Advertisement

ಸರಣಿ-2

ಗ್ರಾಮದೇವತೆ ಮಾರಮ್ಮನ ಕೃಪೆಯಿಂದ…: ಬಸವನಗೌಡ ಹೆಬ್ಬಳಗೆರೆ ಸರಣಿ

ಗ್ರಾಮದೇವತೆ ಮಾರಮ್ಮನ ಕೃಪೆಯಿಂದ…: ಬಸವನಗೌಡ ಹೆಬ್ಬಳಗೆರೆ ಸರಣಿ

ಬಿದ್ದ ಗಾಯ ವಾಸಿಯಾದರೂ ಗಾಯದ ನೋವು ಮಾತ್ರ ಕಡಿಮೆಯಾಗಲಿಲ್ಲ. ನಾನು ಹಲವು ವೈದ್ಯರ ಹತ್ತಿರ ತೋರಿಸಿದರೂ ಕೂಡ ಅವರು ‘ಏನೂ ಸಮಸ್ಯೆ ಇಲ್ಲ’ ಎಂದು ಹೇಳುತ್ತಿದ್ದರು, ಆದರೆ ರಾತ್ರಿ ಮಲಗಿದಾಗ ಮಾತ್ರ ವಿಪರೀತ ಕಾಲು ಸೆಳೆತ, ಕಾಲು ನೋವು ಆಗುತ್ತಿತ್ತು. ಆಗ ನನಗೆ ಮನಸ್ಸಿನಲ್ಲಿ “ಇದು ದೇವರ ಶಾಪವಿರಬಹುದೋ ಏನೋ?” ಅಂದುಕೊಂಡು ದೇವರ ಕುರಿತು “ಅಮ್ಮಾ ನನ್ನಿಂದ ತಪ್ಪಾಗಿದ್ದರೆ ಕ್ಷಮಿಸು, ನಾನು ಊರಿಗೆ ಬಂದು ದರ್ಶನ ಮಾಡುತ್ತೇನೆ” ಎಂದು ಹೇಳಿಕೊಂಡೆ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಅರವತ್ನಾಲ್ಕನೆಯ ಕಂತು

read more
ಕಮರಿದ ಕನಸುಗಳು…: ಜುಲೇಖಾ ಬೇಗಂ ಜೀವನ ವೃತ್ತಾಂತ

ಕಮರಿದ ಕನಸುಗಳು…: ಜುಲೇಖಾ ಬೇಗಂ ಜೀವನ ವೃತ್ತಾಂತ

ಅಂದಹಾಗೆ, ಮಾಂಡ್ರೆ ಕವಿಗಳ ಕಂಪೆನಿಯಲ್ಲಿ ಆಗ ಬೇಬಿ ಬರುತ್ತಾಳೆಂಬುದೇ ದೊಡ್ಡ ಸುದ್ದಿ. ನನ್ನ ಮಗಳು ಬೇಬಿ ಬರುತ್ತಾಳೆ ಎಂದು ಓಡಾಡುತ್ತಿದ್ದ ಬಿ.ಪಿ.ಸಣ್ಣಪ್ಪ ಅವರ ಕಾಲು ನಿಂತಲ್ಲಿ ನಿಂತಿದ್ದೇ ಸುಳ್ಳು. ನಮಗೆಲ್ಲ ಬೇಬಿ ಅವರ ನಿಜವಾದ ಮಗಳೆಂದೇ ಎಣಿಕೆ. ಅವಳು ಬಂದರೆ ನಮ್ಮ ಕಂಪೆನಿ ಹಾಗಾಗುತ್ತದೆ, ಹೀಗಾಗುತ್ತದೆ ಎಂದೆಲ್ಲ ಹೇಳುತ್ತಿದ್ದದ್ದು ನಮಗೆ ಬೇಬಿ ಎಂದರೆ ದೇವಲೋಕದಿಂದ ಥಟ್ಟನೆ ರಾಮದುರ್ಗಕ್ಕೆ ಬಂದಿಳಿವ ದೇವತೆಯ ರೂಪದಂತೆ ಭಾಸವಾಗುತ್ತಿತ್ತು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಹದಿನೆಂಟನೆಯ ಕಂತು

read more
ಸೇದುವಬಾವಿ, ಮೂಲೆಯ ಮಡಕೆ ಮತ್ತು ಮರದಡಿಯ ಮುದುಕ: ಎಸ್. ಗಂಗಾಧರಯ್ಯ ಅನುಭವ ಕಥನ

ಸೇದುವಬಾವಿ, ಮೂಲೆಯ ಮಡಕೆ ಮತ್ತು ಮರದಡಿಯ ಮುದುಕ: ಎಸ್. ಗಂಗಾಧರಯ್ಯ ಅನುಭವ ಕಥನ

ಆತುರಗಾಳಿ ಶಂಕರ ತನ್ನ ಜೇಬುಗಳು ಆಗಲೇ ತುಂಬಿರುವುದಾಗಿಯೂ ಕೆಳಗಿಳಿದು ಹೋಗಿ ರಸ್ತೆಯಲ್ಲಿ ನಮಗಾಗಿ ಕಾಯುತ್ತಿರುವುದಾಗಿಯೂ ಪಿಸುಗುಟ್ಟಿದ. ಹಂಗೆ ಪಿಸುಗುಟ್ಟಿದವನು ನಮ್ಮಿಬ್ಬರ ಮಾತಿಗೂ ಕಾಯದೆ ಕೊಂಬೆಯ ಮೇಲಿಂದ ಕೆಳಗೆ ನೆಗೆಯಲು ಮುಂದಾದ. ಆಗ ಅವನ ಚೆಡ್ಡಿ ಅವನು ಕೂತಿದ್ದ ಕೊಂಬೆಯ ಗೂಟದಂಥ ಮೋಟಿಗೆ ಸಿಕ್ಕಿಕೊಂಡುಬಿಟ್ಟಿತ್ತು. ಯಾವಾಗ ಅವನು ದಬುಕ್ಕಂತ ನೆಗೆದನೋ ಅವನ ಚೆಡ್ಡಿ ಪರಪರನೆ ಹರಿದು ಹೋದದ್ದಲ್ಲದೆ ಆಯ ತಪ್ಪಿ ಕೆಳಗೆ ಮಲಗಿದ್ದ ಕಿವುಡಜ್ಜನ ಮೇಲೆ ದೊಪ್ಪನೆ ಬಿದ್ದು ಬಿಟ್ಟ.
ಎಸ್.‌ ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”

read more
ತಾಯಿ ಭುವನೇಶ್ವರಿಯ ಮಕ್ಕಳು ನಾವೂ…: ಎಚ್. ಗೋಪಾಲಕೃಷ್ಣ ಸರಣಿ

ತಾಯಿ ಭುವನೇಶ್ವರಿಯ ಮಕ್ಕಳು ನಾವೂ…: ಎಚ್. ಗೋಪಾಲಕೃಷ್ಣ ಸರಣಿ

ಇಬ್ಬರು ಕನ್ನಡಿಗರು ಅವರ ಹುಟ್ಟೂರಿನಲ್ಲಿ ಸಿಕ್ಕಿದರೂ ಸಹ ಇಂಗ್ಲಿಷ್ ನಲ್ಲಿ ಮಾತು ಆರಂಭಿಸುತ್ತಾರಂತೆ. ಬೇರೆಯವರ ಸಂಗಡ ಆದರೆ ಎದುರಿನವನ ಭಾಷೆ ಇವರದ್ದು ಆಗುತ್ತಂತೆ. ಬೇರೆ ಊರಿನಲ್ಲಿ ಭೇಟಿಸಿದರೆ ಅದೆಷ್ಟೋ ವರ್ಷ ತಾವು ಕನ್ನಡದವರು ಎಂದು ತಿಳಿದಿರುಲ್ಲವಂತೆ. ಊರು ಬಿಡಬೇಕಾದರೆ ತಮ್ಮಿಬ್ಬರ ತಾಯಿ ಒಬ್ಬಳೇ, ಆಕೆಯೇ ಭುವನೇಶ್ವರಿ ಅಂತ ಗೊತ್ತಾಗುತ್ತಂತೆ! ಒಂದು ಸಣ್ಣ ಉಪಕತೆ ನೀವು ಅಲ್ಲ ಸಾರಿ ನಾನು ಮರೆಯುವ ಮೊದಲು ನಿಮಗೆ ಹೇಳಿ ಬಿಡುತ್ತೇನೆ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೮೮ನೇ ಬರಹ ನಿಮ್ಮ ಓದಿಗೆ

read more
ಕೆಂಬೂತ: ಡಾ. ಎಸ್.ವಿ. ನರಸಿಂಹನ್‌‌ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿ

ಕೆಂಬೂತ: ಡಾ. ಎಸ್.ವಿ. ನರಸಿಂಹನ್‌‌ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿ

ಇವುಗಳದ್ದು ತುಂಬಾ ಸಂಕೋಚ ಸ್ವಭಾವ. ಇದರ ರೆಕ್ಕೆಗಳು ದುರ್ಬಲವಾದ್ದರಿಂದ ಇವು ಹೆಚ್ಚಾಗಿ ಮರ-ಪೊದೆಗಳಲ್ಲಿ ಕುಪ್ಪಳಿಸಿಕೊಂಡು ಆಹಾರವನ್ನು ಅರಸುತ್ತವೆ. ಕೆಂಬೂತಗಳ ಆಹಾರ ಬಲುಬಗೆಯ ಕೀಟಗಳು, ಹುಳುಗಳು, ಧಾನ್ಯಗಳು, ಹಣ್ಣುಗಳು, ಬೀಜಗಳು, ಅನ್ಯ ಹಕ್ಕಿಯ ಮೊಟ್ಟೆಗಳು, ಚಿಕ್ಕ ಹಾವುಗಳು, ಕೆಲ ವಿಷಕಾರಿ ಹಣ್ಣುಗಳು ಮತ್ತು ಅದರ ಬೀಜಗಳು. ಪಾಮ್ ಎಣ್ಣೆ ಮರದಲ್ಲಿನ ಹಣ್ಣನ್ನು ಬಯಸುವ ಇವು, ಪಾಮ್-ಮರದ ಕೃಷಿಕರಲ್ಲಿ ಬೆಳೆ ನಾಶಕ ಎಂದೆನಿಸಿವೆ. ಡಾ. ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ ಕೆಂಬೂತದ ಕುರಿತ ಬರಹ ಇಲ್ಲಿದೆ

read more
ಅಲೆಮಾರಿ ಗುಡಾರಗಳು, ಮುಂಗುಸಿ ಭದ್ರ ಮತ್ತು ಮಂಚಿಗೆ:  ಎಸ್. ಗಂಗಾಧರಯ್ಯ ಅನುಭವ ಕಥನ

ಅಲೆಮಾರಿ ಗುಡಾರಗಳು, ಮುಂಗುಸಿ ಭದ್ರ ಮತ್ತು ಮಂಚಿಗೆ: ಎಸ್. ಗಂಗಾಧರಯ್ಯ ಅನುಭವ ಕಥನ

ಭದ್ರ ಬಂದವನೇ ಕೈಯ್ಯಲ್ಲಿದ್ದ ಪುಟ್ಟ ಬುಡುಬುಡಿಕೆಯನ್ನು ಚೆಡ್ಡಿ ಜೇಬೊಳಕ್ಕೆ ತುರುಕಿಕೊಂಡು `ಎದ್ದಾಳಿ ಮತ್ತೆ ಬೇಗ’ ಅಂತ ನಮ್ಮನ್ನು ಏಳಿಸಿಕೊಂಡು ಶೆಟ್ಟೀಕೆರೆಯ ಕೆರೆಯ ಅಂಗಳಕ್ಕೆ ಕರೆದೊಯ್ದು ಅಲ್ಲಿ ತಾವರೆ ಬೀಜಗಳನ್ನು ಹುಡುಕತೊಡಗಿದ. ಭದ್ರನೊಂದಿಗೆ ನಾವೂ ಕೈ ಜೋಡಿಸಿದೆವು. ಕೆರೆಯ ಅಂಗಳದಲ್ಲಿ ಬಿಟ್ಟಿದ್ದ ಬಿರಿಗಳ ನಡುವಲ್ಲಿ ಗೋಚರಿಸುತ್ತಿದ್ದ ತಾವರೆ ಬೀಜಗಳನ್ನು ಮೂವರೂ ಜೇಬಿಗಿಳಿಕೊಂಡು ಮತ್ತೆ ಮಂಚಿಗೆಯತ್ತ ಬಂದೆವು.
ಎಸ್.‌ ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಮೂರನೆಯ ಕಂತು

read more
ಮೊದಲ ಶಾಲೆಯ ಪ್ರಾರಂಭದ ಅನುಭವಗಳು…: ಬಸವನಗೌಡ ಹೆಬ್ಬಳಗೆರೆ ಸರಣಿ  

ಮೊದಲ ಶಾಲೆಯ ಪ್ರಾರಂಭದ ಅನುಭವಗಳು…: ಬಸವನಗೌಡ ಹೆಬ್ಬಳಗೆರೆ ಸರಣಿ  

ನಾನು ಆ ಮನೆಗೆ ಹೋಗುತ್ತೇನೆ ಎಂದು ತಿಳಿದು ಅವರು ಬಾಕಿ ಇರುವ ಕರೆಂಟ್ ಬಿಲ್ ಕಟ್ಟಿದ್ದರಂತೆ ಹಾಗೂ ಕ್ಲೀನ್ ಮಾಡಿಸಿದ್ದರಂತೆ. ಯಾವಾಗ ನಾನು ಹೋಗೋದಿಲ್ಲ ಎಂದು ತಿಳಿದ ಮೇಲೆ ನನ್ನ ಮೇಲೆ ಗರಂ ಆದರು. ಆದರೆ ಇದನ್ನು ತೋರಿಸಿಕೊಳ್ಳುವ ಹಾಗಿರಲಿಲ್ಲ. ಮನದಲ್ಲಿ ನನ್ನ ಬಗ್ಗೆ ಕೋಪವು ಬೂದಿ ಮುಚ್ಚಿದ ಕೆಂಡದಂತಾಗಿತ್ತು. ಆಗ ಇವರೇ ನಮ್ಮ ಹೆಚ್ಚೆಂ ಆದ್ದರಿಂದ ನನಗೆ ಕಿರಿಕ್ ಕೊಡಲು ಶುರು ಮಾಡಿದರು. ರಜಾ ಕೇಳಿದಾಗ ತಕ್ಷಣ ಪ್ರತಿಕ್ರಿಯೆ ನೀಡದೇ ಇರುತ್ತಿದ್ದುದು, ಸುಖಾ ಸುಮ್ಮನೇ ಅದು ಮಾಡಿಲ್ಲ ಇದು ಮಾಡಿಲ್ಲ ಎಂದು ಹೇಳುತ್ತಿದ್ದರು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಅರವತ್ಮೂರನೆಯ ಕಂತು ನಿಮ್ಮ ಓದಿಗೆ

read more
ಅರಾ ಮಿತ್ರ ಸಿಕ್ಕರ!: ಎಚ್. ಗೋಪಾಲಕೃಷ್ಣ ಸರಣಿ

ಅರಾ ಮಿತ್ರ ಸಿಕ್ಕರ!: ಎಚ್. ಗೋಪಾಲಕೃಷ್ಣ ಸರಣಿ

ಇದಕ್ಕಿಂತ ಸುಲಭ ಉಪಾಯ ಒಂದು ನನ್ನ ತಲೆಯಲ್ಲಿದೆ. ಅದೇನಪ್ಪಾ ಅಂದರೆ ಯಾವುದೇ ರಸ್ತೆಯಲ್ಲಿ ಯಾವುದೇ ಗಂಡಸು ಯಾ ಹೆಂಗಸು ಹುಂಜನ ಹಾಗೇ ನಡೆಯುತ್ತಾ ಇದ್ದಾರೆ ಅಂದರೆ ಅವರು ನೂತಕ್ಕೆ ನೂತು ಬರೆಹಗಾರ ಅಂತ. ನೂತಕ್ಕೆ ನೂತು ಅನ್ನುವುದು ಕನ್ನಡ ಅಲ್ಲ, ತಮಿಳು ಇರಬಹುದು. ಆದರೆ ಈಚೆಗೆ ಬರಹದ ಎಫೆಕ್ಟ್ ಹೆಚ್ಚು ಎದ್ದು ಕಾಣಬೇಕು ಎನ್ನುವ ಏಕಮೇವ ಉದ್ದೇಶದಿಂದ ಬೇರೆ ಬೇರೆ ಭಾಷೆಗಳ ಇಂತಹ ಪದಪುಂಜಗಳು ನಮ್ಮಲ್ಲೂ ಹೆಚ್ಚಿವೆ. ಪುರಾವೆ ಬೇಕಾ? ನಮ್ಮ ಪತ್ರಿಕೆ ನೋಡಿ ಅಷ್ಟೇ.. ಕಥೆಗೆ ಕಾಲಿಲ್ಲವಂತೆ, ಅದಕ್ಕೆ ಬರೇ ರೆಕ್ಕೆ ಅಂತೆ!
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೮೭ನೇ ಬರಹ ನಿಮ್ಮ ಓದಿಗೆ

read more
ರಾತ್ರಿ ಸ್ಕೂಲು, ಶನಿ ಮಹಾತ್ಮೆ ಮತ್ತು ಚಳ್ಳೆ ಹಣ್ಣಿನ ಮೇಷ್ಟ್ರು: ಎಸ್. ಗಂಗಾಧರಯ್ಯ ಅನುಭವ ಕಥನ

ರಾತ್ರಿ ಸ್ಕೂಲು, ಶನಿ ಮಹಾತ್ಮೆ ಮತ್ತು ಚಳ್ಳೆ ಹಣ್ಣಿನ ಮೇಷ್ಟ್ರು: ಎಸ್. ಗಂಗಾಧರಯ್ಯ ಅನುಭವ ಕಥನ

ಇದರಿಂದ ಆಗಬಹುದಾದ ಅನಾಹುತದ ಸೂಚನೆಯನ್ನು ಅರಿತ ನನ್ನ ಪಕ್ಕದಲ್ಲಿದ್ದ ಶಂಕರ ಅಳುತ್ತಾ ಒಮ್ಮೆಗೇ ಮೇಲೆದ್ದು ಆಚೆ ಓಡಲು ಯತ್ನಿಸಿದ. ಅದು ಗೊತ್ತಿದ್ದವರಂತೆ ಮೇಷ್ಟ್ರು ಅವನನ್ನು ತಡೆದು ಮತ್ತೆ ಕೂರಿಸಿದರು. ಮೇಷ್ಟ್ರು ಕೈಯ್ಯಲ್ಲಿದ್ದ ಕೋಲನ್ನು ಮೇಜಿನ ಮೇಲಿಟ್ಟು ಚಣೊತ್ತು ಮೌನವಾಗಿ ಕೂತುಬಿಟ್ಟರು. ನಂತರ ನಿಂತೇ ಇದ್ದ ಶಿವನನ್ನು ಕೂರಲು ಹೇಳಿ ನಮ್ಮತ್ತ ನೋಡಿ ಮುಗುಳ್ನಕ್ಕರು.
ಎಸ್.‌ ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಎರಡನೆಯ ಕಂತು

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ