅಂದುಕೊಂಡು ಅಲ್ಲಿದ್ದ ಸೈನಿಕರನ್ನು ನೋಡುತ್ತಾ ತನ್ನೋಟಿ ಮಾತಾಳನ್ನು ‘ಬಾರ್ಡರ್ ಗೆ ಕರೆದುಕೊಂಡು ಹೋಗು ‘ ಎಂದು ಬೇಡಿಕೊಳ್ಳುತ್ತಿದ್ದೆ. ಕಂಡಷ್ಟೂ ಪ್ರಪಂಚ ಅಂಕಣದಲ್ಲಿ ಅಂಜಲಿ ರಾಮಣ್ಣ ಅವರ ಬರಹ.
Read More

