Advertisement

Tag: ಕತೆ

ಪ್ರಶಾಂತ್ ಬೆಳತೂರು ಬರೆದ ಈ ಭಾನುವಾರದ ಕತೆ

ಲೋಲಿ ಮಾತ್ರ ತನ್ನ ಭಾವ ದೇವರೆಂದು ಅವನಿಲ್ಲದಿದ್ದರೆ ಈ ಮನೆ ಎಂದೋ ಸರ್ವನಾಶವಾಗಿ ಬಿಡುತ್ತಿತ್ತೆಂದೂ, ಮನೆಗೆ ಕೊಡಲಿ ಮಿತ್ತಾದ ಗಂಡನ ಹಾವಳಿಯಿಂದ ತಾನು ಪಟ್ಟ ಪರಿಪಾಟಲುಗಳನ್ನೆಲ್ಲಾ ಹೇಳುತ್ತಾ ಗಂಡ ತೀರಿ ಹೋದ ಮೇಲೆ ಹೆಣ್ಣೆಂಗಸು ಹೇಗೆ ತಾನೇ ಮನೆಯೊಗೆತನ ಮಾಡುತ್ತಾಳೆ?
ಪ್ರಶಾಂತ್‌ ಬೆಳತೂರು ಬರೆದ ಈ ಭಾನುವಾರದ ಕತೆ “ಹಂದಿಕಾಳನ ಸಿಂಗಿಯೂ..ಮತ್ತವನ ರಾಜಪರಿವಾರವೂ..!”

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮಂಜುನಾಥ ಪವಡಿ ಕತೆ

ಹಸಿದ ಹೊಟ್ಟೆಗಳನ್ನು ಹೊತ್ತುಕೊಂಡು ಪಕ್ಕೂ ಮಾಡಿದ ರೇಜಿಗೆಯಿಂದ ದಿಗಿಲುಗೊಂಡವರು ಫುಟ್‌ಪಾತಿನ ಮೇಲೆ ಕೂರುತ್ತಿದ್ದಂತೆ ತಾವು ತಂದಿದ್ದ ರೊಟ್ಟಿ ಗಂಟುಗಳನ್ನು ಬಿಚ್ಚಿ ತಿನ್ನತೊಡಗಿದರು. ದಾಜಿ ಧೋಂಡಿಬಾನ ಅಂಗಡಿ ಪಕ್ಕದ ಮನೆಯಿಂದ ನೀರಿನ ವ್ಯವಸ್ಥೆ ಮಾಡಿದ. ಒಂದಿಷ್ಟು ಗಂಡಸರು ಊಟ ಒಲ್ಲದೆ ಸಿಗರೇಟು, ಎಲೆ ಅಡಿಕೆ ತಂಬಾಕುಗಳ ತಲುಬಿಗೆ ಶರಣೆಂದರು. ಸಣ್ಣ ಮಕ್ಕಳು ತಮ್ಮ ಅವ್ವ ಅಪ್ಪಂದಿರರಿಂದ ದುಡ್ಡು ಇಸಿದುಕೊಂಡು ಭೈಯ್ಯಾನ ಸ್ವೀಟ್ ದುಕಾನಿನಿಂದ ಸೇವು, ಉಂಡಿ, ಮೈಸೂರ ಪಾಕ್, ಭಜಿ, ಮೊದಲಾದ ತಿಂಡಿಗಳನ್ನು ಖರೀದಿಸಿದರು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮಂಜುನಾಥ ಪವಡಿ ಕತೆ “ಒಂದು ಪಯಣ ಪ್ರಸಂಗ”

Read More

ಎಸ್. ರಾಮಮೂರ್ತಿ ಬರೆದ ಈ ಭಾನುವಾರದ ಕಥೆ “ಜಾದೂ”

‘ಈಗ ನೋಡಿ ಅಸಲೀ ಝಗಡ ಷುರೂ. ಹಾವು ಮುಂಗೂಸ್ ಝಗಡʼ ಅಂದ. ಬುಟ್ಟಿ ಮುಚ್ಚಳ ತೆಗೆದ. ಹಾವು ಹೆಡೆ ಎತ್ತಿತು. ಪುಂಗಿ ಊದುತ್ತಾ ಮುಷ್ಠೀನ ಹಿಡಿದು, ಕಚ್ಚಲಿ ಅನ್ನೋ ಥರ ಆಡಿಸಿದ. ಅದು ಕಚ್ಚೋಕೆ ಬಂದರೆ ಮುಷ್ಠೀನ್ನ ಹಿಂದಕ್ಕೆಳೆದುಕೋತಾ ಇದ್ದ. ಇವನು ಹಾವು ಮುಂಗುಸಿ ಜಗಳ ತೋರಿಸ್ತಾ ಇಲ್ಲವಲ್ಲ. ಜಗಳ ತೋರಿಸ್ರೀ ಅಂತ ಕೇಳ್ಳಾ? ಬೇಡಪ್ಪಾ. ಆಮೇಲೆ ನನಗಿನ್ನೇನಾದರೂ ಮಾಡಿಬಿಟ್ಟರೆ ಕಷ್ಟ. ಅವನ ಸಹವಾಸಾನೇ ಬೇಡ. ಕಾಯ್ತಾ ನಿಂತೆ. ‘ಜೋರ್‌ ಸೇ ತಾಲಿ ಬಜಾವೋʼ ಅಂದ.
ಎಸ್. ರಾಮಮೂರ್ತಿ ಬರೆದ ಈ ಭಾನುವಾರದ ಕತೆ “ಜಾದೂ” ನಿಮ್ಮ ಓದಿಗೆ

Read More

ಸರಿತಾ ನವಲಿ ಬರೆದ ಈ ಭಾನುವಾರದ ಕಥೆ

ಸಾಲಿಗೆ ಹೋಗೋ ಮಕ್ಕಳಿಗಂತೂ ಈ ಕೊಲೆ ಸುದ್ದಿ ತಾವು ನೋಡಿದ ಸಿನೆಮಾ ಕಥಿ ಹಂಗ ಕಂಡಿತು. ಕೆಲವೊಬ್ಬರಂತೂ ‘ಪುಟಾಣಿ ಏಜಂಟ್’ ಆಗಿಬಿಟ್ಟರು. ಕೊಲೆಗಾರರನ್ನು ಹಿಡಿಲಿಕ್ಕೆ ಪೊಲೀಸರು ನಾಯಿ ತೊಗೊಂಡು ಬಂದಾರಂತ, ಅವು ಅಪರಾಧಿಗಳ ವಾಸನಿ ಹಿಡಿದು ಹುಡಿಕಿಕೊಂಡು ಊರು ಹೊರಗ ಹರೀತಿದ್ದ ನದಿ ತನಕ ಹೋಗಿ ನಿಂತವು ಅಂತೆಲ್ಲ ಮಾತಾಡಿಕೊಂಡರು. ಅದೇ ಸಾಲಿಯೊಳಗ ಐದನೇತ್ತಿ ಓದ್ತಿದ್ದ ಪುಟ್ಟಿ ಈ ಮಾತುಗಳನ್ನೆಲ್ಲ ಕೇಳಿಸಿಕೊಂಡಾಗ ಆಕಿಗೆ ಹಿಂದಿನ ರಾತ್ರಿ ಸಬ್ ಇನ್ಸಪೆಕ್ಟರ್ ರವಿ ಅವರ ಮನಿಗೆ ಬಂದಿದ್ದು ನೆನಪಾಯಿತು.
ಸರಿತಾ ನವಲಿ ಬರೆದ ಈ ಭಾನುವಾರದ ಕಥೆ “ಶಿಕ್ಷೆ” ನಿಮ್ಮ ಓದಿಗೆ

Read More

ಚೈತ್ರ ಬರೆದ ಈ ಭಾನುವಾರದ ಕಥೆ

ಸಮುದ್ರ ತೀರದಲ್ಲಿ ಗಾಳಿ. ಜನರೆಲ್ಲ ವಾಕಿಂಗ್‌ ಮಾಡಲು ಬಂದಿದ್ದಾರೆ. ಕರ್ಚೀಫುಗಳನ್ನು ಬೀಸುತ್ತಿದ್ದಾರೆ. ನಾಚಿಕೆಯಿಲ್ಲದ ಜನ. ಅವರನ್ನು ನೋಡುವುದು ನನ್ನ ಕೆಲಸ. ನಾಯಿಗಳೂ ಓಡಾಡುತ್ತಿವೆ. ಶಂಖಗಳನ್ನು ಮೂಸುತ್ತಿವೆ. ಸಮುದ್ರದ ಗಾಳಿ ಮೂಗನ್ನು ಹೊಗುತ್ತಿತ್ತು. ಸಮುದ್ರ ಕಳೆ ನೀರಿನಲ್ಲಿ ತೇಲಾಡುತ್ತಿತ್ತು. ತಿಮಿಂಗಲವೊಂದು ಮೇಲೆ ಬಂಬಂದು ತಿರುಗಿ ಮರಳಿ ಹೋಗುತ್ತಿತ್ತು. ಪಕ್ಕದ ಗುಡ್ಡದ ಮೇಲೆ ಗಾಳಿಗೆ ಮರಗಳು ಓಲಾಡುತ್ತಿದ್ದವು. ಸೂರ್ಯ ಮುಳಗುತ್ತಿದ್ದ. ಬೇಡ ಎಂದರೆ ಜನ ಮನೆಯಲ್ಲಿ ಕೂತಾರೆಯೆ? ಯಾರೋ ಬಲೂನು ಮಾರುತ್ತಿದ್ದಾರೆ.
ಚೈತ್ರ ಬರೆದ ಕತೆ “ಭಾಗ್ಯ…” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ