ಶ್ರದ್ಧೆಯ ಮೂಲ ಎಲ್ಲಿದೆ?
ಆತ ಮೇಲೆ ಹೋಗಿ ಗಂಧದ ಕಡ್ಡಿ ಹಚ್ಚಿ ಅಷ್ಟೂ ದಿಕ್ಕಿಗೆ ಭಕ್ತಿಯಿಂದ ಪೂಜೆ ಮಾಡಿದ. ಆಮೇಲೆ ನಮಸ್ಕರಿಸಿದ. ಹೊರಡುವ ಮುಂಚೆ ಕೇಳಿದೆ. ಏನಿದು ಅಂತ. ಆತ “ಸುತ್ತ ದೇವರುಗಳಿದ್ದಾರೆ, ಪೂಜೆ ಮಾಡದಿದ್ದರೆ ಆಗುತ್ತಾ? ದಿನ ಬೆಳಿಗ್ಗೆ ಸಾಯಂಕಾಲ ನಾವು ಯಾರೇ ಶಿಫ್ಟ್ ನಲ್ಲಿರಲಿ ಪೂಜೆ ಮಾತ್ರ ತಪ್ಪಿಸಲ್ಲ” ಎಂದ. ಅವರು ಅದ್ಯಾವುದೂ ಮಾಡದಿದ್ದರೂ ನಡೆಯುತ್ತೆ. ಆರ್ಕಿಯಾಲಜಿಯವರ ಪ್ರಕಾರ ಅದೊಂದು ಸ್ಮಾರಕ. ಪೂಜೆಗೆ ದುಡ್ಡು ಕೊಡೋಲ್ಲ. ಅದು ನಿತ್ಯಪೂಜೆ ನಡೆಯುವ ದೇವಾಲಯವಲ್ಲ. ಆದರೆ ಇದು ಅಲ್ಲಿರುವ ಸೆಕ್ಯುರಿಟಿಗಳು ನಡೆಸಿಕೊಂಡು ಬಂದಿರುವ ಪರಿಪಾಠ.
ಗಿರಿಜಾ ರೈಕ್ವ ಬರೆಯುವ ಪ್ರವಾಸ ಅಂಕಣ

