Advertisement

Tag: ಕೆಂಡಸಂಪಿಗೆ

ಕೋಡಿಹಳ್ಳಿ ಮುರಳಿಮೋಹನ್ ಅನುವಾದಿಸಿದ ಎನುಗಂಟಿ ವೇಣುಗೋಪಾಲ್ ತೆಲುಗು ಕತೆ

“ಬಹಳ ದೂರ ಬಂದ ಮೇಲೆ ನೀವು ಎದುರಾದಿರಿ” ಎಂದು ಹೇಳುವುದು ಮುಗಿದ ಮೇಲೆ ಉಳಿದ ಅರ್ಧ ಗ್ಲಾಸ್ ಮದ್ಯವನ್ನು ಖಾಲಿ ಮಾಡಿದ ರಂಜಿತ್. “ಇಗೋ ಪುರಾವೆ… ನನ್ನ ಕೈ ಮೇಲಿನ ಗಾಯ” ಎನ್ನುತ್ತಾ ಬಲಗೈಯನ್ನು ಸ್ವಲ್ಪ ಮೇಲಕ್ಕೆ ಎತ್ತಿ ತೋರಿಸಿದ ರಂಜಿತ್. “ಹೌದು, ಆಗ ನೀವು ಬಲಗೈಯಿಂದ ಲಿಫ್ಟ್ ಕೇಳಿದಾಗ ಬೀದಿ ದೀಪದ ಬೆಳಕಿನಲ್ಲಿ ಗಮನಿಸಿದೆ. ಆ ಗಾಯ ನೋಡಿಯೇ ಲಿಫ್ಟ್ ಕೊಟ್ಟೆ” ಎಂದ ವಾಸುದೇವ ರಾವ್. ರಂಜಿತ್ ಒಮ್ಮೆಲೇ ದಂಗಾದನು. “ಆತಂಕ ಪಡಬೇಡಿ.
ಕೋಡಿಹಳ್ಳಿ ಮುರಳಿಮೋಹನ್ ಅನುವಾದಿಸಿದ ತೆಲುಗಿನ ಕತೆಗಾರ ಎನುಗಂಟಿ ವೇಣುಗೋಪಾಲ್ ಅವರ ಕತೆ “ಚೋರಿ”

Read More

ಒಳಬಾರದು ಆ ವಸಂತ…:  ವಿನಾಯಕ ಅರಳಸುರಳಿ ಅಂಕಣ

ಮಹಾನಗರಿಯ ಏರಿಯಾಗಳುದ್ದಕ್ಕೂ ಈಗ ಹೂಬಿಟ್ಟ ಮರಗಳು. ಬೀದಿ ಬೀದಿಯಲ್ಲೂ ಉದುರಿ ಬಿದ್ದ ಲಕ್ಷಾಂತರ ಹೂವುಗಳು. ಕಾಯಿ, ಹಣ್ಣು, ಬೀಜವಾಗದೇ ಉದುರಿಹೋದ ಅವನ್ನು ನೀಲಿ ಅಂಗಿ ತೊಟ್ಟ ಬಿಬಿಎಂಪಿ ನೌಕರರು ರಾಶಿ ಮಾಡುವುದನ್ನು ನಿರ್ಭಾವುಕವಾಗಿ ನೋಡಿ ನಮ್ನಮ್ಮ ಕಂಪನಿಯ ಎಂಟ್ರಿ ಗೇಟನ್ನು ಹೊಗ್ಗುತ್ತೇವೆ.‌ ಇಲ್ಲಿ ಹೊಕ್ಕಾಗಿಂದ ಪ್ರಕೃತಿಯ ಇಂಥಾ ಅದೆಷ್ಟೋ ವಸಂತಗಳಿಗೆ ನಮ್ಮೆದೆಯಲ್ಲಿ ಎಂಟ್ರಿ ಬಂದ್ ಮಾಡಿಕೊಂಡಿದ್ದೇವೆ. ಎಷ್ಟೋ ಚೈತ್ರ, ವೈಶಾಖ, ಕಾರ್ತೀಕ, ಮಾಗಿಗಳು ನಮ್ಮನ್ನು ಸೋಕದೆಯೇ ವಿಫಲ ಹೂವಾಗಿ ಉದುರಿಹೋಗಿವೆ. ಹಾಗಾಗಿಯೇ ಆಫೀಸು ಕದ ಮುಚ್ಚಿದ ಒಂದು ಶನಿವಾರ, ಒಂದು ಭಾನುವಾರವನ್ನು ಕಳೆಯಲಾರದೆ ನಿರುಪಾಯರಾಗಿದ್ದೀವೇನೋ ಅನ್ನಿಸಿತು.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”ಯ ಬರಹ ನಿಮ್ಮ ಓದಿಗೆ

Read More

 ಕಾಯಗುಡ್ಡ ಬರೀ ಕಥೆಯಲ್ಲ; ಇದೊಂದು ಚಲನಶೀಲ ಬದುಕಿನ ಪ್ರತಿಬಿಂಬ: ನಾಗಣ್ಣ ಕಿಲಾರಿ ಕಾದಂಬರಿಗೆ ಕಪಿಲ ಪಿ. ಹುಮನಾಬಾದೆ ಮುನ್ನುಡಿ

ಕಾಯಗುಡ್ಡ ಎಂದರೆ ಕಾಯುವ ಗುಡ್ಡ. ಕುರಿ ಮತ್ತು ಆಡು ಕಾಯುವ ಗುಡ್ಡ ಅಷ್ಟೇ ಅಲ್ಲ. ಬದುಕನ್ನು ನಳನಳಿಸುವ, ಹೊಸತನದ ಗಾಳಿ ಬೀಸುವ, ಆಕಾಶದಲ್ಲಿ ಸ್ವಚ್ಛಂದವಾಗಿ ಹಾರುವ ಹಕ್ಕಿಯಂತಹ ಎಲ್ಲ ಬಂಧಗಳಿಂದ ಬಿಡುಗಡೆಗೊಳಿಸುವ, ಸಹಜತನ ಮತ್ತು ಕೂತೂಹಲ ಹೃದಯಲ್ಲಿ ಸೃಷ್ಟಿಸುವ ಗುಡ್ಡವೆ ಕಾಯಗುಡ್ಡ. ಬಯಲಿನಂತಹ ಊರಿಂದ ಶುರುವಾಗುವ ಕಥೆ ಕುರಿ-ಆಡುಗಳೊಟ್ಟಿಗೆ ಗುಡ್ಡ ಹತ್ತಿಳಿಸಿ, ಅಲ್ಲಲ್ಲಿ ನಗಿಸಿ, ಬಾವಿಗಳ ಆಳದಿಂದ ಏನನ್ನೋ ಹೊಮ್ಮಿಸಿ, ದವಾಖಾನಿಗಳ ನೋವಿನಲ್ಲೂ ಬಿಸ್ಕತ್‌ ನೆನಪಿಸಿ, ಕತ್ತಲು ಮತ್ತು ಹಲವು ಹಾದಿಗಳ ಮಾತುಗಳು ಕೇಳಿಸಿ, ಓದುಗರಿಗೆ ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿಗೆ ಕರೆದುಕೊಂಡು ಹೋಗುತ್ತದೆ ಕಾಯಗುಡ್ಡ.
ನಾಗಣ್ಣ ಕಿಲಾರಿ ಕಾದಂಬರಿ “ಕಾಯಗುಡ್ಡ” ಕೃತಿಗೆ ಕಪಿಲ ಪಿ. ಹುಮನಾಬಾದೆ ಬರೆದ ಮುನ್ನುಡಿ

Read More

ಕೇಳಿದ್ದು ಸುಳ್ಳಾಗಬಹುದು, ರುಚಿಸಿದ್ದೂ ಸುಳ್ಳಾಗಬಹುದೇ?: ಕ್ಷಮಾ ವಿ. ಭಾನುಪ್ರಕಾಶ್ ಕಥಾ ಸರಣಿ

ಗೆಳತಿಯ ಜಾಣ ಪ್ರಶ್ನೆಗೆ ಉತ್ತರಿಸುತ್ತಾ “ಅದು ಹೇಗೆ ಗೊತ್ತಾ? ಈ ನಿಂಬೆ, ಹುಣಸೆಯಂತಹ ಹುಳಿ ಅಂಶ ಇರೋ ಆಹಾರಗಳಲ್ಲಿ ‘ಆಸಿಡ್’ ಅಂದ್ರೆ ‘ಆಮ್ಲ’ಗಳಿರತ್ವೆ ಅಲ್ವಾ? ಅಂತಹ ಹುಳಿಯಾದ ಆಹಾರ, ನಾಲಗೆಗೆ ತಗುಲಿದಾಗ, ನಾಲಗೆಯ ಆಮ್ಲೀಯತೆ ಹೆಚ್ಚುತ್ತೆ; ಈ ಬದಲಾದ ಸ್ಥಿತಿಯಲ್ಲಿ, ನಮ್ಮ ‘ಮಿರಾಕ್ಯುಲಿನ್’ ಇದ್ಯಲ್ಲ? ಅದು ರಾಸಾಯನಿಕವಾಗಿ ಪ್ರತಿಕ್ರಯಿಸಿ, ಸಿಹಿಯನ್ನು ಗುರುತಿಸುವ ರುಚಿಸಂವೇದಕಗಳನ್ನು ಆಕ್ಟಿವೇಟ್ ಮಾಡತ್ತೆ. ಹಾಗಾಗಿ, ಹುಳಿಯಂಶದ್ದೆಲ್ಲಾ ಸಿಹಿಯೆನಿಸೋಕೆ ಶುರುವಾಗತ್ತೆ. ಆದ್ರೆ ಈ ಎಫೆಕ್ಟ್ ಒಂದು ಅರ್ಧ ಘಂಟೆ, ೧ ಘಂಟೆ ಇರ್ಬಹುದಷ್ಟೇ. ನಮ್ಮ ಬಾಯಲ್ಲಿನ ಜೊಲ್ಲು ನಾಲಗೆಯ ಮೇಲಿದ್ದ ಈ ‘ಮಿರಾಕ್ಯುಲಿನ್’ ಅನ್ನೋ ‘ಗ್ಲೈಕೋಪ್ರೋಟೀನ್’ನ್ನ ತೊಳೆದು ಹಾಕಿ, ನಮ್ಮ ನಾಲಗೆ ಮೊದಲಿನ ಸ್ಥಿತಿಗೆ ಬರೋ ಹಾಗೆ ಮಾಡತ್ತೆ. ಕ್ಷಮಾ ವಿ. ಭಾನುಪ್ರಕಾಶ್‌ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ದಲ್ಲಿ ಏಳನೆಯ ಕತೆ

Read More

ಪ್ರವೀಣ್ ಕುಮಾರ್ ಜಿ. ಬರೆದ ಈ ಭಾನುವಾರದ ಕತೆ “ಈಡು ಜೋಡು”

ಇತ್ತ ಬಾಮೈದನು ತನ್ನ ಬಲಗೈಯಲ್ಲಿ ಉಂಗುರ ಹಿಡಿದು, ಎಡಗೈಯಲ್ಲಿ ಮಂಜನ ಕೈ ಹಿಡಿದು ತೊಡಿಸಲು ಮುಂದಾದಾಗ ಮೊದಲಿಗೆ ಮಂಜನ ಕೈ ಮೇಲೇಳಲಿಲ್ಲ. ಅಕ್ಕನ ಅಳುವಿನಲ್ಲಿ ತಾನೂ ಕಣ್ತುಂಬಿಕೊಂಡಿದ್ದ ಬಾಮೈದ ಉಂಗುರವನ್ನು ಮತ್ತೆ ಬೆರಳ ಹತ್ತಿರ ಹೊಯ್ದಾಗ ಮಂಜನ ಕೈ ಇನ್ನಶ್ಟು ಹಟ ಮಾಡಿತು. ಬಾಮೈದ ಮಂಜನನ್ನು ನೋಡಿದ, ಮಂಜನ ಮಾರಿ ನೆಲ ನೋಡುತ್ತಾ, ಬೇಡ ಬೇಡ ಎಂಬಂತೆ ಅತ್ತಿತ್ತ ಒದರಾಡುತ್ತಿತ್ತು. ಬಾಮೈದ ಮಾವನವರನ್ನು ನೋಡಿದ, ಸುತ್ತಿನವರು ಇನ್ನೂ ಬೆರಳು ಏರದ ಉಂಗುರವನ್ನೇ ನೋಡುತ್ತಿದ್ದರು.
ಪ್ರವೀಣ್ ಕುಮಾರ್ ಜಿ. ಬರೆದ ಕತೆ “ಈಡು ಜೋಡು” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ