Advertisement

Tag: ಕೆಂಡಸಂಪಿಗೆ

ಮನೆಮನೆ ಕೈತೋಟದಲ್ಲಿದೆ ಸಮುದಾಯ ಸೌಖ್ಯ: ಡಾ. ವಿನತೆ ಶರ್ಮ ಅಂಕಣ

ಅಂದಿನ ಸಾಮಾನ್ಯಜನರ ಸಾವಯವ ಜೀವನ ಈಗ ಒಂದು ಸಮುದಾಯ ಸಮಷ್ಠಿಪ್ರಜ್ಞೆಯಾಗಿ ಮೂಡಿದೆ. ಮಾದರಿಯಾಗಿ ಮೂಡುತ್ತಿದೆ. ನಮ್ಮದೇ ಸ್ವಾಯತ್ತತೆಯಿಂದ ಮನೆಮಟ್ಟಿಗೆ ನಾವು ಆಹಾರವನ್ನು ಬೆಳೆಸುವ ನಿರ್ಧಾರದಿಂದ ಹಿಡಿದು ನಮ್ಮ ನೆಲದ, ನಾಡಿನ, ಮೂಲಜರ ಆಹಾರವೇನಾಗಿತ್ತು, ಅದರ ಬಗ್ಗೆ ನಮಗೆಷ್ಟು ತಿಳಿದಿದೆ, ಆ ಆಹಾರ ಬೆಳೆಗಳ ವಿಧಗಳನ್ನು ಪುನರುಜ್ಜೀವಿಸಬಹುದೆ ಎನ್ನುವ ಮಾತುಕತೆಗಳು ಸಮುದಾಯ ಅಭಿವೃದ್ಧಿಯ ಸಂಕೇತ. ಇಂತಹ ಮಾತುಕತೆಗಳಿಂದ ನಮ್ಮ ನಂಬಿಕೆಗಳು, ಮನೋಭಾವ, ಚರ್ಯೆಗಳಲ್ಲಿ ಬದಲಾವಣೆ ಬರುತ್ತದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

Read More

ದೇಹ ಮನಸ್ಸುಗಳ ಚಕ್ರಸುಳಿ……: ಡಾ. ಎಲ್.ಜಿ. ಮೀರಾ ಅಂಕಣ

ಮನಸ್ಸು ಮತ್ತು ಆತ್ಮ ಎಂದರೆ ಒಂದೆಯೇ ಅಥವಾ ಬೇರೆಬೇರೆಯೇ ಎಂಬ ನಮ್ಮ ಪ್ರಶ್ನೆಗೆ ಧರ್ಮಶಾಸ್ತ್ರ ಹಾಗೂ ತತ್ವಶಾಸ್ತ್ರಗಳು ಕೊಡುವ ಉತ್ತರ “ಇಲ್ಲ, ಅವು ಬೇರೆ ಬೇರೆ. ಆತ್ಮವು ಚಿರಂತನವಾದ, ಎಂದೂ ಬದಲಾಗದ ಮೂಲಸತ್ವ ಅಥವಾ ಶುದ್ಧಪ್ರಜ್ಞೆ” ಎಂದು. ಕಡುವಿಜ್ಞಾನವು ಆತ್ಮದ ಅಸ್ತಿತ್ವವನ್ನು – ವಾಸ್ತವಿಕ ಸಾಕ್ಷಿಗಳ ಕೊರತೆಯ ಕಾರಣಕ್ಕಾಗಿ – ಒಪ್ಪುವುದಿಲ್ಲ. ಸದ್ಯಕ್ಕೆ ಈ ಪ್ರಬಂಧದಲ್ಲಿ ಆತ್ಮವನ್ನು ಕುರಿತು ಚರ್ಚಿಸುತ್ತಿಲ್ಲ. `ಮನಸ್ಸಿನ’ ಸಂಕೀರ್ಣತೆಯೇ ಇಲ್ಲಿ ನಮಗೆ ಸಾಕಷ್ಟು ನೀರು ಕುಡಿಸುತ್ತಿದೆ!
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ನಲವತ್ತೊಂದನೆಯ ಬರಹ

Read More

ಮಿಸ್ಟರ್‌ ಇಡ್ಲಿಯ ಮನಸಿನ ಮಾತು… : ಗುರುರಾಜ ಕುಲಕರ್ಣಿ ಪ್ರಬಂಧ

ಒಂದು ಕಾಲ್ಪನಿಕ ಸಂದರ್ಭದಲ್ಲಿ ಜಗತ್ತಿನ ಎಲ್ಲರೂ ಅಳಿದು, ಒಬ್ಬನೇ ಮನುಷ್ಯನು ಉಳಿದನೆಂದು ಕಲ್ಪಿಸಿಕೊಳ್ಳಿ. ಅವನಿಗೆ ‘ಸರಳ ತಿನಿಸಾದ’ ಇಡ್ಲಿಯನ್ನು ತಯಾರಿಸಲು ಸಾಧ್ಯವಾಗುತ್ತದೆಯಾ? ಊಹೂಂ.. ಇಲ್ಲ. ಯಾಕೆಂದರೆ ನನ್ನ ತಯಾರಿಕೆಯ ಪೂರ್ಣ ಚಿತ್ರಣ ಒಬ್ಬನಿಗೂ ಪೂರ್ತಿಯಾಗಿ ತಿಳಿದಿಲ್ಲ. ಎಲ್ಲರಿಗೂ ತಮ್ಮ ಭಾಗ ಮಾತ್ರ ಗೊತ್ತು.. ರೈತನಿಗೆ ಇಡ್ಲಿ ತಟ್ಟೆಯ ತಯಾರಿಕೆ ತಿಳಿದಿಲ್ಲ, ಗಣಿಗಾರನಿಗೆ ಸಾಂಬಾರಿನ ಮಸಾಲೆಯ ಕತೆ ಗೊತ್ತಿಲ್ಲ, ಇಂಧನ ಒದಗಿಸಿದವನಿಗೆ ಹುಳಿಯಾಗುವಿಕೆಯ ವಿಜ್ಞಾನ ತಿಳಿದಿಲ್ಲ. ಕೆಲವರಿಗೆ ಇಡ್ಲಿಯೆಂದರೆ ಏನೆಂದೇ ಗೊತ್ತಿಲ್ಲ! ಈ ಜನರು ವಿವಿಧ ಪ್ರದೇಶಗಳಲ್ಲಿ ವಾಸಿಸುತ್ತಾರೆ, ವಿಭಿನ್ನ ಭಾಷೆಗಳನ್ನು ಮಾತನಾಡುತ್ತಾರೆ, ವಿಭಿನ್ನ ಧರ್ಮಗಳನ್ನು ಪಾಲಿಸುತ್ತಾರೆ.
ಗುರುರಾಜ್‌ ಕೆ. ಕುಲಕರ್ಣಿ ಪ್ರಬಂಧ ನಿಮ್ಮ ಓದಿಗೆ

Read More

ಉದ್ದಕೊಕ್ಕಿನ ಸೂರಕ್ಕಿ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಉದ್ದಕೊಕ್ಕಿನ ಸೂರಕ್ಕಿಗಳು ಉದುರೆಲೆ, ಕುರುಚಲು ಕಾಡು, ಎಸ್ಟೇಟು, ಮನೆಗಳ ಸುತ್ತಮುತ್ತಲು ಬೆಳೆದ ಹೂದೋಟಗಳಲ್ಲಿ ವಾಸ ಮಾಡುತ್ತವೆ. ಉದ್ದಕೊಕ್ಕಿನ ಸೂರಕ್ಕಿಗಳು ನೆಕ್ಟರಿನೈಡೆ ಕುಟುಂಬಕ್ಕೆ ಸೇರಿದ ಇತರ ಸೂರಕ್ಕಿಗಳಂತೆ ಮಕರಂದಪ್ರಿಯ ಹಕ್ಕಿಗಳು. ಕಾಡಿನಲ್ಲಾಗಲೀ, ಎಸ್ಟೇಟು-ಹೂದೋಟವೇ ಆಗಲೀ, ಮರಗಿಡಗಳಲ್ಲಿ ಹೂವರಳಿದರೆ ಸಾಕು, ಮಕರಂದಕ್ಕಾಗಿ ಎಲ್ಲಿದ್ದರೂ ಹಾಜರು! ಮಕರಂದವನ್ನು ಹೀರುವುದಕ್ಕಾಗಿಯೇ ಹೇಳಿಸಿ ಮಾಡಿಸಿದಂತಿರುವ, ಬಾಗಿದ ಉದ್ದವಾದ ಕೊಕ್ಕು ಮತ್ತು ಕೊಳವೆಯಂತಹ ನಾಲಿಗೆ.
ಡಾ. ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ ಉದ್ದಕೊಕ್ಕಿನ ಸೂರಕ್ಕಿಗಳ ಕುರಿತ ಬರಹ ಇಲ್ಲಿದೆ

Read More

ತುಂಬಾ ಕುಡಿದರೂ ತಲೆಗೇರದ `ತುಂಬಾ’: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

`ಮೇಘಾಲಯದ ವಾಕೆನ್ ಹಳ್ಳಿಯೊಂದರಲ್ಲಿ ನಡೆಯುವ ಬುಡಕಟ್ಟು ಉತ್ಸವದಲ್ಲಿ ಇದೇ ರೀತಿಯ ಪೇಯ ನೀಡುತ್ತಾರೆʼ ಎಂದು ಮೇಘಾಲಯದ ಗೆಳೆಯನೊಬ್ಬ ಅರುಹಿದ್ದ. ಇಲ್ಲಿನ ನಿರ್ಮಲ ಬುಡಕಟ್ಟು ಯಾವುದೇ ಪಂಗಡಕ್ಕೆ ಸೇರಿದವರಲ್ಲ. ದೇವರ ಹೆಸರು ಲಿಂಗ್‌ದಾ. ನೀವು ಕೇಳಿಲ್ಲ ಬಿಡಿ. ಭಕ್ತರು ತಮ್ಮ ಹೊಸ ಬೆಳೆಯನ್ನು ದೇವರಿಗೆ ಸಮರ್ಪಿಸುತ್ತಾರೆ. ಅಕ್ಕಿಯಿಂದ ತಯಾರಿಸಿದ ಬಿಯರೇ ಇಲ್ಲಿನ ದೇವರಿಗೆ ನೈವೇದ್ಯ. ಅದನ್ನೇ ಬಂದವರಿಗೆಲ್ಲಾ ತೀರ್ಥವಾಗಿ ಹಂಚುತ್ತಾರೆ! ಹಾಗಾಗಿ ಸರ್ವಾಂತರಯಾಮಿ ಈ ಪೇಯ! ಜಗದಗಲ ಹಬ್ಬಿದ ಈ ಸಂಪ್ರದಾಯಗಳ ತಾಯಿ ಬೇರೊಂದೆ ಅತಿಥಿ ಸತ್ಕಾರ ಮತ್ತು ಆರೋಗ್ಯ.
ಶ್ರೀಧರ್‌ ಎಸ್.‌ ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ