Advertisement

Tag: ಕೆಂಡಸಂಪಿಗೆ

ಮೌಲ್ಯಗಳು ಹಿಂದುಮುಂದಾಗುವ ಸಮಯದಲ್ಲಿ…: ವಿಶ್ವನಾಥ ಎನ್‌ ನೇರಳಕಟ್ಟೆ ಬರಹ

ಬ್ಯಾಗ್ ತೆರೆದಾಗ ಅದರೊಳಗೆ ಕಂಡ ಕಂತೆ ಕಂತೆ ನೋಟುಗಳು ಒಂದು ಕ್ಷಣಕ್ಕೆ ಯೂಸುಫ್‌ನ ಅಂತರಂಗದ ನೈತಿಕತೆಯ ಪರೀಕ್ಷಾರಂಗವಾಗುತ್ತದೆ. ಈ ಹಣವನ್ನಿಟ್ಟುಕೊಂಡು ಮಗಳ ಮದುವೆ ಮಾಡಿಮುಗಿಸಬಹುದು ಎಂಬ ಯೋಚನೆ ಬಂದರೂ ಅದನ್ನು ಹತ್ತಿಕ್ಕಿಕೊಂಡು ಬ್ಯಾಗನ್ನು ಆ ಶ್ರೀಮಂತನಿಗೆ ಹಿಂದಿರುಗಿಸುವ ನಿರ್ಧಾರ ಮಾಡುತ್ತಾನೆ ಯೂಸುಫ್. ಅಂತೆಯೇ ಸಿರಿವಂತನ ಮನೆಯನ್ನು ಹುಡುಕಿಹೋಗಿ ಆ ಬ್ಯಾಗನ್ನು ಕೊಟ್ಟುಬರುತ್ತಾನೆ.
ಬದುಕಿನ ಮೌಲ್ಯಗಳ ಸುತ್ತ ಹೆಣೆದ ಕತೆಗಳ ಕುರಿತು ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರಹ ನಿಮ್ಮ ಓದಿಗೆ

Read More

ದುಃಖಾಂತ ಪಾತ್ರಗಳ ಬಿಕ್ಕುಗಳ ಸಂಕಲನ: ಶುಭಶ್ರೀ ಕಥಾಸಂಕಲನಕ್ಕೆ ವಿಕಾಸ ನೇಗಿಲೋಣಿ ಮುನ್ನುಡಿ

ಶುಭಶ್ರೀ ಬಳಸುವ ಭಾಷೆ ಬಹುತೇಕ ಉತ್ತರ ಕನ್ನಡದ ಕೆಳ ಸಮುದಾಯದ್ದು. ಜೊತೆಗೆ ಮಕ್ಕಳಾಗದವರ ಬಿಕ್ಕು, ಗಂಡನ ದೌರ್ಬಲ್ಯದ ನೆರಳಲ್ಲಿ ನರಳುವ ಹೆಣ್ಮಕ್ಕಳ ಬಿಕ್ಕು, ಮನೆ ತೊರೆದು ಹೋದವರ ನರಳುಗಳನ್ನೆಲ್ಲಾ ಗದ್ಗದಿತ ಕೊರಳಿನಿಂದ ಹೇಳುತ್ತಾ ಹೋಗುತ್ತಾರೆ. ಸಂಕಲನದ ಅತ್ಯಂತ ಗಾಢ ಕತೆಯೆಂದರೆ ‘ಹಗಲು ವೇಷ’. ಮನೆ ತೊರೆದು, ಅನ್ಯ ಕೋಮಿನ ಹುಡುಗನನ್ನು ಮದುವೆಯಾಗಿ, ನರಳುವ ಹೆಣ್ಮಗಳೊಬ್ಬಳ ಚಿತ್ರಣ ಇರುವ ಆ ಕತೆಯಲ್ಲಿ ಧರ್ಮ ಅಥವಾ ದ್ವೇಷದ ಸೋಂಕು ಇಲ್ಲದೇ, ಜಡ್ಜ್ ಮೆಂಟಲ್ ಕೂಡ ಆಗದಂತೆ ಹೆಣ್ಣೊಬ್ಬಳ ಅಂತಃಕರಣದಿಂದ ಆಯೇಷಾ ಅನ್ನುವ ಪಾತ್ರವನ್ನು ಕತೆಗಾರ್ತಿ ನಿರ್ವಹಿಸಿದ ಮೆಚ್ಚುವಂತಿದೆ.
ಶುಭಶ್ರೀ ಭಟ್ಟ ಹೊಸ ಕಥಾಸಂಕಲನ “ಬಿದಿಗೆ ಚಂದ್ರಮನ ಬಿಕ್ಕು” ಕೃತಿಗೆ ವಿಕಾಸ್‌ ನೇಗಿಲೋಣಿ ಬರೆದ ಮುನ್ನುಡಿ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸ್ವಾಮಿ ಪೊನ್ನಾಚಿ ಕತೆ

“ಆ ಧೂಪದ ಹೈಕಳನ್ನು ಯಾರೂ ಹತ್ತಿಸಿಕೊಂಡು ಹೊಬ್ಗ್ಯಾಡ್ರಿ” ಎಂದು ಹೇಳಿದರೆ; ಎರಡು ದಿನ ಹೈಕಳು ಇಸ್ಕೂಲಿಗೆ ಬಂದರೆ ಮೂರನೆ ದಿನಕ್ಕೆ ಮತ್ತೆ ಅದೇ ರಾಗ ಅದೇ ಹಾಡು. ರೋಸಿ ಹೋದ ಮೇಷ್ಟ್ರು ಒಮ್ಮೆ ಬೆಟ್ಟದ ಇನ್ಸಪೆಕ್ಟ್ರು ಊರಿಗೆ ಬಂದಾಗ “ಯಾರಿಗೂ ಹೆದರದ ಇವರು ಪೋಲಿಸ್ನೋರ‍್ಗೆ ಖರೇ ಹೆದ್ರೂದು” ಎಂದು ಸ್ವಾಲಿಗ್ರ ಕೇರಿಗೆ, ಹೊಲೇರಕೇರಿಗೆ ಕರ್ಕೊಂಡೋಗಿ “ಮಕ್ಕಳನ್ನ ತಾಳುಬೆಟ್ಟಕ್ಕೆ ಧೂಪ ಮಾರುವುದಕ್ಕೆ ಕಳುಹಿಸಿದರೆ ಜೇಲಿಗೆ ಹಾಕಿಸ್ತೀನಿ ಎಂದು ರೋಪ್ ಹೊಡೆಸಿದರು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸ್ವಾಮಿ ಪೊನ್ನಾಚಿ ಕತೆ “ಧೂಪದ ಮಕ್ಕಳು”

Read More

ಒಳಗೊಂದು ಪರಿಸ್ಥಿತಿ.. ಹೊರಗೊಂದು ಪರಿಸ್ಥಿತಿ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಮಣಿ, “ಸೆಲ್ವಿ ನನ್ನ ಮಾತು ಕೇಳು. ಅಬಾರ್ಶನ್ ಮಾಡಿಕೊಂಡರೆ ಎಲ್ಲವೂ ಸರಿಯೋಗುತ್ತದೆ. ಮುಂದೆ ಅಂತಹ ತಪ್ಪು ನಡೆಯದಂತೆ ನೋಡಿಕೊಳ್ಳೋಣ. ನೀನು ಮುಂದಕ್ಕೆ ಓದಬಹುದು. ನಾನೂ ಹೇಗಾದರು ಮಾಡಿ ರಾತ್ರಿ ತರಗತಿಗಳಿಗೆ ಹೋಗಿ ಡಿಗ್ರಿ ಮುಗಿಸಬಹುದು. ಕಾಲೇಜಿನಲ್ಲಿ ಹೇಗೊ ರಾತ್ರಿಯೊತ್ತು ಆರ್ಟ್ ತರಗತಿಗಳಿಗೆ ಪಾಠ ಮಾಡ್ತಾರೆ” ಎಂದ. ಸೆಲ್ವಿ, “ಇಲ್ಲ ನಾನು ಅಬಾರ್ಶನ್ ಮಾತ್ರ ಮಾಡಿಕೊಳ್ಳುವುದಿಲ್ಲ.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಹದಿಮೂರನೆಯ ಕಂತು ನಿಮ್ಮ ಓದಿಗೆ

Read More

ಮನೆವಾಳ್ತೆ ಎಂಬ ಹೊನ್ನ ಸಂಕೋಲೆ: ಎಲ್.ಜಿ.ಮೀರಾ ಅಂಕಣ

ಅವಳ ಗಂಡನ ಮನೆಯವರು, ಸೊಸೆ ತಮ್ಮ ಮನೆಯನ್ನು ಬಿಟ್ಟು ಹೋದದ್ದು ದೊಡ್ಡ ವಿಷಯವೇನಲ್ಲ ಎಂಬಂತೆ ಇನ್ನೊಂದು ಹುಡುಗಿಯನ್ನು ಸೊಸೆಯಾಗಿ ತಂದುಕೊಳ್ಳುತ್ತಾರೆ! ಸಿನಿಮಾ ಕೊನೆಯಾಗುವ ಹೊತ್ತಿನಲ್ಲಿ ಈ ಹೊಸಹುಡುಗಿಯ ಮೂಕದುಡಿಮೆ ಪ್ರಾರಂಭವಾಗಿರುತ್ತದೆ! ಅಲ್ಲಿಗೆ `ಒಬ್ಬ ಸೊಸೆಯ `ಪ್ರತಿಭಟನೆ’ಯಿಂದ ಅಸೂಕ್ಷ್ಮ, ಪುರಾತನ, ಹಾಗೂ ಕೋಣನ ಚರ್ಮದ ಗಂಡಾಳಿಕೆಯ ವ್ಯವಸ್ಥೆಗೆ ಏನೂ ಪರಿಣಾಮವಾಗುವುದಿಲ್ಲ, ಅದರ ಕೂದಲು ಸಹ ಕೊಂಕುವುದಿಲ್ಲ, ಅದು ಮಾಡಿಟ್ಟಿರುವ `ಮನೆ’ಗಳಲ್ಲಿ ಮನೆವಾಳ್ತೆ ದುಡಿತ ಮಾಡಲು ಒಬ್ಬ ಮೂಗಬಸವಿ ಹೋದರೆ ಇನ್ನೊಬ್ಬ ಮೂಗಬಸವಿ ಬರುತ್ತಾಳೆ, ಮೂಗಬಸವಿಯರಿಗೇನೂ ಕೊರತೆ ಇಲ್ಲ ನಮ್ಮ ಸಮಾಜದಲ್ಲಿ’ ಎಂಬ ನಿರ್ದಯಿ ಸಂದೇಶ ಸಿಗುತ್ತದೆ ನೋಡುಗರಿಗೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ