Advertisement

Tag: ಕೆಂಡಸಂಪಿಗೆ

ಕಳ್ಳನಿದ್ರೆ ಮತ್ತು ಕ್ಯಾಮೆರಾಗೂ ಕಾಣದ ಕಳ್ಳ!: ಕ್ಷಮಾ ವಿ. ಭಾನುಪ್ರಕಾಶ್ ಕಥಾ ಸರಣಿ

ನಾವು ಹೀಗೆ ಆಳವಾಗಿ ನಿದ್ದೆ ಮಾಡಿದಾಗ, ನಮ್ಮ ಮಾಂಸಖಂಡಗಳು ರಿಪೇರಿ ಆಗ್ತಾ ಇರತ್ವೆ, ನಮ್ಮ ಮೆದುಳಿನ ಸುತ್ತ ಒಂದು ಲಿಕ್ವಿಡ್ ಇರತ್ತಲ್ಲ. ಅದು ಮೆದುಳಿನ ಮತ್ತು ಸ್ಪೈನಲ್ ಕಾರ್ಡ್ ಸುತ್ತ ಓಡಾಡಿ, ಕೊಳೆಯಾದ ಪಾತ್ರೆ ತೊಳೆಯೋ ಹಾಗೆ ತೊಳೆದು, ಬೇಡದ ವೇಸ್ಟ್ ಅಂಶಗಳನ್ನ ತೆಗೆದು ಕ್ಲೀನ್ ಮಾಡತ್ತೆ. ಮಕ್ಕಳಂತೂ ನಿದ್ದೇಲೇ ಬೆಳೀತಾರೆ ಅಂತಾರಲ್ಲ ಹಿರಿಯರು? ಅದು ನಿಜಾನೇ. ನಿದ್ದೆಯ ಮೂರನೇ ಹಂತ ಇದ್ಯಲ್ಲ, ಆಗ ದೇಹದಲ್ಲಿ ಬೆಳವಣಿಗೆಗೆ ಬೇಕಾದ ಗ್ರೋಥ್ ಹಾರ್ಮೋನುಗಳು ಬಿಡುಗಡೆಯಾಗತ್ವೆ. ಅದರಿಂದಲೇ ನೀವು ಎತ್ತರವಾಗ್ತೀರ, ಅಂಗಾಂಗಗಳು ಬೆಳೆಯತ್ವೆ.
ಕ್ಷಮಾ ವಿ. ಭಾನುಪ್ರಕಾಶ್‌ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ದಲ್ಲಿ ಇಪ್ಪತ್ತನೆಯ ಕತೆ

Read More

 ಕಾ.ತ.ಚಿಕ್ಕಣ್ಣ ಎಂಬ ಕನ್ನಡ ಪರಿಚಾರಕ: ಡಾ. ಎಲ್.ಜಿ.ಮೀರಾ ಅಂಕಣ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಡಳಿತಾಧಿಕಾರಿಯಾಗಿ, ಸೃಜನಶೀಲ ಲೇಖಕರಾಗಿದ್ದುಕೊಂಡು ವಿವಿಧ ಪ್ರಕಾರಗಳ ಸುಮಾರು ಹದಿನಾರು ಸಾಹಿತ್ಯಕೃತಿಗಳನ್ನು ರಚಿಸಿ, ಅಷ್ಟೇ ಸಂಖ್ಯೆಯ ಮೌಲಿಕ ಕೃತಿಗಳನ್ನು ಸಂಪಾದಿಸಿ, ಸಂತಕವಿ ಕನಕದಾಸ ಅಧ್ಯಯನ ಕೇಂದ್ರದ ಚುಕ್ಕಾಣಿ ಹಿಡಿದವರಾಗಿ, ಸಂಘಟಕರಾಗಿ ಇವರು ನಾಡಿಗೆ ನೀಡಿದ ಕೊಡುಗೆ ಸ್ಮರಣೀಯ. ಜೊತೆಗೆ ತಮ್ಮ ಗ್ರಾಮೀಣ ಮೂಲವನ್ನು ಮರೆಯದೆ ಅದರ ಮೂಲಕವೇ ತಮ್ಮೊಳಗಿನ ಪ್ರೀತಿ ವಿಶ್ವಾಸಗಳ ಸೆಲೆಯನ್ನು ಬತ್ತದಂತೆ ಉಳಿಸಿಕೊಂಡು ನಮ್ಮಂತಹ ಕಿರಿಯರಿಗೆ ಸಾಹಿತ್ಯ-ಸಂಸ್ಕೃತಿಗಳ ಕ್ಷೇತ್ರದಲ್ಲಿ ಕೆಲಸ ಮಾಡಲು ದಾರಿ ಮಾಡಿಕೊಟ್ಟದ್ದಷ್ಟದ್ದೇ ಅಲ್ಲದೆ, ಹೇಗೆ ಕೆಲಸ ಮಾಡಬೇಕು, ಹೇಗೆ ಮುಂಚೂಣಿ ವಹಿಸಬೇಕು ಎಂಬುದಕ್ಕೂ ಒಂದು ಮಾದರಿ ಆದರು.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ

Read More

 ಐವತ್ತರ ಹೊಸ್ತಿಲಲ್ಲಿ: ಕಿಟ್ಟು ಬರಹ

ಓಡುವ ಜೋರಿಗೆ ಹಿಂದೆ ಸರಿದ ಹಾದಿಯನ್ನು ತಿರುಗಿ ನೋಡುವ ಅವಶ್ಯಕತೆ ಕಾಣಲಿಲ್ಲ. ಮುಂದೆ ಕಾಣದ ಗುರಿಯ ಕಡೆ ಓಡುವುದೇ ಜೀವನದ ಗುರಿ ಎನಿಸಿತ್ತು. ಆದಷ್ಟು ವೇಗವಾಗಿ ಓಡಬೇಕು, ಆದಷ್ಟು ಬೇಗ ಮುಟ್ಟಬೇಕು. ಕೊನೆಗೊಮ್ಮೆ, ಮಧ್ಯಂತರದ ಹತ್ತಿರ ನಿಧಾನಿಸುವ, ನಿಂತು ಹಿಂದೊಮ್ಮೆ ನೋಡುವ ಕಿರು ಆಸೆಯೊಂದು ಮೊಳೆತಾಗಲೇ, ನಾನು ಓಡುತ್ತಿರುವ ಓಟ ಇಳಿಜಾರಿನ ಓಟವೆಂದು ತಿಳಿದದ್ದು. ಬೇಕೆಂದಾಗ ನಿಧಾನಿಸುವುದು ನಿಂತು ನೋಡುವುದು ಅಷ್ಟು ಸುಲಭದ ಮಾತಲ್ಲವೆಂದು ಅರಿವಿಗೆ ಬಂದದ್ದು. ಜೀವನ ಇಳಿಜಾರಿನಲ್ಲಿ ವೇಗವನ್ನು ಗಿಟ್ಟಿಸಿಕೊಂಡಿದೆ. ಓಡುವ ಜೀವನವೇ ಸಹಜವೆಂಬಂತಾಗಿದೆ. ಒಮ್ಮಿಂದೊಮ್ಮೆಲೇ ನಿಲ್ಲಲು ಪ್ರಯತ್ನಿಸಿದರೆ ಮುಗ್ಗರಿಸುವ ಎಲ್ಲ ಸಾಧ್ಯತೆಗಳಿವೆ…
ಐವತ್ತರ ಹೊಸ್ತಿಲಿನ ಬದುಕಿನ ಕುರಿತು ಕಿಟ್ಟು ಬರಹ ನಿಮ್ಮ ಓದಿಗೆ

Read More

 ಗಾಂಧೀಜಿ- ಪ್ರಯೋಗಶೀಲತೆಯ ಸಂಚಾರಿ ನಕ್ಷತ್ರ:  ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್ ಬರಹ

ಗಾಂಧೀಜಿ ಅವರು ಫೀನಿಕ್ಸ್ ವಸಾಹತ್ತಿನಲ್ಲಿ ಮಕ್ಕಳಿಗೆ ಪಾಠ ಮಾಡುವಾಗ ಪುಸ್ತಕಗಳ ಸಹಾಯವನ್ನು ಪಡೆಯುತ್ತಿರಲಿಲ್ಲ. ಏಕೆಂದರೆ ಪುಸ್ತಕಗಳು ಕಲಿಕೆಯ ಭಾರವನ್ನು ವಿದ್ಯಾರ್ಥಿಗಳ ಬುದ್ಧಿ ಮತ್ತೆಯನ್ನು ದುರ್ಬಲಗೊಳಿಸುತ್ತವೆಂದು ನಂಬಿದ್ದರು. ಏಕೆಂದರೆ ತಾವು ಬಾಲ್ಯದಲ್ಲಿದ್ದಾಗ ಕಂಠಪಾಠ ಮಾಡುವ ಒತ್ತಡ ಓದುವುದರ ಆನಂದವನ್ನು ಕೊಂದುಹಾಕಿತ್ತೆಂದು ನೆನಪಿಸಿಕೊಳ್ಳುತ್ತಿದ್ದರಂತೆ. ಏಕೆಂದರೆ ಗಾಂಧಿಯವರಿಗೆ ಹೃದಯವಂತಿಕೆ ವ್ಯಕ್ತಿತ್ವ ನಿರ್ಮಾಣ ಅವರ ಬೋಧನೆಯ ಗುರಿಯಾಗಿದ್ದವು.
ಮೋಹನ್‌ದಾಸ್‌ ಕರಮಚಂದ್ ಗಾಂಧಿಯವರ ವ್ಯಕ್ತಿತ್ವದ ಕುರಿತು ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್ ಬರಹ ನಿಮ್ಮ ಓದಿಗೆ

Read More

ಮುಂಬತ್ತಿ ಮಾತುಕತೆ: ಸುಮಾವೀಣಾ ಅಂಕಣ

ನನ್ನೋರಗೆಯ ಹುಡುಗನೊಬ್ಬ ಆ ಪಟಾಕಿಯನ್ನು ನೆಲದಲ್ಲಿ ಬಚ್ಚಿಟ್ಟಿದ್ದ. ಪಟಾಕಿ ಹೊಡೆಯುವ ಸಮಯದಲ್ಲಿ ಎಷ್ಟು ಹುಡುಕಿದರೂ ಸಿಗಲಿಲ್ಲ. ಇಡೀ ಊರಿನವರು ಪಟಾಕಿ ಸಿಡಿಸಿದ ನಂತರ ಸಿಕ್ಕವು. ಅಷ್ಟರಲ್ಲಿ ಪಟಾಕಿಗಳು ಶೀತ ಹಿಡಿದು ಮೆತ್ತಗಾಗಿದ್ದವು. ಎಷ್ಟು ಹೊತ್ತಿಸಿದರೂ ಟುಸ್ ಆಗುತ್ತಿದ್ದವು. ನನಗೆ ಬೇಜಾರು ಅನ್ನಿಸಿದ್ದು ಪಟಾಕಿ ಸಿಡಿಯಲಿಲ್ಲ ಎಂದಲ್ಲ. “ನಮ್ಮಪ್ಪ ತಂದ ಪಟಾಕಿಯನ್ನು ಇವರು ಹೊಡೆಯುತ್ತಾರಲ್ಲ” ಎಂಬ ಆ ಹುಡುಗನ ನಂಜು ತುಂಬಿದ ಮನಸ್ಸು. ಈಗಲೂ ಹಾಗೆ ಅವನ ಮನಸ್ಸು ಅಸಹಿಷ್ಣುವಾಗಿದೆಯ? ಗೊತ್ತಿಲ್ಲ! ನಾವು ದೂರದಲ್ಲಿದ್ದೇವೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ಲೆವೆಲ್ ಇದೆ.
ಸುಮಾವೀಣಾ ಬರೆಯುವ “ನುಡಿನಲಿವು” ಅಂಕಣದಲ್ಲಿ ಹೊಸ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ