Advertisement

Tag: ಕೆಂಡಸಂಪಿಗೆ

ಆರ್.‌ ಪವನ್‌ ಕುಮಾರ್‌ ಬರೆದ ಈ ಭಾನುವಾರದ ಕತೆ “ಗುರುತು”

ಸರೋಜಮ್ಮ ಇದನ್ನು ಸರಿ ತಪ್ಪು ಎಂದು ತರ್ಕ ಮಾಡಲು ಹೋಗಲಿಲ್ಲ. ಅವಳೊಳಗೆ ಹೆಣ್ಣಿನ ಅಂತರಂಗದ ತುಮುಲಗಳ ಬಗ್ಗೆ ಗೌರವವಿದ್ದು, ಅದಕ್ಕೆ ಗಂಡು ಸೂಕ್ತವಾಗಿ ಪ್ರತಿಕ್ರಿಯಿಸದೆ ಹೋದರೆ ಇಂಥವೆಲ್ಲಾ ಘಟಿಸಿ ಹೋಗುತ್ತವೆ ಎಂದುಕೊಂಡಿದ್ದಳು. ತನ್ನ ಮಗ ಇದರಲ್ಲಿ ಸಂಪೂರ್ಣ ಸೋತವನೆಂದು ಅರಿವಾಗಿತ್ತು. ಇನ್ನೂ ಮಗನೂ ಅಷ್ಟೇ ತನ್ನ ಚಟಗಳಿಗೆ ಇದನ್ನೆ ಮತ್ತೊಂದು ನೆಪ ಮಾಡಿಕೊಂಡವನು ಮನೆ ಮರೆತು ತನಗೆ ಅನುಕೂಲವಾದ ಕಡೆ ತಿರುಗುತ್ತ ಎಂದಾದರೊಮ್ಮೆ ಮನೆಗೆ ಬರುತ್ತಿದ್ದ.
ಆರ್.‌ ಪವನ್‌ ಕುಮಾರ್‌ ಬರೆದ ಕತೆ “ಗುರುತು” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಸೀರೆ ಪುರಾಣ!: ಸುಕನ್ಯಾ ಕನಾರಳ್ಳಿ ಅಂಕಣ

ಸೀರೆ ಎನ್ನುವುದು ಒಬ್ಬ ಗಂಡಸಿನ ತಲೆಯಲ್ಲಿ ಹುಟ್ಟಿದ ಪರಿಕಲ್ಪನೆ ಎನ್ನುವ ಗುಮಾನಿ ನನಗಿದೆ. ದಿನನಿತ್ಯ ರೈಲಿನಲ್ಲಿ ಹೋಗುವ ಹೆಣ್ಣುಮಕ್ಕಳಿಗಂತೂ ಅದೊಂದು ಮಹಾ ಪಿರಿಪಿರಿಯೇ. ಜನರಲ್ ಬೋಗಿಯಲ್ಲಿ ಇದ್ದು ಜನಜಂಗುಳಿ ಹೆಚ್ಚಿದ್ದರಂತೂ ಸೊಂಟ ಚಿವುಟುವ, ಬೆನ್ನಿಗೆ ಕಚಗುಳಿಯಿಟ್ಟಂತೆ ಮುಟ್ಟುವ ದೌರ್ಜನ್ಯಗಳಿಗೆ ಲೆಕ್ಕವೇ ಇಲ್ಲ. ಮುಂಬಯಿಯಂತಹ ಮಹಾ ನಗರಗಳಲ್ಲಿ ದಿನನಿತ್ಯದ ಮೆಟ್ರೋ ಹೆಂಗಸರು ಬಿಗಿಯಾದ ಜೀನ್ಸ್ ಮತ್ತು ಶರ್ಟ್ ತೊಟ್ಟು ಮೇಲೊಂದು ಲಳಲಳ ಎನ್ನುವಂಥದ್ದೇನೋ ಹಾಕಿಕೊಳ್ಳಲು ಇಷ್ಟಪಡುತ್ತಾರೆ ಎಂದು ಸುದ್ದಿಪತ್ರಿಕೆಯಲ್ಲಿ ಓದಿದ ನೆನಪು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ

Read More

ಗಣೇಶ ಮೂರ್ತಿಯ ಗಿಫ್ಟ್ ಮಹಿಮೆ…: ಬಸವನಗೌಡ ಹೆಬ್ಬಳಗೆರೆ ಸರಣಿ

ಒಮ್ಮೆ ವೈದ್ಯರ ಬಳಿ ನಮ್ಮ ಕಂಪೆನಿಯ ಬಗ್ಗೆ ಹೆಚ್ಚಿಗೆ ಹೇಳಲು ಹೋಗಿ ಅವರಿಂದ ಉಗಿಸಿಕೊಂಡಿದ್ದೆ. ಚಿಕ್ಕವನಿದ್ದಾಗಿಂದಲೂ ನಾನು ಮತ್ತೊಬ್ಬರಿಂದ ಹೇಳಿಸಿಕೊಳ್ಳುವುದಾಗಲಿ, ಬಯ್ಯಿಸಿಕೊಳ್ಳುವ ಕೆಲಸ ಮಾಡಿರಲಿಲ್ಲ. ಒಂದೊಮ್ಮೆ ಈ ಕೆಲಸದಲ್ಲಿ ಯಾರಾದ್ರೂ ಏನಾದ್ರೂ ಅಂದರೆ ಕೆಲಸವನ್ನು ಬಿಟ್ಟು ಹೋಗುವಷ್ಟು ಸಿಟ್ಟು ಬರುತ್ತಿತ್ತು. ಆದರೆ ನನಗೆ ಜೀವನದಲ್ಲಿ ಸೆಟ್ಲ್ ಆಗಬೇಕೆಂಬ ಮನೋಭಿಲಾಶೆ ಇದ್ದುದರಿಂದ ಎಷ್ಟೇ ಒತ್ತಡ ಬಂದರೂ ನಾನು ಸಹಿಸಿಕೊಳ್ಳುತ್ತಿದ್ದೆ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಅರವತ್ತನೆಯ ಕಂತು ನಿಮ್ಮ ಓದಿಗೆ

Read More

ಅಹಮ್ಮಿಗೊಂದು ಪೆಟ್ಟು ಕೊಡುವ ಸಮಯ…: ಜಯಲಕ್ಷ್ಮಿ ಪಾಟೀಲ್ ಅಂಕಣ

“ಒಮ್ಮೆ ಬ್ಯಾಸಿಗಿ ಮದ್ಯಾನದಾಗ ಆಯಿ ಹಳ್ಳಕ್ಕ ನೀರ ತರಾಕ ಹೋಗಿ, ಜೋಡಗೊಡಾ ಹೊತ್ತು ಹೊಡಮಳ್ಳಿ ಬರೂದ್ರಾಗ ಮುತ್ತ್ಯಾ ಹೊಲದಿಂದ ಬಂದಬಿಟ್ಟಾನವ್ವಿ. ನೀರಡಿಶ್ಯಾನ. ಮನ್ಯಾಗ ಕುಡ್ಯಾಕ ಮುಕ್ಕ್ ನೀರಿಲ್ಲ. ಮುತ್ತ್ಯಾ ತಾಪಗೆದ್ದು, “ಹಾಂ ಅಧೆಂಗ ನೀ ಇಟ್ಟ್ ತಡಾ ಮಾಡೀದಿ ಬರಾಕ! ನಡಿ ರಂಡಿ ನೀ ಅದ ಹಳ್ಳದ್ ದಂಡ್ಯಾಗ ಇರು. ಅಲ್ಲೇ ನಿಂದ್ರು. ದsರ್’ಕರ್ತಾ ಕೊಡಾ ಕೆಳಗಿಳಿಶಿ ಕುಂತೆಪಾ ಅಂದ್ರ ನಿನ್ನ ಸಿಗದು ಅಗಶಿ ಬಾಗಲಕ್ಕ ತೋರ್ಣಾ ಕಟ್ತತೀನಿ ಹುಶಾರ್!” ಅಂತಂದು, ಕೊಡದ ದರ್ಶಿಲೆ ಆಯಿನ್ನ ಕಾದ ಉಸಕಿನ ಮ್ಯಾಲ ಬರೆಗಾಲಿಲೇ ನಿಂದ್ರಿಶಿದ್ನಂತ.”
ಜಯಲಕ್ಷ್ಮಿ ಪಾಟೀಲ್ ಬರೆಯುವ “ಗರ್ದಿ ಗಮ್ಮತ್ತು” ಅಂಕಣ

Read More

ಯಶಸ್ವಿ ಕಾರ್ಯಕ್ರಮದ ವರದಿ…: ಎಚ್. ಗೋಪಾಲಕೃಷ್ಣ ಸರಣಿ

ಬಹುಶಃ ಈ ಕಾರ್ಯಕ್ರಮದ ಯಶಸ್ಸು ಮುಂದಿನ ಕಾರ್ಯಕ್ರಮಗಳಿಗೆ ಒಂದು ಮಟ್ಟ ಅಂದರೆ ಮಾಪನ ನಿರ್ಮಿಸಿತು ಎಂದು ಹೇಳಬೇಕು. ಮುಂದಿನ ಕಾರ್ಯಕ್ರಮಗಳು ಈ ಮಟ್ಟ ಅಥವಾ ಇದಕ್ಕಿಂತಲೂ ಮಿಗಿಲಾಗಿರಬೇಕು ಎನ್ನುವ ಸ್ಟ್ಯಾಂಡರ್ಡ್ ನಾವೇ ರೂಪಿಸಿಕೊಳ್ಳಬೇಕಾಯಿತು. ಅದರ ಅಂದರೆ ಮುಂದೆ ನಮ್ಮ ಕಾರ್ಯವ್ಯಾಪ್ತಿ ಹೇಗೆ ಹಿಗ್ಗಿತು ಎನ್ನುವ ನೆನಪುಗಳು ನುಗ್ಗಿ ನುಗ್ಗಿ ಬರುತ್ತಿವೆ… ಹೇಗೆ ಅಂದರೆ ಹಿಂದೆ ನಮ್ಮ ಕಾಲದಲ್ಲಿ ಎಸ್ಸೆಸ್‌ಎಲ್ಸಿ ಪಿಯುಸಿ ರಿಸಲ್ಟ್ ಬಂದ ಮಾರನೇ ದಿವಸ ಮಾತ್ರ ಹೆಚ್ಚಿನ ಅಂಕ ಪಡೆದವರ ವಿವರ ಬರುತ್ತಿತ್ತು. ಈಗ ನೋಡಿ ಆರೇಳು ತಿಂಗಳಾದರೂ ಹೆಚ್ಚಿನ ಅಂಕ ಪಡೆದವರ ಫೋಟೋಗಳು ಬರ್ತಾನೇ ಇರ್ತದೆ, ಇದೂ ಹಾಗೇನೇಯ…
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೮೪ನೇ ಬರಹ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ